SHIVAMOGGA LIVE CITY NEWS | 9 JANUARY 2025
ಶಿವಮೊಗ್ಗ ಸಿಟಿ ನ್ಯೂಸ್ : ಶಿವಮೊಗ್ಗ ಸಿಟಿಯಲ್ಲಿ ಇವತ್ತು ಏನೇನಾಯ್ತು? ಇಲ್ಲಿದೆ ಫಟಾಫಟ್ ನ್ಯೂಸ್ ಅಪ್‌ಡೇಟ್.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಬೆಂಗಳೂರು : ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದರು. ಶರಾವತಿ ಸಂತ್ರಸ್ತರ ಸಮಸ್ಯೆ ಪರಿಹಾರ ಕುರಿತು ಚರ್ಚೆ ನಡೆಸಿದರು. ಜ.20ರಂದು ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣದ ವಿಚಾರಣೆ ಇದೆ. ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಜೊತೆಗೆ ತಕ್ಷಣ ಸಂಪರ್ಕಿಸಿ ರೈತ ಪರವಾಗಿ ನಿಲುವು ತೆಗೆದುಕೊಳ್ಳಬೇಕು. ರೈತರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವತ್ತ ಕ್ರಮ ಕೈಗೊಳ್ಳಬೇಕು. – ಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ ಶಿವಮೊಗ್ಗ ಲೈವ್ ಅರಣ್ಯ ಸಚಿವರನ್ನು ಭೇಟಿಯಾದ ಸಂಸದ
ತ್ಯಾವರೆಕೊಪ್ಪ : ಹುಲಿ ಮತ್ತು ಸಿಂಹಧಾಮದ ಹುಲಿ ಅಂಜನಿ (17) ವಯೋ ಸಹಜವಾಗಿ ಬಹು ಅಂಗಾಂಗ ಸಮಸ್ಯೆಯಿಂದ ಸಾವನ್ನಪ್ಪಿದೆ. ಪಶುವೈದ್ಯಕೀಯ ಕಾಲೇಜಿನ ವೈದ್ಯಾಧಿಕಾರಿಗಳು ಅಂಜನಿಯ ಮರಣೋತ್ತರ ಪರೀಕ್ಷೆ ನಡೆಸಿದರು. ಅಂಜನಿಯ ಸಾವಿನಿಂದ ಮೃಗಾಲಯದಲ್ಲಿ ಹುಲಿಗಳ ಸಂಖ್ಯೆ 5ಕ್ಕೆ ಇಳಿಕೆಯಾಗಿದೆ. ಶಿವಮೊಗ್ಗ ಲೈವ್ ತ್ಯಾವರೆಕೊಪ್ಪದ ಹುಲಿ ಅಂಜನಿ ಸಾವು
ಶಿವಮೊಗ್ಗ : ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಮ್ಯಾನೇಜ್ಮೆಂಟ್ ಸ್ಟಡೀಸ್ ವಿಭಾಗದ ವತಿಯಿಂದ ಭಾರತೀಯ ವಾಣಿಜ್ಯ ಶಾಲೆ, ಎಂಟಿಸಿ ಗ್ಲೋಬಲ್, ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಘದ ಸಂಯುಕ್ತಾಶ್ರಯದಲ್ಲಿ ಜ.10,11 ರಂದು ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಆಯೋಜಿಸಲಾಗಿದೆ. ಸರ್.ಎಂ.ವಿ ಸಭಾಂಗಣದಲ್ಲಿ ‘ಉದ್ದಿಮೆ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ – ಬ್ಯಾಂಕ್ ಮತ್ತು ತಂತ್ರಜ್ಞಾನಗಳ ಪಾತ್ರʼ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ. ಶಿವಮೊಗ್ಗ ಲೈವ್ ಅಂತಾರಾಷ್ಟ್ರೀಯ ವಿಚಾರ ಸಂಕಿರಣ
ಪತ್ರಿಕಾ ಭವನ : ರಾಷ್ಟ್ರೀಯ ರೈತ ಹೋರಾಟದ ಸಂಚಾಲಕ ಜಗತ್ ಸಿಂಗ್ ಧಲೇವಾಲ 43 ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸದ ಹಿನ್ನೆಲೆ ಪ್ರಧಾನಿ ಮತ್ತು ಕೇಂದ್ರ ಕೃಷಿ ಸಚಿವರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಗುತ್ತದೆ. ಜ.13ರಂದು ಜಿಲ್ಲಾ ಮತ್ತು ತಾಲೂಕು ಕೇಂದ್ರದಲ್ಲಿ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಎಂ.ಪಿ.ಕರಬಸಪ್ಪಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಿವಮೊಗ್ಗ ಲೈವ್ ರೈತರಿಂದ ಪ್ರಧಾನಿಯ ಪ್ರತಿಕೃತಿ ದಹನ
ಇದನ್ನೂ ಓದಿ » ಅಮೆರಿಕದಿಂದಲೇ ಆನ್‌ಲೈನ್ ಮೀಟಿಂಗ್, ಜವಾಬ್ದಾರಿ ಮೆರೆದ ಮಿನಿಸ್ಟರ್, ಯಾವೆಲ್ಲ ಸಭೆ ನಡೆಸಿದ್ದಾರೆ?
ಡಿಸಿ ಕಚೇರಿ : ಮಂಗನ ಕಾಯಿಲೆ (ಕೆಎಫ್‌ಡಿ) ಕುರಿತು ಎಲ್ಲಾ ಪಂಚಾಯಿತಿ ಹಂತದಲ್ಲಿ ಅರಿವು ಮೂಡಿಸಬೇಕು. ಮಲೆನಾಡು ಭಾಗದಲ್ಲಿ ಜನರು ಕಾಡಿಗೆ ಹೋಗುವಾಗ ಉಣ್ಣೆಗಳಿಂದ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು. ಆರೋಗ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ವೇಳೆ ಈ ಸೂಚನೆ ನೀಡಿದರು. ಶಿವಮೊಗ್ಗ ಲೈವ್ ಕೆಎಫ್‌ಡಿ ಕುರಿತು ಜಾಗೃತಿಗೆ ಸೂಚನೆ
ಇದನ್ನೂ ಓದಿ » ಮನೆ ಅಂಗಳಕ್ಕೆ ಬಂದು ಮಲಗಿದ್ದ ನಾಯಿಯ ಕೊರಳಿಗೆ ಬಾಯಿ ಹಾಕಿದ ಚಿರತೆ, ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಶಿವಮೊಗ್ಗ : ನಗರ ನೀರು ಸರಬರಾಜು ಮತ್ತು ಒಳಚರಂಡಿ ನಿರ್ವಹಣಾ ವಿಭಾಗ ಮತ್ತು ಉಪವಿಭಾಗ ವತಿಯಿಂದ ನೀರಿನ ಕಂದಾಯ ಮತ್ತು ಬಾಕಿ ಕರ ವಸೂಲಾತಿಗಾಗಿ ಜ.12 ರಂದು ವಿಶೇಷ ಕೌಂಟರ್ ತೆರೆಯಲಾಗಿದೆ. ಕಲ್ಲಹಳ್ಳಿ, ಅಭಿಷ್ಠವರ ಗಣಪತಿ ದೇವಸ್ಥಾನದ ಹತ್ತಿರ ವಿನೋಬನಗರ, ಅಪೂರ್ವ ಕಾಲೇಜ್ ಎದುರು ಬೊಮ್ಮನಕಟ್ಟೆ ಮುಖ್ಯ ರಸ್ತೆ, ಗಣಪತಿ ದೇವಸ್ಥಾನದ ಹತ್ತಿರ ಕೃಷಿ ನಗರ, ಶಿವನ ಪಾರ್ಕ್ ಹತ್ತಿರ ಚಿಕ್ಕಲ್, ಆದಿಚುಂಚನಗಿರಿ ಶಾಲೆ ಎದುರು ಶರಾವತಿ ನಗರ ಈ ಸ್ಥಳಗಳಲ್ಲಿ ವಿಶೇಷ ಕೌಂಟರ್ ತೆರೆಯಲಾಗಿದೆ. ಶಿವಮೊಗ್ಗ ಲೈವ್ ನೀರಿನ ಕಂದಾಯ ಪಾವತಿಗೆ ವಿಶೇಷ ಕೌಂಟರ್
ಇದನ್ನೂ ಓದಿ » ಚಿನ್ನಾಭರಣ ಅಡವಿಟ್ಟು ಸಾಲ ಪಡೆದ ದಂಪತಿ ಸೇರಿ ನಾಲ್ವರ ವಿರುದ್ಧ ದಾಖಲಾಯ್ತು ಕೇಸ್, ಕಾರಣವೇನು?
ಶಿವಮೊಗ್ಗ : ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ಖಾಲಿ ಇರುವ 4 ಕ್ಯಾಥ್ ಲ್ಯಾಬ್ ಟೆಕ್ನೀಷಿಯನ್/ಎಕೊ ಕಾರ್ಡಿಯೋಗ್ರಾಫರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಬಿಎಸ್‌ಸಿ, ಸಿವಿಟಿ/ಸಿಟಿಟಿ ಮತ್ತು ಎಂಎಸ್‌ಸಿ ಸಿವಿಟಿ/ ಸಿಟಿಟಿ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಕರ್ಷಕ ವೇತನ ನೀಡಲಾಗುತ್ತದೆ. ಅರ್ಹ ಅಭ್ಯರ್ಥಿಗಳು ನಿರ್ದೇಶಕರು, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಸಾಗರ ರಸ್ತೆ ಶಿವಮೊಗ್ಗ ಇಲ್ಲಿಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಶಿವಮೊಗ್ಗ ಲೈವ್ ವಿವಿಧ ಹುದ್ದೆಗೆ ಅರ್ಜಿ ಆಹ್ವಾನ
ಇದನ್ನೂ ಓದಿ » ನೆಹರು ರಸ್ತೆಯಲ್ಲಿ TVS XL ನಾಪತ್ತೆ | ಎತ್ತಿನಗಾಡಿಗೆ ಗೂಡ್ಸ್ ವಾಹನ ಡಿಕ್ಕಿ – ಫಟಾಫಟ್ ಸುದ್ದಿಗಳು
ಡಿಸಿ ಕಚೇರಿ : ತಿರುಪತಿ ದೇವಸ್ಥಾನದಲ್ಲಿ ಕಾಲ್ತುಳಿತ ಸಂಭವಿಸಿ ಆರು ಭಕ್ತರು ಸಾವನ್ನಪ್ಪಿದ್ದಾರೆ. ಇದಕ್ಕೆ ಟಿಟಿಡಿ ಆಡಳಿತ ಮಂಡಳಿಯೇ ಹೊಣೆಯಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಮಹಿಳಾ ಕಾಂಗ್ರೆಸ್ ವತಿಯಿಂದ ಅಪರ ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಮಹಿಳಾ ಕಾಂಗ್ರೆಸ್‌ನ ಸುವರ್ಣ ನಾಗರಾಜ್, ರೇಷ್ಮಾ, ಸ್ಟೇಲ್ಲಾ ಮಾರ್ಟಿನ್, ಚಂದ್ರಿಕಾ ಪಿ. ಷರ್ಮೀನ್ ಭಾನು ಮತ್ತಿತ್ತರು ಉಪಸ್ಥಿತರಿದ್ದರು. ಶಿವಮೊಗ್ಗ ಲೈವ್ ತಿರುಪತಿ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಆಗ್ರಹ