ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಗೆ ಉರುಳಿದ ಬೃಹತ್ ಆಲದ ಮರ, ವಾಹನ ಸಂಚಾರಕ್ಕೆ ಅಡಚಣೆ

Tree-falls-to-Shimoga-Thirthahalli-Road-at-gajanuru

ಶಿವಮೊಗ್ಗ: ಜೋರು ಗಾಳಿಗೆ ಸಹಿತ ಮಳೆಯಿಂದಾಗಿ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿಯಲ್ಲಿ ಬೃಹತ್‌ ಮರ (Tree) ಧರೆಗುರುಳಿದೆ. ಶಿವಮೊಗ್ಗ ತಾಲೂಕು ಗಾಜನೂರು ಚೆಕ್‌ ಪೋಸ್ಟ್‌ ಸಮೀಪ ಮರ ಬುಡಮೇಲಾಗಿದೆ. ಚೆಕ್‌ ಪೋಸ್ಟ್‌ನ ಸಹಿನದಲ್ಲಿದ್ದ ಬೃಹತ್‌ ಆಲದ ಮರ ಮಧ್ಯಾಹ್ನ ಬೀಸಿದ ಜೋರಿ ಗಾಳಿಗೆ ಧರೆಗುರುಳಿಸಿದೆ. ಇದರಿಂದ ಶಿವಮೊಗ್ಗ – ತೀರ್ಥಹಳ್ಳಿ ಹೆದ್ದಾರಿ ಸಂಪೂರ್ಣ ಬಂದ್‌ ಆಗಿದೆ. ಮರ ಉರುಳುವಾಗ ಅದೃಷ್ಟವಶಾತ್‌ ಆ ಭಾಗದಲ್ಲಿ ಯಾವುದೇ ವಾಹನ ಸಂಚರಿಸುತ್ತಿರಲಿಲ್ಲ. ಇದರಿಂದ ದೊಡ್ಡ ಅನಾಹುತ ತಪ್ಪಿದೆ. ಈಗ ಹೆದ್ದಾರಿ ಪಕ್ಕದಲ್ಲಿರುವ … Read more

ಕುಂಸಿ ಮೆಸ್ಕಾಂ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ, ಯಾವಾಗ?

KUMSI-NEWS

ಶಿವಮೊಗ್ಗ: ಕುಂಸಿ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜೂ. 12 ರಂದು ಬೆಳಿಗ್ಗೆ 10.30 ರಿಂದ 12ರವರೆಗೆ ಜನ ಸಂಪರ್ಕ ಸಭೆ (Meeting) ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದಾರೆ. ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆ: 9480841340. ಇದನ್ನೂ ಓದಿ » ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಕಾಲ್ತುಳಿತವಾಗಿದ್ರು CM ದೋಸೆ ತಿನ್ನುತ್ತಿದ್ದರು, DCM ಕಪ್‌ ಹಿಡಿದು ಓಡಲು ರೆಡಿಯಾಗಿದ್ದರುʼ

ಶಿವಮೊಗ್ಗದ ಅಂಗನವಾಡಿಗಳಿಗೆ ಲೋಕಾಯುಕ್ತರು ದಿಢೀರ್ ಭೇಟಿ, ಪರಿಶೀಲನೆ ವೇಳೆ ಕಾದಿತ್ತು ಆಘಾತ

Lokayukta-sudden-visit-to-anganavadis

ಶಿವಮೊಗ್ಗ: ಲೋಕಾಯುಕ್ತ ಅಧಿಕಾರಿಗಳ ಎರಡು ತಂಡ ಶಿವಮೊಗ್ಗ ತಾಲೂಕಿನ ವಿವಿಧ ಅಂಗನವಾಡಿಗಳಿಗೆ ದಿಢೀರ್‌ ಭೇಟಿ (Sudden Visit) ನೀಡಿ ಪರಿಶೀಲಿಸಿದರು. ಈ ವೇಳೆ ಹಲವು ನ್ಯೂನತೆ ಕಂಡು ಬಂದಿದೆ. ಒಂದು ವಾರದೊಳಗೆ ಸಮಸ್ಯೆ ಪರಿಹರಿಸಿ ವರದಿ ನೀಡುವಂತೆ ಲೋಕಾಯುಕ್ತ ಅಧಿಕಾರಿಗಳು ಸೂಚಿಸಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್‌ ಮತ್ತು ಇನ್ಸ್‌ಪೆಕ್ಟರ್‌ ವೀರಬಸಪ್ಪ ಎಲ್‌.ಕುಸಲಾಪುರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ಆಯನೂರು ವ್ಯಾಪ್ತಿಯ 4 ಅಂಗನವಾಡಿಗಳು, ಕುಂಸಿ ವ್ಯಾಪ್ತಿಯ 4 ಅಂಗನವಾಡಿಗಳಿಗೆ ಲೋಕಾಯುಕ್ತ ಅಧಿಕಾರಿಗಳ ಪ್ರತ್ಯೇಕ ತಂಡ ದಿಢೀರ್‌ ಭೇಟಿ … Read more

ಶಿವಮೊಗ್ಗದಲ್ಲಿ ಬೆಳಗಿನ ಜಾವ ಹೆದ್ದಾರಿಗೆ ಅಡ್ಡಲಾಗಿ KSRTC ಬಸ್‌ ಪಲ್ಟಿ

100625 Bus mishap at bedarahosahalli in Shimoga taluk

ಶಿವಮೊಗ್ಗ: ಚಾಲಕನ ನಿಯಂತ್ರಣ ತಪ್ಪಿದ KSRTC ಬಸ್‌ ಪಲ್ಟಿಯಾಗಿದೆ. ಘಟನೆಯಲ್ಲಿ ಪ್ರಯಾಣಿಕರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಶಿವಮೊಗ್ಗ ತಾಲೂಕು ಬೇಡರಹೊಸಹಳ್ಳಿ ಸಮೀಪ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ರಾಯಚೂರಿನಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿದ್ದ ಬಸ್‌ ಪಲ್ಟಿಯಾಗಿದೆ. ಬಸ್ಸಿನಲ್ಲಿ 29 ಪ್ರಯಾಣಿಕರು ಇದ್ದರು. ಈ ಪೈಕಿ ಮೂವರಿಗೆ ಗಂಭೀರ ಸ್ವರೂಪದ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ. ಅಪಘಾತದಿಂದಾಗಿ ಈ ರಸ್ತೆಯಲ್ಲಿ ಕೆಲವು ಹೊತ್ತು ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. … Read more

ಶಿವಮೊಗ್ಗ ವಿಮಾನ ನಿಲ್ದಾಣ, ಎಡದಂಡೆ ನಾಲೆ ನೀರಿನಿಂದ ರೈತರಿಗೆ ಸಂಕಷ್ಟ, ಅಧಿಕಾರಿಗಳು ಭೇಟಿ, ಏನಿದು ಕೇಸ್‌?

Dr-Amshumanth-visit-near-kachinakatte

ಶಿವಮೊಗ್ಗ: ಭದ್ರಾ ಎಡದಂಡೆ ಚಾನಲ್‌ (Canal) ನೀರು ಮತ್ತು ವಿಮಾನ ನಿಲ್ದಾಣದಿಂದ ಹೊರಗೆ ಹರಿಯುವ ನೀರು ತೋಟ, ಗದ್ದೆ ಮತ್ತು ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ಈ ಭಾಗದ ರೈತರಿಗೆ ಸಮಸ್ಯೆಯಾಗುತ್ತಿದೆ ಎಂಬ ದೂರಿನ ಹಿನ್ನೆಲೆ ಭದ್ರಾ ಕಾಡಾ ಅಧ್ಯಕ್ಷರು ಮತ್ತು ಅಧಿಕಾರಿಗಳ ನಿಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಮಳೆಯಾದಾಗ, ಜಲಾಶಯದಿಂದ ನೀರು ಹರಿಸಿದಾಗ ಎಡದಂಡೆ ನಾಲೆ ತುಂಬಿ ಹರಿಯುತ್ತದೆ. ವಿಮಾನ ನಿಲ್ದಾಣದಿಂದ ಹೊರಗೆ ಹರಿಯುವ ಮಳೆ ನೀರು ಕೂಡ ನಾಲೆಗೆ ಸೇರುತ್ತದೆ. ಹಾಗಾಗಿ ಹೆಚ್ಚಿನ … Read more

ಶಿರಾಳಕೊಪ್ಪ ಪೊಲೀಸರ ದಾಳಿ 47 ಜಾನುವಾರುಗಳು ವಶಕ್ಕೆ, ಹೊಳೆಹೊನ್ನೂರಿನಲ್ಲಿ ಗೋಮಾಂಸ ಸಾಗಿಸುವಾಗ ರೇಡ್‌

Crime-News-General-Image

ಶಿರಾಳಕೊಪ್ಪ: ಮಂಚಿಕೊಪ್ಪದ ಹಕ್ಕಳ್ಳಿ ಎಂಬಲ್ಲಿ ಅಕ್ರಮವಾಗಿ ಕಟ್ಟಿಕೊಂಡಿದ್ದ 47 ಜಾನುವಾರುಗಳನ್ನು ಶಿರಾಳಕೊಪ್ಪ ಪೊಲೀಸರು ರಕ್ಷಿಸಿ (Secure) ಗೋ ಶಾಲೆಗೆ ಬಿಟ್ಟಿದ್ದಾರೆ. ಹಕ್ಕಳ್ಳಿ ಗ್ರಾಮದ ಮೌಲಾನಾ ಸಾಜಿದ್ ಅಲಿ ಎಂಬುವವರ ಮಾವಿನ ತೋಟದಲ್ಲಿ ವಧೆಗಾಗಿ ಕಟ್ಟಿದ್ದ ಎರಡು ಎಮ್ಮೆಗಳು ಸೇರಿದಂತೆ 47ಕ್ಕೂ ಹೆಚ್ಚು ಜಾನುವಾರುಗಳನ್ನು ಪಿಎಸ್‌ಐ ಪ್ರಶಾಂತ್ ಕುಮಾರ್ ಹಾಗೂ ಸಿಬ್ಬಂದಿ ರಕ್ಷಿಸಿದ್ದಾರೆ. 250 ಕೆ.ಜಿ. ಮಾಂಸ, 4 ವಾಹನಗಳು, ಆಯುಧ ಹಾಗೂ ತಕ್ಕಡಿಯನ್ನು ವಶಕ್ಕೆ ಪಡೆದಿದ್ದಾರೆ.  ಜೈನುಲ್ಲ, ಅಕ್ಬರ್ ಸೇರಿದಂತೆ ಹತ್ತಕ್ಕೂ ಹೆಚ್ಚು ಜನ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಪಟ್ಟಣದ ಪೊಲೀಸ್ … Read more

ಶಿವಮೊಗ್ಗದ ನಿರ್ಜನ ಪ್ರದೇಶದಲ್ಲಿ ಬೆಂಗಳೂರಿನ ವ್ಯಕ್ತಿಗೆ ಚಿನ್ನದ ನಾಣ್ಯ ಕೊಟ್ಟ ಸ್ನೇಹಿತ, ಆಮೇಲೆ ಕಾದಿತ್ತು ಆಘಾತ

Police-Van-Jeep-at-Shimoga-Nehru-Road

ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿ ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ. (Gold Coins) ₹11 ಲಕ್ಷ ವಂಚನೆಯಾಗಿದೆ ಎಂದು ಆರೋಪಿಸಿ ಗುತ್ತಿಗೆದಾರ ಗೌತಮ್‌ ಭಂಡಾರಿ ಎಂಬುವವರು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ವಂಚನೆ? ಗೌತಮ್‌ ಭಂಡಾರಿ ಎಂಬುವವರಿಗೆ ಬೆಂಗಳೂರಿನಲ್ಲಿ ಶಿವಮೊಗ್ಗದ ಪ್ರದೀಪ ಎಂಬಾತನ ಪರಿಚಯವಾಗಿತ್ತು. ಪ್ರದೀಪ ಆಗಾಗ ಅವರಿಗೆ ಕರೆ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಟೂರಿಸ್ಟ್‌ ಜಾಗಗಳನ್ನು ತೋರಿಸುವುದಾಗಿ ಹೇಳುತ್ತಿದ್ದ. ಗೌತಮ್‌ ಭಂಡಾರಿ ಅವರು ತಮ್ಮ ಸ್ನೇಹಿತರಾದ ನಾಗೇಶ್‌, … Read more

ರಾಮ ಮಂದಿರದ ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಕಳವು

030625 Hundi theft at Rechikoppa village in Shimoga taluk

ಶಿವಮೊಗ್ಗ: ದೇವಸ್ಥಾನದ (Temple) ಬಾಗಿಲಿನ ಬೀಗ ಮುರಿದು ಹುಂಡಿ ಒಡೆದು ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ಇಂದು ಬೆಳಗ್ಗೆ ಪೂಜೆಗೆ ತೆರಳಿದ್ದಾಗ ಪ್ರಕರಣ ಬೆಳಕಿಗೆ ಬಂದಿದೆ. ಶಿವಮೊಗ್ಗ ತಾಲೂಕು ಕುಂಸಿ ಸಮೀಪದ ರೇಚಿಕೊಪ್ಪ ಗ್ರಾಮದ ರಾಮ ಮಂದಿರದಲ್ಲಿ ಕಳ್ಳತನವಾಗಿದೆ. ದೇಗುಲವು ಊರಿನಿಂದ ಸ್ವಲ್ಪ ಹೊರಭಾಗದಲ್ಲಿದೆ. ಕಳೆದ ರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು, ಹುಂಡಿ ಒಡೆದು ಹಣ ಕಳ್ಳತನ ಮಾಡಲಾಗಿದೆ. ಸುಮಾರು 10 ಸಾವಿರ ರೂ.ನಷ್ಟು ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಕುಂಸಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ … Read more

ಶಿವಮೊಗ್ಗ ತಾಲೂಕಿನಲ್ಲಿ ಹಸಿ ಶುಂಠಿ ಖರೀದಿ ಕೇಂದ್ರ ಆರಂಭ

Agriculture-News-Farmer

ಶಿವಮೊಗ್ಗ: ಕೇಂದ್ರ ಸರ್ಕಾರವು ಎಕರೆಗೆ 30 ಕ್ವಿಂಟಲ್ ಹಾಗೂ ಪ್ರತಿ ರೈತರಿಂದ ಗರಿಷ್ಠ 60 ಕ್ವಿಂಟಲ್ ಪ್ರಮಾಣದ ಎಫ್.ಎ.ಕ್ಯೂ ಗುಣಮಟ್ಟದ ಹಸಿಶುಂಠಿಯನ್ನು (Ginger) ಕ್ವಿಂಟಲ್‌ಗೆ 2,445 ರೂ.ನಂತೆ ಖರೀದಿಸುತ್ತಿದೆ. ಹಸಿಶುಂಠಿ ಖರೀದಿಗೆ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳವನ್ನು ಖರೀದಿ ಸಂಸ್ಥೆಯನ್ನಾಗಿ ನೇಮಕ ಮಾಡಲಾಗಿದೆ. ಶಿವಮೊಗ್ಗ ತಾಲೂಕಿಗೆ ಸಂಬಂಧಿಸಿದಂತೆ ಆಯನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಖರೀದಿ ಕೇಂದ್ರವನ್ನಾಗಿ ನೇಮಿಸಿದೆ. ರೈತರು ಜೂನ್‌ 26ರೊಳಗಾಗಿ ನೋಂದಾಯಿಸಿಕೊಂಡು ಖರೀದಿ ಪ್ರಕ್ರಿಯೆ ಮಾಡಿಕೊಳ್ಳುವಂತೆ ಎಪಿಎಂಸಿ ಆಡಳಿತಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ … Read more

ಶಿವಮೊಗ್ಗ – ಹೊಳೆಹೊನ್ನೂರು ರಸ್ತೆಯಲ್ಲಿ ಭೀಕರ ಅಪಘಾತ, ಫೋಟೊಗ್ರಾಫರ್‌ ಕೊನೆಯುಸಿರು

Car-mishap-near-Pillanagiri

ಶಿವಮೊಗ್ಗ: ನಿಂತಿದ್ದ ಗೂಡ್ಸ್‌ ವಾಹನಕ್ಕೆ ಕಾರು ಡಿಕ್ಕಿಯಾಗಿ (Car Mishap) ಫೋಟೊಗ್ರಾಫರ್‌ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಪಿಳ್ಳಂಗೆರೆ ಸಮೀಪ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಹೆಚ್‌.ಪಿ.ಚೇತನ್‌ (36) ಮೃತ ಫೋಟೊಗ್ರಾಫರ್‌. ಸ್ನೇಹಿತನೊಂದಿಗೆ ಕಾರಿನಲ್ಲಿ ಶಿವಮೊಗ್ಗದಿಂದ ತಮ್ಮೂರು ಭದ್ರಾವತಿ ತಾಲೂಕು ಹನುಮಂತಾಪುರಕ್ಕೆ ತೆರಳುವಾಗ ನಿಂತಿದ್ದ ಗೂಡ್ಸ್‌ ವಾಹನಕ್ಕೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದಿದೆ ಎಂದು ಆರೋಪಿಸಲಾಗಿದೆ. ಗಂಭೀರ ಗಾಯಗೊಂಡಿದ್ದ ಚೇತನ್‌ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಕೊನೆಯುಸಿರೆಳೆದಿದ್ದಾರೆ. ಚೇತನ್‌ ಸ್ನೇಹಿತ ಶಿವು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Read more