ದೀಪಾವಳಿ, ಪ್ರವಾಸಿಗರ ಸಂಖ್ಯೆ ಹೆಚ್ಚಳ, ಅ.21ರಂದೂ ಶಿವಮೊಗ್ಗ ಮೃಗಾಲಯ ಓಪನ್‌

Lion-Tiger-Safari-Tyavrekoppa-in-Shimoga.

ಶಿವಮೊಗ್ಗ: ದೀಪಾವಳಿ ಹಿನ್ನೆಲೆ ಸಾರ್ವಜನಿಕರು ಮೃಗಾಲಯ (Zoo) ವೀಕ್ಷಣೆಗೆ ಹಾಗೂ ಶಾಲಾ, ಕಾಲೇಜು ವಿದ್ಯಾರ್ಥಿಗಳು ಕಾಲೇಜು ಪ್ರವಾಸಕ್ಕೆಂದು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆ ಪ್ರವಾಸಿಗರಿಗೆ ಪ್ರಕೃತಿ ಶಿಕ್ಷಣ ನೀಡುವ ಸಲುವಾಗಿ ತ್ಯಾವರೆಕೊಪ್ಪದ ಹುಲಿ ಸಿಂಹಧಾಮದಲ್ಲಿ ಮೃಗಾಲಯ ಹಾಗೂ ಸಫಾರಿ ವೀಕ್ಷಣೆಯನ್ನು ಅ.21 ಸಹ ತೆರೆದಿರುತ್ತದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರೀಶೀಲನೆ, ವಾಹನಗಳ ಒಡಾಟಕ್ಕೆ ಬದಲಿ ಮಾರ್ಗ

ಶಿವಮೊಗ್ಗಕ್ಕೆ ಬಿಳಿ ಹುಲಿ ಆಗಮನ, ತ್ಯಾವರೆಕೊಪ್ಪದಲ್ಲಿ 6 ನೂತನ ಸದಸ್ಯರ ದರ್ಶನ, ಇನ್ನು ಯಾವೆಲ್ಲ ಪ್ರಾಣಿ ಬಂದಿವೆ?

031025-White-Tiger-in-Shimoga-Tyavarekoppa-Lion-and-Tiger-Safari.webp

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ (Zoo) ನೂತನ ಸದಸ್ಯರ ಆಗಮನವಾಗಿದೆ. ಶಿವಮೊಗ್ಗಕ್ಕೆ ಆಗಮಿಸಿದಾಗಿನಿಂದ ಕ್ವಾರಂಟೈನ್‌ನಲ್ಲಿದ್ದ ಪ್ರಾಣಿಗಳು ಈಗ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮೃಗಾಲಯದ ಅಧಿಕಾರಿಗಳು ಫೋಟೊ ರಿಲೀಸ್‌ ಮಾಡಿದ್ದಾರೆ. ಇದೇ ಮೊದಲ ಬಾರಿ ಶಿವಮೊಗ್ಗದ ಮೃಗಾಲಯಕ್ಕೆ ಬಿಳಿ ಹುಲಿ ಆಗಮನವಾಗಿದೆ. ಇನ್ನು, ಇದೇ ಮೊದಲ ಬಾರಿ ಹೊರ ರಾಜ್ಯದಿಂದ ಹುಲಿ, ಸಿಂಹಗಳನ್ನು ತರಿಸಲಾಗಿದೆ. ಯಾವೆಲ್ಲ ಪ್ರಾಣಿಗಳು ಬಂದಿವೆ? ಇಲ್ಲಿದೆ ಫೋಟೊ ಮಾಹಿತಿ » ಬಿಳಿ ಹುಲಿ ಶಿವಮೊಗ್ಗ ಮೃಗಾಲಯಕ್ಕೆ ಇದೆ ಮೊದಲ ಬಾರಿ ಬಿಳಿ … Read more

ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್‌

Lion-Tiger-Safari-Tyavrekoppa-in-Shimoga.

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬದ ಸಂದರ್ಭ ಇಲ್ಲಿನ ಮೃಗಾಲಯಕ್ಕೆ ಇಂದೋರ್‌ ಮತ್ತು ಔರಂಗಾಬಾದ್‌ನಿಂದ ಪ್ರಾಣಿಗಳು (Animals) ಆಗಮಿಸಲಿವೆ. ಮೃಗಾಲಯಕ್ಕೆ ಅಧಿಕಾರಿಗಳು ಭೇಟಿ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯದ ಅಧಿಕಾರಿಗಳು ಇಂದು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳ ವಿನಿಮಯಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು, ಶಿವಮೊಗ್ಗ ಮೃಗಾಲಯದ … Read more

ತ್ಯಾವರೆಕೊಪ್ಪ ಮೃಗಾಲಯಕ್ಕೆ ನಾಲ್ಕು ಹೊಸ ಬಗೆಯ ಪ್ರಾಣಿ, ಪಕ್ಷಿ ಪ್ರಭೇದ

new-animals-to-tyavarekoppa-lion-and-tiger-safari.

SHIMOGA NEWS, 16 NOVEMBER 2024 : ಮೃಗಾಲಯಗಳ ನಡುವೆ ಪ್ರಾಣಿಗಳ (Animals) ವಿನಿಮಯ ಕಾರ್ಯಕ್ರಮದ ಅಡಿ ಐದು ಬಗೆಯ ಹೊಸ ಪ್ರಾಣಿ, ಪಕ್ಷಿಗಳು ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ಸೇರ್ಪಡೆಯಾಗಿವೆ. ಇದರಿಂದ ತ್ಯಾವರೆಕೊಪ್ಪದಲ್ಲಿ ಪ್ರಾಣಿ ಪ್ರಬೇಧಗಳ ಸಂಖ್ಯೆ 34ಕ್ಕೆ ಏರಿಕೆಯಾಗಿದೆ. ತಿರುವನಂತಪುರದಿಂದ ಶಿವಮೊಗ್ಗಕ್ಕೆ ಪ್ರಾಣಿಗಳು ಪ್ರಾಣಿಗಳ ವಿನಿಮಯ ಕಾರ್ಯಕ್ರಮದ ಅಡಿ ಹೆಚ್ಚುವರಿ ಪ್ರಾಣಿಗಳನ್ನು ವಿನಿಮಯ ಮಾಡಿಕೊಳ್ಳಲು ಅನುಮೋದನೆ ದೊರತಿತ್ತು. ಅದರಂತೆ ತ್ಯಾವರೆಕೊಪ್ಪದ ಮೃಗಾಲಯದಲ್ಲಿ ಹೆಚ್ಚುವರಿಯಾದ ಪ್ರಾಣಿಗಳನ್ನು ಕೇರಳದ ತಿರುವನಂತಪುರದ ಮೃಗಾಲಯಕ್ಕೆ ರವಾನಿಸಲಾಗಿದೆ. ಅಲ್ಲಿಂದ ಹೆಚ್ಚುವರಿ ಪ್ರಾಣಿಗಳನ್ನು … Read more

ತ್ಯಾವರೆಕೊಪ್ಪ ಮೃಗಾಲಯದ ಆರ್ಯ ಇನ್ನಿಲ್ಲ

lion-arya-succumbed-at-shimoga-tiger-lion-safari

SHIMOGA, 5 AUGUST 2024 : ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದ ಗಂಡು ಸಿಂಹ (Lion) ಆರ್ಯ ವಯೋ ಸಹಜ ಕಾಯಿಲೆಯಿಂದ ಮೃತಪಟ್ಟಿದೆ. ಬಹು ಅಂಗಾಂಗ ವೈಫಲ್ಯದಿಂದ ಅಸ್ವಸ್ಥಗೊಂಡಿದ್ದ ಸಿಂಹ ಕೊನೆಯುಸಿರೆಳೆದಿದೆ. ಆರ್ಯನಿಗೆ ಹುಲಿ ಮತ್ತು ಸಿಂಹಧಾಮದ ವೈದ್ಯ ಡಾ. ಮುರಳಿ ಮನೋಹರ್‌ ನೇತೃತ್ವದಲ್ಲಿ ಚಿಕಿತ್ಸೆ ಕೊಡಲಾಗುತ್ತಿತ್ತು. ಕಳೆದ ಮೂರು ದಿನದಿಂದ ಆರ್ಯ ಆಹಾರ ಸೇವಿಸುತ್ತಿರಲಿಲ್ಲ ಎಂದು ತಿಳಿದು ಬಂದಿದೆ. ಸಿಂಹಧಾಮದಲ್ಲಿಯೇ ಆರ್ಯನ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. 2008ರಲ್ಲಿ ಮೈಸೂರು ಮೃಗಾಲಯದಿಂದ ತ್ಯಾವರೆಕೊಪ್ಪಕ್ಕೆ ತರಲಾಗಿತ್ತು. ಸಿಂಹಗಳ ಒಟ್ಟು … Read more

ಹುಲಿ, ಸಿಂಹಧಾಮದ ಪ್ರವಾಸಿಗರಿಗೆ ಗುಡ್‌ ನ್ಯೂಸ್‌

Lion-Tiger-Safari-Tyavrekoppa-in-Shimoga.

SHIVAMOGGA LIVE NEWS | 21 OCTOBER 2023 SHIMOGA : ಪ್ರವಾಸಿಗರ ಅನುಕೂಲಕ್ಕೆ ಅ.24ರಂದು ತ್ಯಾವರೆಕೊಪ್ಪದ ಹುಲಿ-ಸಿಂಹಧಾಮ (SAFARI) ತೆರೆದಿರುತ್ತದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಸರಾ ಹಬ್ಬದ ಪ್ರಯುಕ್ತ ಹುಲಿ-ಸಿಂಹಧಾಮದಲ್ಲಿನ ಝೂ ಮತ್ತು ಸಫಾರಿ ವೀಕ್ಷಣೆಗೆ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಮಂಗಳವಾರವು ತೆರೆದಿರುತ್ತದೆ. ಪ್ರವಾಸಿಗರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ – ಶಿವಮೊಗ್ಗ ದಸರಾ, ನಗರದಲ್ಲಿ ಆನೆಗಳ ತಾಲೀಮು ಆರಂಭ

ತ್ಯಾವರೆಕೊಪ್ಪ ಹುಲಿ, ಸಿಂಹಧಾಮ, ನಾಳೆಯೂ ಓಪನ್‌

Lion-Tiger-Safari-Tyavrekoppa-in-Shimoga.

SHIVAMOGGA LIVE NEWS | 14 AUGUST 2023 SHIMOGA : ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆ.15 ರ ಮಂಗಳವಾರ ತ್ಯಾವರೆಕೊಪ್ಪದ (Tyavarekoppa) ಹುಲಿ-ಸಿಂಹಧಾಮ  (Lion Safari) ತೆರೆದಿರುತ್ತದೆ. ವಿದ್ಯಾರ್ಥಿಗಳು, ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಜೂ ಹಾಗೂ ಸಫಾರಿ ವೀಕ್ಷಿಸುವಂತೆ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದ ಕಾರ್ಯ ನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ. ಇದನ್ನೂ ಓದಿ – ಪಂಜರ ಸೇರಿತು ಶಿವಮೊಗ್ಗಕ್ಕೆ ಆಗಮಿಸಿದ್ದ ಟಿ-55 ಯುದ್ಧ ಟ್ಯಾಂಕರ್

ಶಿವಮೊಗ್ಗ ತ್ಯಾವರೆಕೊಪ್ಪ ಸಫಾರಿಯಲ್ಲಿ ಹುಲಿ ಸಾವು

Tiger-Dies-at-Lion-Tiger-safari-in-Shimoga

SHIVAMOGGA LIVE NEWS | TIGER| 12 ಮೇ 2022 ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹಧಾಮದಲ್ಲಿ ಗಂಡು ಹುಲಿಯೊಂದು ಮೃತಪಟ್ಟಿದೆ. ರಾಮ (17) ಮೃತಪಟ್ಟಿರುವ ಹುಲಿ. ವಯೋಸಹಜ ಕಾರಣದಿಂದ ಹುಲಿ ಮೃತಪಟ್ಟಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾನೂನು ರೀತಿ ಮರಣೋತ್ತರ ಪರೀಕ್ಷೆ ನಡೆದಿದ್ದು, ದಹನ ಪ್ರಕ್ರಿಯೆ ನಡಸಲಾಗಿದೆ. ಸದ್ಯ ಹುಲಿ ಮತ್ತು ಸಿಂಹಧಾಮದಲ್ಲಿ ಪ್ರಸ್ತುತ 5 ಹುಲಿಗಳಿವೆ. ಇದನ್ನೂ ಓದಿ ⇒ ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ