SHIVAMOGGA LIVE NEWS | 28 NOVEMBER 2022
ಸಾಗರ : ಇತಿಹಾಸ ಪ್ರಸಿದ್ಧ ಕೆಳದಿಯ ಶ್ರೀ ರಾಮೇಶ್ವರ ದೇವಸ್ಥಾನ, ಶ್ರೀ ವೀರಭದ್ರೇಶ್ವರ ದೇವಸ್ಥಾನಗಳಲ್ಲಿ ಹುಂಡಿ ಒಡೆದು (hundi theft) ಕಳ್ಳತನ ಮಾಡಲಾಗಿದೆ. ಕಳ್ಳರು ದೇವಸ್ಥಾನದ ಹಂಚು ತೆಗೆದು ಒಳ ನುಗ್ಗಿ 5 ಹುಂಡಿಗಳನ್ನು ಕಳ್ಳತನ ಮಾಡಿದ್ದಾರೆ.
ದೇವಸ್ಥಾನದ ಆವರಣದಲ್ಲಿಯೆ ಹುಂಡಿಗಳನ್ನು (hundi theft) ಒಡೆದು ಹಣ ಕಳ್ಳತನ ಮಾಡಿದ್ದಾರೆ. ಒಂದು ಹುಂಡಿಯಲ್ಲಿ ಇಂಟರ್ ಲಾಕ್ ವ್ಯವಸ್ಥೆ ಇದ್ದಿದ್ದರಿಂದ ಅದನ್ನು ಒಡೆಯಲಾಗದೆ ಹಾಗೆ ಬಿಟ್ಟು ಪರಾರಿಯಾಗಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾರ್ತಿಕ ದೀಪೋತ್ಸವದ ಹಿನ್ನೆಲೆ ಕಳೆದ ವಾರ ಹೆಚ್ಚಿನ ಸಂಖ್ಯೆಯ ಭಕ್ತರು ದೇವಸ್ಥಾನಕ್ಕೆ ಬಂದಿದ್ದರು. ಹಾಗಾಗಿ ಕಾಣಿಕೆ ಹಣ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗಿತ್ತು. ಇದನ್ನು ಗಮನಿಸಿಯೆ ಕಳ್ಳತನ ಮಾಡಿರುವ ಸಾದ್ಯತೆ ಇದೆ. ಸುಮಾರು 2 ಲಕ್ಷ ರೂ. ಕಾಣಿಕ ಹಣ ಕಳ್ಳತನ ಆಗಿರುವ ಕುರಿತು ಸ್ಥಳೀಯರು ಅಂದಾಜಿಸುತ್ತಾರೆ. ದೇವಸ್ಥಾನದಲ್ಲಿ ಸಿಸಿಟಿವಿ ಕ್ಯಾಮಾರಾಗಳು ಇಲ್ಲ.
ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಸಾಗರ ಗ್ರಾಮಾಂತರ ಠಾಣೆ ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ALSO READ – ಬೆಳಗಿನ ಜಾವ 4 ಗಂಟೆಗೆ ಗಾಂಧಿ ಬಜಾರಲ್ಲಿ ಅನುಮಾನಾಸ್ಪದ ವರ್ತನೆ | 3 CRIME NEWS