ಶಿವಮೊಗ್ಗದಲ್ಲಿ ಠಾಣೆ ಮೆಟ್ಟಿಲೇರಿತು ₹150 ಗಲಾಟೆ

Kote Police station building

ಶಿವಮೊಗ್ಗ: ₹150 ಹಣಕ್ಕಾಗಿ (Money) ಗುಜರಿ ಆಯುವವರ ಮಧ್ಯೆ ಗಲಾಟೆಯಾಗಿ ಪ್ರಕರಣ ಪೊಲೀಸ್‌ ಠಾಣೆ ಮೆಟ್ಟಿಲೇರಿದೆ. ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಇಬ್ಬರು ಬಡಿದಾಡಿಕೊಂಡಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರಿನ ಮಧುಸೂದನ ಗಾಯಗೊಂಡಿದ್ದಾರೆ. ರವಿನಾಯ್ಕ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ರವಿನಾಯ್ಕನು ಮಧುಸೂದನನಿಂದ ₹150 ಹಣ ಪಡೆದಿದ್ದ. ಆ ಹಣವನ್ನು ಹಿಂತಿರುಗಿಸುವಂತೆ ಮಧುಸೂದನ ಕೇಳಿದಾಗ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಜಗಳವಾಡಿಕೊಂಡಿದ್ದಾರೆ. ರವೀನಾಯ್ಕ ತನ್ನ ಬಳಿ ಇದ್ದ ದೊಣ್ಣೆಯಿಂದ ರಕ್ತ ಬರುವಂತೆ ಹೊಡೆದಿದ್ದಾನೆ ಎಂದು … Read more

ಶಿವಮೊಗ್ಗದಲ್ಲಿ ಶೋ ರೂಂ ಮುಂಭಾಗ ನಿಲ್ಲಿಸಿದ್ದ ಕಾರು ರಾತ್ರೋರಾತ್ರಿ ಮಾಯ

crime name image

ಶಿವಮೊಗ್ಗ: ಶೋ ರೂಂ ಮುಂಭಾಗ ನಿಲ್ಲಸಿದ್ದ ಕಾರು (Car) ಕಳ್ಳತನವಾಗಿದೆ ಎಂದು ಆರೋಪಿಸಿ ಮ್ಯಾನೇಜರ್‌ ದೂರು ನೀಡಿದ್ದಾರೆ. ಶಿವಮೊಗ್ಗದ ಬೈಪಾಸ್‌ ರಸ್ತೆಯ ವಾದಿ-ಎ-ಹುದಾ ಸಮೀಪದ ಶ್ರೀ ಲಕ್ಷ್ಮಿ ಕಾರ್‌ ಶೋ ರೂಂ ಎದುರು ಘಟನೆ ಸಂಭವಿಸಿದೆ. ಅಂಜನ್‌ ದಾಸ್‌ ಎಂಬುವವರು ತಮ್ಮ ಹಳೆಯ ಮಾರುತಿ 800 ಕಾರನ್ನು ಶ್ರೀ ಲಕ್ಷ್ಮಿ ಕಾರ್‌ ಶೂ ರೂಂನಲ್ಲಿ ಎಕ್ಸ್‌ಚೇಂಜ್‌ ಆಫರ್‌ನಲ್ಲಿ ಮಾರಾಟಕ್ಕೆ ಕೊಟಿದ್ದರು. ಆದರೆ ಪ್ರಧಾನ ಕಚೇರಿಯಿಂದ ಇನ್ನು ಅನುಮತಿ ಸಿಗದ ಹಿನ್ನೆಲೆ ಶೋ ರೂಂನವರು ಮಾರುತಿ 800 ಕಾರನ್ನು … Read more

ದ್ವಿಚಕ್ರ ವಾಹನದಲ್ಲಿ ತೆರಳುವ ಮಹಿಳೆಯರೆ ಎಚ್ಚರ, ಶಿವಮೊಗ್ಗದ ವಿದ್ಯಾರ್ಥಿನಿಯಿಂದ ದಾಖಲಾಯ್ತು ಕೇಸ್‌

Tunga-Nagara-Police-Station-Shimoga

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಆಗಂತುಕನೊಬ್ಬ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ವಿದ್ಯಾರ್ಥಿನಿ ಕೊರಳಲ್ಲಿದ್ದ ಚಿನ್ನದ ಸರ (Gold Chain) ಕಸಿದು ಆಕೆಯನ್ನು ಬೀಳಿಸಿ ಪರಾರಿಯಾಗಿದ್ದಾನೆ. ಶಿವಮೊಗ್ಗದ ಕಲ್ಲೂರು – ಅಗಸವಳ್ಳಿ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಕೋಚಿಂಗ್‌ಗೆ ತೆರಳುತ್ತಿದ್ದ ಬಿ.ಕಾಂ ವಿದ್ಯಾರ್ಥಿನಿ ಲಕ್ಷ್ಮಿ ಅವರ ಚಿನ್ನದ ಸರ ಕಳ್ಳತನವಾಗಿದೆ. ಲಕ್ಷ್ಮಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ಹಿಂಬದಿಯಿಂದ ಬೈಕಿನಲ್ಲಿ ಬಂದ ವ್ಯಕ್ತಿಯೊಬ್ಬ ಚಿನ್ನದ ಸರ ಕಸಿದುಕೊಂಡಿದ್ದಾನೆ. ನಿಯಂತ್ರಣ ತಪ್ಪಿ ಲಕ್ಷ್ಮಿ ತಮ್ಮ ದ್ವಿಚಕ್ರ ವಾಹನದಿಂದ ಕೆಳಗೆ ಬಿದ್ದಿದ್ದಾರೆ ಎಂದು ಆರೋಪಿಸಲಾಗಿದೆ. ₹74,000 … Read more

ಶಿವಮೊಗ್ಗದ ಮನೆಯಲ್ಲಿ ₹1.34 ಲಕ್ಷ ಮೌಲ್ಯದ ಶೂ, ಚಪ್ಪಲಿಗಳು ಕಳ್ಳತನ

Tunga-Nagara-Police-Station-Shimoga

ಶಿವಮೊಗ್ಗ: ಮನೆಯಲ್ಲಿನ ಚಿನ್ನ, ಬೆಳ್ಳಿ ಸೇರಿದಂತೆ ಅಮೂಲ್ಯ ವಸ್ತುಗಳನ್ನು ಕಳವು ಮಾಡುವುದು ಸಾಮಾನ್ಯ. ಆದರೆ, ನಗರದ ಅಲ್ ಹರೀಮ್ ಲೇಔಟ್‌ನ ಮನೆಯೊಂದರಲ್ಲಿ ಲಕ್ಷಗಟ್ಟಲೆ ಮೌಲ್ಯದ ಶೂಗಳು (Shoes) ಹಾಗೂ ಚಪ್ಪಲಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ನಗರದ ಅಲ್ ಹರೀಮ್ ಲೇಔಟ್‌ನ ಸಂಜಯ್ ಕಶ್ಯಪ್ ಅವರ ಮನೆಯ ಸ್ಲಿಪ್ಪರ್ ಸ್ಟ್ಯಾಂಡ್‌ನಲ್ಲಿ ಇಟ್ಟಿದ್ದ ದುಬಾರಿ ಬೆಲೆಯ ಬ್ರಾಂಡ್‌ಗಳ ಶೂ ಹಾಗೂ ಚಪ್ಪಲಿಗಳನ್ನು ಕಳವು ಮಾಡಲಾಗಿದೆ. ₹16 ಸಾವಿರ ನೈಕಿ ಶೂ, ₹12 ಸಾವಿರದ ಫಿಲಾ ಬ್ಲ್ಯಾಕ್‌ ಹೈ ಶೂ, ಪೂಮಾ, ಅಡಿಡಾಸ್‌, … Read more

ಗಾರೆ ಕೆಲಸ ಮಾಡುವಾಗ ಕಾರ್ಮಿಕನ ಕಾಲಿನ ಮೂಳೆ ಕಟ್‌

Vinobanagara-Police-Station.

ಶಿವಮೊಗ್ಗ: ಕಟ್ಟಡದ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದು ಕೆಳಗೆ ಬಿದ್ದು ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರ (Laborer) ಕಾಲಿನ ಮೂಳೆ ಮುರಿದಿದೆ. ಸಂತೆ ಕಡೂರಿನ ಭಂಡಾರಿ ಕ್ಯಾಂಪ್‌ನ ನಿರ್ಮಾಣ ಹಂತದ ಮನೆಯಲ್ಲಿ ಘಟನೆ ಸಂಭವಿಸಿದೆ. ಶಿವಕುಮಾರ್‌ ಎಂಬ ಕಾರ್ಮಿಕ ಮನೆಯ ಗಾರೆ ಕೆಲಸದಲ್ಲಿ ತೊಡಗಿದ್ದಾಗ ಘಟನೆ ಸಂಭವಿಸಿದೆ. ಬೆಡ್‌ ರೂಂನಲ್ಲಿ ಗಿಲಾವ್‌ ಮಾಡುವಾಗ ಮರದ ಬೀಮ್‌ ಮುರಿದಿದೆ. ಕೆಳಗೆ ಬಿದ್ದ ಶಿವಕುಮಾರ್‌ ಬಲಗಾಲಿನ ಪಾದದ ಬಳಿ ಮೂಳೆ ಮುರಿದಿದೆ. ಸುರಕ್ಷಿತ ಕ್ರಮಗಳನ್ನ ಕೈಗೊಳ್ಳದ್ದರಿಂದ ಘಟನೆ ಸಂಭವಿಸಿದೆ … Read more

ಶಿವಮೊಗ್ಗದಲ್ಲಿ ಸ್ವೀಟ್‌ ಬಾಕ್ಸ್‌ ತೆಗೆದ ಜೈಲು ಸಿಬ್ಬಂದಿಗೆ ಶಾಕ್‌, ಯುವಕ ಜೈಲುಪಾಲು, ಏನಿದು ಕೇಸ್‌?

Shimoga-Central-Jail-Prison

ಶಿವಮೊಗ್ಗ: ಖೈದಿಯೊಬ್ಬನಿಗೆ ತಲುಪಿಸಲು ಸ್ವೀಟ್‌ ಬಾಕ್ಸ್‌ನಲ್ಲಿ (Sweet Box) ಗಾಂಜಾ ತಂದಿದ್ದ ಯುವಕನೊಬ್ಬ ಜೈಲುಪಾಲಾಗಿದ್ದಾನೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ತಪಾಸಣೆ ವೇಳೆ ಯುವಕ ಸಿಕ್ಕಿಬಿದ್ದಿದ್ದು ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಸೋಮಿನಕೊಪ್ಪದ ಸೈಯದ್‌ ವಾಸೀಂ (25) ಬಂಧಿತ. ಬೇಕರಿಯಿಂದ ತಂದಿದ್ದ ಸ್ವೀಟ್‌ ಬಾಕ್ಸ್‌ನಲ್ಲಿ ಗಾಂಜಾ ಅಡಗಿಸಿಟ್ಟುಕೊಂಡು ತಂದಿದ್ದ. ಏನಿದು ಪ್ರಕರಣ? ಕೇಂದ್ರ ಕಾರಾಗೃಹದ ಖೈದಿ ಮೆಹಬೂಬ್‌ ಖಾನ್‌ ಎಂಬಾತನನ್ನು ಮಾತನಾಡಿಸಲು ಸೈಯದ್‌ ವಾಸೀಂ ಎಂಬಾತ ಆಗಮಿಸಿದ್ದ. ಖೈದಿ ಮೆಹಬೂಬ್‌ ಖಾನ್‌ಗೆ ನೀಡಲು ಸ್ವೀಟ್‌ ಬಾಕ್ಸ್‌ ತಂದಿದ್ದ. … Read more

ಶಿವಮೊಗ್ಗದಲ್ಲಿ ನವದುರ್ಗ ಬಸ್‌ ಚಾಲಕನ ಮೇಲೆ ಮನಸೋಯಿಚ್ಛೆ ಹಲ್ಲೆ

Shimoga-Private-Bus-Stand-Board

ಶಿವಮೊಗ್ಗ: ಅಡ್ಡ ನಿಲ್ಲಿಸಿದ್ದ ಕಾರು ತೆಗೆಯುವಂತೆ ಹಾರನ್‌ ಮಾಡಿದ್ದಕ್ಕೆ ನವದುರ್ಗ ಬಸ್‌ ಚಾಲಕನ (BUS DRIVER) ಮೇಲೆ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ಬಸ್‌ ನಿಲ್ದಾಣದ ಸಮೀಪ ಬ್ರೈಟ್‌ ಹೊಟೇಲ್‌ ಎದುರು ಘಟನೆ ನಡೆದಿದೆ. ನವದುರ್ಗ ಬಸ್‌ ಚಾಲಕ ಬಿ.ಎಸ್.ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಬಸ್ಸು ರಾತ್ರಿ ಶಿವಮೊಗ್ಗದಿಂದ ಮಂಗಳೂರಿಗೆ ತೆರಳುತ್ತಿತ್ತು. ನಿಲ್ದಾಣದಿಂದ ಹೊರ ಬಂದು ಬ್ರೈಟ್‌ ಹೊಟೇಲ್‌ ಮುಂಭಾಗ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು ಚಾಲಕ ರವಿ ಬಸ್‌ ನಿಲ್ಲಿಸಿದ್ದರು. ಆಗ ಬಂದ ಕಾರೊಂದು ಬಸ್ಸಿಗೆ ಅಡ್ಡಲಾಗಿ ನಿಲ್ಲಿಸಲಾಯಿತು ಎಂದು … Read more

BREAKING NEWS – ಹಾಸ್ಟೆಲ್‌ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ

Kote-Road-Government-Ladies-Hostel-new.

ಶಿವಮೊಗ್ಗ: ಹಾಸ್ಟೆಲ್‌ನ (Hostel) ಟೆರೇಸ್‌ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕೀಯರ ವಸತಿ ನಿಲಯದಲ್ಲಿ ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತಳು. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್‌ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್‌ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೆ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ. ಘಟನೆಗೆ ಕಾರಣ ತಿಳಿದು ಬಂದಿಲ್ಲ. ವನಿಷಾ, ಡಿವಿಎಸ್‌ ಕಾಲೇಜಿನಲ್ಲಿ … Read more

ಶಿವಣ್ಣನ ಮನೆ ಅಡ್ರೆಸ್‌ ಕೇಳುತ್ತಲೆ ಮಹಿಳೆ ಕೊರಳಿಗೆ ಕೈ ಹಾಕಿ ಚಿನ್ನದ ಸರ ಕಸಿದು ಪರಾರಿ

200123 Police Jeep With Light jpg

ಶಿವಮೊಗ್ಗ: ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ವಿಳಾಸ ಕೇಳುವ ನೆಪದಲ್ಲಿ ರತ್ನಮ್ಮ ಎಂಬವವರ ಕೊರಳಲ್ಲಿದ್ದ 70 ಗ್ರಾಂ ತೂಕದ ಬಂಗಾರದ ಸರ (Gold Chain) ಕಸಿದು ಪರಾರಿಯಾಗಿದ್ದಾರೆ. ವಿನೋಬನಗರದ ಲಕ್ಷ್ಮೀಪುರ ಬಡಾವಣೆಯಲ್ಲಿ ಘಟನೆ ನಡೆದಿದೆ. ರತ್ನಮ್ಮ ಅವರು ದೇವಸ್ಥಾನದಿಂದ ಹಿಂತಿರುಗಿ ಮನೆಯ ಕಾಂಪೌಂಡ್‌ ಒಳಗೆ ಬಂದು ಗೇಟ್‌ ಹಾಕುತ್ತಿದ್ದಾಗ ಯುವಕನೊಬ್ಬ ವಿಳಾಸ ಕೇಳುವವನಂತೆ ಬಂದಿದ್ದ. ಶಿವಣ್ಣನ ಮನೆ ಎಲ್ಲಿ ಎಂದು ವಿಚಾರಿಸಿದ್ದ. ತಕ್ಷಣ ರತ್ನಮ್ಮ ಅವರ ಕೊರಳಿಗೆ ಕೈ ಹಾಕಿ ₹2.20 ಲಕ್ಷ ಮೌಲ್ಯದ 70 ಗ್ರಾಂ … Read more

ಆಫೀಸಿನಲ್ಲಿ ಕೆಲಸ ಮುಗಿಸಿ ಹೊರ ಬಂದ ಉದ್ಯಮಿಗೆ ಕಾದಿತ್ತು ಆಘಾತ, ಆಗಿದ್ದೇನು?

bike theft reference image

ಶಿವಮೊಗ್ಗ: ಕಚೇರಿಯಲ್ಲಿ ಕೆಲಸ ಮುಗಿಸಿ ಹಿಂತಿರುಗುವಷ್ಟರಲ್ಲಿ ಬೈಕ್‌ ಕಳ್ಳತನವಾಗಿದೆ (Theft) ಎಂದು ಆರೋಪಿಸಿ ಉದ್ಯಮಿಯೊಬ್ಬರು ದೂರು ನೀಡಿದ್ದಾರೆ. ನಗರದ ದುರ್ಗಿಗುಡಿಯ ಶಿವಮೊಗ್ಗ ಆಪ್ಟಿಕಲ್ಸ್‌ ಎದುರಿನ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಓಂಪ್ರಕಾಶ್‌ ಎಂಬುವವರು ತಮ್ಮ ಬೈಕ್‌ ಅನ್ನು ನಿಲ್ಲಿಸಿ ಮಧ್ಯಾಹ್ನ 3 ಗಂಟೆ ಹೊತ್ತಿಗೆ ಕಚೇರಿಗೆ ತೆರಳಿದ್ದರು. ‍ಸಂಜೆ 7 ಗಂಟೆಗೆ ಹಿಂತಿರುಗಿದಾಗ ಬೈಕ್‌ ಇರಲಿಲ್ಲ. ಟಿವಿಎಸ್‌ ಅಪಾಚೆ ಬೈಕ್‌ ಕಳ್ಳತನವಾಗಿದೆ ಎಂದು ಆರೋಪಿಸಿ ದೂರು ನೀಡಿದ್ದು, ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ » ಮಹಿಳೆಗೆ … Read more