ಶಿವಮೊಗ್ಗದಲ್ಲಿ ಬಸ್‌ ಹತ್ತಿದ ಕೆಲವೇ ಕ್ಷಣದಲ್ಲಿ ಚನ್ನಗಿರಿಯ ವ್ಯಕ್ತಿಗೆ ಕಾದಿತ್ತು ಶಾಕ್‌, ಆಗಿದ್ದೇನು?

KSRTC-Bus-General-Image

ಶಿವಮೊಗ್ಗ: ನಗರದ KSRTC ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮುಂದುವರೆದಿದೆ. ಬಸ್‌ ಹತ್ತುವಾಗ ವ್ಯಕ್ತಿಯೊಬ್ಬರ ಜೇಬಿನಲ್ಲಿದ್ದ ಹಣ ಲಪಟಾಯಿಸಿದ್ದಾರೆ. ಚನ್ನಗಿರಿಯ ನಾಗರಾಜ್‌ ಎಂಬುವವರು ಶಿವಮೊಗ್ಗದ ನಂಜಪ್ಪ ಲೈಫ್‌ ಕೇರ್‌ ಆಸ್ಪತ್ರೆಯಲ್ಲಿ ತಮ್ಮ ತಾಯಿಯನ್ನು ಚಿಕಿತ್ಸೆಗೆ ಕರೆತಂದಿದ್ದರು. ಸಂಜೆ ಊರಿಗೆ ಮರಳಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್‌ ಹತ್ತುವಾಗ ರಶ್‌ ಇತ್ತು. ಬಸ್‌ ಹತ್ತಿದ ಮೇಲೆ ಜೇಬಿಗೆ ಕೈ ಹಾಕಿದಾಗ ಅದರಲ್ಲಿದ್ದ ₹34,000 ಹಣ ನಾಪತ್ತೆಯಾಗಿತ್ತು ಎಂದು ಆರೋಪಿಸಿದ್ದಾರೆ. ಎಲ್ಲೆಡೆ ಹುಡುಕಿದ ನಾಗರಾಜ್‌ ಅವರು ಕೊನೆಗೆ ದೂರು … Read more

ಬಸ್ಸಲ್ಲಿ ಸೀಟ್‌ ಸಿಗದಿದ್ದಕ್ಕೆ ಕೆಳಗಿಳಿದು ಮುಖ ಒರೆಸಿಕೊಂಡ ತಕ್ಷಣ ಮಹಿಳೆಗೆ ಕಾದಿತ್ತು ಶಾಕ್‌, ದಾಖಲಾಯ್ತು ಕೇಸ್‌

KSRTC-Bus-Stand-Shivamogga

ಶಿವಮೊಗ್ಗ: ಬಸ್‌ ನಿಲ್ದಾಣದಲ್ಲಿ ಕಳ್ಳರ ಹಾವಳಿ ಮತ್ತೆ ಶುರುವಾಗಿದೆ. ಬಸ್‌ ಹತ್ತಿದ್ದ ಗೃಹಿಣಿಯೊಬ್ಬರ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಳ್ಳತನ ಮಾಡಲಾಗಿದೆ. ವೀಣಾ ಎಂಬುವವರು ತಮ್ಮೂರು ಆನವಟ್ಟಿಗೆ ತೆರಳಲು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಕ್ಕೆ ಆಗಮಿಸಿದ್ದರು. ಹಾನಗಲ್‌ ಮಾರ್ಗ ಬಸ್‌ ಹತ್ತಿದ್ದರು. ಆದರೆ ರಶ್‌ ಇದ್ದಿದ್ದರಿಂದ ಸೀಟ್‌ ಸಿಗದ ಕಾರಣಕ್ಕೆ ಕೆಳಗಿಳಿದು ಮುಖ, ಕೊರಳು ಒರೆಸಿಕೊಂಡಿದ್ದರು. ಆಗ ಅವರ ಚಿನ್ನದ ಸರ ಕಳ್ಳತನವಾಗಿರುವುದು ಗೊತ್ತಾಗಿದೆ. 22 ಗ್ರಾಂ ತೂಕದ ₹1.20 ಲಕ್ಷ ಮೌಲ್ಯದ ಚಿನ್ನದ ಸರ ಕಳುವಾಗಿದೆ … Read more

ಹಿರಿಯರ ಪೂಜೆ ಮುಗಿಸಿ ಸಂಬಂಧಿಕರು, ಸ್ನೇಹಿತರನ್ನು ಕಳುಹಿಸಿದ ಮೇಲೆ ಮನೆಯವರಿಗೆ ಕಾದಿತ್ತು ಬಿಗ್‌ ಶಾಕ್

Vidyanagara-Smart-city-board

ಶಿವಮೊಗ್ಗ: ಹಿರಿಯರ ಪೂಜೆ ಸಂದರ್ಭ ಮನೆಯಲ್ಲಿ ಕಳಶಕ್ಕೆ ಹಾಕಿದ್ದ ಬಂಗಾರದ ಸರ (Gold Chain) ನಾಪತ್ತೆಯಾಗಿದೆ. ಶಿವಮೊಗ್ಗದ ವಿದ್ಯಾನಗರದ ಶಶಿಕುಮಾರ್‌ ಎಂಬುವವರ ಮನೆಯಲ್ಲಿ ಘಟನೆಯಾಗಿದೆ. ಶಶಿಕುಮಾರ್‌ ಅವರ ಮನೆಯಲ್ಲಿ ಹಿರಿಯರ ಪೂಜೆ ವೇಳೆ ಅವರ ತಾಯಿಯ ಬಂಗಾರದ ಸರವನ್ನು ಕಳಶಕ್ಕೆ ಸುತ್ತಿದ್ದರು. ರಾತ್ರಿ 7.30ರ ಬಳಿಕ ಸಂಬಂಧಿಕರು, ಸ್ನೇಹಿತರು ಸೇರಿ ಹಲವರು ಊಟಕ್ಕೆ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಕಳಶಕ್ಕೆ ಸುತ್ತಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಊಟಕ್ಕೆ ಬಂದವರಿಗೆ ವಿಚಾರಿಸಿದ ಶಶಿಕುಮಾರ್‌ ಅವರು ಬಳಿಕ … Read more

ಕಂತೆ ಕಂತೆ ಹಣ, ಲಕ್ಷ ಲಕ್ಷ ಮೌಲ್ಯದ ಆಭರಣ ಸಹಿತ ಶಿವಮೊಗ್ಗದಲ್ಲಿ ಆಟೋ ಚಾಲಕ ಅರೆಸ್ಟ್‌

Auto-Driver-Arrested-with-money-and-jewels.

ಶಿವಮೊಗ್ಗ: ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನಿಂದ ಕಂತೆ ಕಂತೆ ಹಣ (Money), ಲಕ್ಷಾಂತರ ಮೌಲ್ಯದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಶಿವಮೊಗ್ಗದ ಗೋಪಾಲಗೌಡ ಬಡಾವಣೆಯ ಸಿ ಬ್ಲಾಕ್‌ನ ಮನೆಯೊಂದರಲ್ಲಿ ಸೆ.17ರಂದು ಹಗಲು ಹೊತ್ತಿನಲ್ಲೆ ಕಳ್ಳತನವಾಗಿತ್ತು. ತನಿಖೆ ನಡೆಸಿದ ಪೊಲೀಸರು ಗೋಪಾಳ ನಿವಾಸಿ ಆಟೋ ಚಾಲಕ ಅಶ್ರಫ್‌ ವುಲ್ಲಾ (35) ಎಂಬಾತನನ್ನು ಬಂಧಿಸಿದ್ದಾರೆ. ಈತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬಂಧಿತನಿಂದ ₹22.74 ಲಕ್ಷ ನಗದು, ₹11.70 ಲಕ್ಷ ಮೌಲ್ಯದ 130 ಗ್ರಾಂ ಚಿನ್ನದ ಆಭರಣ, ₹65 … Read more

ಬೆಳಗಿನ ಜಾವ ಹಸು ಕೂಗಿದ ಶಬ್ದವಾಯ್ತು, ಮಾಲೀಕ ಹೊರ ಬಂದು ನೋಡಿದಾಗ ಆಘಾತ ಕಾದಿತ್ತು

Maluru-Police-Station-in-Thirthahalli-taluk.webp

ತೀರ್ಥಹಳ್ಳಿ: ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವೊಂದನ್ನು (Cow) ದುಷ್ಕರ್ಮಿಗಳು ರಾತ್ರಿ ಕಳ್ಳತನ ಮಾಡಿದ್ದಾರೆ. ತೀರ್ಥಹಳ್ಳಿ ತಾಲೂಕು ಗಬಡಿ ಕೂಡಿಗೆ ಗ್ರಾಮದಲ್ಲಿ ಸುನಿಲ್‌ ಎಂಬುವವರಿಗೆ ಸೇರಿದ ಹಸು ಕಳ್ಳತನವಾಗಿದೆ. ಹಸುವನ್ನು ರಾತ್ರಿ ಕೊಟ್ಟಿಗೆಯಲ್ಲಿ ಕಟ್ಟಿ ಪಕ್ಕದಲ್ಲೇ ಇದ್ದ ಮನೆಗೆ ಹೋಗಿ ಸುನಿಲ್‌ ಮಲಗಿದ್ದರು. ಬೆಳಗಿನ ಜಾವ 4 ಗಂಟೆ ಹೊತ್ತಿಗೆ ಹಸು ಕೂಗಿದ ಶಬ್ದವಾಗಿದೆ. ಸುನಿಲ್‌ ಹೊರಗೆ ಬಂದು ನೋಡುವಷ್ಟರಲ್ಲಿ ಮೂವರು ವ್ಯಕ್ತಿಗಳು ಪಿಕಪ್‌ ವಾಹನದಲ್ಲಿ ಹಸುನ್ನು ಕದ್ದೊಯ್ಯುತ್ತಿದ್ದರು. ಘಟನೆ ಸಂಬಂಧ ಮಾಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ … Read more

ಆಗುಂಬೆ ಸಮೀಪ ಅಪಘಾತಕ್ಕೀಡಾದ ಕಾರಿನಲ್ಲಿ ಫೋನ್‌ಗಳು, ಪರ್ಸ್‌, ನಗದು ಕಳ್ಳತನ

Agumbe Ghat Home Stay Forest

ಆಗುಂಬೆ: ಅಪಘಾತಕ್ಕೀಡಾದ ಕಾರಿನಲ್ಲಿದ್ದ ಮೊಬೈಲ್‌ ಫೋನ್‌ಗಳು (Smart Phones) ಮತ್ತು ಪರ್ಸ್‌ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಆಗುಂಬೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಾಜ್ಮಾನ್‌ ಎಂಬುವವರು ಸಹೋದರನಿಗೆ ತೀರ್ಥಹಳ್ಳಿಯ ನಾಟಿ ವೈದ್ಯರೊಬ್ಬರ ಬಳಿ ಚಿಕಿತ್ಸೆಗೆ ಕರೆತರುತ್ತಿದ್ದರು. ಕೌರಿಹಕ್ಲುವಿನಲ್ಲಿ ಕಾರು ಅಪಘಾತಕ್ಕೀಡಾಗಿ, ಕಾರಿನಲ್ಲಿದ್ದವರನ್ನು ಆಂಬುಲೆನ್ಸ್‌ನಲ್ಲಿ ಮಣಿಪಾಲದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ ಬಳಿಕ ಬಂದು ಪರಿಶೀಲಿಸಿದಾಗ ಕಾರಿನಲ್ಲಿದ್ದ ₹1.17 ಲಕ್ಷದ ಐ ಫೋನ್‌, ₹30 ಸಾವಿರದ ಸ್ಯಾಮ್‌ಸಂಗ್‌ ಫೋನ್‌, ಪರ್ಸ್‌ ಮತ್ತು ಅದರೊಳಗಿದ್ದ … Read more

ಬೆಳ್ಳಂಬೆಳಗ್ಗೆ ನಿರ್ಮಾಣ ಹಂತದ ಮನೆ ಬಳಿ ಬಂದ ಮಾಲೀಕನಿಗೆ ಕಾದಿತ್ತು ಶಾಕ್‌, ಆಗಿದ್ದೇನು?

soraba anavatti graphics

ಸೊರಬ: ನಿರ್ಮಾಣ ಹಂತದ ಮನೆಯ ಸೆಂಟ್ರಿಂಗ್‌ ಕೆಲಸಕ್ಕೆ ತರಿಸಲಾಗಿದ್ದ 150 ಕಬ್ಬಿಣದ ಪ್ಲೇಟ್‌ಗಳನ್ನು (Plate) ರಾತ್ರೋರಾತ್ರಿ ಕಳ್ಳತನ ಮಾಡಲಾಗಿದೆ. ಸೊರಬ ತಾಲೂಕು ಆನವಟ್ಟಿಯ ತಲ್ಲೂರು ಗ್ರಾಮದ ಶ್ರೀ ಸಾಯಿಬಾಬಾ ಬಡಾವಣೆಯಲ್ಲಿ‍ ಘಟನೆ ನಡೆದಿದೆ. ಸೆಂಟ್ರಿಂಗ್‌ ಕೆಲಸಕ್ಕೆ ಅಗತ್ಯವಿದ್ದ ಕಬ್ಬಿಣದ ದೊಡ್ಡ ಮತ್ತು ಸಣ್ಣ ಪ್ಲೇಟ್‌ಗಳನ್ನು ತರಿಸಲಾಗಿತ್ತು. ರಾತ್ರಿ ಕೆಲಸ ಮುಗಿಸಿ ಎಲ್ಲರು ಮರಳಿದ್ದಾಗ 100 ದೊಡ್ಡ ಪ್ಲೇಟ್‌, 50 ಸಣ್ಣ ಪ್ಲೇಟ್‌ಗಳನ್ನ ಕಳ್ಳತನವಾಗಿವೆ. ಮನೆ ಮಾಲೀಕರು ಬೆಳಗ್ಗೆ ಸೈಟ್‌ ಬಳಿ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸೆಂಟ್ರಿಂಗ್‌ … Read more

15 ನಿಮಿಷದ ಬಳಿಕ ಗಾಂಧಿ ಪಾರ್ಕ್‌ ಗೇಟ್‌ ಬಳಿ ಬಂದ ವ್ಯಕ್ತಿಗೆ ಕಾದಿತ್ತು ಆಘಾತ, ಆಗಿದ್ದೇನು?

crime name image

ಶಿವಮೊಗ್ಗ: ಡಿವಿಎಸ್‌ ಸರ್ಕಲ್‌ ಬಳಿ ಗಾಂಧಿ ಪಾರ್ಕ್‌ ಗೇಟ್‌ ಮುಂಭಾಗ ನಿಲ್ಲಿಸಿದ್ದ ಆರ್‌.ಎಕ್ಸ್‌..100 ಬೈಕ್‌ (Bike) ಕಳ್ಳತನವಾಗಿದೆ. ಬೈಕ್‌ ನಿಲ್ಲಿಸಿ 15 ನಿಮಿಷದೊಳಗೆ ಕಳುವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ರಾಜೇಂದ್ರನಗರದ ರಾಜೇಶ್‌ ಎಂಬುವವರು ಸೆ.10ರ ಸಂಜೆ 7.30ರ ಹೊತ್ತಿಗೆ ತಮ್ಮ ಆರ್‌.ಎಕ್ಸ್‌.100 ಬೈಕ್‌ ನಿಲ್ಲಿಸಿ ತೆರಳಿದ್ದರು. ಸಂಜೆ 7.45ರ ಹೊತ್ತಿಗೆ ಅಲ್ಲಿಗೆ ಬಂದಾಗ ಬೈಕ್‌ ಇರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಇದನ್ನೂ ಓದಿ » ಹೊಸನಗರದಲ್ಲಿ ಉಕ್ಕಡ ಮಗುಚಿ … Read more

ಆನಂದಪುರ ಠಾಣೆ ಪೊಲೀಸರ ಕಾರ್ಯಾಚರಣೆ, ಗೋವು ಸಾಗಣೆ ಮಾಡುತ್ತಿದ್ದ ಶಿಕಾರಿಪುರದ ಇಬ್ಬರ ಬಂಧನ

281123-Anandapura-Police-Station-Board.webp

ತ್ಯಾಗರ್ತಿ: ಜಾನುವಾರು (Cow) ಅಕ್ರಮ ಸಾಗಣೆ ಮಾಡುತ್ತಿದ್ದ ವಾಹನವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಆನಂದಪುರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸಾಗರ ತಾಲೂಕಿನ ತ್ಯಾಗರ್ತಿ ಮಾರಿಕಾಂಬಾ ವೃತ್ತದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಪರವಾನಗಿ ಇಲ್ಲದೆ 2 ಎಮ್ಮೆ, 1 ಕೋಣ, 2 ಹೋರಿಗಳನ್ನು ಅಶೋಕ ಲೇಲ್ಯಾಂಡ್ ಗೂಡ್ಸ್ ವಾಹನದಲ್ಲಿ ತುಂಬಿ ಸಾಗಿಸುತ್ತಿದ್ದರು. ಶಿಕಾರಿಪುರ ತಾಲೂಕು ಬಿಳಕಿ ಗ್ರಾಮದ ಮೆಹಬೂಬ್ ಬಾಷಾ ಹಾಗೂ ಮಕ್ಬೂಲ್ ಸಾಬ್ ಎಂಬುವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರೆದಿದೆ. ಇದನ್ನೂ ಓದಿ » ಅಡಿಕೆ ಬೆಳೆಯಲ್ಲಿ ಅಂತರ, ಮಿಶ್ರ ಬೆಳೆ … Read more

ಜಿಂಕ್‌ ಲೈನ್‌ನಲ್ಲಿ ಬೆಳಗ್ಗೆ ಕೊಟ್ಟಿಗೆಗೆ ಬಂದ ವ್ಯಕ್ತಿಗೆ ಕಾದಿತ್ತು ಆಘಾತ

BHADRAVATHI-NEWS-UPDATE

ಭದ್ರಾವತಿ: ಗೋವುಗಳ ಕಳ್ಳತನ (Cow) ಪ್ರಕರಣಗಳು ಮುಂದುವರೆದಿದ್ದು ಜಿಂಕ್‌ ಲೈನ್‌ ಬಡಾವಣೆಯ ದಿವ್ಯಾ ಎಂಬುವವರು ಸಾಕಿದ್ದ ಮೂರು ಹೆಚ್‌.ಎಫ್‌ ತಳಿಯ ಹಸುಗಳು ಕಳ್ಳತನವಾಗಿವೆ. ಸೆ.9ರ ಹಾಲು ಕರೆದು ಹಸುಗಳನ್ನು ಕೊಟ್ಟಿಗೆಯಲ್ಲಿ ಕಟ್ಟಿಹಾಕಲಾಗಿತ್ತು. ಬೆಳಗ್ಗೆ 5 ಗಂಟೆಗೆ ದಿವ್ಯಾ ಅವರ ಪತಿ ಕೊಟ್ಟಿಗೆಗೆ ಹೋಗಿ ನೋಡಿದಾಗ ಮೂರು ಹಸುಗಳು ನಾಪತ್ತೆ ಆಗಿದ್ದವು. ಎಲ್ಲಡೆ ಹುಡುಕಿದರು ಹಸುಗಳು ಸಿಕ್ಕಿಲ್ಲ ಎಂದು ಆರೋಪಿಸಿ ದೂರು ನೀಡಿದ್ದಾರೆ. ಭದ್ರಾವತಿ ನ್ಯೂ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಭದ್ರಾವತಿಯಲ್ಲಿ ಪೊಲೀಸರನ್ನು ಕಂಡು … Read more