ಜಾತಿ ಸಮೀಕ್ಷೆ, ಹಿಂದೂ ಧರ್ಮಿಯರಿಗೆ ಶಾಸಕ ಚನ್ನಬಸಪ್ಪ ಸಲಹೆ, ಏನದು? ಇಲ್ಲಿದೆ ಸುದ್ದಿಗೋಷ್ಠಿಯ ಹೈಲೈಟ್ಸ್‌

SN-Channabasappa-Press-meet-in-Shimoga

ಶಿವಮೊಗ್ಗ: ಜಾತಿ ಸಮೀಕ್ಷೆಯಲ್ಲಿ (Caste Survey) ಹಿಂದೂ ಧರ್ಮಿಯರು ಪ್ರತ್ಯಕ್ಷವಾಗಿ ಪಾಲ್ಗೊಳ್ಳಬೇಕು. ಧರ್ಮದ ಕಾಲಂನಲ್ಲಿ ಹಿಂದೂ ಎಂದೇ ಬರೆಯಿಸಿ. ಜಾತಿ ಕಾಲಂನಲ್ಲಿ ಆಯಾಯ ಜಾತಿಯ, ಉಪ ಜಾತಿ ಕಾಲಂನಲ್ಲಿ ಉಪ ಜಾತಿಯ ಹೆಸರನ್ನು ಬರೆಯಿಸಬೇಕು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಮನವಿ ಮಾಡಿದರು. ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ವೀರಶೈವ, ಲಿಂಗಾಯತ ಸೇರಿ ಎಲ್ಲ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದು ಎಂದೇ ಬರೆಯಿಸಬೇಕು. ಇದರಲ್ಲಿ ನಿಜವಾದ ಭಾರತೀಯತೆ ಇದೆ. ಇದು ನಂಬಿಕೆಯ ಪ್ರಶ್ನೆಯಾಗಿದೆ ಎಂದರು. ಎಂಎಲ್‌ಎ ಸುದ್ದಿಗೋಷ್ಠಿಯ … Read more

‘ಪಾಕಿಸ್ತಾನ ಜಿಂದಾಬಾದ್‌’ ಘೋಷಣೆ ಕೇಸ್‌, ಭದ್ರಾವತಿಯಲ್ಲಿ ಏನೇನಾಯ್ತು? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

BJP-Holds-Protest-in-Bhadravathi-city-over-pro-pakistan-slogan

ಭದ್ರಾವತಿ: ಈದ್‌ ಮಿಲಾದ್‌ ಮೆರವಣಿಗೆ ಸಂದರ್ಭ ಪಾಕಿಸ್ತಾನ ಪರ (Pro Pakistan) ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಬೆನ್ನಿಗೆ ಭದ್ರಾವತಿಯಲ್ಲಿ ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದರು. ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದರು. ಇಡೀ ಪ್ರಕರಣ ಏನು? ಇಡೀ ದಿನ ಏನೇನಾಯ್ತು? ಇಲ್ಲಿದೆ ಡಿಟೇಲ್ಸ್‌. ಭದ್ರಾವತಿಯಲ್ಲಿ ಅದ್ಧೂರಿ ಈದ್‌ ಮೆರವಣಿಗೆ ಪ್ರವಾದಿ ಮೊಹಮ್ಮದ್‌ ಪೈಗಂಬರ್‌ ಜನ್ಮದಿನದ ಅಂಗವಾಗಿ ಅಂಜುಮನ್‌ ಕಮಿಟಿ ಭದ್ರಾವತಿಯಲ್ಲಿ ಈದ್‌ ಮಿಲಾದ್‌ ಮೆರವಣಿಗೆ ಹಮ್ಮಿಕೊಂಡಿತ್ತು. ಇದಕ್ಕಾಗಿ ನಗರದಲ್ಲಿ ಅಲಂಕಾರ ಮಾಡಲಾಗಿತ್ತು. ರಂಗಪ್ಪ ಸರ್ಕಲ್‌ನಿಂದ ತರೀಕೆರೆ ರಸ್ತೆಯ ಪಿಡಬ್ಲುಡಿ … Read more

ಶಿವಮೊಗ್ಗದಲ್ಲಿ ಬಿಗಿ ಬಂದೋಬಸ್ತ್‌ನಲ್ಲಿ ವಿವಾದಿತ ಬೇಲಿ ತೆರವು, ಅಂಗಡಿ ಮುಂಗಟ್ಟು ಬಂದ್

fencing-removed-at-edga-maidan-in-Shimoga-city.

ಶಿವಮೊಗ್ಗ : ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮೈದಾನಕ್ಕೆ ಹಾಕಿದ್ದ ವಿವಾದಿತ ಬೇಲಿಯನ್ನು (Fencing) ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ತೆರವು ಮಾಡಲಾಯಿತು. ಮುಂಜಾಗ್ರತಾ ಕ್ರಮವಾಗಿ ಸುತ್ತಮುತ್ತಲ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಮೈದಾನದ ಪ್ರವೇಶ ದ್ವಾರಕ್ಕೆ ಬೇಲಿ (Fencing) ಹಾಕಲಾಗಿತ್ತು. ಇದು ವಿವಾದಕ್ಕೆ ಕಾರಣವಾಗಿತ್ತು. ಹಿಂದೂ ಸಂಘಟನೆಗಳ ಕಾರ್ಯಕರ್ತರು ಬೇಲಿ ತೆರವಿಗೆ ಒತ್ತಾಯಿಸಿ ಪ್ರತಿಭಟಿಸಿದ್ದರು. ಬೇಲಿ ತೆರವು, ಬ್ಯಾರಿಕೇಡ್ ಅಳವಡಿಕೆ ಮೈದಾನಕ್ಕೆ ಹಾಕಿದ್ದ ಬೇಲಿಯನ್ನು (Fencing) ಮಹಾನಗರ ಪಾಲಿಕೆ ಸಿಬ್ಬಂದಿ ತೆರವು ಮಾಡಿದರು. ಮುಂಜಾಗ್ರತಾ … Read more

ಇಂದಿರಾ ಕ್ಯಾಂಟೀನ್‌ನಲ್ಲಿ ಮಿನಿಸ್ಟರ್‌ಗೆ ಹೊಟೇಲ್‌ ಊಟ ಪೂರೈಕೆ, ಒಂದು ದಿನದ ಬಳಿಕ ಹೊರಬಂತು ಸ್ಪಷ್ಟನೆ

Minister-Rahim-Khan-visit-to-Shimoga-Indira-Canteen

SHIMOGA NEWS, 26 NOVEMBER 2024 ಶಿವಮೊಗ್ಗ : ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ (Indira Canteen) ಪೌರಾಡಳಿತ ಸಚಿವ ರಹೀಂ ಖಾನ್‌ ಅವರಿಗೆ ಹೊಟೇಲ್‌ನಿಂದ ತರಿಸಿದ್ದ ಊಟ ಬಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದ್ದು ಸಾರ್ವಜನಿಕ ವಲಯದಲ್ಲಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಆಯುಕ್ತರು ಸ್ಪಷ್ಟನೆಗೆ ಮುಂದಾಗಿದ್ದಾರೆ. ಇಂದಿರಾ ಕ್ಯಾಂಟೀನ್‌ನಲ್ಲಿ ಹೊಟೇಲ್‌ ಊಟ ಸಚಿವ ರಹೀಂ ಖಾನ್‌ ಸೋಮವಾರ ಶಿವಮೊಗ್ಗ ನಗರಕ್ಕೆ ಭೇಟಿ ನೀಡಿದ್ದರು. ಬಿ.ಹೆಚ್‌.ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದ್ದರು. … Read more

‘ಸಾಧು, ಸಂತರ ನೇತೃತ್ವದಲ್ಲಿ ರಕ್ತ ಕ್ರಾಂತಿ’, ಸರ್ಕಾರಕ್ಕೆ ಈಶ್ವರಪ್ಪ ವಾರ್ನಿಂಗ್

KS-Eshwarappa-Press-meet-in-Shimoga

SHIMOGA NEWS, 4 NOVEMBER 2024 : ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ಕೂಡಲೆ ರದ್ದು ಮಾಡಬೇಕು. ಇಲ್ಲವಾದಲ್ಲಿ ರಾಜ್ಯದಲ್ಲಿ ಸಾಧು, ಸಂತರ (Priest) ನೇತೃತ್ವದಲ್ಲಿ ರಕ್ತ ಕ್ರಾಂತಿ ಆಗಲಿದೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಈಶ್ವರಪ್ಪ, ವಕ್ಫ್ ಆಸ್ತಿ ಎಂದು ರೈತರಿಗೆ ನೀಡಿರುವ ನೊಟೀಸ್ ಹಿಂಪಡೆಯಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ‌‌. ನೊಟೀಸ್ ಹಿಂಪಡೆಯುವುದು ಮುಖ್ಯವಲ್ಲ. ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು‌. ಸಿದ್ದರಾಮಯ್ಯ ಜಮೀರ್ ಅಹಮದ್ ಬಾಲ ಹಿಡಿದುಕೊಂಡು … Read more

‘ಅವರ ಅಪ್ಪನ ಮನೆಯ ಅಕ್ಕಿ ಕೇಳುತ್ತಿಲ್ಲ, ಕೇಂದ್ರದ ಅಕ್ಕಿ ಅಂದರೆ ಬಿಜೆಪಿಯ ಅಕ್ಕಿಯಲ್ಲ’

Congress-Protest-in-Shimoga-against-central-government

SHIVAMOGGA LIVE | 20 JUNE 2023 SHIMOGA : ಕೇಂದ್ರದ ಅಕ್ಕಿ (Rice) ಅಂದರೆ ಅದು ಬಿಜೆಪಿಯ ಅಕ್ಕಿಯಲ್ಲ. ಅವರ ಅಪ್ಪನ ಮನೆಯದ್ದು ಅಲ್ಲ. ಅದರಲ್ಲಿ ನಮ್ಮ ಹಣವು ಇದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್‌ ಆಕ್ರೋಶ ವ್ಯಕ್ತಪಡಿಸಿದರು. ಕೇಂದ್ರ ಸರ್ಕಾರ ತನ್ನ ಬಳಿ ದಾಸ್ತಾನು ಇರುವ ಅಕ್ಕಿಯನ್ನು (Rice) ಕೊಡಲು ನಿರಾಕರಿಸಿದ್ದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಶಿವಪ್ಪನಾಯಕ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಕಿಮ್ಮನೆ ರತ್ನಾಕರ್‌, ಕೇಂದ್ರ … Read more

ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮೆಟ್ಟಲ ಮೇಲೆ ಆಜಾನ್ ಕೂಗಿದ ಯುವಕ, ವಿಡಿಯೋ ವೈರಲ್, ದಾಖಲಾಯ್ತು ಕೇಸ್

shimoga dc office

SHIVAMOGGA LIVE NEWS | 19 MARCH 2023 SHIMOGA : ಜಿಲ್ಲಾಧಿಕಾರಿ ಕಚೇರಿ ಮೆಟ್ಟಿಲ ಮೇಲೆ ನಿಂತು ಯುವಕನೊಬ್ಬ ಆಜಾನ್ (Azan) ಕೂಗಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ, ವಿರೋಧ ಚರ್ಚೆ ಹುಟ್ಟುಹಾಕಿದೆ. ಈ ನಡುವೆ ಪೊಲೀಸ್ ಇಲಾಖೆ ಮುಂಜಾಗ್ರತ ಕ್ರಮವಾಗಿ ಪ್ರಕರಣ ದಾಖಲು ಮಾಡಿಕೊಂಡಿದೆ. ಏನಿದು ಘಟನೆ? ಆಜಾನ್ ಕುರಿತು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸಮಾವೇಶವೊಂದರಲ್ಲಿ ಹೇಳಿಕೆ ನೀಡಿದ್ದರು. ಇದನ್ನು ಖಂಡಿಸಿ ಮುಸ್ಲಿಂ ಸಮುದಾಯದ ಯುವಕರು ಮಾರ್ಚ್ 17ರಂದು ಜಿಲ್ಲಾಧಿಕಾರಿ … Read more

ಶಿವಮೊಗ್ಗದಲ್ಲಿ ವಿವಾದದ ಬಳಿಕ ಎಚ್ಚೆತ್ತ ಪಾಲಿಕೆ, ಅಶಾಂತಿ ಬೆನ್ನಿಗೆ ನೀತಿ ರೂಪಿಸಲು ಪ್ಲಾನ್

Shimoga-Flex-Controversy-Gopi-Circle

ಶಿವಮೊಗ್ಗ | ಫ್ಲೆಕ್ಸ್ (flex) ವಿವಾದದಿಂದಾಗಿ ನಗರದಲ್ಲಿ ಶಾಂತಿ ಭಂಗ ಉಂಟಾಗಿದೆ. ಕಳೆದ ಒಂದು ವಾರದಿಂದ ಶಿವಮೊಗ್ಗ ನಗರದಲ್ಲಿ (shimoga city) ನಿಷೇಧಾಜ್ಞೆ (prohibitory order) ಜಾರಿಯಲ್ಲಿದೆ. ಇದಕ್ಕೆಲ್ಲ ಕಾರಣ ಮಹಾನಗರ ಪಾಲಿಕೆಯ (mahanagara palike) ನೀತಿ. ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್ ಅಳವಡಿಸುವ ಸಂಬಂಧ ಸರಿಯಾದ ನಿಯಮ ರೂಪಿಸದೆ ಇರುವುದೆ ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿದೆ. ಯಾವುದೇ ಹುಟ್ಟುಹಬ್ಬ, ಹಬ್ಬಹರಿದಿನ, ಜಾತ್ರೆ, ಪುಣ್ಯಸ್ಮರಣೆ ಇದ್ದರೂ ಶಿವಮೊಗ್ಗದ ಗಲ್ಲಿಗಲ್ಲಿಗಳೂ, ಪ್ರಮುಖ ಸರ್ಕಲ್‌ಗಳು ಫ್ಲೆಕ್ಸ್ ಮಯವಾಗುತ್ತವೆ. ಇದರಲ್ಲೂ ರಾಜಕಾರಣಿಗಳ ಅಬ್ಬರ ಜೋರು. … Read more

ಗೋಪಿ ಸರ್ಕಲ್’ನಲ್ಲಿ ಪಾಲಿಕೆ ಹೆಸರಲ್ಲಿ ಫ್ಲೆಕ್ಸ್ ಅಳವಡಿಸಿದ್ದು ಪಾಲಿಕೆಗೇ ಗೊತ್ತಿಲ್ಲ, ತನಿಖೆ ಶುರು

Shimoga-Flex-Controversy-Gopi-Circle

ಶಿವಮೊಗ್ಗ| ಒಂದೆಡೆ ಫ್ಲೆಕ್ಸ್ ವಿಚಾರವಾಗಿ ಶಿವಮೊಗ್ಗ ನಗರದಲ್ಲಿ (SHIMOGA CITY) ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆ  (144 SECTION) ಜಾರಿಗೊಳಿಸಲಾಗಿದೆ. ಈ ನಡುವೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ವೇಳೆ ಮಹಾನಗರ ಪಾಲಿಕೆಗೇ ಗೊತ್ತಿಲ್ಲದೆ ಪಾಲಿಕೆ ಹೆಸರಿನಲ್ಲಿ ಫ್ಲೆಕ್ಸ್  (FLEX CONTROVERSY) ಕಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಾನಗರ ಪಾಲಿಕೆ ಹೆಸರಿನಲ್ಲಿ ಶಿವಮೊಗ್ಗ ನಗರದ ಗೋಪಿ ಸರ್ಕಲ್ ನಲ್ಲಿ ಬೃಹತ್ ಫ್ಲೆಕ್ಸ್ ಅಳವಡಿಸಲಾಗಿತ್ತು. ಆದರೆ ಈ ಫ್ಲೆಕ್ಸ್ ಅಳವಡಿಸಿದ್ದು ಯಾರು ಅನ್ನವುದು ಪಾಲಿಕೆಗೆ ಗೊತ್ತಿಲ್ಲ. ಹಾಗಾಗಿ ಪರಿಶೀಲನೆ ಕಾರ್ಯ … Read more

ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಹಾಕಿದವರ ಮೇಲೂ ಬಿತ್ತು ಕೇಸ್

150822-Lati-Charge-in-Shimoga-AA-Circle

ಶಿವಮೊಗ್ಗ| ಸಾವರ್ಕರ್ ಫ್ಲೆಕ್ಸ್ ವಿವಾದದಿಂದಾಗಿ (CONTROVERSY) ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಅಮೀರ್ ಅಮಹದ್ ಸರ್ಕಲ್’ನಲ್ಲಿ ಸಾವರ್ಕರ್ ಫ್ಲೆಕ್ಸ್ ಕಿತ್ತೊಗೆದವರ ಮೇಲಷ್ಟೆ ಅಲ್ಲ, ಫ್ಲೆಕ್ಸ್ ಅಳವಡಿಸಿದವರ ವಿರುದ್ಧವು ಪ್ರಕರಣ ದಾಖಲಾಗಿದೆ. ಎಲ್ಲರೂ ಅಪರಿಚಿತರೆ..! ಅಮೀರ್ ಅಮಹದ್ ಸರ್ಕಲ್ ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಗೆ ಒಳಪಡಲಿದೆ. ಸಾವರ್ಕರ್ ಫ್ಲೆಕ್ಸ್ ಅಳವಡಿಕೆ ಮತ್ತು ಅದನ್ನು ತೆರವು ಮಾಡಿದವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ. ಆದರೆ ಎರಡು ಪ್ರತ್ಯೇಕ ಎಫ್ಐಆರ್’ಗಳಲ್ಲಿ ಎಲ್ಲರೂ ಅಪರಿಚಿತರು ಎಂಬಂತೆ ತೋರಿಸಲಾಗಿದೆ. … Read more