ಆನಂದಪುರ ಹೋಬಳಿಯ 300ಕ್ಕೂ ಹೆಚ್ಚು ರೈತರಿಗೆ ನೊಟೀಸ್

Rathnakar-Honagodu-Press-Meet-about-notice-to-farmers

SHIVAMOGGA LIVE NEWS | SAGARA | 8 ಜೂನ್ 2022 ಸಾಗರ ತಾಲೂಕು ಆನಂದಪುರ ಹೋಬಳಿಯ 300ಕ್ಕೂ ಹೆಚ್ಚು ರೈತರಿಗೆ ಅರಣ್ಯ ಇಲಾಖೆ ನೊಟೀಸ್ ನೀಡಿದೆ. ಈ ನೊಟೀಸ್ ಹಿಂಪಡೆಯದೆ ಹೋದರೆ ಬಿಜೆಪಿ ಶಾಸಕರ ಮನೆ ಮುಂದೆ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ರತ್ನಾಕರ ಹೊನಗೋಡು ಎಚ್ಚರಿಸಿದರು. ಸಾಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರತ್ನಾಕರ ಹೊನಗೋಡು ಅವರು, ಹಲವು ವರ್ಷಗಳಿಂದ ರೈತರು ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿದ್ದಾರೆ. ಈಗ ಅರಣ್ಯ ಇಲಾಖೆಯು ಏಕಾಏಕಿ … Read more

ಇನ್ಮುಂದೆ ಪ್ರತಿ ಜೋರು ಮಳೆಗು ಮುಳುಗುತ್ತೆ ವಿದ್ಯಾನಗರ, ಶಾಂತಮ್ಮ ಲೇಔಟ್, ಕಾರಣವೇನು?

Shanthamma-Layout-to-be-drowned-in-rainy-season

SHIVAMOGGA LIVE NEWS | RAIN | 28 ಮೇ 2022 ಶಿವಮೊಗ್ಗ ನಗರದಲ್ಲಿ ಸಣ್ಣದೊಂದು ಮಳೆಯಾದರೂ (RAIN) ಸಾಕು ಮೊದಲು ಮುಳುಗುವ ಬಡಾವಣೆಗಳ ಪೈಕಿ ಶಾಂತಮ್ಮ ಲೇಔಟ್ ಕೂಡ ಒಂದಾಗಿದೆ. ಪ್ರತಿಷ್ಠಿತ ಬಡಾವಣೆಯಾಗಿದ್ದ ಶಾಂತಮ್ಮ ಲೇಔಟ್’ನಲ್ಲಿ ಇನ್ಮುಂದೆ ಪ್ರತಿ ಮಳೆಗಾಲದಲ್ಲೂ ಆತಂಕದಲ್ಲೇ ಸಮಯ ದೂಡಬೇಕಾಗುತ್ತದೆ. ಪ್ರಭಾವಿ ಅನಿಸಿಕೊಂಡಿರುವ ರಾಜಕಾರಣಿಗಳು, ಉದ್ಯಮಿಗಳು ಇಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಆದರೂ ಮುಳುಗಡೆ ಭೀತಿಯಿಂದ ಇಲ್ಲಿಯ ನಿವಾಸಿಗಳನ್ನು ಪಾರಲು ಮಾಡಲು ಸಾಧ್ಯವಾಗುತ್ತಿಲ್ಲ. ಶಾಂತಮ್ಮ ಲೇಔಟ್ ಮುಳುಗಲು ಪ್ರಮುಖ ಕಾರಣವೇನು? ಈ ಸಮಸ್ಯೆಗೆ … Read more

ರಾತ್ರಿ ಹೊಟೇಲ್’ನಲ್ಲಿ ಸಿಲಿಂಡರ್ ಸ್ಪೋಟ, ಸ್ಥಳಕ್ಕೆ ಗೃಹ ಸಚಿವರ ಭೇಟಿ

cylinder-blast-at-Hosangara-Chikkapete-Hotel

SHIVAMOGGA LIVE NEWS | BLAST | 27 ಮೇ 2022 ಹೊಟೇಲ್ ಒಂದರಲ್ಲಿ ಸಿಲಿಂಡರ್ ಸ್ಪೋಟಗೊಂಡು (BLAST) ಹಾನಿ ಸಂಭವಿಸಿದೆ. ರಾತ್ರಿ ಘಟನೆ ಸಂಭವಿಸಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಥಳಕ್ಕೆ ಭೇಟಿ ನೀಡಿದ್ದರು. ಹೊಸನಗರ ತಾಲೂಕಿನ ನಗರ ಹೋಬಳಿಯ ಚಿಕ್ಕಪೇಟೆಯ ಹೊಟೇಲ್ ಒಂದರಲ್ಲಿ ಸಿಲಿಂಡರ್ ಸ್ಪೋಟ ಸಂಭವಿಸಿದೆ. ಹೊಟೇಲ್’ಗೆ ಹಾನಿಯಾಗಿದೆ. ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ ಎಂದು ತಿಳಿದು ಬಂದಿದೆ. ಗೃಹ ಸಚಿವರ ಭೇಟಿ ಘಟನೆ ಕುರಿತು ಮಾಹಿತಿ ಲಭ್ಯವಾಗುತ್ತಿದ್ದಂತೆ ಗೃಹ ಸಚಿವ … Read more

ಶಿವಮೊಗ್ಗ ತುಂಗಾ ನದಿ ಸೇತುವೆ ಕೆಳಗೆ ಯುವಕನ ಮೃತದೇಹ ಪತ್ತೆ

Youth-Body-Found-in-tunga-River

SHIVAMOGGA LIVE NEWS | DEATH | 24 ಮೇ 2022 ತುಂಗಾ ನದಿ ಸೇತುವೆ ಕೆಳಗೆ ಯುವಕನೊಬ್ಬನ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಮೃತದೇಹವನ್ನು ಮೇಲೆತ್ತಿದ್ದಾರೆ. ಇವತ್ತು ಬೆಳಗ್ಗೆ ಹೊಳೆಯಲ್ಲಿ ಮೃತದೇಹ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಏನಿದು ಪ್ರಕರಣ? ಕಳೆದ ರಾತ್ರಿ ಶಿವಮೊಗ್ಗದ ಎನ್.ಸಿ.ಸಿ ಕ್ಯಾಂಪ್ ಸಮೀಪ ರಸ್ತೆ ಬದಿಯಲ್ಲಿ ಯುವಕನೊಬ್ಬ ಪತ್ತೆಯಾಗಿದ್ದ. ಗಸ್ತು ತಿರುಗುತ್ತಿದ್ದ ಪೊಲೀಸರು ಆತನ ವಿವರ ಕೇಳಿದ್ದಾರೆ. ಹಿರಿಯೂರಿನ ಬಾಲಕೃಷ್ಣ ಎಂದು ತಿಳಿಸಿದ್ದ ಎಂದು … Read more

ಶಿವಮೊಗ್ಗದಲ್ಲಿ ಒಂದೇ ದಿನ 150ಕ್ಕೂ ಹೆಚ್ಚು ಜನರನ್ನು ಕಾಪಾಡಿದ ‘ಆಪತ್ಭಾಂಧವರು’, ಯಾರದು?

Fire-department-rescue-operation-Special-News

SHIVAMOGGA LIVE NEWS | FIRE DEPARTMENT | 24 ಮೇ 2022 ಭಾರಿ ಮಳೆ. ಚರಂಡಿಗಳು ತುಂಬಿ ರಸ್ತೆಗಳು ಜಲಾವೃತವಾಗಿತ್ತು. ಮನೆಗಳಿಗೂ ನೀರು ನುಗ್ಗಿತ್ತು. ಮನೆ ಒಳಗಿದ್ದವರಿಗೆ ಹೊರಗೆ ಬರಲು ಭಯ. ಒಳಗಿರಲು ಆತಂಕ. ಇಂತಹ ಸಂದರ್ಭ ಜನರ ನೆರವಿಗೆ ಬಂದಿದ್ದೆ ಶಿವಮೊಗ್ಗ ಅಗ್ನಿಶಾಮಕ ಸಿಬ್ಬಂದಿ. ಮೇ 19ರಂದು ಶಿವಮೊಗ್ಗ ನಗರ ಅಕ್ಷರಶಃ ಮುಳುಗಿತ್ತು. ಸ್ಮಾರ್ಟ್ ಸಿಟಿ ಅವಾಂತರ, ಪಾಲಿಕೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿರುವ ಹಿನ್ನೆಲೆ ನಗರದ ಬಹು ಬಡಾವಣೆಗಳು ಜಲಾವೃತವಾಗಿದ್ದವು. ಇಂತಹ ಸಂದರ್ಭ ಅಗ್ನಿಶಾಮಕ … Read more

ಹೊಳೆಹೊನ್ನೂರು ಬಳಿ ಭದ್ರಾ ನಾಲೆಯಲ್ಲಿ ಈಜಲು ಹೋದ ಮಕ್ಕಳು ನಾಪತ್ತೆ

Children-Drowned-in-Bhadra-Canal

SHIVAMOGGA LIVE NEWS | DROWN | 12 ಮೇ 2022 ಭದ್ರಾ ನಾಲೆಯಲ್ಲಿ ಈಜಲು ಹೋಗಿದ್ದ ಇಬ್ಬರು ಮಕ್ಕಳು ನಾಪತ್ತೆಯಾಗಿದ್ದಾರೆ. ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಚಂದನಾ (14) ಮತ್ತು ಹರ್ಷ (10) ನಾಪತ್ತೆಯಾಗಿದ್ದಾರೆ. ಹೊಳೆಹೊನ್ನೂರು ಸಮೀಪದ ಅಗರದಹಳ್ಳಿ ಬಳಿ ಭದ್ರಾ ಬಲದಂಡೆ ನಾಲೆಯಲ್ಲಿ ಮಕ್ಕಳು ತಮ್ಮ ದೊಡ್ಡಪ್ಪನೊಂದಿಗೆ ಈಜಲು ತೆರಳಿದ್ದರು. ಈ ಸಂದರ್ಭ ನಾಪತ್ತೆಯಾಗಿದ್ದಾರೆ. ರಜೆಗೆ ದೊಡ್ಡಪ್ಪನ ಮನೆಗೆ ಬಂದಿದ್ದರು ಮಕ್ಕಳು ಶಿವಮೊಗ್ಗ ತಾಲೂಕು ಮುದುವಾಲ ಗ್ರಾಮದವರು. ಶಾಲೆಗೆ ರಜೆ … Read more

ಖಾಸಗಿ ಶಾಲೆಯ ಅಡುಗೆ ಮನೆಯಲ್ಲಿ ಗ್ಯಾಲ್ ಲೀಕ್, ಪ್ರಾಣ ಪಣಕ್ಕಿಟ್ಟು ಕಾರ್ಯಾಚರಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

Gas-Leakage-in-Shimoga-Mandara-school

SHIVAMOGGA LIVE NEWS | 19 ಮಾರ್ಚ್ 2022 ಖಾಸಗಿ ಶಾಲೆಯೊಂದರ ವಸತಿ ನಿಲಯದ ಅಡುಗೆ ಮನೆಯಲ್ಲಿ ಗ್ಯಾಸ್ ಲೀಕ್ ಆಗಿದ್ದು ಕೆಲಕಾಲ ಆತಂಕಕ್ಕೆ ಕಾರಣವಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೊಡ್ಡ ಅನಾಹುತ ತಪ್ಪಿಸಿದ್ದಾರೆ. ಶಿವಮೊಗ್ಗದ ಅನುಪಿನಕಟ್ಟೆಯಲ್ಲಿ ಖಾಸಗಿ ಶಾಲೆಯೊಂದರ ವಸತಿ ನಿಲಯದಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಅಡುಗೆ ಮನೆಯಲ್ಲಿ ಬಳಕೆ ಮಾಡುತ್ತಿದ್ದ ಅಡುಗೆ ಅನಿಲ ಸೋರಿಕೆ ಆಗಿದೆ. ಗ್ಯಾಸ್ ವಾಸನೆ ಎಂದು ಗೊತ್ತಾಗುತ್ತಿದ್ದ ಹಾಗೆ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿ ಮಾಹಿತಿ ನೀಡಲಾಗಿತ್ತು. ಪ್ರಾಣ … Read more

ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಫೆಬ್ರವರಿ 2022 ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಉದ್ಯಮಿ ರಂಗನಾಥ ಎಂಬುವವರು ವಂಚನೆ ಒಳಗಾಗಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ಚಿಕ್ಕಣ್ಣ ಎಂಬಾತ ವಂಚನೆ ಮಾಡಿದ್ದಾನೆ. ಆತ ಆಂಧ್ರದ ಅನಂತಪುರ ಜಿಲ್ಲೆಯ ಹೇಮಾವತಿ ತಾಲೂಕಿನವನು. ವಂಚನೆ ಆಗಿದ್ದು ಹೇಗೆ? 2019ರಲ್ಲಿ ರಂಗನಾಥ ಅವರಿಗೆ ಚಿಕ್ಕಣ್ಣ ಎಂಬುವವರ ಪರಿಚಯವಾಗಿತ್ತು. … Read more

ಶಿವಮೊಗ್ಗ ಜಿಲ್ಲೆಯಲ್ಲಿ ಮತ್ತೊಂದು KFD ಪ್ರಕರಣ, ಶಿಕ್ಷಕರೊಬ್ಬರಿಗೆ ಸೋಂಕು ದೃಢ

Shimoga Map Graphics

ಶಿವಮೊಗ್ಗದ ಲೈವ್.ಕಾಂ | SHIMOGA NEWS | 28 ಜನವರಿ 2022 ಶಿವಮೊಗ್ಗದಲ್ಲಿ ಒಂದೇ ತಿಂಗಳಲ್ಲಿ ಎರಡನೇ KFD ಪ್ರಕರಣ ಪತ್ತೆಯಾಗಿದೆ. ಶಿಕ್ಷಕರೊಬ್ಬರಿಗೆ KFD ಸೋಂಕು (ಮಂಗನ ಕಾಯಿಲೆ) ದೃಢವಾಗಿದೆ. ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆಯನೂರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜ್ವರದಿಂದ ಬಳಲುತ್ತಿದ್ದ ಶಿಕ್ಷಕ, ಶಿವಮೊಗ್ಗದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ರಕ್ತದ ಮಾದರಿಯನ್ನು KFD ಲ್ಯಾಬ್’ಗೆ ಕಳುಹಿಸಲಾಗಿತ್ತು. KFD ಪಾಸಿಟಿವ್ ಬಂದ ಹಿನ್ನೆಲೆ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Read more

ಶಿವಮೊಗ್ಗದ ಆಟೋ ಕಾಂಪ್ಲೆಕ್ಸ್’ನಲ್ಲಿ ಬೆಂಕಿ, ಧಗಧಗ ಉರಿದು ಹೋದವು ಮೂರು ಕಾರು, ಬಸ್ಸಿಗೂ ಹಾನಿ

240122 Fire At Shimoga Auto Complex

ಶಿವಮೊಗ್ಗದ ಲೈವ್.ಕಾಂ | SHIMOGA NEWS | 24 ಜನವರಿ 2022 ಶಿವಮೊಗ್ಗ ನಗರದಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಸಿದೆ. ಘಟನೆಯಲ್ಲಿ ಮೂರು ಕಾರು ಸುಟ್ಟು ಕರಕಲಾಗಿವೆ. ಬಸ್ ಒಂದಕ್ಕೆ ಭಾಗಶಃ ಹಾನಿಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ದೊಡ್ಡ ಅವಘಡ ತಪ್ಪಿಸಿದ್ದಾರೆ. ಆಟೋ ಕಾಂಪ್ಲೆಕ್ಸ್ ಮೊದಲ ತಿರುವಿನಲ್ಲಿ ನಿಲ್ಲಿಸಿದ್ದ ಕಾರುಗಳು, ಬಸ್ಸಿಗೆ ಬೆಂಕಿ ಹೊತ್ತುಕೊಂಡು ಉರಿದಿದೆ. ಮೂರು ಕಾರುಗಳು ಸಂಪೂರ್ಣ ಸುಟ್ಟು ಹೋಗಿವೆ. ರಸ್ತೆ ಪಕ್ಕ ನಿಂತಿದ್ದ ಕಾರುಗಳು ರಾತ್ರಿ ಆಟೋ ಕಾಂಪ್ಲೆಕ್ಸ್’ನಲ್ಲಿ ನಿಂತಿದ್ದ … Read more