ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 11 AUGUST 2023
SAGARA : ಗೃಹ ಜ್ಯೋತಿ (Gruha Jyothi) ಯೋಜನೆ ಅಡಿ ಗೃಹ ಬಳಕೆಗೆ 200 ಯುನಿಟ್ ವಿದ್ಯುತ್ ಉಚಿತ (Free Power) ಎಂದು ಸರ್ಕಾರ ಘೋಷಿಸಿದೆ. ಈ ಯೋಜನೆ ಅಡಿ ಅರ್ಜಿ ಸಲ್ಲಿಸಿ ಉಚಿತ ವಿದ್ಯುತ್ ಪಡೆಯುವ ನಿರೀಕ್ಷೆಯಲ್ಲಿದ್ದ ಗ್ರಾಹಕರೊಬ್ಬರಿಗೆ ಮೆಸ್ಕಾಂ ಶಾಕ್ ನೀಡಿದೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಸಾಗರ ತಾಲೂಕು ಸಿರಿವಂತೆ ಸಮೀಪದ ಕೋಗೋಡು ಗ್ರಾಮದ ಶ್ರೀಧರ್ ಭಟ್ ಅವರಿಗೆ ಈ ತಿಂಗಳು 80,747 ರೂ. ವಿದ್ಯುತ್ ಬಿಲ್ ನೀಡಲಾಗಿದೆ.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಉಚಿತ ವಿದ್ಯುತ್ ನಿರೀಕ್ಷೆಯಲ್ಲಿದ್ದರು
ಶ್ರೀಧರ್ ಭಟ್ ಅವರು ಸರ್ಕಾರದ ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಈ ತಿಂಗಳು ಶುಲ್ಕ ಮನ್ನಾ (Free Power) ಆಗಿರುವ ವಿದ್ಯುತ್ ಬಿಲ್ ಬರುವ ನಿರೀಕ್ಷೆಯಲ್ಲಿದ್ದರು. ತಾಳಗುಪ್ಪ ಮೆಸ್ಕಾಂ ವಿಭಾಗ ಪ್ರತಿ ತಿಂಗಳು 3ನೇ ತಾರೀಖಿನಂದು ವಿದ್ಯುತ್ ಬಿಲ್ ಒದಗಿಸುತ್ತಿತ್ತು. ಈ ಬಾರಿ ನಿಗದಿತ ಸಮಯಕ್ಕೆ ವಿದ್ಯುತ್ ಬಿಲ್ ಬಾರದ ಹಿನ್ನೆಲೆ ಶ್ರೀಧರ್ ಭಟ್ ಅವರ ಪುತ್ರ ಆನ್‌ಲೈನ್‌ನಲ್ಲಿ ವಿದ್ಯುತ್ ಬಿಲ್ ಚೆಕ್ ಮಾಡಿದ್ದಾರೆ.
ಇದನ್ನೂ ಓದಿ – ತೀರ್ಥಹಳ್ಳಿಯಲ್ಲಿ ಅಡಿಕೆ ತೋಟದ ಮೇಲೆ ಪೊಲೀಸರ ದಾಳಿ, ಇಬ್ಬರು ಅರೆಸ್ಟ್
ಸಾವಿರ ಸಾವಿರ ಯುನಿಟ್ ಬಳಕೆ
ಆನ್‌ಲೈನ್ ಬಿಲ್‌ನಲ್ಲಿ ಶ್ರೀಧರ್ ಭಟ್ ಅವರು 9,982 ಯುನಿಟ್ ಬಳಕೆ ಮಾಡಿದ್ದಾರೆ ಎಂದು ತೋರಿಸಿತ್ತು. 2,994 ರೂ. ರಿಯಾಯಿತಿ ಕಳೆದು 80,784 ರೂ. ಪಾವತಿ ಮಾಡಬೇಕು ಎಂದು ನಮೂದಾಗಿತ್ತು.
ಮೆಸ್ಕಾಂ ಯಡವಟ್ಟಿಗೆ ಶ್ರೀಧರ್ ಭಟ್ ಆತಂಕಕ್ಕೀಡಾಗಿದ್ದರು. ಮೀಟರ್ ರೀಡರ್‌ಗಳು ತಪ್ಪಾದ ಯುನಿಟ್ ನಮೂದಿಸಿಕೊಳ್ಳುವುದು ಅಥವಾ ಮೆಸ್ಕಾಂನ ತಾಂತ್ರಿಕ ಸಮಸ್ಯೆಯಿಂದ ಈ ಹಿಂದೆಯು ಹಲವು ಕಡೆ ಹೆಚ್ಚುವರಿ ಮೊತ್ತದ ವಿದ್ಯುತ್ ಬಿಲ್ ಬಂದ ಉದಾಹರಣೆಗಳಿವೆ. ಈಗ ಸರ್ಕಾರ ಉಚಿತ ವಿದ್ಯುತ್ ಒದಗಿಸುತ್ತಿರುವ ಸಂದರ್ಭ ಹೆಚ್ಚಿನ ಮೊತ್ತದ ಬಿಲ್ ಬಂದಿರುವುದು ಗ್ರಾಹಕರಿಗೆ ಆಶ್ಚರ್ಯ ಮತ್ತು ಆತಂಕ ಉಂಟು ಮಾಡಿದೆ.