ಶಿವಮೊಗ್ಗದಲ್ಲಿ ಉದ್ಯೋಗ ಮೇಳ, ದಿನಾಂಕ ಪ್ರಕಟ, ಹೆಸರು ನೋಂದಣಿ ಶುರು

Udyoga-mela-poster-released-in-Shimoga

ಶಿವಮೊಗ್ಗ : ಜಿಲ್ಲಾಡಳಿತದಿಂದ ನಗರದ ಎಟಿಎನ್‌ಸಿ ಕಾಲೇಜಿನಲ್ಲಿ ಫೆ. 24ರಂದು ಬೆಳಿಗ್ಗೆ 9.30ಕ್ಕೆ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಸಿ.ಎಸ್.ಚಂದ್ರಭೂಪಾಲ ಹೇಳಿದರು. ಜಿಲ್ಲಾ ಮಟ್ಟದ ಉದ್ಯೋಗ ಮೇಳ (ಕೌಶಲ ಮತ್ತು ರೋಜ್‌ಗಾರ್ ಮೇಳ) ಆಯೋಜಿಸುವ ಕುರಿತು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಉದ್ಯೋಗ ಮೇಳ ಉದ್ಘಾಟನೆಗೆ ಮಿನಿಸ್ಟರ್‌ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಉದ್ಯೋಗ ಮೇಳ ಉದ್ಘಾಟಿಸಲಿದ್ದಾರೆ.  50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು … Read more

ಸಾಗರದ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ, ಏನೆಲ್ಲ ಸೌಲಭ್ಯ ಇರಲಿದೆ? ಮೀಟಿಂಗ್‌ನಲ್ಲಿ ಏನೆಲ್ಲ ಚರ್ಚೆಯಾಯ್ತು?

MLA-Beluru-Gopalakrishna-meeting-at-sagara

ಸಾಗರ : ಉಪವಿಭಾಗೀಯ ಸರ್ಕಾರಿ ಆಸ್ಪತ್ರೆಯನ್ನು (Hospital) 100 ಹಾಸಿಗೆ ಸಾಮರ್ಥ್ಯದಿಂದ 250 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಾಗಿ ಪರಿವರ್ತಿಸಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದ್ದಾರೆ. ಸಾಗರದ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಶಾಸಕ ಬೇಳೂರು ಗೋಪಾಲಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿದರು. ಎಂಎಲ್‌ಎ ಏನೆಲ್ಲ ಹೇಳಿದರು? 300 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಸಂಬಂಧ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆಸ್ಪತ್ರೆಯ ಹಿಂಭಾಗದಲ್ಲಿರುವ ವಸತಿ ಗೃಹಗಳು … Read more

ಬೈಕಿನಲ್ಲಿ 18 ಕೆ.ಜಿ. ಶ್ರೀಗಂಧ ಸಾಗಿಸುತ್ತಿದ್ದವರು ಅರಣ್ಯಾಧಿಕಾರಿಗಳ ಬಲೆಗೆ, ಇಬ್ಬರು ಅರೆಸ್ಟ್‌, ಒಬ್ಬ ಎಸ್ಕೇಪ್‌

Sandalwood-thieves-nabbed-at-hosanagara

ಹೊಸನಗರ : ಶ್ರೀಗಂಧ ಮರವನ್ನು (sandalwood) ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಕತ್ತರಿಸಿ ಬೈಕ್‌ನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಕಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ‍ಶ್ರೀಗಂಧ ಕಡಿತಲೆ ಮಾಡಲಾಗಿತ್ತು. ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ನಿವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆಯ ರಾಘವೇಂದ್ರ (32) ಬಂಧಿತರು. ಹೊಸಕೆಸರೆ ಗ್ರಾಮದ ನೀರೇರಿ ನಿವಾಸಿ ಎಂ.ಭದ್ರಪ್ಪ ಅಲಿಯಾಸ್‌ ಕರಿಮಂಜ (32) ತಲೆಮರೆಸಿಕೊಂಡಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. … Read more

ಸಾಗರ ಪಟ್ಟಣ, ಮಾರ್ಚ್‌ 5ರವರೆಗೆ ಕುಡಿಯುವ ನೀರು ಪೂರೈಕೆ ವ್ಯತ್ಯಯ, ಯಾಕೆ?

Drinking-Water-Tap

ಸಾಗರ : ಪಟ್ಟಣದ ಗಾಂಧಿನಗರದಲ್ಲಿರುವ ನೀರು ಶುದ್ಧೀಕರಣ ಘಟಕ – 1ರ ಫಿಲ್ಟರ್‌ಬೆಡ್ ನಿರ್ವಹಣೆ ಹಾಗೂ ಬದಲಾವಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಮಾರ್ಚ್‌ 5ರ ವರೆಗೆ ಕುಡಿಯುವ ನೀರು (water) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಎಲ್ಲೆಲ್ಲಿ ನೀರು ಪೂರೈಕೆ ವ್ಯತ್ಯಯ? ಅಣಲೆಕೊಪ್ಪ, ಬೀಡಿ ಕ್ವಾಟ್ರರ್ಸ್‌, ಗಣೇಶ ನಗರ, ಶ್ರೀಗಂಧ ಸಂಕೀರ್ಣ, ಕೆಳದಿ ರಸ್ತೆ, ಅಗಡಿಮಠ, ಟ್ಯಾಕ್ಸ್ ಆಫೀಸ್ ಹಿಂಭಾಗದ ಬಡಾವಣೆ, ಶಿರವಾಳ ರಸ್ತೆ, ಶ್ರೀಧರನಗರ, ಹಮಾಲಿ ಕ್ವಾಟ್ರರ್ಸ್‌, ಅರಮನೆಕೇರಿ, ಸುಭಾಷ್ ನಗರ, ಎಸ್.ಆರ್.ಎಸ್. … Read more

ಕುವೆಂಪು ವಿವಿಯಲ್ಲಿ ಮೂರು ದಿನ ಸಮಾಜದಲ್ಲಿ ಜ್ಞಾನ ಸಮಾವೇಶ, ಯಾರೆಲ್ಲ ಭಾಗವಹಿಸ್ತಿದ್ದಾರೆ?

Kuvempu-University-VC-Prof-Sharata-ananthamurthya-and-prof-meti-mallikarjun

ಶಿವಮೊಗ್ಗ : ಅಭಿವೃದ್ಧಿಯ ದಾರಿಯಲ್ಲಿ ಜ್ಞಾನದ ಬಗೆಗಿನ ಪ್ರಶ್ನೆ ಗಳನ್ನು ಮುಕ್ತವಾಗಿ ಚರ್ಚಿಸಲು ಫೆ.20ರಿಂದ ಮೂರು ದಿನ ಕುವೆಂಪು ವಿಶ್ವವಿದ್ಯಾಲಯದ ಬಸವ ಸಭಾ ಭವನದಲ್ಲಿ ‘ಸಮಾಜದಲ್ಲಿ ಜ್ಞಾನ’ ಸಮಾವೇಶ (conference) ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಪ್ರೊ .ಶರತ್ ಅನಂತಮೂರ್ತಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ ಜರ್ನಲ್ಸ್ ಆಫ್ ಡೈಲಾಗ್ಸ್ ಆನ್ ನಾಲೆಜ್ ಇನ್ ಸೊಸೈಟಿ ಸಹಯೋಗದಲ್ಲಿ ಸಮಾವೇಶ ಆಯೋಜಿಸಲಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳ ಮಟ್ಟದಲ್ಲಿ ನಡೆಯುತ್ತಿರುವ ಈ ಮಾದರಿಯ ಮೊದಲ ಸಮಾವೇಶವಾಗಿದೆ ಎಂದರು. ವಿವಿಧ ಕ್ಷೇತ್ರಗಳ … Read more

ಆನಂದಪುರ ಸಮೀಪ ಆಕಸ್ಮಿಕ ಬೆಂಕಿಗೆ ಮನೆ ಹಾನಿ, ವಸ್ತುಗಳು ಆಹುತಿ

MLA-Beluru-Gopalakrishna-visit-house-near-gouthamapura.

ಸಾಗರ : ಆಕಸ್ಮಿಕ ಬೆಂಕಿಗೆ ಮನೆಯೊಂದು (house) ಸಂಪೂರ್ಣ ಸುಟ್ಟು ಹೋಗಿದೆ. ಅದೃಷ್ಟವಶಾತ್‌ ಕುಟುಂಬದವರು ಪಾರಾಗಿದ್ದು, ಗೃಹೋಪಯೋಗಿ ವಸ್ತುಗಳು ಆಹುತಿಯಾಗಿವೆ. ವಿಷಯ ತಿಳಿದು ಶಾಸಕ ಬೇಳೂರು ಗೋಪಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೆ ಕುಟುಂಬಕ್ಕೆ ವೈಯಕ್ತಿಕವಾಗಿ ನೆರವಾದರು. ಸಾಗರ ತಾಲೂಕು ಆನಂದಪುರ ಸಮೀಪದ ಗೌತಮಪುರದ ಸರಸ್ವತಿ ಮಂಜಪ್ಪ ಎಂಬುವವರ ಮನೆಯಲ್ಲಿ ಸೋಮವಾರ ಬೆಳಗಿನ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿದ್ದವರು ಕೂಡಲೆ ಹೊರ ಬಂದಿದ್ದು ಅದೃಷ್ಟವಶಾತ್‌ ಪಾರಾಗಿದ್ದಾರೆ. ಮನೆಯಲ್ಲಿದ್ದ ವಸ್ತುಗಳು, ಜೀವನ ನಿರ್ವಹಣೆಗೆ ಇದ್ದ ಟೈಲರಿಂಗ್‌ ಮೆಷಿನ್‌ ಆಹುತಿಯಾಗಿವೆ. … Read more

ಸೂಪರ್‌ ಮಾರ್ಕೆಟ್‌ನಲ್ಲಿ ಖಾಲಿ ಇದೆ 30 ಹುದ್ದೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಇಲ್ಲಿದೆ ಡಿಟೇಲ್ಸ್‌

jobs news shivamogga live

ಶಿವಮೊಗ್ಗ : ಗೊರೂರು ಸೂಪರ್‌ ಮಾರ್ಟ್‌ನಲ್ಲಿ (Market) ಉದ್ಯೋಗವಕಾಶವಿದೆ. ಒಟ್ಟು 30 ಹುದ್ದೆಗಳು ಖಾಲಿ ಇದ್ದು, 15 ಪುರುಷರು, 15 ಮಹಿಳೆಯರಿಗೆ ಕೆಲಸವಿದೆ ಎಂದು ತಿಳಿಸಲಾಗಿದೆ.   ಅರ್ಹತೆಗಳೇನು? ಅಭ್ಯರ್ಥಿ ಕನಿಷ್ಠ 18 ರಿಂದ ಗರಿಷ್ಠ 40 ವರ್ಷ ವಯಸ್ಸಿನವರಾಗಿರಬೇಕು. ಎಸ್ಸೆಸ್ಸೆಲ್ಸಿ ಅಥವಾ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿರಬೇಕು. ಕನ್ನಡ ಮತ್ತು ಇಂಗ್ಲೀಷ್‌ ಓದಲು ಮತ್ತು ಬರೆಯಲು ಬರಬೇಕು. ಪುರುಷ ಅಭ್ಯರ್ಥಿಗಳು ದ್ವಿಚಕ್ರ ವಾಹನದ ಪರವಾನಿಗೆ ಹೊಂದಿರಬೇಕು. ಯಾವೆಲ್ಲ ಹೆದ್ದೆ ಖಾಲಿ ಇದೆ? ಸ್ಟೋರ್‌ ಮ್ಯಾನೇಜರ್‌ -1 (ಪದವೀಧರ), … Read more

ಶಿವಮೊಗ್ಗದಲ್ಲಿ ಬಿಸಿಲು ಮತ್ತಷ್ಟು ಜೋರು, ಯಾವ್ಯಾವ ತಾಲೂಕಿನಲ್ಲಿ ಇವತ್ತು ಎಷ್ಟಿರುತ್ತೆ ತಾಪಮಾನ?

WEATHER-REPORT-SHIMOGA-

ಹವಾಮಾನ ವರದಿ : ಜಿಲ್ಲೆಯಲ್ಲಿ ಚಳಿ ಪ್ರಮಾಣ (weather) ತುಸು ಕಡಿಮೆಯಾಗಿದ್ದು ಬಿಸಿಲಿನ ಅಬ್ಬರ ಜೋರಾಗಿದೆ. ಬೇಸಿಲಿನ ಬೇಗೆಗೆ ಜನರು ಹೈರಾಣಾಗಿದ್ದಾರೆ ಇದೆ. ಇವತ್ತು ಎಲ್ಲೆಲ್ಲಿ ಎಷ್ಟಿದೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕಿನಲ್ಲಿ ಇವತ್ತು ಗರಿಷ್ಠ 33 ಡಿಗ್ರಿ, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 35 ಡಿಗ್ರಿ ಸೆಲ್ಸಿಯಸ್‌, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಹೊಸನಗರ, ಸಾಗರ, ಸೊರಬ ಮತ್ತು ಶಿಕಾರಿಪುರ ತಾಲೂಕುಗಳಲ್ಲಿ ಗರಿಷ್ಠ 34 … Read more

ಹಂದಿಗಾಗಿ ಕೈ ಕೈ ಮಿಲಾಯಿಸಿ ಆಸ್ಪತ್ರೆ ಸೇರಿದ ಯುವಕರು, ದೂರು, ಪ್ರತಿದೂರು ದಾಖಲು

Altercation-between-two-men-crime-news

ಶಿವಮೊಗ್ಗ : ಹಂದಿ (Pig) ವಿಚಾರವಾಗಿ ಇಬ್ಬರು ಯುವಕರ ಮಧ್ಯೆ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿದ್ದಾರೆ. ಇಬ್ಬರು ಯುವಕರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇನ್ನು ಘಟನೆ ಸಂಬಂಧ ದೂರು, ಪ್ರತಿದೂರು ದಾಖಲಾಗಿದೆ. ಶಿವಮೊಗ್ಗದ ಗೋಪಾಳದ ಕೆಹೆಚ್‌ಬಿ ಕಾಲೋನಿಯಲ್ಲಿ ಘಟನೆ ಸಂಭವಿಸಿದೆ. ಅರ್ಜುನ್‌ ಮತ್ತು ಮಂಜುನಾಥ್‌ ಮಧ್ಯೆ ಗಲಾಟೆಯಾಗಿದೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರ್ಜುನ್‌ ದೂರಿನಲ್ಲಿ ಏನಿದೆ? ತಮ್ಮ ಪುತ್ರನನ್ನು ಶಾಲೆಯಿಂದ ಕರೆತರಲು ಬೈಕಿನಲ್ಲಿ ಹೋಗುತ್ತಿದ್ದಾಗ ನಾಲ್ವರು ಯುವಕರು ಹಂದಿ ಕಳ್ಳತನ … Read more

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಯಾರಿಗೆ ಲಾಭವಿದೆ?

DINA-BHAVISHYA

ಮೇಷ : ನಷ್ಟದ ದಿನ. ಸಣ್ಣ ಆರೋಗ್ಯ ಬಾಧೆ. ಲಾಭದ ಬಗ್ಗೆ ಕಾಯಬೇಕಾದ ಅನಿವಾರ್ಯತೆ. ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಓದಿ. ಉತ್ತಮ ಫಲ ಸಿಗುತ್ತದೆ. (Bhavishya) ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ ವೃಷಭ : ಆರೋಗ್ಯ ಸರಿ ಹೋಗುವುದು. ಸ್ನೇಹಿತರಿಂದ ತೊಂದರೆ. ಕೊಟ್ಟ ಹಣ ಹಿಂತಿರುಗುವುದಿಲ್ಲ. ನಮಃ ಶಿವಾಯ ಈದಿನ ಜಪ ಮಾಡಿ. ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು ಮಿಥುನ : ಇಂದು ಚೆನ್ನಾಗಿದೆ. ಮಕ್ಕಳಿಗೆ ವಿದ್ಯೆಯ … Read more