ಉಚಿತ ಆಯುರ್ವೇದ ಚಿಕಿತ್ಸೆ ನೆಪ, ಶಿವಮೊಗ್ಗದ ಮತ್ತೂರಿನಲ್ಲಿ ಮಹಾ ವಂಚನೆ, ಆಗಿದ್ದೇನು?

Crime-News-General-Image

ಶಿವಮೊಗ್ಗ: ಮಗುವಿಗೆ ಉಚಿತ ಆಯುರ್ವೇದ ಚಿಕಿತ್ಸೆ (Ayurvedic treatment) ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರ ಬಳಿ ಹಣ ಪಡೆದು ವಂಚಿಸಿರುವ ಘಟನೆ ಶಿವಮೊಗ್ಗ ತಾಲೂಕು ಮತ್ತೂರು ಗ್ರಾಮದಲ್ಲಿ ನಡೆದಿದೆ. ಮತ್ತೂರು ಗ್ರಾಮದ ನಿವಾಸಿಯೊಬ್ಬರ ಮನೆಗೆ ಬಂದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಕೇರಳದ ಆಯುರ್ವೇದ ಸಂಸ್ಥೆಯಿಂದ ಬಂದಿರುವುದಾಗಿ ಪರಿಚಯಿಸಿಕೊಂಡಿದ್ದ. ಮನೆಯಲ್ಲಿದ್ದ ವಿಕಲಚೇತನ ಮಗುವಿಗೆ ತಮ್ಮ ಸಂಸ್ಥೆಯಿಂದ ಉಚಿತವಾಗಿ ಆಯುರ್ವೇದ ಚಿಕಿತ್ಸೆ ನೀಡುವುದಾಗಿ ನಂಬಿಸಿದ್ದಾನೆ. ಅಲ್ಲಿಯೇ ಒಂದು ಔಷಧಿಯನ್ನು ನೀಡಿದ ಆತ, ಉಳಿದ ಔಷಧಿಯನ್ನು ಶಿವಮೊಗ್ಗದ ಮೆಡಿಕಲ್ ಶಾಪ್‌ನಿಂದ ತರಿಸಿಕೊಡುವುದಾಗಿ ಹೇಳಿದ್ದಾನೆ. … Read more

ಕೈದಿ ಭೇಟಿಗೆ ಬಂದ ವ್ಯಕ್ತಿ ತಂದಿದ್ದ ಟವಲ್‌ ಚೆಕ್‌ ಮಾಡಿದ ಭದ್ರತಾ ಸಿಬ್ಬಂದಿಗೆ ಶಾಕ್‌, ಏನಿತ್ತು ಟವಲ್‌ನಲ್ಲಿ?

Shimoga-Central-Jail-Prison

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹದಲ್ಲಿರುವ ಕೈದಿಯ ಭೇಟಿಗೆ ಬಂದಿದ್ದ ವ್ಯಕ್ತಿಯೊಬ್ಬ ಟವಲ್‌ನಲ್ಲಿ (towel) ಗಾಂಜಾ ಅಡಗಿಸಿ ಜೈಲಿನೊಳಗೆ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಫೆಬ್ರವರಿ 13ರ ಸಂಜೆ ಘಟನೆ ನಡೆದಿದೆ. ಕೈದಿ ಮಹ್ಮದ್ ಅಫ್ಜಲ್ ಭೇಟಿಗೆ ಭದ್ರಾವತಿಯ ಹೊಸೂರು ನಿವಾಸಿ ಅಬ್ದುಲ್ ರಜಾಕ್ ಎಂಬಾತ ಬಂದಿದ್ದ. ಕಾರಾಗೃಹದ ಆಕ್ಸೆಸ್ ಕಂಟ್ರೋಲ್ ಪಾಯಿಂಟ್‌ನಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿ, ಅಬ್ದುಲ್ ರಜಾಕ್, ಕೈದಿ ಮಹ್ಮದ್‌ ಅಫ್ಜಲ್‌ಗೆ ಕೊಡಲು ತಂದಿದ್ದ ಬಟ್ಟೆಗಳ ತಪಾಸಣೆ ನಡೆಸಿದರು. ಒಂದು ಟವಲ್‌ನ ಪಟ್ಟಿಯಲ್ಲಿ ಅನುಮಾನಾಸ್ಪದ ವಸ್ತು ಇರುವುದು ಕಂಡುಬಂದಿದೆ. … Read more

ಉಂಬ್ಳೆಬೈಲು ಬಳಿ ಬೊಲೇರೋ ಪಿಕಪ್‌ ವಾಹನ ಮುಂಭಾಗ ಜಖಂ, ಸ್ವಲ್ಪದರಲ್ಲಿ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?

Tractor-and-Bolero-mishap-near-umblebyle-and-lingapura.

ಶಿವಮೊಗ್ಗ: ಉಂಬ್ಳೆಬೈಲು ಲಿಂಗಾಪುರ ರಸ್ತೆಯಲ್ಲಿ ವೇಗವಾಗಿ ಬಂದ ಟ್ರಾಕ್ಟರ್ (tractor) ಅಪಘಾತ ಎಸಗಿದೆ. ಫೆಬ್ರವರಿ 17ರ ಬೆಳಗ್ಗೆ ಘಟನೆ ಸಂಭವಿಸಿದ್ದು, ಅಪಘಾತದಲ್ಲಿ ಬೊಲೇರೋ ಪಿಕಪ್‌ ವಾಹನದ ಮುಂಭಾಗ ಜಖಂಗೊಂಡಿದೆ. ಅದೃಷ್ಟವಶಾತ್‌ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಭದ್ರಾವತಿಯ ಸೋಮನಾಥ ಎಂಬುವವರು ಬೊಲೇರೋ ಪಿಕಪ್‌ ವಾಹನದಲ್ಲಿ ಎನ್.ಆರ್.ಪುರಕ್ಕೆ ಹೊರಟಿದ್ದರು. ಲಿಂಗಾಪುರ ಗ್ರಾಮದ ಬಳಿ ಸಾಗುತ್ತಿದ್ದಾಗ, ಮುಂದೆ ಹೋಗುತ್ತಿದ್ದ ಟ್ರಾಕ್ಟರ್ ಚಾಲಕ ಅತಿ ವೇಗವಾಗಿ ಚಾಲನೆ ಮಾಡುತ್ತಾ ಟ್ರೈಲರ್‌ನಿಂದ ಬುಲೇರೋ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಡಿಕ್ಕಿಯ ರಭಸಕ್ಕೆ ಬುಲೇರೋ ವಾಹನದ ಮುಂಭಾಗ … Read more

ದಿಢೀರ್‌ ಹಾರಿ ಬಂತು ಕಪ್ಪು ಬಣ್ಣದ ಪ್ಯಾಕೆಟ್‌, ಇಬ್ಬರು ಕೈದಿಗಳ ವಿರುದ್ಧ ದಾಖಲಾಯ್ತು ಕೇಸ್‌, ಏನಿದು?

-Black-Packet-thrown-from-outside-the-central-jail-in-Shivamogga.

ಶಿವಮೊಗ್ಗ: ಸೋಗಾನೆಯ ಕೇಂದ್ರ ಕಾರಾಗೃಹಕ್ಕೆ ಹೊರಗಿನಿಂದ ಗಾಂಜಾ ಪ್ಯಾಕೆಟ್‌ (mobile phone) ಎಸೆಯಲಾಗಿತ್ತು. ಅವುಗಳನ್ನು ಅಕ್ರಮವಾಗಿ ಪಡೆದಿದ್ದ ಇಬ್ಬರು ವಿಚಾರಣಾಧೀನ ಕೈದಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಜೈಲಿನ ಭದ್ರತಾ ಸಿಬ್ಬಂದಿ ನಡೆಸಿದ ಹಠಾತ್ ತಪಾಸಣೆ ವೇಳೆ ಈ ಅಕ್ರಮ ಬಯಲಾಗಿದೆ. ಇದನ್ನೂ ಓದಿ – ಶಿವಮೊಗ್ಗದ ಸೆಂಟ್ರಲ್‌ ಜೈಲ್‌ ಒಳಗೆ ರಾತ್ರಿ ತೂರಿ ಬಂತು ಪೊಟ್ಟಣ, ತೆಗೆದು ನೋಡಿದ ಸಿಬ್ಬಂದಿಗೆ ಶಾಕ್ ಫೆಬ್ರವರಿ 1ರ ಬೆಳಗ್ಗೆ ಕಾರಾಗೃಹದ ಸಿಬ್ಬಂದಿ ಮತ್ತು ಕೆ.ಎಸ್.ಐ.ಎಸ್.ಎಫ್ ಸಿಬ್ಬಂದಿ ಗಸ್ತಿನಲ್ಲಿದ್ದಾಗ, ಜೈಲಿನ ಆವರಣದೊಳಗೆ ಹೊರಗಿನಿಂದ … Read more

ಮಹಿಳೆಯರೆ ಹುಷಾರ್‌, ಶಿವಮೊಗ್ಗದಲ್ಲಿ ಡಬ್ಬಿ ಚಮತ್ಕಾರ, ಮರಳಾದರೆ ಚಿನ್ನಾಭರಣವೇ ಮಾಯ, ಏನಿದು?

Crime-News-General-Image

ಶಿವಮೊಗ್ಗ: ಬಂಗಾರದ ಆಭರಣಗಳನ್ನು ಹೊಳೆಯುವಂತೆ ಪಾಲಿಶ್ (Gold Polishing) ಮಾಡಿಕೊಡುವುದಾಗಿ ನಂಬಿಸಿ, ಮನೆಯವರ ಕಣ್ಣೆದುರೇ ಲಕ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ದೋಚಿರುವ ಘಟನೆ ಶಿವಮೊಗ್ಗದ ಅಲ್ ಹರೀಮ್ ಲೇಔಟ್‌ನಲ್ಲಿ ನಡೆದಿದೆ. ಫರ್ಹಾನ್ ಬೇಗಂ ಅವರ ಮನೆಗೆ ಬಂದ ಇಬ್ಬರು ಅಪರಿಚಿತರು ತಾವು ಬಂಗಾರ ಮತ್ತು ಹಿತ್ತಾಳೆ ವಸ್ತುಗಳನ್ನು ಪಾಲಿಶ್ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಇದನ್ನು ನಂಬಿದ ಫರ್ಹಾನ್‌ ಬೇಗಂ ಅವರ ಅತ್ತೆ, ತಮ್ಮ ಬಳಿಯಿದ್ದ ಸುಮಾರು 45 ಗ್ರಾಂ ತೂಕದ ಚಿನ್ನದ ಸರ ಮತ್ತು 10 ಗ್ರಾಂ ತೂಕದ … Read more

ಶಿವಮೊಗ್ಗದ ಸೆಂಟ್ರಲ್‌ ಜೈಲ್‌ ಒಳಗೆ ರಾತ್ರಿ ತೂರಿ ಬಂತು ಪೊಟ್ಟಣ, ತೆಗೆದು ನೋಡಿದ ಸಿಬ್ಬಂದಿಗೆ ಶಾಕ್

Shimoga-Central-Jail-Prison

ಶಿವಮೊಗ್ಗ: ಸೋಗಾನೆಯಲ್ಲಿರುವ ಕೇಂದ್ರ ಕಾರಾಗೃಹದ ಆವರಣಕ್ಕೆ ಹೊರಗಿನಿಂದ ನಿಷೇಧಿತ ವಸ್ತುಗಳನ್ನು ಎಸೆದಿರುವ (packet) ಘಟನೆ ಬೆಳಕಿಗೆ ಬಂದಿದೆ. ಕಾರಾಗೃಹದ ಭದ್ರತಾ ಸಿಬ್ಬಂದಿ ಗಸ್ತಿನಲ್ಲಿದ್ದಾಗ ಈ ವಸ್ತುಗಳು ಪತ್ತೆಯಾಗಿದ್ದು, ಜೈಲು ಅಧಿಕಾರಿಗಳು ಪೊಲೀಸ್ ದೂರು ದಾಖಲಿಸಿದ್ದಾರೆ. ಜನವರಿ 30ರ ರಾತ್ರಿ ಕೇಂದ್ರ ಕಾರಾಗೃಹದ ಭದ್ರಾ ಸೆಕ್ಷನ್ ಆವರಣದಲ್ಲಿ ಜೈಲು ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ಕಾರಾಗೃಹದ ಹೊರಗಿನಿಂದ ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿದ ಪೊಟ್ಟಣಗಳನ್ನು ಜೈಲಿನ ಆವರಣದೊಳಗೆ ತೂರಿ ಬಂದಿವೆ. ತಕ್ಷಣ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಅಕ್ರಮವಾಗಿ ಸಾಗಿಸಲಾಗುತ್ತಿದ್ದ … Read more

ಶಿವಮೊಗ್ಗದ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಿಸಿದ ಬಳಿಕ ಕಾರ್ಮಿಕನಿಗೆ ರಕ್ತವಾಂತಿ, ಸಾವು

Areca-Farm-Adike-tota-in-Shimoga

ಶಿವಮೊಗ್ಗ: ತಾಲೂಕಿನ ಶ್ರೀರಾಂಪುರ ಗ್ರಾಮದ ಅಡಿಕೆ ತೋಟವೊಂದರಲ್ಲಿ ಅಡಿಕೆ ಮರಗಳಿಗೆ ಔಷಧಿ (pesticide) ಸಿಂಪಡಣೆ ಮಾಡುವ ಕೆಲಸ ಮಾಡುತ್ತಿದ್ದ ಕಾರ್ಮಿಕನೋರ್ವ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ತೋಟದ ಮಾಲೀಕನ ನಿರ್ಲಕ್ಷ್ಯವೇ ಸಾವಿಗೆ ಕಾರಣ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಮಂಜಾನಾಯ್ಕ ಎಂಬ ಕಾರ್ಮಿಕ ಶ್ರೀರಾಂಪುರದ ಏಕಾಂತಪ್ಪ ಎಂಬುವವರ ಅಡಿಕೆ ತೋಟದಲ್ಲಿ ಔಷಧಿ ಸಿಂಪಡಣೆ ಕೆಲಸಕ್ಕೆ ಹೋಗಿದ್ದರು. ಕೆಲಸ ಮುಗಿಸಿ ಮನೆಗೆ ಮರಳಿದಾಗ ತೀವ್ರ ಕೆಮ್ಮು, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ಕೂಡಲೆ ಮಂಜಾನಾಯ್ಕ ಅವರನ್ನು ಗಾಡಿಕೊಪ್ಪದ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು. ಮನೆಗೆ … Read more

ಮದ್ಯ ಸೇವಿಸಿ ಜೈಲಿಗೆ ಬಂದ ಕೈದಿ, ಬ್ಯಾಗ್‌ ಚೆಕ್‌ ಮಾಡಿದಾಗ ಸಿಕ್ತು ಓ.ಟಿ. ಪೌಚ್‌, ಏನಿದು ಪ್ರಕರಣ?

Shimoga-Central-Jail-Prison

ಶಿವಮೊಗ್ಗ: ಪೆರೋಲ್ ರಜೆ ಮುಗಿಸಿ ಕಾರಾಗೃಹಕ್ಕೆ ಮರಳುತ್ತಿದ್ದ ಸಜಾ ಬಂದಿಯೊಬ್ಬ (convict) ಕೇಂದ್ರ ಕಾರಾಗೃಹದೊಳಗೆ ಮದ್ಯ ಸಾಗಿಸಲು ಯತ್ನಿಸಿ ಸಿಕ್ಕಿಬಿದ್ದಿದ್ದಾನೆ. ಕೈದಿ ಮೋಹನ್ ಕುಮಾರ ಎಂಬಾತ ಪೆರೋಲ್ ಮುಗಿಸಿ ಜೈಲಿಗೆ ವಾಪಸ್ಸಾಗುವಾಗ ಮುಖ್ಯದ್ವಾರದ ತಪಾಸಣೆ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. ಇದನ್ನೂ ಓದಿ – ಶಿವಮೊಗ್ಗದ ಲಾಡ್ಜ್‌ಗಳಲ್ಲಿ ಪೊಲೀಸರಿಂದ ದಿಢೀರ್‌ ತಪಾಸಣೆ, ಏನೆಲ್ಲ ಪರಿಶೀಲಿಸಿದರು? ಜೈಲಿನ ಮುಖ್ಯದ್ವಾರದ ಆಕ್ಸೆಸ್ ಕಂಟ್ರೋಲ್‌ನಲ್ಲಿ ಕರ್ತವ್ಯದಲ್ಲಿದ್ದ KSISF ಸಿಬ್ಬಂದಿ, ಕೈದಿ ಮೋಹನ್ ಕುಮಾರನನ್ನು ತಪಾಸಣೆ ನಡೆಸಿದರು. ಆತ ಮದ್ಯಪಾನ ಮಾಡಿರುವುದು ಮೇಲ್ನೋಟಕ್ಕೆ … Read more

ದಿಢೀರ್‌ ಕಟ್‌ ಆಯ್ತು ಜಿಯೋ ಸಿಗ್ನಲ್‌, ಟವರ್‌ ಬಳಿ ಹೋದ ಸಿಬ್ಬಂದಿಗೆ ಕಾದಿತ್ತು ಶಾಕ್

Police-Jeep-at-Shimoga-General-Image

ಶಿವಮೊಗ್ಗ: ಶ್ರೀರಾಂಪುರ ಗ್ರಾಮದ ರಿಲಯನ್ಸ್ ಜಿಯೋ ಟವರ್‌ಗೆ (Jio tower) ಅಳವಡಿಸಿದ್ದ ಲೀಥಿಯಂ ಬ್ಯಾಟರಿಗಳನ್ನು ಕಳ್ಳತನ ಮಾಡಲಾಗಿದೆ. 4 ಬ್ಯಾಟರಿಗಳು ಕಳುವಾಗಿದ್ದು ಅವುಗಳ ಮೌಲ್ಯ ₹3,36,088 ಎಂದು ಅಂದಾಜಿಸಲಾಗಿದೆ. ಶ್ರೀರಾಂಪುರದಲ್ಲಿ ಜಮೀನಿನಲ್ಲಿ ಟವರ್ ಅಳವಡಿಸಲಾಗಿದೆ. ಅದರ ಕಾರ್ಯನಿರ್ವಹಣೆಗಾಗಿ ಒಟ್ಟು 6 ಬ್ಯಾಟರಿಗಳನ್ನು ಇರಿಸಲಾಗಿತ್ತು. ಟವರ್‌ನ ಸಿಗ್ನಲ್ ಸ್ಥಗಿತಗೊಂಡ ಬಗ್ಗೆ ಅಲಾರಂ ಬಂದಿತ್ತು. ತಾಂತ್ರಿಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ, ಒಟ್ಟು 6 ಬ್ಯಾಟರಿಗಳ ಪೈಕಿ 4 ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಇದನ್ನೂ ಓದಿ » ಶಿವಮೊಗ್ಗದಲ್ಲಿ … Read more