ಗಾಂಧಿ ಬಜಾರ್‌ನಲ್ಲಿ ಹೇಗಿತ್ತು ಗಣಪತಿ ಮೆರವಣಿಗೆ? ಇಲ್ಲಿದೆ ಫೋಟೊ ಮಾಹಿತಿ

Hindu-Mahasabha-Ganesh-in-Gandhi-Bazaar.

ಶಿವಮೊಗ್ಗ: ಗಾಂಧಿ ಬಜಾರ್‌ನಲ್ಲು ಹಿಂದೂ ಮಹಾಸಭಾ ಗಣಪತಿಯ (Ganesh) ರಾಜಬೀದಿ ಉತ್ಸವ ಅದ್ಧೂರಿಯಾಗಿ ನಡೆಯಿತು. ದೊಡ್ಡ ಸಂಖ್ಯೆಯ ಜನರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡು, ಗಣೇಶನ ದರ್ಶನ ಪಡೆದರು. ಭಾರಿ ಸಂಖ್ಯೆಯ ಜನರು ಈ ಬಾರಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಬಾರಿ ಮಹಿಳೆಯರು, ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ. ಬಿಗಿ ಬಂದೋಬಸ್ತ್‌ ಗಾಂಧಿ ಬಜಾರ್‌ನಲ್ಲಿ ಈ ಬಾರಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಲಾಗಿತ್ತು. ಸುನ್ನಿ ಜಾಮಿಯ ಮಸೀದಿ ಮುಂಭಾಗ ಆರ್‌ಎಎಫ್‌, ಕೆಎಸ್‌ಆರ್‌ಪಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. … Read more

ಶಿವಮೊಗ್ಗದ ಗಾಂಧಿ ಬಜಾರ್‌ನಲ್ಲಿ ಜನವೋ ಜನ, ಹೇಗಿತ್ತು ಹಬ್ಬದ ಖರೀದಿ?

Gandhi-Bazaar-during-Ganesha-Chaturthi.

ಶಿವಮೊಗ್ಗ: ಗೌರಿ – ಗಣೇಶ ಹಬ್ಬದ ಹಿನ್ನೆಲೆ ಶಿವಮೊಗ್ಗದಲ್ಲಿ ವ್ಯಾಪಾರ, ವಹಿವಾಟು ಬಿರುಸಾಗಿದೆ. ಗಾಂಧಿ ಬಜಾರ್‌ನಲ್ಲಿ (Gandhi Bazaar) ಬೆಳಗ್ಗೆಯಿಂದ ಸಂಜೆವರೆಗೆ ಜನ ಜಂಗುಳಿ ಇತ್ತು. ಹೂವು, ಹಣ್ಣು, ತರಕಾರಿ, ಅಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿ ಖರೀದಿ ಜೋರಿತ್ತು. ಹಬ್ಬದ ಖರೀದಿ ಬಲು ದುಬಾರಿ ಹಬ್ಬದ ಸಂದರ್ಭ ಹೂವು, ಹಣ್ಣು, ತೆಂಗಿನಕಾಯಿ, ತರಕಾರಿ ದರ ದುಬಾರಿಯಾಗಿದೆ. ಗುಣಮಟ್ಟದ ಆಧಾರದಲ್ಲಿ ಹೂವಿನ ದರದಲ್ಲಿ ಏರಿಳಿತವಿದೆ. ತೆಂಗಿನಕಾಯಿ ದರ ₹50 ಮತ್ತು ಮೇಲ್ಪಟ್ಟಿದೆ. ತರಕಾರಿ ದರವು ಜೇಬು ಸುಡುವಂತಿದೆ. ದುಬಾರಿ … Read more

ಗಾಂಧಿ ಬಜಾರ್‌ ಬಟ್ಟೆ ಮಾರುಕಟೆಯಿಂದ ಹೊರ ಬಂದ ಕೆಲಸಗಾರನಿಗೆ ಕಾದಿತ್ತು ಆಘಾತ

021023 Gandhi Bazaar during 144 section in Shimoga

ಶಿವಮೊಗ್ಗ: ಗಾಂಧಿ ಬಜಾರ್‌ನ ಬಸವೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಪಾರ್ಕಿಂಗ್‌ ಜಾಗದಲ್ಲಿ ನಿಲ್ಲಿಸಿದ್ದ ಸ್ಪ್ಲೆಂಡರ್‌ ಪ್ಲಸ್‌ ಬೈಕ್‌ ಕಳ್ಳತನವಾಗಿದೆ. ಬಟ್ಟೆ ಮಾರುಕಟ್ಟೆಯಲ್ಲಿ (Cloth Market) ಕೆಲಸ ಮಾಡುವ ಸುಲೇಮನ್‌ ಖಾನ್‌ ಎಂಬುವವರಿಗೆ ಸೇರಿದ ಬೈಕ್‌ ನಾಪತ್ತೆಯಾಗಿದೆ ಎಂದು ದೂರು ನೀಡಿದ್ದಾರೆ. ಸಂಜೆ 4.30ರ ಹೊತ್ತಿಗೆ ಸುಲೇಮಾನ್‌ ಖಾನ್‌ ತಮ್ಮ ಬೈಕ್‌ ಅನ್ನು ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿ ಬಟ್ಟೆ ಮಾರುಕಟ್ಟೆಗೆ ತೆರಳಿದ್ದರು. ರಾತ್ರಿ 9.30ಕ್ಕೆ ಹಿಂತಿರುಗಿದಾಗ ಬೈಕ್‌ ಕಳ್ಳತನವಾಗಿತ್ತು. ಘಟನೆ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ … Read more

ವ್ಯಾಪಾರಿಗೆ ಇರಿತ, ಶಿವಮೊಗ್ಗದ ಗಾಂಧಿ ಬಜಾರ್‌ ಬಂದ್‌, ಇಲ್ಲಿದೆ ಘಟನೆಯ ಕಂಪ್ಲೀಟ್‌ ಡಿಟೇಲ್ಸ್‌

attack-against-gandhi-bazaar-merchant

SHIVAMOGGA LIVE NEWS, 15 JANUARY 2025 ಶಿವಮೊಗ್ಗ : ವಿಳಾಸ ಕೇಳುವ ನೆಪದಲ್ಲಿ ವ್ಯಾಪಾರಿಯೊಬ್ಬನ (Merchant) ಮೇಲೆ ಚಾಕುವಿನಿಂದ ಇರಿಯಲಾಗಿದೆ. ಇದರಿಂದ ಆಕ್ರೋಶಗೊಂಡ ಗಾಂಧಿ ಬಜಾರ್‌ ವರ್ತಕರು ಇವತ್ತು ಅಂಗಡಿಗಳನ್ನು ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು. ಅಲ್ಲದೆ ಜಿಲ್ಲಾ ರಕ್ಷಣಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಇನ್ನು, ಘಟನೆಯ ಸಿಸಿಟಿವಿ ವಿಡಿಯೋ ವೈರಲ್‌ ಆಗಿದೆ. ಅಂಗಡಿಯೊಂದರ ಮುಂದಿರುವ ಸಿಸಿ ಕ್ಯಾಮರಾದಲ್ಲಿ ಗಲಾಟೆಯ ದೃಶ್ಯ ಸೆರೆಯಾಗಿತ್ತು. ಇದನ್ನೂ ಓದಿ » ಶಿವಮೊಗ್ಗ ನಂದನ್‌ ಇನ್ನಿಲ್ಲ, ಅವರ ಬಗ್ಗೆ ಗೊತ್ತಿರಬೇಕಾದ … Read more

ಗಾಂಧಿ ಬಜಾರ್‌ನ ಅಂಗಡಿಯಲ್ಲಿ ಬೆಂಕಿ, ಲಕ್ಷ ಲಕ್ಷದ ವಸ್ತುಗಳು ಆಹುತಿ

Gandhi-Bazaar-shop-incident.

SHIMOGA NEWS, 26 NOVEMBER 2024 ಶಿವಮೊಗ್ಗ : ಗಾಂಧಿ ಬಜಾರ್‌ನ ಜೈ ಅಂಬೆ ಮಾರ್ಕೆಟಿಂಗ್‌ ಅಂಗಡಿಯಲ್ಲಿ ಕಳೆದ ರಾತ್ರಿ ಅಗ್ನಿ ಅವಘಡ ಸಂಭವಿಸಿದೆ. ಸುಮಾರು 6 ಲಕ್ಷ ರೂ. ನಷ್ಟವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಗಾಂಧಿ ಬಜಾರ್‌ 1ನೇ ಅಡ್ಡರಸ್ತೆಯಲ್ಲಿರುವ ಜೈ ಅಂಬೆ ಮಾರ್ಕೆಟಿಂಗ್‌ ಸಂಸ್ಥೆಯಲ್ಲಿ ಗ್ಯಾಸ್‌ ಸ್ಟೌ, ಫ್ಯಾನ್‌ಗಳು ಸೇರಿದಂತೆ ವಿವಿಧ ಉಪಕರಣ ಮಾರಾಟ ಮಾಡಲಾಗುತ್ತಿತ್ತು. ಕಳೆದ ರಾತ್ರಿ ಅಂಗಡಿಯ ಮೇಲ್ಭಾಗದ ಗೋಡೋನ್‌ನಲ್ಲಿ ಧಿಡೀರ್‌ ಬೆಂಕಿ ಕಾಣಿಸಿಕೊಂಡಿದೆ. ಅಲ್ಲಿದ್ದ ಹಲವು ವಸ್ತುಗಳು ಸುಟ್ಟು ಹೋಗಿವೆ. … Read more

ಗಾಂಧಿ ಬಜಾರ್‌ನಲ್ಲಿ ಹಫ್ತಾಗಾಗಿ ಹಣ್ಣಿನ ಅಂಗಡಿಗೆ ಬೆಂಕಿ

crime name image

FATAFAT NEWS, 3 NOVEMBER 2024 ಇದನ್ನೂ ಓದಿ » ಭಾರಿ ಮಳೆಗೆ ಬೆಳೆ ಹಾನಿ, ಶಾಸಕ ವಿಜಯೇಂದ್ರ ಭೇಟಿ ಇದನ್ನೂ ಓದಿ » ಮಲೆನಾಡ ರೈತರೊಂದಿಗೆ ವಿಧಾನಸೌಧದಲ್ಲಿ ಮೀಟಿಂಗ್‌, ಏನೆಲ್ಲ ಚರ್ಚೆಯಾಯ್ತು? ಇದನ್ನೂ ಓದಿ » ಶಿವಮೊಗ್ಗದಲ್ಲಿ ಇವತ್ತು ಬಿಸಿಲ ಧಗೆ, ಅಲ್ಲಲ್ಲಿ ಸಾಧಾರಣ ಮಳೆ ಸಾಧ್ಯತೆ

ಗಾಂಧಿ ಬಜಾರ್‌ನ ಅಂಗಡಿಯಲ್ಲಿ ಹಣದ ಬಂಡಲ್‌ಗಳ ಕಳ್ಳತನ

041023 Gandhi Bazaar In Shimoga.webp

SHIMOGA NEWS, 16 OCTOBER 2024 : ಅಂಗಡಿಯೊಂದರ (Shop) ಬೀಗ ಮುರಿದು ಒಳ ನಗ್ಗಿದ ಕಳ್ಳರು ನೋಟಿನ ಬಂಡಲ್‌ಗಳು ಮತ್ತು ಬೆಳ್ಳಿ ನಾಣ್ಯಗಳನ್ನು ಕಳವು ಮಾಡಿದ್ದಾರೆ. ಶಿವಮೊಗ್ಗದ ಗಾಂಧಿ ಬಜಾರ್‌ನ ವೀರಭದ್ರಪ್ಪ ಅಂಡ್‌ ಸನ್ಸ್‌ ಪ್ರಾವಿಷನ್‌ ಸ್ಟೋರ್‌ನಲ್ಲಿ ಕಳ್ಳತನವಾಗಿದೆ. ಮಾಲೀಕರು ಬೆಳಗ್ಗೆ ಅಂಗಡಿ ಬಾಗಿಲು ತೆರೆದಾಗ ಕ್ಯಾಶ್‌ ಡ್ರಾಗಳು ಓಪನ್‌ ಆಗಿದ್ದವು. ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಬೆಳಕಿಗೆ ಬಂದಿದೆ. ಪಕ್ಕದ ಕಟ್ಟಡದಿಂದ ಅಂಗಡಿಯ ಮೂರನೇ ಮಹಡಿಗೆ ನುಗ್ಗಿರುವ ಕಳ್ಳರು ಗ್ರಿಲ್‌ ಗೇಟ್‌ನ ಬೀಗ ಒಡೆದು ಅಂಗಡಿಯೊಳಗೆ … Read more

ಗಾಂಧಿ ಬಜಾರ್‌ನಲ್ಲಿ ತಳ್ಳುಗಾಡಿ ವ್ಯಾಪಾರಿ ಮೇಲೆ ಪೊಲೀಸ್‌ ಹಲ್ಲೆ ಆರೋಪ, ಕೆಲ ಹೊತ್ತು ವಾಕ್ಸಮರ

SP-mithun-kumar-visit-gandhi-bazaar.

SHIVAMOGGA LIVE NEWS | 8 JULY 2024 SHIMOGA : ತಳ್ಳುವ ಗಾಡಿ (Street Vendor) ವ್ಯಾಪಾರಿಯೊಬ್ಬರ ಮೇಲೆ, ಸಂಚಾರ ಠಾಣೆ ಪೊಲೀಸ್‌ ಸಿಬ್ಬಂದಿ ಹಲ್ಲೆ ನಡೆಸಿದ ಆರೋಪದ ಹಿನ್ನೆಲೆ, ಗಾಂಧಿ ಬಜಾರ್‌ನಲ್ಲಿ ಕೆಲ ಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪ್ರಕರಣ ತಿಳಿಗೊಳಿಸಿದರು. ಏನಿದು ಪ್ರಕರಣ? ಗಾಂಧಿ ಬಜಾರ್‌ನಲ್ಲಿ ತಳ್ಳುವ ಗಾಡಿಯಲ್ಲಿ ವ್ಯಾಪಾರ ಮಾಡುತ್ತಿದ್ದ ಯುವಕನ ಮೇಲೆ ಟ್ರಾಫಿಕ್‌ ಪೊಲೀಸ್‌ ಒಬ್ಬರು … Read more

ಗಾಂಧಿ ಬಜಾರ್‌ನಲ್ಲಿ ಹಾಡಹಗಲೆ ಮಹಿಳೆಗೆ ಮಂಕು ಕವಿಯುವಂತೆ ಮಾಡಿದ ಕಳ್ಳಿಯರು, ಮುಂದೇನಾಯ್ತು?

041023 Gandhi Bazaar In Shimoga.webp

SHIVAMOGGA LIVE NEWS | 28 MAY 2024 SHIMOGA : ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಗೆ ಹಿಂದಿನಿಂದ ಬಂದು ಬೆನ್ನು ತಟ್ಟಿ, ಕೈಗೆ ಏನೋ ಸವರಿ ಬಂಗಾರದ ಸರ ಕಳ್ಳತನ (Chain Theft) ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಗಾಂಧಿ ಬಜಾರ್‌ ಮುಖ್ಯ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಘಟನೆ ಸಂಭವಿಸಿದ್ದು ಹೇಗೆ? ಗೋಪಾಳದ ಶಾಂತಾ ಜವಾಹರ ಎಂಬುವವರು ಗಾಂಧಿ ಬಜಾರ್‌ನಲ್ಲಿ ನಡೆದು ಹೋಗುತ್ತಿದ್ದಾಗ ಹಿಂಬದಿಯಿಂದ ಇಬ್ಬರು ಮಹಿಳೆಯರು ಬಂದು ಬೆನ್ನು ತಟ್ಟಿದ್ದಾರೆ. ಶಾಂತಾ ಅವರು ತಿರುಗುತ್ತಿದ್ದಂತೆ ಕೈಗೆ … Read more

ಗಾಂಧಿ ಬಜಾರ್‌ ದೇಗುಲದಲ್ಲಿ ಕಳವು, ದೇವಿಯ ಮೂರ್ತಿಯ ಮುಖದ ಮೇಲೆ ಗೀಚಿದ ಕಿಡಿಗೇಡಿಗಳು

Gandhi-Bazaar-Kalika-Prameshwari-temple-theft

SHIVAMOGGA LIVE NEWS | 30 APRIL 2024 SHIMOGA : ಗಾಂಧಿ ಬಜಾರ್‌ನ ಕಾಳಿಕ ಪರಮೇ‍ಶ್ವರಿ ದೇವಸ್ಥಾನದ ಬೀಗ ಮುರಿದು ದೇವರ ಆಭರಣ, ಹಣ ಕಳ್ಳತನ ಮಾಡಲಾಗಿದೆ. ದೇವಿಯ ಮೂರ್ತಿಯನ್ನು ಹಾನಿಗೊಳಿಸಲಾಗಿದೆ ಎಂದು ಆರೋಪಿಸಿ ದೇವಸ್ಥಾನದ ಅಧ್ಯಕ್ಷ ರಮೇಶ್‌ ದೂರು ನೀಡಿದ್ದಾರೆ. ಏ.28ರಂದು ಬೆಳಗ್ಗೆ ದೇವಸ್ಥಾನದ ಮ್ಯಾನೇಜರ್‌ ಬಂದಾಗ ದೇಗುಲದ ಬಾಗಿಲಿನ ಬೀಗ ಮರಿದಿರುವುದು ಗೊತ್ತಾಗಿದೆ. ಗರ್ಭಗುಡಿಗೆ ಹಾಕಿದ್ದ ಬೀಗಗಳನ್ನು ಮುರಿಯಲಾಗಿತ್ತು. ಒಟ್ಟು 1.97 ಲಕ್ಷ ರೂ. ಮೌಲ್ಯ ಚಿನ್ನ, ಬೆಳ್ಳಿಯ ಆಭರಣ, 52 ಸಾವಿರ … Read more