ಭದ್ರಾವತಿಯ ಬಾರಂದೂರು ಕ್ರಾಸ್ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ, ಒಬ್ಬ ಅರೆಸ್ಟ್

010921 Excise raid at Barandoor in Bhadravathi

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಗಾಂಜಾ ಪ್ಯಾಕೆಟ್’ಗಳನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ ಮತ್ತು ನಗದು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ಬಾರಂದೂರು ಕ್ರಾಸ್ ಬೈಪಾಸ್ ಮುಖ್ಯ ರಸ್ತೆ ಬಳಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿಯಾಗಿದೆ. ಇರ್ಫಾನ್ ಎಂಬಾತ ಹೂವು, ಕಾಯಿ, ಬೀಜಗಳಿಂದ ಕೂಡಿದ ಒಣ ಗಾಂಜಾದ ಸಾಚೇಟ್’ಗಳನ್ನು ಮಾರಾಟ ಮಾಡುತ್ತಿದ್ದ. … Read more

ಶಿವಮೊಗ್ಗದ ಕಲ್ಲಗಂಗೂರಿನಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳಿಂದ ದಾಳಿ

010921 Raid At Kallagangur by Excise Department

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಶಿವಮೊಗ್ಗದ ಕಲ್ಲಗಂಗೂರು ಗ್ರಾಮದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಮೆಕ್ಕೆ ಜೋಳದ ನಡುವೆ ಬೆಳೆದಿದ್ದ ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದಾರೆ. ಕಲ್ಲಗಂಗೂರಿನ ಈಶ್ವರ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಮೆಕ್ಕೆ ಜೋಳ ಬೆಳೆಯಲಾಗಿತ್ತು. ಇದರ ನಡುವೆ ಯಾರಿಗೂ ಕಾಣದ ಹಾಗೆ ಗಾಂಜಾ ಬೆಳೆಸಲಾಗಿತ್ತು. ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಮಾರು 30 … Read more

ಸಕ್ರೆಬೈಲು ಆನೆ ಬಿಡಾರದಲ್ಲಿ ಶೂಟಿಂಗ್, ಪುನಿತ್ ರಾಜ್ ಕುಮಾರ್ ಭಾಗಿ, ತುಂಗಾ ಡ್ಯಾಂಗೂ ಭೇಟಿ

puneeth-rajkumar-visit-sakrebyle-camp

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಅವರು ಇವತ್ತು ಭೇಟಿ ನೀಡಿದ್ದಾರೆ. ಡಾಕ್ಯೂಮೆಂಟರಿ ಒಂದರ ಚಿತ್ರೀಕರಣಕ್ಕಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ವಿಚಾರ ತಿಳಿಯುತ್ತಿದ್ದಂತೆ ಪವರ್ ಸ್ಟಾರ್ ಅಭಿಮಾನಿಗಳು ಆನೆ ಬಿಡಾರದ ಬಳಿ ಸೇರಿದ್ದರು. ಮಧ್ಯಾಹ್ನ ಸಕ್ರೆಬೈಲು ಆನೆ ಬಿಡಾರಕ್ಕೆ ನಟ ಪುನಿತ್ ರಾಜ್ ಕುಮಾರ್ ಭೇಟಿ ನೀಡಿದ್ದಾರೆ. ಸಾಕ್ಷ್ಯಚಿತ್ರದ ಚಿತ್ರೀಕರಣದ ಸಲುವಾಗಿ ಅವರು ಬಿಡಾರಕ್ಕೆ ಬಂದಿದ್ದಾರೆ. ಬಿಡಾರದ ಕ್ರಾಲ್ ಪ್ರದೇಶದಲ್ಲಿ ಚಿತ್ರೀಕರಣ … Read more

ಭದ್ರಾವತಿ ಹುಣಸೆಕಟ್ಟೆ ಜಂಕ್ಷನ್’ನಲ್ಲಿ ಕಾಡಾನೆ ಪ್ರತ್ಯಕ್ಷ, ಸ್ಥಳೀಯರಲ್ಲಿ ಢವಢವ

Hunasekatte-Junction-Bhadravathi-Umblebyle

ಶಿವಮೊಗ್ಗ ಲೈವ್.ಕಾಂ | SHIMOGA NEWS | 1 ಸೆಪ್ಟೆಂಬರ್ 2021 ಉಂಬ್ಳೆಬೈಲು ವ್ಯಾಪ್ತಿಯ ಹುಣಸೆಕಟ್ಟೆ ಜಂಕ್ಷನ್’ನಲ್ಲಿ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ಇಲ್ಲಿ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡಿದೆ. ಇದರಿಂದ ಸ್ಥಳೀಯರಲ್ಲಿ ಆತಂಕ ಹೆಚ್ಚಳವಾಗಿದೆ. ಬೆಳೆ ಹಾನಿ, ಜನರಲ್ಲಿ ಭೀತಿ ಹುಣಸೆಕಟ್ಟೆ ಜಂಕ್ಷನ್’ನಲ್ಲಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಸೇರಿದ ಜಮೀನಿನ ಕಾಂಪೌಂಡ್’ಗೆ ಕಾಡಾನೆ ಹಾನಿ ಮಾಡಿದೆ. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜೆ.ಪಿ.ಯೋಗೇಶ್ ಅವರಿಗೆ ಸೇರಿದ ಜಮೀನಿಗೂ ಕಾಡಾನೆ ನುಗ್ಗಿದೆ. ಇಲ್ಲಿನ ವಿವಿಧೆಡೆ ಜಮೀನಿಗೆ … Read more

ಸಾಗರದ ಶ್ರೀಗಂಧ ಕೋಠಿಯಲ್ಲಿ ವಾಚರ್ ಕೊಲೆ ಕೇಸ್’ನ ಮತ್ತಿಬ್ಬರು ಆರೋಪಿಗಳು ಮೈಸೂರಿನಲ್ಲಿ ಅರೆಸ್ಟ್

Arrest News Graphics

ಶಿವಮೊಗ್ಗ ಲೈವ್.ಕಾಂ | SAGARA NEWS | 29 ಆಗಸ್ಟ್ 2021 ಸಾಗರ: ಅರಣ್ಯ ಇಲಾಖೆ ವಾಚರ್ ಕೊಲೆ ಪ್ರಕರಣದ ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಸಾಗರ ಪಟ್ಟಣ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೈಸೂರಿನಲ್ಲಿ ರಿಯಾಜ್ ಪಾಷಾ, ಸೈಯದ್ ಆಬಿದ್‌ನನ್ನು ಬಂಧಿಸಿದ್ದಾರೆ. ಸಾಗರದ ಅರಣ್ಯ ಇಲಾಖೆಯ ಶ್ರೀಗಂಧ ಕೋಠಿಯ ಕಾವಲು ಕಾಯುತ್ತಿದ್ದ ವಾಚರ್ ನಾಗರಾಜ್ ಅವರನ್ನು ಶೀಗಂಧ ಚೋರರು 2020ರ ಫೆಬವರಿ 7 ರಂದು ಕೊಲೆ ಮಾಡಿ ಶ್ರೀಗಂಧ ದೋಚಿಕೊಂಡು ಪರಾರಿಯಾಗಿದ್ದರು. ಈ … Read more

ತಿರುವಿನಲ್ಲಿ ಕಾರು, ಬಸ್ಸು ಮುಖಾಮುಖಿ ಡಿಕ್ಕಿ, ವ್ಯಕ್ತಿಗೆ ಗಂಭೀರ ಗಾಯ

KARGAL-SAGARA-NEWS-1.jpg

ಶಿವಮೊಗ್ಗ ಲೈವ್.ಕಾಂ | KARGAL NEWS | 29 ಆಗಸ್ಟ್ 2021 ಕಾರು ಬಸ್ಸು ಡಿಕ್ಕಿಯಾಗಿ ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ. ಕಾರ್ಗಲ್ ಸಮೀಪದ ನಾಗವಳ್ಳಿಯ ಹೆರೋಡಿ ಬಳಿ ತಿರುವಿನಲ್ಲಿ ಘಟನೆ ಸಂಭವಿಸಿದೆ. ಖಾಸಗಿ ಬಸ್‌ ಹಾಗೂ ಕಾರು ನಡುವೆ ಅಪಘಾತ ಸಂಭವಿಸಿದ್ದು ಓರ್ವನಿಗೆ ಗಂಭೀರವಾಗಿ ಪೆಟ್ಟಾಗಿದೆ. ಹುಬ್ಬಳ್ಳಿಯ ಪವನ್ (40) ಗಾಯಗೊಂಡವ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಸ್ ಭಟ್ಕಳ ಮಾರ್ಗವಾಗಿ ಸಾಗರಕ್ಕೆ ಹಾಗೂ ಕಾರು ಹುಬ್ಬಳ್ಳಿಯಿಂದ ಭಟ್ಕಳಕ್ಕೆ ತೆರಳುತಿತ್ತು. ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ … Read more

ಗಂಟಲು ನೋವು ತಾಳಲಾರದೆ ನೇಣು ಬಿಗಿದು ಮಹಿಳೆ ಆತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | SORABA NEWS | 29 ಆಗಸ್ಟ್ 2021 ಗಂಟಲು ನೋವು ತಾಳಲಾರದೆ ಮಹಿಳೆಯೊಬ್ಬರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುನೀತಾ ಕೋಟ್ಯಪ್ಪ (25) ನೇಣಿಗೆ ಶರಣಾದ ಮಹಿಳೆ. ಸುನೀತಾ ಕೋಟ್ಯಪ್ಪ ಅವರು ಕೆಲ ಸಮಯದಿಂದ ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಹಾಗಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಆದರೆ ನೋವು ಕಡಿಮೆಯಾಗಿರಲಿಲ್ಲ. ಇದರಿಂದ ಮನನೊಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ | ರಿಪ್ಪನ್ ಪೇಟೆ ಬಳಿ ಕಾಡಲ್ಲಿ … Read more

ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ತಿರುಗೇಟು, ಏನಂತ ಹೇಳಿದ್ದಾರೆ?

270821 Kimmane Rathnakar and Araga Jnanendra

ಶಿವಮೊಗ್ಗ ಲೈವ್.ಕಾಂ | HOSANAGARA NEWS | 27 ಆಗಸ್ಟ್ 2021 ಹೆಣ್ಣು ಮಕ್ಕಳು ಮನೆಯಲ್ಲೇ ಇರಿ ಎಂದು  ಹೇಳಿಕೆ ನೀಡಲು ಪೊಲೀಸ್ ವ್ಯವಸ್ಥೆ ಬೇಕಾ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ಪ್ರಶ್ನಿಸಿದ್ದಾರೆ. ಹೊಸನಗರ ತಾಲೂಕು ನಗರ ಹೋಬಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಆರಗ ಜ್ಞಾನೇಂದ್ರ ಅವರು ತಮ್ಮನ್ನು ತಾವು ಸರಿಪಡಿಸಿಕೊಳ್ಳಬೇಕು. ತೀರ್ಥಹಳ್ಳಿ ಕ್ಷೇತ್ರದ ಜನರ ಘನತೆ, ಗೌರವ ಉಳಿಸಬೇಕು ಎಂದು ಸಲಹೆ … Read more

ಒಂದು ಬೈಕ್ ಕಳ್ಳತನದ ತನಿಖೆ ನಡೆಸುತ್ತಿದ್ದ ಭದ್ರಾವತಿ ಪೊಲೀಸರಿಗೆ ಮೂರು ಬೈಕ್ ಸಹಿತ ಸಿಕ್ಕಿಬಿದ್ದ ಕಳ್ಳ

Arrest News Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 27 ಆಗಸ್ಟ್ 2021 ಬೈಕ್ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕೂಬಾ ಮಸೀದಿ ಬಳಿ ಬೈಕ್ ಕಳವಾಗಿದ್ದ ಸಂಬಂಧ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಯುವಕ ಸಿಕ್ಕಿಬಿದ್ದಿದ್ದಾನೆ. ಭದ್ರಾವತಿ ಇಂದಿರಾ ನಗರದ ಮಹಮ್ಮದ್ ಹರ್ಷದ್ (22) ಬಂಧಿತ. ಆಗಸ್ಟ್ 18ರಂದು ಮಸೀದಿ ಬಳಿ ಸೈಯದ್ ಮುಸ್ತಫಾ ಎಂಬುವವರ ಬೈಕ್ ಕಳ್ಳತನ ಮಾಡಿದ್ದ. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹಮ್ಮದ್ ಹರ್ಷದ್ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಮೂರು ಬೈಕ್’ಗಳನ್ನು … Read more

ರಿಪ್ಪನ್ ಪೇಟೆ ಬಳಿ ಕಾಡಲ್ಲಿ ಯುವತಿ ಹತ್ಯೆ ಕೇಸ್, ಶಿವಮೊಗ್ಗದಲ್ಲಿ ಪ್ರಿಯಕರ ಸಾವು, ಘಟನೆಗೆ ಕಾರಣವಾಯ್ತಾ ಭದ್ರಾವತಿ ಯುವಕನ ಪರಿಚಯ?

270821 Ripponpete Murder Case Youth Dies at Mc Gann

ಶಿವಮೊಗ್ಗ ಲೈವ್.ಕಾಂ | RIPPONPETE / SHIMOGA NEWS | 27 ಆಗಸ್ಟ್ 2021 ನೇರಲಿಗೆ ಅರಣ್ಯ ಪ್ರದೇಶದಲ್ಲಿ ಯುವತಿ ಹತ್ಯೆ ಮಾಡಿ, ವಿಷ ಸೇವಿಸಿದ್ದ ಯುವಕ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಕೊಲೆಗೈದು ಆತ್ಮಹತ್ಯೆಗೆ ಯತ್ನ ಶಿವಮೊಗ್ಗದ ಖಾಸಗಿ ಕಾಲೇಜಿನ ನರ್ಸಿಂಗ್ ವಿದ್ಯಾರ್ಥಿನಿ ಕವಿತಾ (22) ಎಂಬಾಕೆಯನ್ನು ಆಕೆಯ ಸ್ನೇಹಿತ ರಿಪ್ಪನ್ ಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ವರ್ಷದ ಪದವಿ ವಿದ್ಯಾರ್ಥಿ ಶಿವಮೂರ್ತಿ ಕೊಲೆ … Read more