ಶಿವಮೊಗ್ಗ ಬಸ್‌ ನಿಲ್ದಾಣದಲ್ಲಿ ನಿದ್ರೆ ಮಾಡ್ತಿದ್ದ ಮಹಿಳೆಗೆ ದೊಣ್ಣೆ ಏಟು, ಕಣ್ಣು ಬಿಟ್ಟ ಮೇಲೆ ಮತ್ತೊಂದು ಆಘಾತ

161025-shimoga-ksrtc-bus-stand-general-image.webp

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮಹಿಳೆಯರ (Woman) ವಿಶ್ರಾಂತಿ ಕೊಠಡಿಯಲ್ಲಿ ಕುಳಿತಿದ್ದ ರಾಣೇಬೆನ್ನೂರಿನ ರೇಣುಕಮ್ಮ ಎಂಬುವವರ ಮೇಲೆ ಮಹಿಳೆಯೊಬ್ಬಳು ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ. ಅಲ್ಲದೆ ರೇಣುಕಮ್ಮ ಅವರ ವ್ಯಾನಿಟಿ ಬ್ಯಾಗಿನಲ್ಲಿದ್ದ ₹1000 ನಗದು ಕಸಿದುಕೊಂಡಿದ್ದಾರೆ. ರೇಣುಕಮ್ಮ ತಮ್ಮ ಪತಿಯೊಂದಿಗೆ ಹಣಗೆರೆ ಕಟ್ಟೆಗೆ ತೆರಳಬೇಕಿತ್ತು. ರಾತ್ರಿ ರೇಣುಕಮ್ಮ ಮತ್ತು ಪತಿ ಬಸ್‌ ನಿಲ್ದಾಣದಕ್ಕೆ ಬರುವಷ್ಟರಲ್ಲಿ ಖಾಸಗಿ ಬಸ್ಸು ಹೋಗಿತ್ತು. ಹಾಗಾಗಿ ಕೆಎಸ್‌ಆರ್‌ಟಿಸಿ ನಿಲ್ದಾಣದ ಮಹಿಳೆಯರ ವಿಶ್ರಾಂತಿ ಜಾಗದಲ್ಲಿ ಕುಳಿತಿದ್ದರು. ಅಲ್ಲಿಯೆ ನಿದ್ರೆ ಮಾಡಿದ್ದ ರೇಣುಕಮ್ಮ ಅವರ ಮೇಲೆ ರಾತ್ರಿ … Read more

ಶಿವಮೊಗ್ಗ KSRTC ಬಸ್‌ ನಿಲ್ದಾಣದಲ್ಲಿ ಮಲಗಿದ್ದಲ್ಲೇ ವ್ಯಕ್ತಿ ಸಾವು

KSRTC-Bus-Stand-Shivamogga

SHIVAMOGGA LIVE NEWS | 25 JULY 2024 ಶಿವಮೊಗ್ಗ ಲೈವ್.ಕಾಂ : ಸರ್ಕಾರಿ ಬಸ್‌ ನಿಲ್ದಾಣದ (Bus Stand) ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದಲ್ಲೆ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅವರ ಗುರುತು ಪತ್ತೆಯಾಗದ ಹಿನ್ನೆಲೆ ದೊಡ್ಡಪೇಟೆ ಠಾಣೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ವ್ಯಕ್ತಿಗೆ 45 ರಿಂದ 50 ವರ್ಷ ವಯಸ್ಸಾಗಿದೆ. ಮೃತ ವ್ಯಕ್ತಿಯು 5.06 ಅಡಿ ಎತ್ತರ, ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲ ಕಿಬ್ಬೊಟ್ಟೆಯ ಮೇಲೆ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಇರುತ್ತದೆ.  … Read more

ಶಿವಮೊಗ್ಗ KSRTC ನಿಲ್ದಾಣದಲ್ಲಿ ಕಳ್ಳತನ ಕೇಸ್‌, ಭದ್ರಾವತಿಯ 5 ಮಹಿಳೆಯರು ಅರೆಸ್ಟ್‌

KSRTC-Bus-Stand-Shivamogga

SHIVAMOGGA LIVE NEWS | 14 JULY 2024 SHIMOGA : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಲ್ಲಿಟ್ಟಿದ್ದ ಬಂಗಾರದ ಆಭರಣ (Jewels) ಕಳ್ಳತನ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಐವರು ಮಹಿಳೆಯರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಬಸ್‌ ನಿಲ್ದಾಣದಲ್ಲಿನ ಏಳು ಕಳ್ಳತನ ಪ್ರಕರಣಗಳ ಕುರಿತು ಬಾಯಿ ಬಿಟಿದ್ದಾರೆ. ಆರೋಪಿತ ಮಹಿಳೆಯರೆಲ್ಲ ಭದ್ರಾವತಿಯವರು ಬಂಧಿತ ಮಹಿಳೆಯರೆಲ್ಲ ಭದ್ರಾವತಿಯವರು. ಹೊಸಮನೆಯ ಶಾಂತಿ ಅಲಿಯಾಸ್‌ ಕರ್ಕಿ (31), ಹನುಮಂತ ನಗರದ ಮೀನಾಕ್ಷಿ (38), ಸಾವಿತ್ರಿ ಅಲಿಯಾಸ್‌ ಬಾಬಾ (29), … Read more

ಬಸ್ಸಿನಲ್ಲಿ ಟಿಕೆಟ್‌ ಮಾಡಿಸಲು ಆಧಾರ್‌ ಕಾರ್ಡ್‌ಗೆ ಕೈ ಹಾಕಿದ ಮಹಿಳೆಗೆ ಕಾದಿತ್ತು ಆಘಾತ

KSRTC-Bus-General-Image-Shimoga-Bangalore

SHIVAMOGGA LIVE NEWS | 14 MAY 2024 SHIMOGA : ಬಸ್‌ ಹತ್ತುವಾಗ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನ ಒಳಗೆ ಕರ್ಚೀಫ್‌ನಲ್ಲಿ ಕಟ್ಟಿಟ್ಟಿದ್ದ ಚಿನ್ನಭಾರಣ (Jewelry) ಕಳುವಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ನಡೆದಿದೆ. ನ್ಯಾಮತಿ ತಾಲೂಕು ಚೀಲೂರು ನಿವಾಸಿ ಫಾಸಿಹಾ ಎಂಬುವವರ ವ್ಯಾನಿಟಿ ಬ್ಯಾಗ್‌ನಿಂದ ಚಿನ್ನಾಭರಣ ಕಳವು ಮಾಡಲಾಗಿದೆ. ಫಾಸಿಹಾ ಅವರು ಸಂಬಂಧಿಯ ಮದುವೆ ಸಮಾರಂಭ ಮುಗಿಸಿ ಅಕ್ಕ ಮತ್ತು ತಮ್ಮನ ಪತ್ನಿ ಜೊತೆಗೆ ಮನೆಗೆ ಮರಳುತ್ತಿದ್ದರು. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಬಸ್‌ ಹತ್ತುವಾಗ … Read more

ಶಿವಮೊಗ್ಗದಲ್ಲಿ ಬಸ್‌ ಹತ್ತಿ, ನೀರು ಕುಡಿಯಲೆಂದು ತಲೆ ಎತ್ತಿದಾಗ ಪ್ರಯಾಣಿಕನಿಗೆ ಕಾದಿತ್ತು ಶಾಕ್

KSRTC-Bus-General-Image

SHIVAMOGGA LIVE NEWS | 16 APRIL 2024 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ಚಿತ್ರದುರ್ಗಕ್ಕೆ ತೆರಳುವ ಬಸ್ಸಿನೊಳಗೆ ಕ್ಯಾರಿಯರ್‌ನಲ್ಲಿದ್ದ ಲ್ಯಾಪ್‌ ಟಾಪ್‌ ಕಳ್ಳತನ ಮಾಡಲಾಗಿದೆ. ನೀರು ಕುಡಿಯಲೆಂದು ಪ್ರಯಾಣಿಕ ಬ್ಯಾಗ್‌ನತ್ತ ಕಣ್ಣು ಹಾಯಿಸಿದಾಗ ಕಳುವಾಗಿರುವುದು ಬೆಳಕಿಗೆ ಬಂದಿದೆ. ಅಶೋಕ ನಗರದ ನಿವಾಸಿ ಸಿವಿಲ್‌ ಇಂಜಿನಿಯರ್ ಅವಿನಾಶ್‌‌ ಪ್ರತಿದಿನ ಕೆಲಸಕ್ಕೆ ಚಿತ್ರದುರ್ಗದ ಮಲ್ಲಾಡಿಹಳ್ಳಿಗೆ ತೆರಳುತ್ತಿದ್ದರು. ಏ.4ರಂದು ಚಿತ್ರದುರ್ಗದ ಕೆಎಸ್‌ಆರ್‌ಟಿಸಿ ಬಸ್‌ ಹತ್ತಿದ್ದರು. ಲಗೇಜ್‌ ಕ್ಯಾರಿಯರ್‌ನಲ್ಲಿ ಬ್ಯಾಗ್‌ ಇಟ್ಟು ಸೀಟಿನಲ್ಲಿ ಕುಳಿತಿದ್ದರು. … Read more

ಶಿವಮೊಗ್ಗ ನಿಲ್ದಾಣದಲ್ಲಿ ಬಸ್ಸಿನಲ್ಲಿ 15 ನಿಮಿಷ ನಿದ್ರೆ, ಎದ್ದಾಗ ಸಾಫ್ಟ್‌ವೇರ್‌ ಇಂಜಿನಿಯರ್‌ಗೆ ಶಾಕ್, ಆಗಿದ್ದೇನು?

KSRTC-Bus-Stand-Shivamogga

  SHIVAMOGGA LIVE NEWS | 9 APRIL 2024 SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಇಂಜಿನಿಯರ್‌ ಒಬ್ಬರಿಗೆ ಸೇರಿದ ಲ್ಯಾಪ್‌ಟಾಪ್‌ ಕಳ್ಳತನವಾಗಿದೆ. ಬೆಂಗಳೂರಿನಿಂದ ಯಲ್ಲಾಪುರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್‌ ಶಿವಮೊಗ್ಗ ನಿಲ್ದಾಣಕ್ಕೆ ಬಂದು ನಿಂತಾಗ ಘಟನೆ ಸಂಭವಿಸಿದೆ. ಲಕ್ಷ್ಮಿ ಮಹಾಬಲೇಶ್ವರ ಎಂಬುವವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್‌ ಡೆವಲಪರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನಿಂದ ಉತ್ತರ ಕನ್ನಡಕ್ಕೆ ಬಸ್ಸಿನಲ್ಲಿ ತೆರಳುತ್ತಿದ್ದರು. ತಮ್ಮ ಸೀಟಿನ ಪಕ್ಕದಲ್ಲಿ ಲ್ಯಾಪ್‌ಟಾಪ್‌ ಬ್ಯಾಗ್‌ ಇರಿಸಿಕೊಂಡಿದ್ದರು. ಬಸ್ಸು ಬೆಳಗಿನ ಜಾವ 4.30ಕ್ಕೆ … Read more

ಬೆಳಗಿನ ಜಾವ ಬಸ್ಸು ಶಿವಮೊಗ್ಗ ತಲುಪಿದಾಗ ಪಕ್ಕದಲ್ಲಿ ನೋಡಿದ ಯುವತಿಗೆ ಕಾದಿತ್ತು ಶಾಕ್

KSRTC-Bus-General-Image-Shimoga-Bangalore

SHIVAMOGGA LIVE NEWS | 22 MARCH 2024 SHIMOGA : ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ಖಾಸಗಿ ಕಂಪನಿಯೊಬ್ಬರ ಉದ್ಯೋಗಿಯೊಬ್ಬರಿಗೆ ಸೇರಿದ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಫೋನ್‌ ಕಳ್ಳತನವಾಗಿದೆ. ಹತ್ತು ನಿಮಿಷದ ಮೊದಲು ಇದ್ದ ಬ್ಯಾಗ್‌ ಬಸ್‌ ನಿಲ್ದಾಣದ ತಲುಪಿದಾಗ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ತೀರ್ಥಹಳ್ಳಿ ತಾಲೂಕು ಕಮ್ಮರಡಿಯ ನೇಸರ ಎಂಬುವವರಿಗೆ ಸೇರಿದ ಲ್ಯಾಪ್‌ಟಾಪ್‌ ಮತ್ತು ಮೊಬೈಲ್‌ ಕಳುವಾಗಿದೆ. ಘಟನೆ ಸಂಭವಿಸಿದ್ದು ಹೇಗೆ? ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ನೇಸರ, ಕಮ್ಮರಡಿಗೆ ತೆರಳಬೇಕಿತ್ತು. ಬೆಂಗಳೂರಿನಿಂದ ಶಿವಮೊಗ್ಗಕ್ಕೆ … Read more

ನಿಲ್ದಾಣದ ಗೇಟ್‌ನಲ್ಲೆ ಮಹಿಳೆ ಕಾಲ ಮೇಲೆ ಹತ್ತಿದ KSRTC ಬಸ್‌, CCTVಯಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

Bhadravathi-KSRTC-Bus-incident-at-Bus-Stand

SHIVAMOGGA LIVE NEWS | 01 MARCH 2024 BHADRAVATHI : ಮಹಿಳೆಯೊಬ್ಬರಿಗೆ ಡಿಕ್ಕಿ ಹೊಡೆದ ಕೆಎಸ್‌ಆರ್‌ಟಿಸಿ ಬಸ್ಸು ಆಕೆಯ ಕಾಲಿನ ಮೇಲೆ ಹರಿದಿದೆ. ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಭದ್ರಾವತಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಘಟನೆ ಸಂಭವಿಸಿದೆ. ಪಟ್ಟಣದ ನಿವಾಸಿ ಚಂದ್ರಾಬಾಯಿ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಿಲ್ದಾಣದ ಗೇಟ್‌ನಲ್ಲಿ ಚಂದ್ರಾಬಾಯಿ ನಡೆದು ಹೋಗುತ್ತಿದ್ದಾಗ ಏಕಾಎಕಿ ಬಂದ ಬಸ್‌ ಆಕೆಗೆ ಡಿಕ್ಕಿ ಹೊಡೆದಿದೆ. ಬಸ್ಸಿನ ಮುಂದಿನ ಚಕ್ರ ಚಂದ್ರಬಾಯಿ ಕಾಲಿನ … Read more

ಟಿಕೆಟ್‌ ಬುಕ್‌ ಮಾಡಿ ಪ್ಲಾಟ್‌ಫಾರಂ 1ಕ್ಕೆ ಮರಳಿದ ಯುವಕನಿಗೆ ಕಾದಿತ್ತು ಆಘಾತ

Shimoga-Private-Bus-Stand-Board

SHIVAMOGGA LIVE NEWS | 19 FEBRUARY 2024 SHIMOGA : ಬೆಂಗಳೂರಿಗೆ ತೆರಳುವ ಖಾಸಗಿ ಬಸ್ಸಿನ ಟಿಕೆಟ್‌ ಬುಕ್‌ ಮಾಡಿ ಹಿಂತಿರುಗುವಷ್ಟರಲ್ಲಿ ಯಮಹಾ ಆರ್‌ಎಕ್ಸ್‌ ಬೈಕ್‌ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಖಾಸಗಿ ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ 1ರಲ್ಲಿ ಘಟನೆ ಸಂಭವಿಸಿದೆ. ಶರತ್‌ ಎಂಬುವವರು ರಾತ್ರಿ 9 ಗಂಟೆ ಹೊತ್ತಿಗೆ ಬೈಕ್‌ ತಂದು ಬಸ್‌ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ನಿಲ್ಲಿಸಿದ್ದರು. 9.30ರ ಹೊತ್ತಿಗೆ ಮನೆಗೆ ತೆರಳಲು ಪಾರ್ಕಿಂಗ್‌ ಮಾಡಿದ್ದ ಸ್ಥಳಕ್ಕೆ ಬಂದಾಗ ಬೈಕ್‌ ಇರಲಿಲ್ಲ. ಎಲ್ಲೆಡೆ ಹುಡುಕಿದ … Read more

KSRTC ಪ್ರಯಾಣಿಕರೆ ಹುಷಾರ್‌, ನಿಲ್ದಾಣದಲ್ಲಿ ಮತ್ತೆ ಟಾರ್ಗೆಟ್‌ ಆಯ್ತು ವ್ಯಾನಿಟಿ ಬ್ಯಾಗ್‌, ಬಸ್‌ ಹತ್ತಿದ್ದ ಶಿಕ್ಷಕಿಗೆ ಬಿಗ್ ಶಾಕ್

KSRTC-Bus-General-Image

SHIVAMOGGA LIVE NEWS | 9 FEBRUARY 2024  SHIMOGA : ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದಿಂದ ಚಿಕ್ಕಮಗಳೂರಿಗೆ ತೆರಳಲು ಬಸ್‌ ಹತ್ತುವ ವೇಳೆ ಶಿಕ್ಷಕಿಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ 4.85 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.   ಚಿಕ್ಕಮಗಳೂರಿನ ಶಿಕ್ಷಕಿ ವೈಲೆಟ್‌ ವಿಲ್ಮಾ ಗೋನ್ಸಾಲ್ವೆಸ್‌ ಅವರು ಶಿವಮೊಗ್ಗದಲ್ಲಿ ತಮ್ಮ ಸ್ನೇಹಿತರೊಬ್ಬರ ಮದುವೆ ಮುಗಿಸಿ ಊರಿಗೆ ಮರಳುತ್ತಿದ್ದರು. ರಾತ್ರಿ 10 ಗಂಟೆಗೆ ಶಿವಮೊಗ್ಗದ ಕೆಎಸ್‌ಆರ್‌ಟಿಸ್‌ ಬಸ್‌ ನಿಲ್ದಾಣದ ಪ್ಲಾಟ್‌ ಫಾರಂ 3ರಲ್ಲಿ ಬಸ್‌ … Read more