ಪ್ರಸನ್ನ ಭಟ್ ಮನೆಗೆ ಸಂಸದ ರಾಘವೇಂದ್ರ ಭೇಟಿ, ಮಹತ್ವದ ಘೋಷಣೆ

Published On : ಜನವರಿ 4, 2023

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS |4 JANUARY 2023

HOSANGARA : ಪ್ರಸನ್ನ ಭಟ್ ಅವರ ಮನೆಗೆ ಸಂಸದ ಬಿ.ವೈ.ರಾಘವೇಂದ್ರ ಅವರು ಇವತ್ತು ಭೇಟಿ (visit) ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು. ಪ್ರಸನ್ನ ಭಟ್ ಅವರ ತಾಯಿಯೊಂದಿಗೆ ಕೆಲ ಹೊತ್ತು ಮಾತನಾಡಿದ ರಾಘವೇಂದ್ರ ಅವರು ಭಾವುಕರಾದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದ ರಾಘವೇಂದ್ರ, ಪ್ರಸನ್ನ ಭಟ್ ತಮ್ಮೊಂದಿಗಿದ್ದು ಫೋಟೊಗಳು, ಸಾಮಾಜಿಕ ಜಾಲತಾಣಗಳನ್ನು ನಿರ್ವಹಣೆ ಮಾಡುತ್ತಿದ್ದರು. ಸಂಘಟನೆಯ ಕೆಲಸದಲ್ಲಿಯು ತೊಡಗಿಸಿಕೊಂಡಿದ್ದರು. ಅವರ ಅಕಾಲಿಕ ನಿಧನ ನೋವುಂಟು ಮಾಡಿದೆ ಎಂದರು.

ಇದನ್ನೂ ಓದಿ – ಪ್ರಸನ್ನ ಭಟ್ ಅಂತಿಮ ದರ್ಶನಕ್ಕೆ ಶಿವಮೊಗ್ಗ, ಹೊಸನಗರದಲ್ಲಿ ದೊಡ್ಡ ಸಂಖ್ಯೆಯ ಜನ, ಮುಖ್ಯ ರಸ್ತೆಯಲ್ಲಿ ಮೆರವಣಿಗೆ

ಇನ್ನು, ಪ್ರಸನ್ನ ಭಟ್ ಸ್ಮರಣಾರ್ಥ ವಿದ್ಯಾರ್ಥಿಗಳು, ಯುವಕರಿಗೆ ಅನುಕೂಲ ಆಗುವ ಕಾರ್ಯವೊಂದನ್ನು ಹೊಸನಗರದಲ್ಲಿ ಮಾಡಲಾಗುತ್ತದೆ ಎಂದು ತಿಳಿಸಿದರು.

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಜನವರಿ 4, 2023

Leave a Comment