ಕಳೆನಾಶಕ ಸೇವಿಸಿ ಗ್ರಾಮ ಪಂಚಾಯಿತಿ ಸದಸ್ಯೆ ಆತ್ಮಹತ್ಯೆಗೆ ಯತ್ನ

Thirrthahalli Taluk Graphics

SHIVAMOGGA LIVE NEWS | THIRTHAHALLI | 20 ಜೂನ್ 2022 ಕಳೆನಾಶಕ ಸೇವಿಸಿ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ತೀರ್ಥಹಳ್ಳಿ ತಾಲೂಕು ತ್ರಯಂಬಕಪುರ ಗ್ರಾಮ ಪಂಚಾಯಿತಿಯ ಉಡುಕೆರೆ ಗ್ರಾಮದ ಸದಸ್ಯೆ ಪ್ರೇಮಾ (46) ಆತ್ಮಹತ್ಯೆಗೆ ಯತ್ನಿಸಿದಾಕೆ. ಕಳೆನಾಶಕ ಸೇವಿಸಿದ್ದ ಪ್ರೇಮಾ ಅವರಿಗೆ ಕೂಡಲೆ ಕೋಣಂದೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ತೀರ್ಥಹಳ್ಳಿ ಜೆ.ಸಿ. ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯರ ಸೂಚನೆ ಹಿನ್ನೆಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ … Read more

ಪಿಂಚಣಿಗಾಗಿ ಕಾದು ಕಾದು ಕಚೇರಿ ಮುಂದೆಯೇ ಕುಸಿದು ಬಿದ್ದ ವೃದ್ಧೆ

Old-Lady-collapse-near-VA-office-at-Nittur

SHIVAMOGGA LIVE NEWS | HOSANAGARA| 20 ಜೂನ್ 2022 ಗ್ರಾಮ ಲೆಕ್ಕಿಗರ ಕಚೇರಿ ಮುಂದೆ ಗಂಟೆಗಟ್ಟಲೆ ಕಾದು ಸುಸ್ತಾದ ವೃದ್ದೆಯೊಬ್ಬರು ಕಚೇರಿ ಮುಂಭಾಗ ಕುಸಿದು ಬಿದ್ದಿದ್ದಾರೆ. ಕೂಡಲೆ ವೃದ್ಧೆಯನ್ನು ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಯಿತು. ಹೊಸನಗರ ತಾಲೂಕು ನಿಟ್ಟೂರು ಗ್ರಾಮ ಲೆಕ್ಕಾಧಿಕಾರಿ ಕಚೇರಿ ಮುಂಭಾಗ ಶುಕ್ರವಾರ ಘಟನೆ ಸಂಭವಿಸಿದೆ. ವೃದ್ಧೆ ಸಾಧಮ್ಮ ಅವರು ಹೆಬ್ಬಿಗೆ ಗ್ರಾಮದಿಂದ 7 ಕಿ.ಮೀ ನಡೆದುಕೊಂಡು ನಿಟ್ಟೂರಿಗೆ ಬಂದಿದ್ದರು. ಕುಸಿದು ಬಿದ್ದ ವೃದ್ಧೆ ಶುಕ್ರವಾರ ಬೆಳಗ್ಗೆ 9.30ಕ್ಕೆ ವೃದ್ಧೆ ಸಾಧಮ್ಮ … Read more

ಮೈದೂಳಲು ಗ್ರಾಮದಲ್ಲಿ ಹಲವರಿಗೆ ವಾಂತಿ, ಭೇದಿ, ಆಸ್ಪತ್ರೆಗೆ ದಾಖಲು

-Doctors-visit-Mydolalu-village-for-verification

SHIVAMOGGA LIVE NEWS | HOLEHONNUR| 14 ಜೂನ್ 2022 ಮೈದೊಳಲು ಗ್ರಾಮದ ಎರಡು ಬೀದಿಯಲ್ಲಿ ಒಂದೆರಡು ದಿನದಿಂದ ವಾಂತಿ ಭೇದಿ ಪ್ರಕರಣಗಳು ಹೆಚ್ಚಾಗಿದ್ದು ಆತಂಕ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ.ಎಂ.ವಿ.ಅಶೋಕ್ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಗ್ರಾಮ ಪಂಚಾಯಿತಿ ಅಧಿಕಾರಿಗಳೊಂದಿಗೆ ಗ್ರಾಮದ ಕುಡಿಯುವ ನೀರಿನ (WATER) ಮೂಲವನ್ನು ಆರೋಗ್ಯಾಧಿಕಾರಿಗಳು ಪರಿಶೀಲಿಸಿದರು. ರಾಜಭಕ್ಷವಾಲಿ ದೇವಸ್ಥಾನದ ಹಿಂಭಾಗದ ಟ್ಯಾಂಕಿನಿಂದ ಸರಬರಾಜು ಆಗುತ್ತಿರುವ ನೀರು ಕುಡಿದ ಜನರ ಆರೋಗ್ಯದಲ್ಲಿ ವ್ಯತ್ಯಾಸ ಆಗಿದೆ. ಟ್ಯಾಂಕಿನ ಬಳಿ … Read more

ರಸ್ತೆ ಪಕ್ಕ ನಿಂತುಕೊಂಡು ಮಾತಾಡುತ್ತಿದ್ದ ಸ್ನೇಹಿತರಿಗೆ ಬೈಕ್ ಡಿಕ್ಕಿ, ಒಬ್ಬ ಸಾವು

crime name image

SHIVAMOGGA LIVE NEWS | BHADRAVATHI | 14 ಜೂನ್ 2022 ಬೈಕ್ ಡಿಕ್ಕಿ ಹೊಡೆದು ರಸ್ತೆ ಪಕ್ಕದಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬೈಕ್ ಚಾಲಕನ ಅತಿ ವೇಗವಾಗಿ ಬೈಕ್ ಚಲಾಯಿಸಿದ್ದೆ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ACCIDENT ಅಂತರಗಂಗೆ ಕ್ಯಾಂಪ್’ನ ಸಂತೋಷ್ (35) ಮೃತ ದುರ್ದೈವಿ. ಮಂಜುನಾಥ್ ಎಂಬಾತ ಗಾಯಗೊಂಡಿದ್ದಾರೆ. ಅತಿ ವೇಗವಾಗಿ ಬೈಕ್ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದ ಭದ್ರಾವತಿ ಹೊಸಮನೆಯ ಮುರುಗೇಶ್ ಕೂಡ ಗಾಯಗೊಂಡಿದ್ದಾನೆ. ಹೇಗಾಯ್ತು ಆಪಘಾತ? … Read more

ಬೈಕಿಗೆ ಡಿಕ್ಕಿ ಹೊಡೆದು ಕಾರು ಸಹಿತ ಪರಾರಿಯಾದ ಚಾಲಕ

HIVAMOGGA-NEWS- map

SHIVAMOGGA LIVE NEWS | SHIMOGA | 11 ಜೂನ್ 2022 ಅಪಘಾತಪಡಿಸಿ ಸ್ಥಳದಲ್ಲಿ ನಿಲ್ಲದೆ ಕಾರು ಸಹಿತ ಪರಾರಿಯಾದ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗ ತಾಲೂಕು ಹೊಳೆಬೆನವಳ್ಳಿ ಬಳಿ ಘಟನೆ ಸಂಭವಿಸಿದೆ. ಹಾರೋಬೆನವಳ್ಳಿ ತಾಂಡಾದ ಹಾಲೇಶ್ ನಾಯ್ಕ್ ಅವರು ರಾತ್ರಿ ತಮ್ಮ ಪಲ್ಸರ್ ಬೈಕಿನಲ್ಲಿ ಶಿವಮೊಗ್ಗದಿಂದ ಮನೆಗೆ ತೆರಳುತ್ತಿದ್ದರು. ಹೊಳೆಬೆನವಳ್ಳಿ ಕುಲುಮೆ ಬಳಿ ಎದುರಿನಿಂದ ಬಂದ ಕಾರೊಂದು ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಹಾಲೇಶ್ ನಾಯ್ಕ್ ಅವರು ಗಾಯಗೊಂಡಿದ್ದರು. ಸ್ಥಳೀಯರೆ ಅವರನ್ನು ಸುಬ್ಬಯ್ಯ ಆಸ್ಪತ್ರೆಗೆ … Read more

ಸಾಗರದ ಸೈದೂರು ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷ

Talaguppa Graphics

SHIVAMOGGA LIVE NEWS | SHIMOGA | 11 ಜೂನ್ 2022 ಸೈದೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಭೈರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶುಕ್ರವಾರ ಅಧ್ಯಕ್ಷರ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಭೈರಪ್ಪ ಅವರ ಹೊರತು ಉಳಿದ ಸದಸ್ಯರಾರು ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ ಭೈರಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ತಡಗಳಲೆ ವಿನಯ ಗೌಡ ಅವರು ಹೃದಯಾಘಾತದಿಂದ ನಿಧನರಾಗಿದ್ದರು. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನ ತೆರವಾಗಿತ್ತು. ಇದನ್ನೂ ಓದಿ – ‘ಹೀಗೆ ಮಾಡಿದರಷ್ಟೆ ಮಾಜಿ … Read more

ಕಾರಿಗೆ ಡಿಕ್ಕಿಯಾಗಿ ಪಲ್ಟಿ ಹೊಡೆದ ಲಾರಿ, ಶಿವಮೊಗ್ಗ – ತೀರ್ಥಹಳ್ಳಿ ರಸ್ತೆಯಲ್ಲಿ ಕೆಲ ಹೊತ್ತು ಟ್ರಾಫಿಕ್ ಜಾಮ್

Truck-Car-Accident-At-Tuduru-in-Thirthahalli

SHIVAMOGGA LIVE NEWS | ACCIDENT | 30 ಮೇ 2022 ಕಾರು ಮತ್ತು ಲಾರಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ನಡು ರಸ್ತೆಯಲ್ಲಿ ಲಾರಿ ಪಲ್ಟಿಯಾಗಿದ್ದು, ಶಿವಮೊಗ್ಗ ತೀರ್ಥಹಳ್ಳಿ ರಸ್ತೆಯಲ್ಲಿ ಕೆಲಕಾಲ ಸಂಚಾರ ದಟ್ಟಣೆ ಉಂಟಾಗಿತ್ತು. ತೀರ್ಥಹಳ್ಳಿ ತಾಲೂಕು ತೂದೂರು ಗ್ರಾಮದ ಬಳಿ ಘಟನೆ ಸಂಭವಿಸಿದೆ. ಉಡುಪಿಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕಾರು ಮತ್ತು ಶಿವಮೊಗ್ಗದಿಂದ ತೀರ್ಥಹಳ್ಳಿ ಕಡೆಗೆ ತೆರಳುತ್ತಿದ್ದ ಲಾರಿ ನಡುವ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಲಾರಿ ಪಲ್ಟಿಯಾಗಿದೆ. ಕಾರಿನ ಮುಂಭಾಗ ಜಖಂ ಆಗಿದೆ. ಕಾರು … Read more

ರಾತ್ರೋರಾತ್ರಿ ದೇವಸ್ಥಾನದ ಬಾಗಿಲ ಬೀಗ ಮುರಿದು ಹುಂಡಿ ಕಳ್ಳತನ

Puradal-Temple-Theft-in-Shimoga

SHIVAMOGGA LIVE NEWS | TEMPLE | 29 ಮೇ 2022 ಶಿವಮೊಗ್ಗ ತಾಲೂಕು ಪುರದಾಳು (PURADALU) ಗ್ರಾಮದಲ್ಲಿ ದೇವಸ್ಥಾನ (TEMPLE) ಬಾಗಿಲ ಬೀಗ ಮುರಿದು, ಹುಂಡಿ ಕಳ್ಳತನ ಮಾಡಲಾಗಿದೆ. ಕಳೆದ ರಾತ್ರಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇಗುಲದ ಬಾಗಿಲ ಬೀಗ ಮುರಿದು ಕಳ್ಳರು ದೇವಸ್ಥಾನದ ಒಳ ಪ್ರವೇಶ ಮಾಡಿದ್ದಾರೆ. ದೇವರ ಮುಂದಿದ್ದ ಹುಂಡಿಯನ್ನು ಹೊತ್ತೊಯ್ದಿದ್ದಾರೆ. ದೇಗುಲದಲ್ಲಿ ಇದ್ದ ಸಿಸಿಟಿವಿ ಕ್ಯಾಮರಾವನ್ನು ಹಾನಿಗೊಳಿಸಿದ್ದಾರೆ. ಇವತ್ತು ಬೆಳಗ್ಗೆ ದೇವಸ್ಥಾನದಲ್ಲಿ ಪೂಜೆ ಮಾಡಲು ಅರ್ಚಕರು ಬಂದಾಗ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. … Read more

ಭದ್ರಾವತಿ ಪೊಲೀಸರ ದಾಳಿ, 9 ನಾಡ ಬಂದೂಕು ವಶಕ್ಕೆ, ಒಬ್ಬ ಅರೆಸ್ಟ್

Bhadravathi-Police-Seize-guns-at-Shankaraghatta

SHIVAMOGGA LIVE NEWS | GUN | 26 ಮೇ 2022 ಪರವಾನಗಿ ಇಲ್ಲದೆ ಬಂದೂಕು ರಿಪೇರಿ ಮಾಡುತ್ತಿದ್ದ ಆರೋಪ ಸಂಬಂಧ ಪೊಲೀಸರು ದಾಳಿ ನಡೆಸಿ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಆತನಿಂದ 9 ನಾಡ ಬಂದೂಕುಗಳನ್ನು (GUN) ವಶಕ್ಕೆ ಪಡೆದಿದ್ದಾರೆ. ಪಾಲಾಕ್ಷಪ್ಪ (47) ಬಂಧಿತ. ಭದ್ರಾವತಿ ತಾಲೂಕು ಶಂಕರಘಟ್ಟ ಗ್ರಾಮದ ಮನೆಯಲ್ಲಿ ಪಾಲಾಕ್ಷಪ್ಪ ನಾಡ ಬಂದೂಕುಗಳ ರಿಪೇರಿ ಮಾಡುತ್ತಿದ್ದ. ಖಚಿತ ಮಾಹಿತಿ ಹಿನ್ನೆಲೆ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಮನೆ ಮೇಲೆ ದಾಳಿ ನಡೆಸಿದ್ದಾರೆ. ದಾಳಿ ವೇಳೆ ಪಾಲಾಕ್ಷಪ್ಪನ … Read more

ಸಿಲಿಂಡರ್’ನಿಂದ ಗ್ಯಾಸ್ ಸೋರಿಕೆಯಾಗಿ ಹೊತ್ತಿ ಉರಿದ ಅಡುಗೆ ಮನೆ

Fire-at-kitchen-in-Shimoga-Puradalu-village

SHIVAMOGGA LIVE NEWS | GAS LEAK | 24 ಮೇ 2022 ಸಿಲಿಂಡರ್ ಗ್ಯಾಸ್ ಸೋರಿಕೆಯಾಗಿ ಅಡುಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಮನೆಯವರು ಮತ್ತು ಗ್ರಾಮಸ್ಥರ ಸಮಯ ಪ್ರಜ್ಞೆಯಿಂದಾಗಿ ಸಂಭಾವ್ಯ ದೊಡ್ಡ ಹಾನಿ ತಪ್ಪಿದಂತಾಗಿದೆ. ಶಿವಮೊಗ್ಗದ ಪುರದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಾಂತಿಪುರದ ಶ್ರೀಧರ್ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಬೆಂಕಿ ತಂದ ಆತಂಕ ಶ್ರೀಧರ್ ಅವರ ಮನೆಯ ಅಡುಗೆ ಮನೆಯಲ್ಲಿಟ್ಟಿದ್ದ ಸಿಲಿಂಡರ್’ನಿಂದ ಗ್ಯಾಸ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡಿದೆ. ಇದರಿಂದ ಮನೆಯವರು ಆತಂಕಕ್ಕೀಡಾಗಿದ್ದರು. ಹಸಿ ಗೋಣಿ … Read more