ಮದುವೆಗೆ ವಾದ್ಯ ನುಡಿಸಲು ತೆರಳುತ್ತಿದ್ದವರಿಗೆ ಬುಳ್ಳಾಪುರ ಬಳಿ ಎದುರಾದ ಜವರಾಯ, ಇಬ್ಬರು ಸಾವು, ಆಗಿದ್ದೇನು?
SHIVAMOGGA LIVE NEWS | 3 APRIL 2024 SHIMOGA : ನಗರದ ಕಲ್ಯಾಣ ಮಂಟಪವೊಂದರಲ್ಲಿ ನಡೆಯುತ್ತಿದ್ದ ವಿವಾಹಕ್ಕೆ ವಾದ್ಯ ನುಡಿಸಲು ತೆರೆಳುತ್ತಿದ್ದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕು ಬುಳ್ಳಾಪುರದಲ್ಲಿ ಘಟನೆ ಸಂಭವಿಸಿದೆ. ನ್ಯಾಮತಿ ತಾಲೂಕು ಕುರುವ ಗ್ರಾಮದ ರಮೇಶ್ (19), ಹೊನ್ನಾಳಿ ತಾಲೂಕು ಸೊರಟೂರು ಗ್ರಾಮದ ಅಜಯ್ (23) ಮೃತರು. ಘಟನೆ ಸಂಭವಿಸಿದ್ದು ಹೇಗೆ? ಶಿವಮೊಗ್ಗದ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ವಾದ್ಯ ನುಡಿಸಲು ರಮೇಶ್, ಅಜಯ್ ಸೇರಿದಂತೆ ಐವರು ಮೂರು ಬೈಕ್‌ಗಳಲ್ಲಿ ತೆರಳುತ್ತಿದ್ದರು. … Read more