ಶಿವಮೊಗ್ಗದಲ್ಲಿ ಶ್ರದ್ಧಾ ಭಕ್ತಿಯಿಂದ ವರ ಮಹಾಲಕ್ಷ್ಮಿ ಹಬ್ಬ ಆಚರಣೆ, ಎಲ್ಲೆಲ್ಲಿ ಹೇಗಿತ್ತು ಅಲಂಕಾರ?

Varamahalakshmi-Festival-in-Shimoga-City

SHIVAMOGGA LIVE NEWS | 25 AUGUST 2023 SHIMOGA : ಜಿಲ್ಲೆಯಾದ್ಯಂತ ಶ್ರದ್ಧಾ ಭಕ್ತಿಯಿಂದ ವರ ಮಹಾಲಕ್ಷ್ಮಿ ವ್ರತ (Varamahalakshmi Festival) ಆಚರಣೆ ಮಾಡಲಾಯಿತು. ಭಕ್ತರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇನ್ನು, ಹಲವು ಕಡೆ ಮನೆ, ಮಳಿಗೆ, ಕಚೇರಿಗಳಲ್ಲಿ ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಿದರು. ಎಲ್ಲೆಲ್ಲಿ ಹೇಗಿದೆ ಪೂಜೆ? ನಗರದ ವಿವಿಧೆಡೆ ಮನೆಗಳಲ್ಲಿ ಲಕ್ಷ್ಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಬಗೆಯ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ಹಲವು ಬಗೆಯ ತಿಂಡಿ, ತಿನಿಸು, … Read more

ಶಾಲೆಗೆ ಬೀಗ ಜಡಿದು ಕಟ್ಟಡದ ಮುಂದೆ ಪ್ರತಿಭಟಿಸಿದ ಪೋಷಕರು, ಕಾರಣವೇನು?

ammadikoppa-Villagers-at-Hosanagara-Protest-in-front-of-school.

SHIVAMOGGA LIVE NEWS | 25 AUGUST 2023 HOSANAGARA : ಮಕ್ಕಳಿಗೆ ಸಮರ್ಪಕವಾಗಿ ತರಗತಿ ನಡೆಯುತ್ತಿಲ್ಲ ಎಂದು ಆರೋಪಿಸಿ ಪೋಷಕರು ಶಾಲೆಗೆ (School) ಬೀಗ ಹಾಕಿ ಪ್ರತಿಭಟನೆ  (Protest) ನಡೆಸಿದರು. ಹೊಸನಗರದ ತಮ್ಮಡಿಕೊಪ್ಪ (Tammadikoppa) ಗ್ರಾಮದಲ್ಲಿ ಶಾಲೆ ಮುಂದೆ ಪೋಷಕರು, ಗ್ರಾಮಸ್ಥರು ಪ್ರತಿಭಟನೆ ನಡೆಸಿದರು. ಇಲ್ಲಿನ ಸರ್ಕಾರಿ ಶಾಲೆಯಲ್ಲಿ ತರಗತಿಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಮುಖ್ಯ ಶಿಕ್ಷಕರು ಮನಸೋಯಿಚ್ಛೆ ಶಾಲೆ ಬರುತ್ತಿದ್ದಾರೆ. ಪ್ರತಿ ವಿಷಯಕ್ಕೆ ಒಬ್ಬರು ಶಿಕ್ಷಕರು ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಇದನ್ನೂ ಓದಿ – ನಾಡ … Read more

ಅಡಿಕೆ ಧಾರಣೆ | 25 ಆಗಸ್ಟ್‌ 2023 | ಇವತ್ತು ಎಲ್ಲೆಲ್ಲಿ ಹೇಗಿದೆ ಅಡಿಕೆ ರೇಟ್‌?

ADIKE-RATE-SHIVAMOGGA-LIVE-NEWS - Areca Price

SHIVAMOGGA LIVE NEWS | 25 AUGUST 2023 SHIMOGA : ಶಿವಮೊಗ್ಗ ಸೇರಿದಂತೆ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ (Adike Rate).  ಕಾರ್ಕಳ ಮಾರುಕಟ್ಟೆ ನ್ಯೂ ವೆರೈಟಿ 30000 45000 ಕುಮಟ ಮಾರುಕಟ್ಟೆ ಕೋಕ 20189 33999 ಚಿಪ್ಪು 31509 35019 ಫ್ಯಾಕ್ಟರಿ 13019 24129 ಹಳೆ ಚಾಲಿ 41099 42269 ಹೊಸ ಚಾಲಿ 38889 41829 ಬಂಟ್ವಾಳ ಮಾರುಕಟ್ಟೆ ಕೋಕ 12500 25000 ನ್ಯೂ ವೆರೈಟಿ 27500 45000 ವೋಲ್ಡ್ ವೆರೈಟಿ … Read more

ಕೃಷ್ಣನನ್ನು ಹುಡುಕಿಕೊಟ್ಟರೆ ನಗದು ಬಹುಮಾನ | ಈಡಿಗರ ಸಂಘದಿಂದ ಸಚಿವರು, ಶಾಸಕರಿಗೆ ಸನ್ಮಾನ | TOP 3 NEWS

250823 Request to find out Krishna

SHIVAMOGGA LIVE NEWS | 25 AUGUST 2023 ಕೃಷ್ಣನ ಬಗ್ಗೆ ಮಾಹಿತಿ ಕೊಟ್ಟರೆ ನಗದು ಬಹುಮಾನ SHIMOGA : ಗೋಪಾಲಗೌಡ ಬಡಾವಣೆಯಿಂದ ಬಿಳಿ ಬಣ್ಣದ ಕೋಕ್ಟೇಲ್‌ ಪಕ್ಷಿ ಕಾಣೆಯಾಗಿದೆ. ಈ ಪಕ್ಷಿ ಬಿಳಿ ಗಿಳಿಯ ರೀತಿ ಕಾಣುತ್ತೆ. ಇಲ್ಲಿನ ಮೋರ್‌ ಸೂಪರ್‌ ಮಾರ್ಕೆಟ್‌ ಬಳಿಯಿಂದ ಕಣ್ಮರೆಯಾಗಿದೆ. ಮಾಲೀಕರು ಇದಕ್ಕೆ ಕೃಷ್ಣ ಎಂದು ಹೆಸರು ಇಟ್ಟಿದ್ದಾರೆ. ಈ ಪಕ್ಷಿ ಕಂಡಲ್ಲಿ ತಕ್ಷಣ ಮಾಹಿತಿ ನೀಡುವಂತೆ ಮಾಲೀಕರು ಮನವಿ ಮಾಡಿದ್ದಾರೆ. ಮಾಹಿತಿ ನೀಡಿದವರಿಗೆ ಸೂಕ್ತ ನಗದು ಬಹುಮಾನ ಘೋಷಿಸಿದ್ದಾರೆ. ಸಂಪರ್ಕಿಸಿ … Read more

ನಾಡ ಕಚೇರಿಗೆ MLA ದಿಢೀರ್‌ ಭೇಟಿ, ಅಧಿಕಾರಿಗಳಿಗೆ ಫುಲ್‌ ಕ್ಲಾಸ್‌

250823 MLA Araga Jnanendra visit Hosanagara Nadakacheri

SHIVAMOGGA LIVE NEWS | 25 AUGUST 2023 HOSANAGARA : ನಾಡಕಚೇರಿಗೆ ದಿಢೀರ್‌ ಭೇಟಿ ನೀಡಿದ ಶಾಸಕ ಆರಗ ಜ್ಞಾನೇಂದ್ರ (Araga Jnanendra), ಕರ್ತವ್ಯಕ್ಕೆ ತಡವಾಗಿ ಹಾಜರಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಉಪ ತಹಶೀಲ್ದಾರ್‌ ಇಲ್ಲದಿರುವುದು ಕಂಡು ಗರಂ ಆದರು. ಹೊಸನಗರದ ನಗರ ನಾಡ ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಹಠಾತ್‌ ಭೇಟಿ ನೀಡಿದರು. ಹಾಜರಾತಿ ಪುಸ್ತಕ ತರಿಸಿಕೊಂಡು ಪರಿಶೀಲನೆ ನಡೆಸಿದರು. ಉಪ ತಹಶೀಲ್ದಾರ್‌ ಇರಲಿಲ್ಲ ಶಾಸಕ ಆರಗ ಜ್ಞಾನೇಂದ್ರ ಭೇಟಿ ವೇಳೆ ಉಪ ತಹಶೀಲ್ದಾರ್‌ ಅವರು ನಾಡ … Read more

ಬಸ್‌-ಬೈಕ್‌ ಡಿಕ್ಕಿ, ಯುವಕ ಸ್ಥಳದಲ್ಲೆ ಸಾವು, ಹುಟ್ಟುಹಬ್ಬದ ಮರುದಿನವೆ ವಿಧಿಯ ಕರಾಳ ಆಟ

250823 KSRTC Bike at Kutruvalli in Shikaripura

SHIVAMOGGA LIVE NEWS | 25 AUGUST 2023 SHIKARIPURA : ಕೆಎಸ್‌ಆರ್‌ಟಿಸಿ (KSRTC) ಬಸ್‌, ಬೈಕ್‌ ಮಧ್ಯೆ ಅಪಘಾತ (Accident) ಸಂಭವಿಸಿ ಯುವಕ ಮೃತಪಟ್ಟಿದ್ದಾನೆ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದೆ. ಪಟ್ಟಣದ ಕುಟ್ರಹಳ್ಳಿ ನೂತನ ಕೆಎಸ್‌ಆರ್‌ಟಿಸಿ ಡಿಪೋ ಎದುರು ಘಟನೆ ಸಂಭವಿಸಿದೆ. ಪುನೇದಹಳ್ಳಿಯ ಗಜೇಂದ್ರ ಆಚಾರ್ (23) ಮೃತ ದುರ್ದೈವಿ. ಡಿಪೋ ಒಳಗೆ ಬರುತ್ತಿದ್ದ ಬಸ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಗಜೇಂದ್ರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ನಂದನ್‌ಗೆ ತೀವ್ರ ಗಾಯವಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ … Read more

ಮೈಸೂರು – ತಾಳಗುಪ್ಪ ರೈಲಿಗೆ ಪೂಜೆ, ಇಂಜಿನ್‌ ಹತ್ತಿ ಸ್ಥಳೀಯರಿಂದ ಘೋಷಣೆ, ಸಂಭ್ರಮಾಚರಣೆ

Railway-Stoppage-at-Arasalu-Station-and-locals-celebrate

SHIVAMOGGA LIVE NEWS | 24 AUGUST 2023

RIPPONPETE : ಅರಸಾಳು ಮತ್ತು ಕುಂಸಿ ನಿಲ್ದಾಣಗಳಲ್ಲಿ ಮೊದಲ ದಿನ ಎಕ್ಸ್‌ಪ್ರೆಸ್‌ ರೈಲುಗಳು (Trains) ನಿಲುಗಡೆ ನೀಡಿವೆ. ಸ್ಥಳೀಯರು ರೈಲುಗಳಿಗೆ ವಿಶೇಷ ಪೂಜೆ ಸಲ್ಲಿಸಿ ಸಂಭ್ರಮಾಚರಣೆ ಮಾಡಿದರು. ಇವೆರಡು ನಿಲ್ದಾಣಗಳಲ್ಲಿ ಎರಡು ಎಕ್ಸ್‌ಪ್ರೆಸ್‌ ರೈಲುಗಳು ನಿಲುಗಡೆಗೆ ನೈಋತ್ಯ ರೈಲ್ವೆ ಒಪ್ಪಿಗೆ ನೀಡಿದೆ.

ರೈಲಿಗೆ ಪೂಜೆ, ಇಂಜಿನ್‌ ಹತ್ತಿ ಘೋಷಣೆ

ಅರಸಾಳು ನಿಲ್ದಾಣಕ್ಕೆ ರೈಲು ಆಗಮಿಸುತ್ತಿದ್ದಂತೆ ಸ್ಥಳೀಯರು ಇಂಜಿನ್‌ಗೆ (Engine) ಹೂವು ಮುಡಿಸಿ, ಬಾಳೆ ಕಂದು ಕಟ್ಟಿ, ಪೂಜೆ ಸಲ್ಲಿಸಿದರು. ಇಂಜಿನ್‌ ಮೇಲೆ ಹತ್ತಿ ನಿಂತು ರೈಲ್ವೆ ಇಲಾಖೆ, ಸಂಸದ ಬಿ.ವೈ.ರಾಘವೇಂದ್ರ ಪರವಾಗಿ ಘೋಷಣೆ ಕೂಗಿದರು. ರೈಲಿನ ಮುಂದೆ ನಿಂತು ಫೋಟೊ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

ಐತಿಹಾಸ ನಿರ್ಧಾರ ಎಂದು ಖುಷಿ

ಅರಸಾಳು (Arasalu) ನಿಲ್ದಾಣದಲ್ಲಿ ರೈಲುಗಳ (Stations) ನಿಲುಗಡೆಗೆ ಒತ್ತಾಯಿಸಿ ಸ್ಥಳೀಯರು ಹಲವು ಬಾರಿ ಮನವಿ ಸಲ್ಲಿಸಿದ್ದರು. ಈ ಭಾಗದ ಜನರು ರೈಲು ಹತ್ತಲು ಆನಂದಪುರ ಅಥವಾ ಶಿವಮೊಗ್ಗಕ್ಕೆ ತೆರಳಬೇಕಿತ್ತು. ನಿಲ್ದಾಣವಿದ್ದರು ರೈಲುಗಳು ನಿಲ್ಲಿಸದೆ ಇರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗ ರೈಲುಗಳು ನಿಲುಗಡೆಗೆ ರೈಲ್ವೆ ಇಲಾಖೆ ಒಪ್ಪಿಗೆ ಸೂಚಿಸಿದೆ. ತೀರ್ಥಹಳ್ಳಿ, ಕೋಣಂದೂರು, ಹೊಸನಗರ ತಾಲೂಕಿನ ವಿವಿಧೆಡೆಯ ಜನರು ಅರಸಾಳು ನಿಲ್ದಾಣಕ್ಕೆ ಬಂದು ರೈಲು ಹತ್ತಬಹುದಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

Railway-Stoppage-at-Arasalu-Station-and-locals-celebrate

ಪ್ರವಾಸಿ ತಾಣಗಳಿಗೆ ಹೋಗಲು ಅನುಕೂಲ

ಅರಸಾಳು ಗ್ರಾಮದಲ್ಲಿ ರೈಲು ನಿಲುಗಡೆ ನೀಡಿದರೆ ಪ್ರವಾಸಿ ತಾಣಗಳಿಗೆ ತೆರಳುವುದಕ್ಕೆ ಅನುಕೂಲವಾಗಲಿದೆ. ಅರಸಾಳು ನಿಲ್ದಾಣ ಮಾಲ್ಗುಡಿ ನಿಲ್ದಾಣವಾಗಿ ಪರಿವರ್ತನೆಯಾಗಿದೆ. ಇದೆ ಪ್ರವಾಸಿ ತಾಣವಾಗಿದೆ. ಇನ್ನು, ಕೊಲ್ಲೂರು, ಹುಂಚ, ಸಿಗಂದೂರು ಸೇರಿದಂತೆ ವಿವಿಧ ಪ್ರವಾಸಿ ತಾಣಕ್ಕೆ ತೆರಳುವವರಿಗೆ ಈ ನಿಲ್ದಾಣದಿಂದ ಅನುಕೂಲವಾಗಲಿದೆ ಎಂದು ಜನರು ಖುಷಿಪಟ್ಟರು.

ಇದನ್ನೂ ಓದಿ – ಶಿವಮೊಗ್ಗ – ಬೆಂಗಳೂರು ಮಧ್ಯೆ ಸಂಚರಿಸುತ್ತಾ ವಂದೇ ಭಾರತ್‌ ರೈಲು? ಸಂಸದ ರಾಘವೇಂದ್ರ ಮೀಟಿಂಗ್‌, ಏನೇನು ಚರ್ಚೆಯಾಯ್ತು?

ಕುಂಸಿಯಲ್ಲಿ ಸಿಹಿ ಹಂಚಿ ಖುಷಿ

ಕುಂಸಿ ನಿಲ್ದಾಣದಲ್ಲಿ ತಾಳಗುಪ್ಪ – ಮೈಸೂರು ರೈಲು ನಿಲುಗಡೆ ನೀಡುತ್ತಿದ್ದಂತೆ ಸ್ಥಳೀಯರು ಖುಷಿಯಿಂದ ರೈಲಿಗೆ ಬಾಳೆ ಕಂದು ಕಟ್ಟಿ, ಹೂವು ಹಾಕಿದರು. ರೈಲ್ವೆ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಸಿಹಿ ಹಂಚಿದರು. ರೈಲು ನಿಲುಗಡೆಗೆ ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಮುಂದೆ ತಾಳಗುಪ್ಪ ಬೆಂಗಳೂರು ರೈಲು ನಿಲುಗಡೆ ಮಾಡಬೇಕು. ಅದರಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

ಯಾವ್ಯಾವ ರೈಲು, ಎಷ್ಟೊತ್ತು ನಿಲ್ಲುತ್ತೆ?

  • ಮೈಸೂರು ತಾಳಗುಪ್ಪ ರೈಲು (ರೈಲು ಸಂಖ್ಯೆ 16227) – ಅರಸಾಳು ನಿಲ್ದಾಣಕ್ಕೆ ಬೆಳಿಗ್ಗೆ 5:43ಕ್ಕೆ ಆಗಮಿಸಿ 5:44 ಗಂಟೆಗೆ ನಿರ್ಗಮಿಸಲಿದೆ.
  • ತಾಳಗುಪ್ಪ ಮೈಸೂರು ರೈಲು (16228) ಅರಸಾಳು ನಿಲ್ದಾಣಕ್ಕೆ ರಾತ್ರಿ 10:03ಕ್ಕೆ ಆಗಮಿಸಿ 10:04ಕ್ಕೆ ನಿರ್ಗಮಿಸಲಿದೆ

Read more

ಶಿವಮೊಗ್ಗದಲ್ಲಿ ಕಳೆಗಟ್ಟಿದ ವರ ಮಹಾಲಕ್ಷ್ಮಿ ಹಬ್ಬ, ಹೂವು, ಹಣ್ಣು ಖರೀದಿ ಜೋರು, ಎಷ್ಟಿದೆ ಬೆಲೆ?

Flower-Selling-During-varamahalakshami-festival.

SHIVAMOGGA LIVE NEWS | 25 AUGUST 2023 SHIMOGA : ನಗರದಲ್ಲಿ ವರಮಹಾಲಕ್ಷ್ಮಿ ಹಬ್ಬ (Varamahalakshmi Festival) ಕಳೆಗಟ್ಟಿದೆ. ಹಬ್ಬ ಆಚರಣೆಗೆ ಪೂಜೆ ಸಾಮಾಗ್ರಿ, ಹೂವು, ಹಣ್ಣು ಖರೀದಿ ಜೋರಾಗಿದೆ. ಗಾಂಧಿ ಬಜಾರ್‌, ಶಿವಪ್ಪನಾಯಕ ಪ್ರತಿಮೆ ಎದುರಿನ ರಸ್ತೆಯಲ್ಲಿ ಗುರುವಾರ ಮಧ್ಯಾಹ್ನದಿಂದಲೂ ಖರೀದಿ ಭರಾಟೆ ಜೋರಿದೆ. ಶ್ರಾವಣ ಮಾಸದ ಪ್ರಮುಖ ಹಬ್ಬವಾಗಿರುವುದರಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದಾರೆ. ದುಬಾರಿಯಾದರು ಖರೀದಿಗಿಲ್ಲ ಬ್ರೇಕ್‌ ಹಬ್ಬದ ಹಿನ್ನೆಲೆ ಹೂವು, ಹಣ್ಣು, ಪೂಜಾ ಸಾಮಾಗ್ರಿ ಬೆಲೆ ದುಬಾರಿಯಾಗಿದೆ. … Read more