SHIVAMOGGA LIVE NEWS | 8 JANUARY 2025
ಶಿವಮೊಗ್ಗ : ಆ ಯುವಕನ (Driver) ದುಡಿಮೆಯಿಂದಾಗಿ ಕುಟುಂಬ ನಡೆಯುತ್ತಿತ್ತು. ಭವಿಷ್ಯದ ಕುರಿತು ಏನೇನೋ ಕನಸುಗಳಿದ್ದವು. ಆದರೆ ಒಂದೇ ಒಂದು ಅಪಘಾತ ಎಲ್ಲವನ್ನು ನುಚ್ಚು ನೂರು ಮಾಡಿದೆ. ಈಗ ಇಡೀ ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿದೆ. ಚಿಕಿತ್ಸೆಯ ಖರ್ಚು ಭರಿಸಲಾಗಿದೆ ಪರಿತಪಿಸುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಇದು ಶಿವಮೊಗ್ಗ ತಾಲೂಕು ಹಸೂಡಿ ಗ್ರಾಮದ ಚಾಲಕ ರಾಘು ಕುಟುಂಬದ ಸ್ಥಿತಿ ಇದು. ರಘು, ಪಿಕಪ್ ವಾಹನದ ಚಾಲಕರಾಗಿದ್ದರು. ನಿತ್ಯ ಊರಿಂದೂರಿಗೆ ಲೋಡ್ ಸಾಗಿಸಿ ಆದಾಯ ಗಳಿಸಿ ಕುಟುಂಬ ನಡೆಸುತ್ತಿದ್ದರು. ರಘು ತಂದೆಯದ್ದು ದನ ಮೇಯಿಸುವ ಕೆಲಸ. ತಾಯಿ ಮನೆ ನಿರ್ವಹಣೆ ಮಾಡುತ್ತಿದ್ದರು. ಮಗನ ಆದಾಯದಿಂದ ಮನೆ ನಡೆಯುತ್ತಿತ್ತು.
ಕುಟುಂಬದ ಖುಷಿ ಕಸಿದ ಅಪಘಾತ
ರಘು ಅವರು ಬೆಳಗಾವಿಯಿಂದ ಬೆಂಗಳೂರಿಗೆ ಲೋಡ್ ಸಾಗಿಸುತ್ತಿದ್ದಾಗ ಹಾವೇರಿ ಸಮೀಪ ಪಿಕಪ್ ವಾಹನ ಅಪಘಾತಕ್ಕೀಡಾಯಿತು. ರಘು ಗಂಭೀರ ಗಾಯಗೊಂಡರು. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಕಾಲಿನ ಮಂಡಿ ಚಿಪ್ಪು ಸೇರಿ ಎರಡು ಕಡೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಯಿತು. ಇನ್ಷುರೆನ್ಸ್ ಹಣ ವ್ಯಯವಾಯಿತು. ಮಾತ್ರೆ, ಔಷಧಕ್ಕೆ ಹೆಚ್ಚುವರಿಯಾಗಿ ಲಕ್ಷ ಲಕ್ಷ ಹಣ ಹರಿದು ಹೋಯ್ತು.
ಎರಡು ಬಾರಿ ಆಪರೇಷನ್ ಆಗಿದೆ. ಮಂಡಿ ಚಿಪ್ಪಿಗೆ ಮತ್ತು ಮೇಲ್ಭಾಗದಲ್ಲಿ ಆಪರೇಷನ್ ಆಗಿದೆ. ಅದರೂ ಎದ್ದು ಓಡಾಡುವ ಸ್ಥಿತಿಯಲ್ಲಿಲ್ಲ. ನಿತ್ಯ ಊಟಕ್ಕು ಕಷ್ಪವಾಗುತ್ತಿದೆ. ಇದ್ದ ಹಣವೆಲ್ಲ ಖರ್ಚಾಗಿದೆ. ಕುಟುಂಬ ನಿರ್ವಹಣೆ, ಔಷಧದ ಖರ್ಚು ವೆಚ್ಚಕ್ಕೆ ಒಂದು ರುಪಾಯಿಯು ಇಲ್ಲವಾಗಿದೆ. ಚಿಕಿತ್ಸೆ ಇನ್ನೂ ಬಾಕಿ ಇದೆ. ಹಾಗಾಗಿ ನೆರವು ಬೇಕಾಗಿದೆ.
ರಘು, ಅಪಘಾತಕ್ಕೀಡಾದ ಚಾಲಕ
ಮನೆ ನಡೆಸುತ್ತಿದ್ದ ಮಗ ಈಗ ಹಾಸಿಗೆ ಹಿಡಿದಿದ್ದಾರೆ. ಅಲ್ಪ ಸ್ವಲ್ಪ ಉಳಿತಾಯವು ಖರ್ಚಾಗಿದೆ. ಸಾಲ ಹೆಮ್ಮರವಾಗಿದೆ. ದಿನ ದೂಡುವುದೆ ಈ ಕುಟುಂಬಕ್ಕೆ ಕಷ್ಟವಾಗಿದೆ. ರಘು ಅವರ ಔಷಧಕ್ಕು ಪರದಾಟವಾಗಿದೆ. ಹಾಗಾಗಿ ಸಾರ್ವಜನಿಕರು ನೆರವು ನೀಡುವಂತೆ ಮನವಿ ಮಾಡಿದ್ದಾರೆ. ನೆರವು ನೀಡಲು ಬಯಸುವವವರು ಈ ಬ್ಯಾಂಕ್ ಖಾತೆಗೆ ನರವು ನೀಡಬಹುದು. Account Holder : RAGHU L R Account Number : 50100475824466 IFSC : HDFC0009198 Branch : TARIKERE MMID : 9240919 GPay / Phone Pay : 9845529939ನೆರವಿಗೆ ಮನವಿ ಮಾಡಿದ ಕುಟುಂಬ
ಇದನ್ನೂ ಓದಿ » ಮನೆ ಬಾಗಿಲು ತೆಗೆದಿತ್ತು, ಪತ್ನಿ ಇರಬೇಕೆಂದು ಒಳ ಬಂದ ವ್ಯಕ್ತಿಗೆ ಆಘಾತ ಕಾದಿತ್ತು, ಆಗಿದ್ದೇನು?