BREAKING NEWS – ಭದ್ರಾವತಿ ವಿಐಎಸ್‌ಎಲ್‌ನಲ್ಲಿ ಚಿರತೆ ಸೆರೆ

270923 leapord captured at Bhadravati VISL Peacock Yard

SHIVAMOGGA LIVE NEWS | 26 SEPTEMBER 2023 BHADRAVATHI : ವಿಐಎಸ್‌ಎಲ್‌ ಕಾರ್ಖಾನೆ ಆವರಣದಲ್ಲಿ ಚಿರತೆ (Leopard) ಸೆರೆಯಾಗಿದೆ. ಅರಣ್ಯ ಇಲಾಖೆ ಇಟ್ಟಿದ್ದ ಬೋನ್‌ನಲ್ಲಿ ಚಿರತೆ ಸೆರೆ ಸಿಕ್ಕಿದೆ. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ವಿಐಎಸ್‌ಎಲ್‌ನ ಪೀಕಾಕ್‌ ಯಾರ್ಡ್‌ನಲ್ಲಿ ಅರಣ್ಯ ಇಲಾಖೆ ಬೋನ್‌ ಇರಿಸಿತ್ತು. ಅಲ್ಲಿ ಚಿರತೆ (Leopard) ಸೆರೆ ಸಿಕ್ಕಿದೆ. ಬೆಳಗ್ಗೆ ಕಾರ್ಮಿಕರು ಪೀಕಾಕ್‌ ಯಾರ್ಡ್‌ ಕಡೆ ಹೋದಾಗ ಚಿರತೆ ಸೆರೆಯಾಗಿರುವುದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. … Read more

ಇವತ್ತು ಹಿಂದೂ ಮಹಾಸಭಾ ಗಣಪತಿ ಮೆರವಣಿಗೆ, ಭದ್ರಾವತಿಯಲ್ಲಿ ಹೇಗಿದೆ ಸಿದ್ಧತೆ?

Bhadravathi-Hindu-Mahasabha-Ganapati-Procession.

SHIVAMOGGA LIVE NEWS | 26 SEPTEMBER 2023 BHADRAVATHI : ಪ್ರತಿಷ್ಠಿತ ಹಿಂದೂ ಮಹಾಸಭಾ ಗಣಪತಿ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದೆ. ರಾಜಬೀದಿ ಕೇಸರಿಮಯವಾಗಿದೆ. ಇನ್ನು, ವಿಸರ್ಜನಾ ಪೂರ್ವ ಮೆರವಣಿಗೆ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್‌ (Bandobast) ಕೈಗೊಳ್ಳಲಾಗಿದೆ. ಭದ್ರಾವತಿಯ ಹೊಸಮನೆ ಬಡಾವಣೆಯಲ್ಲಿ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಇವತ್ತು ಗಣಪತಿಯ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಹಿಂದೂ ಕಾರ್ಯಕರ್ತರು ಅದ್ಧೂರಿ ಸಿದ್ಧತೆ ಮಾಡಿಕೊಂಡಿದ್ದಾರೆ. ಕೇಸರಮಯ ಮರವಣಿಗೆ ಹಾದಿ ಗಣಪತಿ ಮೆರೆವಣಿಗೆ ಸಾಗುವ ಹಾದಿ ಉದ್ದಕ್ಕು ಕೇಸರಿಮಯವಾಗಿದೆ. … Read more

‘ಒಂದಲ್ಲ ಒಂದು ದಿನ ದೇವರು ಸರ್ಜಿಕಲ್‌ ಸ್ಟ್ರೈಕ್‌ ಮಾಡುತ್ತಾನೆʼ

Satyatma-Theertha-Chaturmasya-in-Shimoga-Holehonnuru

SHIVAMOGGA LIVE NEWS | 22 SEPTEMBER 2023 SHIMOGA : ಅನ್ಯಾಯ, ಅನಾಚಾರ ಮಾಡಿದರೆ ದೇವರು ಒಂದಲ್ಲಾ ಒಂದು ದಿನ ಸರ್ಜಿಕಲ್ ಸ್ಟ್ರೈಕ್‌ (Surgical Strike) ಮಾಡಿಯೇ ಮಾಡುತ್ತಾನೆ. ಈ ಬಗ್ಗೆ ಸದಾ ಎಚ್ಚರ ಇಟ್ಟುಕೊಳ್ಳಿ ಎಂದು ಉತ್ತರಾದಿ ಮಠಾಧೀರಾದ ಶ್ರೀ ಸತ್ಯಾತ್ಮ ತೀರ್ಥ ಸ್ವಾಮೀಜಿ ಹೇಳಿದರು. ತಮ್ಮ 28ನೇ ಚಾತುರ್ಮಾಸ್ಯದ ಅಂಗವಾಗಿ ನಡೆದ ವಿದ್ವತ್ ಸಭೆಯಲ್ಲಿ  ಶ್ರೀಪಾದಂಗಳವರು ಶ್ರೀ ಸತ್ಯಧರ್ಮ ತೀರ್ಥರ ವ್ಯಾಖ್ಯಾನಾಧಾರಿತ ಮಹಾಭಾರತ ವಿರಾಟ ಪರ್ವದ ಅನುಗ್ರಹ ಸಂದೇಶದ ನೀಡಿದರು. ಭ್ರಷ್ಟಾಚಾರ, ಕಳ್ಳತನ … Read more

ಬಡವರಿಗೆ ಮನೆ, ನಿವೇಶನಕ್ಕೆ ಆಗ್ರಹ, ಭದ್ರಾವತಿ ತಾಲೂಕು ಕಚೇರಿ ಮುಂಭಾಗ ಹೋರಾಟ

DSS-Protest-at-Bhadravathi.webp

SHIVAMOGGA LIVE NEWS | 21 SEPTEMBER 2023 BHADRAVATHI : ನಿವೇಶನ ಮತ್ತು ವಸತಿ (House) ರಹಿತರಿಗೆ ವಸತಿ ಮತ್ತು ನಿವೇಶನ ಮಂಜೂರು ಮಾಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ (ಸಂಯೋಜಕ) ವತಿಯಿಂದ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ, ತಹಶೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು. ಹೆಚ್‌.ಕೆ.ಜಂಕ್ಷನ್‌ ಸಮೀಪ ಸರ್ವೆ ನಂಬರ್‌ 29ರಲ್ಲಿ 350 ಬಡ ಕುಟುಂಬಗಳು ವಾಸವಿದ್ದಾರೆ. ಅವರಿಗೆ ಹಕ್ಕುಪತ್ರ ನೀಡಬೇಕು ಮತ್ತು ಮೂಲ ಸೌಕರ್ಯ ಒದಗಿಸಬೇಕು. ತಾರೀಕೆಟ್ಟೆಯಲ್ಲಿ ಸರ್ಕಾರಿ ಜಮೀನು ಲಭ್ಯವಿದೆ. ಇಲ್ಲಿ ಬಡವರಿಗೆ … Read more

ಭದ್ರಾವತಿಯಲ್ಲಿ ಶಿಕ್ಷಕನ ಪರ ಬೀದಿಗಿಳಿಯಿತು ಇಡೀ ಊರು, ರಸ್ತೆ ತಡೆದು ರಾಜಕಾರಣಿಗಳಿಗೆ ಹಿಡಿಶಾಪ ಹಾಕಿದ ಗ್ರಾಮಸ್ಥರು

Protest-in-favor-of-Teacher-at-Aralihalli-at-Bhadravathi.webp

SHIVAMOGGA LIVE NEWS | 21 SEPTEMBER 2023 BHADRAVATHI : ಮುಖ್ಯ ಶಿಕ್ಷಕರೊಬ್ಬರ ವರ್ಗಾವಣೆ (Transfer) ಖಂಡಿಸಿ ಗ್ರಾಮಸ್ಥರು ಶಾಲೆ ಮುಂಭಾಗ ಪ್ರತಿಭಟಿಸಿ (PROTEST), ರಸ್ತೆ ತಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಶಾಲೆ ಸಮೀಪ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಭದ್ರಾವತಿ ತಾಲೂಕು ಅರಳಿಹಳ್ಳಿ ಸರ್ಕಾರಿ ಪ್ರೌಢಶಾಲೆ (High School) ಮುಖ್ಯ ಶಿಕ್ಷಕ ಮೋತಿ ನಾಯ್ಕ್‌ ಅವರ ವರ್ಗಾವಣೆ ಖಂಡಿಸಿ ಪೋಷಕರು, ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ರಾಜಕೀಯ ಒತ್ತಡ ಮತ್ತು … Read more

ಗಣಪತಿ ಮುಂದೆ ಭರ್ಜರಿ ಡಾನ್ಸ್‌, ವಿಡಿಯೋ ವೈರಲ್‌, ಮನೆಗೆ ಬಂದರು ಪೊಲೀಸ್‌, ಏನಿದು ಕೇಸ್‌?

Youth-dance-led-to-police-station-at-Holehonnuru-in-Bhadravathi

SHIVAMOGGA LIVE NEWS | 21 SEPTEMBER 2023 HOLEHONNURU : ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ತರುವಾಗ ಮಾಡಿದ್ದ ನೃತ್ಯ  (Viral Video) ಯುವಕರಿಗೆ ಸಂಕಷ್ಟ ತಂದೊಡ್ಡಿದೆ. ಪೊಲೀಸರು ಯುವಕರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಡಾನ್ಸ್‌ ಮಾಡುವಾಗ ಮಚ್ಚು ಹಿಡಿದು ಕುಣಿದಿದ್ದೆ ಘಟನೆಗೆ ಕಾರಣ. ರೀಲ್ಸ್‌ ತಂದ ಸಂಕಷ್ಟ ಅರಕೆರೆ ಗ್ರಾಮದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ತರುವಾಗ ಯುವಕರು ನೃತ್ಯ ಮಾಡಿದ್ದರು. ಈ ವೇಳೆ ಯುವಕನೊಬ್ಬ ಮಚ್ಚು ಹಿಡಿದು ಕುಣಿದು ಕುಪ್ಪಳಿಸಿದ್ದ. … Read more

ಭದ್ರಾವತಿಯಲ್ಲಿ ಮಹಿಳೆಯ ಕೊಲೆ, ಸಿಂಗಾರಿ ಅರೆಸ್ಟ್‌

crime name image

SHIVAMOGGA LIVE NEWS | 19 SEPTEMBER 2023 BHADRAVATHI : ನೀಲಗಿರಿ ಮರಗಳನ್ನು (Nilgiri Trees) ಕಡಿಯುವ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬಳನ್ನು (Woman) ಭದ್ರಾವತಿಯಲ್ಲಿ ಹತ್ಯೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಭರಮ ಸಾಗರದ ರೂಪಾ (30) ಮೃತ ಮಹಿಳೆ. ಆಕೆಯ ಸ್ನೇಹಿತ ಸಿಂಗಾರಿ (35) ಎಂಬಾತನೆ ಹತ್ಯೆ ಮಾಡಿದವನು. ಭದ್ರಾವತಿ ತಾಲೂಕು ಸಂಕ್ಲೀಪುರದಲ್ಲಿ ಎಂಪಿಎಂನ ನೀಲಗಿರಿ ತೋಪಿನಲ್ಲಿ ಮರಗಳ ಕಡಿತಲೆಗೆ ರೂಪಾ ಬಂದಿದ್ದಳು. ಇಲ್ಲಿ ಸಿಂಗಾರಿ ಎಂಬಾತನ ಪರಿಚಯವಾಗಿತ್ತು. ಭಾನುವಾರ ತಡರಾತ್ರಿ ಸಿಂಗಾರಿ ಮತ್ತು ರೂಪಾ … Read more

ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸಿದ ಗ್ರಾಮಸ್ಥರು, ಕಾರಣವೇನು?

villagers-protest-at-Agradalli-in-Bhadravathi-Taluk.webp

SHIVAMOGGA LIVE NEWS | 14 SEPTEMBER 2023 HOLEHONNURU : ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳ ಕಾರ್ಯವೈಖರಿ ಖಂಡಿಸಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಕಚೇರಿಗೆ ಬೀಗ ಹಾಕಿ (Locked) ಪ್ರತಿಭಟನೆ ನಡೆಸಿದರು. ಇಲ್ಲಿನ ಆಗರದಹಳ್ಳಿ ಗ್ರಾಮ ಪಂಚಾಯಿತಿ ಕಾರ್ಯಾಲಕ್ಕೆ ಬೀಗ ಜಡಿದು ಗ್ರಾಮಸ್ಥರಿಂದ ಪ್ರತಿಭಟನೆ ನಡೆಸಿದರು. ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ವತಿಯಿಂದ ಜಂಟಿ ಸರ್ವೆ ಮಾಡುವುದಾಗಿ ತಿಳಿಸಿದ್ದರು. ಆದರೆ ಈತನಕ ಯಾವುದೆ ಸರ್ವೆ ಮಾಡದೆ ಜನರಿಗೆ ಸಮಸ್ಯೆಯಾಗಿದೆ. ಇನ್ನು, ಗ್ರಾಮಸ್ಥರಿಗೆ ಮೂಲ ಸೌಕರ್ಯ ಒದಗಿಸಲು … Read more

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್‌, ಖಡಕ್‌ ವಾರ್ನಿಂಗ್‌

Rowdy-Parade-in-Shimoga-city-and-sagara.webp

SHIVAMOGGA LIVE NEWS | 14 SEPTEMBER 2023 SHIMOGA : ಮುಂಬರುವ ಗೌರಿ ಗಣೇಶ ಮತ್ತು ಈದ್ ಮಿಲಾದ್ ಹಬ್ಬದ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ರೌಡಿ ಪರೇಡ್ (Rowdy Parade) ಮಾಡಲಾಯಿತು. ಶಿವಮೊಗ್ಗ ನಗರದಲ್ಲಿ 144 ಜನ, ಭದ್ರಾವತಿಯಲ್ಲಿ 79 ಮತ್ತು ಸಾಗರದಲ್ಲಿ 40 ರೌಡಿಗಳು ಸೇರಿ ಒಟ್ಟು 263 ಜನ ರೌಡಿಗಳು ಹಾಜರಿದ್ದರು. ಪರೇಡ್‌ನಲ್ಲಿ ಹಾಜರಿದ್ದ ರೌಡಿಗಳ ಹಾಲಿ ವಿಳಾಸ, ಆದಾಯದ ಮೂಲ ಮತ್ತು ಜೀವನೋಪಾಯಕ್ಕಾಗಿ ಮಾಡುತ್ತಿರುವ ಕೆಲಸಗಳ ಕುರಿತು ಮಾಹಿತಿ ಪಡೆಯಲಾಯಿತು. ಅಲ್ಲದೆ … Read more

ಅಂಗಡಿ ಮುಂದೆ ಕುಳಿತಿದ್ದವರ ಮೇಲೆ ಕರಡಿ ದಾಳಿ, ಗ್ರಾಮಸ್ಥರಲ್ಲಿ ಭೀತಿ

holehonnur name graphics

SHIVAMOGGA LIVE NEWS | 13 SEPTEMBER 2023 HOLEHONNURU : ಅಂಗಡಿಯೊಂದರ ಕಟ್ಟೆ ಮೇಲೆ ಕುಳಿತಿದ್ದ ಇಬ್ಬರು ಗ್ರಾಮಸ್ಥರ ಮೇಲೆ ಕರಡಿ (BEAR) ದಾಳಿ ನಡೆಸಿದೆ. ಈ ವೇಳೆ ಸ್ಥಳದಲ್ಲಿದವರು ಜೋರಾಗಿ ಕೂಗಾಡಿದ್ದರಿಂದ ಕರಡಿ ಓಡಿ ಹೋಗಿ ಸಮೀಪದ ಅಡಿಕೆ ತೋಟದಲ್ಲಿ ಮರೆಯಾಗಿದೆ. ಸಮೀಪದ ಮಲ್ಲಾಪುರ ಗ್ರಾಮದಲ್ಲಿ ಸೋಮವಾರ ರಾತ್ರಿ ಘಟನೆ ಸಂಭವಿಸಿದೆ. ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಲಕ್ಷ್ಮೀಪುರ ಕ್ಯಾಂಪ್ ಹಾಗೂ ಭಗವತಿಕೆರೆ ಗುಡ್ಡಗಳಲ್ಲಿ ಕರಡಿಗಳು (BEAR) ಸಂಚರಿಸುತ್ತಿವೆ. … Read more