ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿ ಭೀಕರ ಅಪಘಾತ, ಬಸ್ಸಿನಡಿ ಸಿಲುಕಿ ನಜ್ಜುಗುಜ್ಜಾದ ಯುವಕ

KSRTC-Bangalore-Shimoga-Rajahamsa-mishap-at-bypass-road.

SHIVAMOGGA LIVE NEWS | 23 JUNE 2024 SHIMOGA : ಕೆಎಸ್‌ಆರ್‌ಟಿಸಿ ರಾಜಹಂಸ ಬಸ್‌ ಮತ್ತು ಬೈಕ್‌ ಮಧ್ಯೆ ಅಪಘಾತ ಸಂಭವಿಸಿ ಯುವಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಶಿವಮೊಗ್ಗ ಬೈಪಾಸ್‌ (Bypass) ರಸ್ತೆಯ ಊರುಗಡೂರು ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಶ್ರೀರಾಮಪುರದ ಸಂತೋಷ್‌ (23) ಮೃತ ದುರ್ದೈವಿ. ಬೆಳಗಿನ ಜಾವ ಹೊಟೇಲ್‌ ಕೆಲಸಕ್ಕೆ ತೆರಳುತ್ತಿದ್ದಾಗ ಅವಘಡ ಸಂಭವಿಸಿದೆ. ಶಿವಮೊಗ್ಗ ಬೈಪಾಸ್‌ ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಅಪಘಾತಕ್ಕೀಡಾದ ರಾಜಹಂಸ ಬಸ್‌ ರಾಜಹಂಸ ಬಸ್‌ ಬೆಂಗಳೂರಿನಿಂದ ಬರುತ್ತಿತ್ತು. ಬೈಪಾಸ್‌ ರಸ್ತೆ ಮೂಲಕ … Read more

ಯಡೂರು ಸಮೀಪ ಅಬ್ಬಿ ಫಾಲ್ಸ್‌ನಲ್ಲಿ ಕಾಲು ಜಾರಿ ಬಿದ್ದು, ಯುವಕ ನೀರುಪಾಲು

Abbi Falls

SHIVAMOGGA LIVE NEWS | 23 JUNE 2024 HOSANAGARA : ಅಬ್ಬಿ ಫಾಲ್ಸ್‌ನಲ್ಲಿ (Abbi Falls) ಕಾಲು ಜಾರಿ ಬಿದ್ದು ಯುವಕ ನೀರುಪಾಲಾಗಿದ್ದಾನೆ. ಅಗ್ನಿಶಾಮಕ ಸಿಬ್ಬಂದಿ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಹೊಸನಗರ ತಾಲೂಕು ಯಡೂರು ಸಮೀಪದ ಅಬ್ಬಿ ಫಾಲ್ಸ್‌ನಲ್ಲಿ ಬಳ್ಳಾರಿ ಮೂಲದ ವಿನೋದ್‌ (26) ಕಾಲು ಜಾರಿ ಬಿದ್ದು ನೀರುಪಾಲಾಗಿದ್ದಾನೆ. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ವಿನೋದ್‌ ತನ್ನ ಸ್ನೇಹಿತರೊಂದಿಗೆ ಅಬ್ಬಿ ಫಾಲ್ಸ್‌ಗೆ ಪ್ರವಾಸಕ್ಕೆ ಬಂದಿದ್ದರು. ಕೊಡಚಾದ್ರಿ ಪ್ರವಾಸ ಮುಗಿಸಿದ್ದ ತಂಡ ಅಬ್ಬಿ ಫಾಲ್ಸ್‌ಗೆ ಆಗಮಿಸಿದ್ದಾಗ … Read more

ತೀವ್ರ ಕುತೂಹಲ ಮೂಡಿಸಿದೆ ಡಿಸಿಸಿ ಬ್ಯಾಂಕ್‌ ಚುನಾವಣೆ, ಕಣದಲ್ಲಿದ್ದಾರೆ 28 ಅಭ್ಯರ್ಥಿಗಳು, ಇಲ್ಲಿದೆ ಲಿಸ್ಟ್‌

Shimoga-DCC-Bank-Board

SHIVAMOGGA LIVE NEWS | 23 JUNE 2024 SHIMOGA : ತೀವ್ರ ಕುತೂಹಲ ಮೂಡಿಸಿರುವ ಕೇಂದ್ರ ಸಹಕಾರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್‌) ಆಡಳಿತ ಮಂಡಳಿ ಚುನಾವಣೆಗೆ (Election) ಅಖಾಡ ಸಿದ್ಧವಾಗಿದೆ. ನಿರ್ದೇಶಕರ ಚುನಾವಣೆಗೆ 35 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ 7 ಅಭ್ಯರ್ಥಿಗಳು ಶನಿವಾರ ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಯಾರೆಲ್ಲ ನಾಮಪತ್ರ ಹಿಂಪಡೆದಿದ್ದಾರೆ? ಡಿಸಿಸಿ ಬ್ಯಾಂಕ್‌ ಆಡಳಿತ ಮಂಡಳಿಗೆ 13 ನಿರ್ದೇಶಕರ ಆಯ್ಕೆಗೆ ಚುನಾವಣೆ ನಡೆಯುತ್ತಿದೆ. ವಿವಿಧ ಕ್ಷೇತ್ರದಿಂದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದ 7 … Read more

ಪರೀಕ್ಷೆಯ ಹಾಲ್‌ ಟಿಕೆಟ್‌ ತೋರಿಸಿದರೆ KSRTC ಬಸ್‌ಗಳಲ್ಲಿ ಉಚಿತ ಪ್ರಯಾಣ

ksrtc-news-update-thumbnail.webp

SHIVAMOGGA LIVE NEWS | 23 JUNE 2024 KSRTC NEWS : ದ್ವಿತೀಯ ಪಿಯುಸಿ ಪರೀಕ್ಷೆ-3ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ನಿಗಮದ ಬಸ್‌ಗಳಲ್ಲಿ ಪರೀಕ್ಷಾ ದಿನಗಳಂದು ಉಚಿತವಾಗಿ ಪ್ರಯಾಣಿಸಲು ಅನುಮತಿ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಸೂಚನೆ ನೀಡಿದೆ. ಜೂ.24ರಿಂದ ಮೇ 5ರವರೆಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ-3 ನಡೆಯಲಿದೆ. ವಿದ್ಯಾರ್ಥಿಗಳು ಪ್ರವೇಶಪತ್ರ ತೋರಿಸಿ ನಗರ, ಹೊರವಲಯ, ಸಾಮಾನ್ಯ ಹಾಗೂ ವೇಗದೂತ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಮುಖ್ಯ ಸಂಚಾರ … Read more

ಹಾರನಹಳ್ಳಿಯಲ್ಲಿ ಟಾಟಾ ಏಸ್‌ ಡಿಕ್ಕಿಯಾಗಿ ಬೈಕ್‌ ಸವಾರ ಸಾವು, ಹೇಗಾಯ್ತು ಅಪಘಾತ?

ACCIDENT-NEWS-GENERAL-IMAGE.

SHIVAMOGGA LIVE NEWS | 23 JUNE 2024 KUMSI : ಬೈಕ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದು ಸವಾರ (Rider) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಾರನಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಮೈಸವಳ್ಳಿಯ ಸತೀಶ್ (25) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಬೈಕ್‌ನಲ್ಲಿದ್ದ ಮಗು ಭರಣಿ (7) ಕಾಲಿಗೆ ಪೆಟ್ಟಾಗಿದೆ. ಸತೀಶ್ ಅವರು ಸಂಬಂಧಿಯೊಬ್ಬರ ಮಗುವನ್ನು ಹಾರನಹಳ್ಳಿಗೆ ಕರೆದುಕೊಂಡು ಬಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಮತ್ತೆ ಮೈಸವಳ್ಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರಿನಿಂದ ಬಂದ ಟಾಟಾ ಏಸ್ ಡಿಕ್ಕಿ … Read more

ವಿದ್ಯಾನಗರದಲ್ಲಿ ಮಾರಕಾಸ್ತ್ರಗಳಿಂದ ದಾಳಿ, ಯುವಕನ ತಲೆಗೆ ಗಂಭೀರ ಗಾಯ

Vidyanagara-Smart-city-board

SHIVAMOGGA LIVE NEWS | 23 JUNE 2024 SHIMOGA : ರೌಡಿ ಶೀಟರ್‌ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (Attack) ನಡೆಸಲಾಗಿದೆ. ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಗಾಯಗೊಂಡಿದ್ದ ರೌಡಿ ಶೀಟರ್‌ ಕಾರ್ತಿಕ್‌ ಅಲಿಯಾಸ್‌ ಕತ್ತೆ ಕಾರ್ತಿಕ್‌ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊಸಮನೆ ನಿವಾಸಿ ಕಾರ್ತಿಕ್‌ನ ತಲೆ ಭಾಗ, ಕೈಗಳಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ರಕ್ತ ಸುರಿಯುತ್ತಿದ್ದರು ಮನೆಗೆ ತೆರಳಿದ್ದ. ಕೊನೆಗೆ ಆತನ ಕುಟುಂಬದವರೆ ಕಾರ್ತಿಕ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು … Read more

ಶಿವಮೊಗ್ಗದಲ್ಲಿ ಸ್ವಲ್ಪ ತಂಪು ವಾತಾವರಣ, ಇವತ್ತು ಮಳೆಯಾಗುತ್ತಾ? ಎಲ್ಲೆಲ್ಲಿ ಎಷ್ಟಿದೆ ತಾಪಮಾನ?

WEATHER-REPORT-SHIMOGA-

SHIVAMOGGA LIVE NEWS | 23 JUNE 2024 WEATHER REPORT : ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಅಲ್ಲಲ್ಲಿ ಸಣ್ಣ ಪ್ರಮಾಣದ ಮಳೆಯಾಗಿದೆ. ಹಾಗಾಗಿ ಸ್ವಲ್ಪ ತಂಪು ವಾತಾವರಣವಿದೆ. ಆದರೆ ತಾಪಮಾನ ಇಳಿಕೆಯಾಗಿಲ್ಲ. ಶಿವಮೊಗ್ಗದಲ್ಲಿ ಇವತ್ತು ಗರಿಷ್ಠ 31 ಡಿಗ್ರಿ, ಕನಿಷ್ಠ 22 ಡಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ ಎಂದು ಕೆಎಸ್‌ಎನ್‌ಡಿಎಂಸಿ ವರದಿಯಲ್ಲಿ ತಿಳಿಸಿದೆ. ಬೆಳಗ್ಗೆ 7ಕ್ಕೆ 22 ಡಿಗ್ರಿ, ಬೆಳಗ್ಗೆ 8ಕ್ಕೆ 22.2 ಡಿಗ್ರಿ, ಬೆಳಗ್ಗೆ 10ಕ್ಕೆ 24.2 ಡಿಗ್ರಿ, ಮಧ್ಯಾಹ್ನ 12ಕ್ಕೆ 27.9 ಡಿಗ್ರಿ, … Read more