ರಾಜ್ಯದಲ್ಲಿ ಮತ್ತಷ್ಟು ತೀವ್ರವಾಗಲಿದೆ ಚಳಿ, ಹವಾಮಾನ ಇಲಾಖೆ ಎಚ್ಚರಿಕೆ ಏನು?

Mist-During-Winter-Near-Mandagadde

ಬೆಂಗಳೂರು: ರಾಜ್ಯದಲ್ಲಿ ಚಳಿಯ (Cold) ತೀವ್ರತೆ ಹೆಚ್ಚಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 4 ರಿಂದ 6 ಡಿಗ್ರಿ ಸೆಲ್ಸಿಯಸ್‌ ಕುಸಿತವಾಗಿದೆ. ಇದರಿಂದ ಮಧ್ಯರಾತ್ರಿ ಮತ್ತು ಮುಂಜಾನೆ ಥಂಡಿ ಅನುಭವವಾಗುತ್ತಿದೆ. ಹಲವು ಜಿಲ್ಲೆಗಳಲ್ಲಿ ಮುಂಜಾನೆ ದಟ್ಟ ಮಂಜು ಆವರಿಸುತ್ತಿದೆ. ತಂಪಾದ ಗಾಳಿ ಬೀಸುತ್ತಿರುವ ಹಿನ್ನೆಲೆ ಹಗಲಿನಲ್ಲೂ ಚಳಿಯ ಅನುಭವಾಗುತ್ತಿದೆ. ಸಾಮಾನ್ಯವಾಗಿ ನವೆಂಬರ್ ಕೊನೆಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಈ ತೀವ್ರತೆ ಚಳಿ ಶುರುವಾಗಬೇಕಿತ್ತು. ಈ ಬಾರಿ ವಾಡಿಕೆಗಿಂತ ಮೊದಲೇ ಚಳಿ ಶುರುವಾಗಿದ್ದು, ದಿನೇದಿನೆ ತೀವ್ರತೆ ಹೆಚ್ಚುತ್ತಿದೆ. … Read more

ಶಿವಮೊಗ್ಗದಲ್ಲಿ ಹೇಗಿತ್ತು ರಾಜ್ಯೋತ್ಸವ? ಫೋಟೊಗಳಲ್ಲಿ ನಾಡ ಉತ್ಸವದ ವೈಭವ

dance-in-Karnataka-Rajyotsava-in-Shimoga-Nehru-Stadium

ಶಿವಮೊಗ್ಗ: ಕರ್ನಾಟಕ ರಾಜ್ಯೋತ್ಸವದ (Rajyotsava) ಅಂಗವಾಗಿ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಶಾಲಾ ವಿದ್ಯಾರ್ಥಿಗಳು ಕನ್ನಡ ನಾಡು, ನುಡಿ ಸಂಬಂಧ ವಿವಿಧ ಹಾಡುಗಳಿಗೆ ನೃತ್ಯ ಮಾಡಿದರು. ಸೈನ್ಸ್‌ ಮೈದಾನದಿಂದ ಮೆರವಣಿಗೆ ಕಾರ್ಯಕ್ರಮಕ್ಕು ಮುನ್ನ ನಗರದಲ್ಲಿ ಶ್ರೀ ಭುವನೇಶ್ವರಿ ದೇವಿಯ ಮೆರವಣಿಗೆ ನಡೆಯಿತು. ಸೈನ್ಸ್‌ ಮೈದಾನದಿಂದ ನೆಹರು ಕ್ರೀಡಾಂಗಣದವರೆಗೆ ಮೆರವಣಿಗೆ ಮಾಡಲಾಯಿತು. ವಿವಿಧ ಕಲಾತಂಡಗಳು, ಹಲವು ಇಲಾಖೆಗಳ ಸ್ತಬ್ಧಚಿತ್ರ  ಭಾಗವಹಿಸಿದ್ದವು. ಸ್ಟೇಡಿಯಂನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಧ್ವಜಾರೋಹಣದ ನಂತರ ನೆಹರು ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. … Read more

ಶಿವಮೊಗ್ಗದಲ್ಲಿ ರಣಜಿ ಕ್ರಿಕೆಟ್‌, ಮೊದಲ ದಿನದ ಆಟ ಮುಕ್ತಾಯ, ಕರ್ನಾಟಕದ ಸ್ಕೋರ್‌ ಎಷ್ಟು? ಇಲ್ಲಿದೆ ಡಿಟೇಲ್ಸ್‌

Karnataka-Goa-Ranji-cricket-match-in-Shimoga-Navule-KSCA-ground

ಶಿವಮೊಗ್ಗ: ನವುಲೆಯ ಕೆಎಸ್‌ಸಿಎ ಮೈದಾನದಲ್ಲಿ ನಡೆಯುತ್ತಿರುವ ಕರ್ನಾಟಕ ವರ್ಸಸ್‌ ಗೋವಾ ರಣಜಿ ಕ್ರಿಕೆಟ್‌ (Cricket) ಟೆಸ್ಟ್‌ ಪಂದ್ಯಾವಳಿಯ ಮೊದಲ ದಿನದ ಆಟ ಮುಕ್ತಾಯವಾಗಿದೆ. ಕರ್ನಾಟಕ ತಂಡ 5 ವಿಕೆಟ್‌ ಕಳೆದುಕೊಂಡು 222 ರನ್‌ ಗಳಿಸಿದೆ. ಗೋವಾ ತಂಡದ ಪರ ಅರ್ಜುನ್‌ ತೆಂಡುಲ್ಕರ್‌ ಮೂರು ವಿಕೆಟ್‌ ಪಡೆದು ಬೌಲಿಂಗ್‌ ವಿಭಾಗದಲ್ಲಿ ಗಮನ ಸೆಳೆದರು. ಯಾರೆಲ್ಲ ಎಷ್ಟು ರನ್‌ ಗಳಿಸಿದರು? ಕರ್ನಾಟಕ ತಂಡದ ನಿಕಿನ್‌ ಜೋಸ್‌ 3, ಮಯಾಂಕ್‌ ಅಗರ್‌ವಾಲ್‌ 28, ಕೆ.ಎಲ್.ಶ್ರೀಜಿತ್‌ 0, ಸ್ಮರಣ್‌.ಆರ್‌ 3, ಅಭಿನವ್‌ ಮನೋಹರ್‌ … Read more

ಶಿವಮೊಗ್ಗದಲ್ಲಿ ರಣಜಿ ಪಂದ್ಯ, ಟಾಸ್ ವಿನ್ ಆದ ಗೋವಾ ತಂಡ

BREAKING-NEWS-ENGLISH

ಶಿವಮೊಗ್ಗ: ನಗರದ ನವುಲೆಯ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಆಯೋಜಿಸಿರುವ ರಣಜಿ ಪಂದ್ಯಾವಳಿಯಲ್ಲಿ ಗೋವಾ ತಂಡ ಟಾಸ್ (Toss) ಗೆದ್ದಿದೆ. ಗೋವಾ ತಂಡದ ನಾಯಕ ದೀಪರಾಜ್ ಗಾವ್ಕಂರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಪಂದ್ಯ ತಡವಾಗಿ ಆರಂಭ ರಾತ್ರಿ ಸುರಿದ ಮಳೆಯಿಂದಾಗಿ ಎರಡು ಗಂಟೆ ತಡವಾಗಿ ಪಂದ್ಯ ಆರಂಭವಾಗುತ್ತಿದೆ. ಬೆಳಗ್ಗೆ 11 ಗಂಟೆಗೆ ಪಂದ್ಯಾವಳಿ ಆರಂಭವಾಗಲಿದ್ದು, ಗೋವಾ ಮತ್ತು ಕರ್ನಾಟಕ ತಂಡಗಳು ಹಣಾಹಣಿ ನಡೆಸಲಿವೆ. ಇದನ್ನೂ ಓದಿ » ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರೀ ಪೇಯ್ಡ್‌ ಆಟೋ ಕೌಂಟರ್‌ ಹೇಗಿದೆ? ಕಾರ್ಯನಿರ್ವಾಹಣೆ ಹೇಗೆ? … Read more

ಶಿವಮೊಗ್ಗದಲ್ಲಿ ಕ್ರಿಕೆಟರ್‌ ಮಯಾಂಕ್‌, ಕರುಣ್‌ ನಾಯರ್‌, ಶ್ರೇಯಸ್‌ ಗೋಪಾಲ್‌, ಅರ್ಜುನ್‌ ತೆಂಡೂಲ್ಕರ್‌ ಪ್ರಾಕ್ಟೀಸ್‌

241025-Mayank-Agarwal-Karun-Nair-and-Arjun-Tendulkar-practise-in-Shimoga-KSCA-Stadium-1.webp

ಶಿವಮೊಗ್ಗ: ಕರ್ನಾಟಕ ಮತ್ತು ಗೋವಾ ತಂಡಗಳ ಮಧ್ಯೆ ರಣಜಿ ಪಂದ್ಯಕ್ಕೆ ಶಿವಮೊಗ್ಗ ಕೆಎಸ್‌ಸಿಎ ಮೈದಾನ ಸಜ್ಜಾಗಿದೆ. ಉಭಯ ತಂಡದ ಆಟಗಾರರು (Cricketers) ಈಗಾಗಲೇ ಶಿವಮೊಗ್ಗಕ್ಕೆ ಆಗಮಿಸಿದ್ದು ಕಳೆದ ಎರಡು ದಿನದಿಂದ ನೆಟ್‌ ಪ್ರಾಕ್ಟಿಸ್‌ ಮಾಡುತ್ತಿದ್ದಾರೆ. ತಂಡದಲ್ಲಿ ಯಾರೆಲ್ಲ ಇದ್ದಾರೆ? ಕರ್ನಾಟಕ ತಂಡ ಮಯಾಂಕ್‌ ಅಗರ್‌ವಾಲ್‌ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ), ಸ್ಮರಣ್‌.ಆರ್‌, ಶ್ರೀಜಿತ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಗೋಪಾಲ್‌, ವಿದ್ವತ್‌ ಕಾವೇರಪ್ಪ, ಯಶೋವರ್ಧನ್‌, ಅಭಿಲಾಷ್‌ ಶೆಟ್ಟಿ, ವಂಕಟೇಶ್‌.ಎಂ, ನಿಕಿನ್‌ ಜೋಸ್‌.ಎಸ್.ಜೆ, ಅಭಿನವ್‌ ಮನೋಹರ್‌, ಕೃತಿಕ್‌ ಕೃಷ್ಣ … Read more

ಶಿವಮೊಗ್ಗ ಜಿಲ್ಲೆಯ 19 ಶಾಲೆಗಳು KPS ಶಾಲೆಗಳಾಗಿ ಉನ್ನತೀಕರಣ, ಯಾವೆಲ್ಲ ಶಾಲೆ? ಇಲ್ಲಿದೆ ಲಿಸ್ಟ್‌

Minister-Madhu-Bangarappa-in-shimoga-press-trust

ಬೆಂಗಳೂರು: ರಾಜ್ಯಾದ್ಯಂತ 474 ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ (KPS) ಉನ್ನತೀಕರಿಸಿ ಹೆಚ್ಚುವರಿ ಮೂಲಸೌಲಭ್ಯ ಒದಗಿಸಲು ಸರ್ಕಾರ ಆದೇಶಿಸಿದೆ. ಈ ಪೈಕಿ ಶಿವಮೊಗ್ಗ ಜಿಲ್ಲೆಯ 19 ಶಾಲೆಗಳನ್ನು ಉನ್ನತೀಕರಿಸಿ ಕೆಪಿಎಸ್‌ ಶಾಲೆಗಳಾಗಿ ಪರಿವರ್ತಿಸಲಾಗುತ್ತದೆ. ಯಾವ್ಯಾವ ಶಾಲೆಗಳು? ಇಲ್ಲಿದೆ ಲಿಸ್ಟ್‌ ಭದ್ರಾವತಿ: ಅರಳಿಹಳ್ಳಿಯ ಸರ್ಕಾರಿ ಹೈಸ್ಕೂಲ್‌, ದೊಣಬಘಟ್ಟದ ಉರ್ದು ಸರ್ಕಾರಿ ಪಿಯು ಕಾಲೇಜು, ಹಳೆನಗರದ ಸಂಚಿಹೊನ್ನಮ್ಮ ಬಾಲಕಿಯರ ಸರ್ಕಾರಿ ಪಿಯು ಕಾಲೇಜು, ಹೊಳೆಹೊನ್ನೂರು ಸರ್ಕಾರಿ ಪಿಯು ಕಾಲೇಜು. ಹೊಸನಗರ: ರಿಪ್ಪನ್‌ಪೇಟೆಯ ಸರ್ಕಾರಿ ಪಿಯು ಕಾಲೇಜು ಸಾಗರ: ಬ್ಯಾಕೋಡಿನ ಸರ್ಕಾರಿ … Read more

ಪ್ರವಾಸಿಗರಿಗೆ ಗುಡ್‌ ನ್ಯೂಸ್‌, ತ್ಯಾವರೆಕೊಪ್ಪ ಮೃಗಾಲಯಕ್ಕೆ ಹೊಸ ಪ್ರಾಣಿಗಳು, ಆಗಮನದ ದಿನಾಂಕ ಫಿಕ್ಸ್‌

Lion-Tiger-Safari-Tyavrekoppa-in-Shimoga.

ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮಕ್ಕೆ ನೂತನ ಅತಿಥಿಗಳ ಆಗಮನಕ್ಕೆ ದಿನಾಂಕ ನಿಗದಿಯಾಗಿದೆ. ದಸರಾ ಹಬ್ಬದ ಸಂದರ್ಭ ಇಲ್ಲಿನ ಮೃಗಾಲಯಕ್ಕೆ ಇಂದೋರ್‌ ಮತ್ತು ಔರಂಗಾಬಾದ್‌ನಿಂದ ಪ್ರಾಣಿಗಳು (Animals) ಆಗಮಿಸಲಿವೆ. ಮೃಗಾಲಯಕ್ಕೆ ಅಧಿಕಾರಿಗಳು ಭೇಟಿ ಈ ಸಂಬಂಧ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ತ್ಯಾವರೆಕೊಪ್ಪದ ಹುಲಿ ಮತ್ತು ಸಿಂಹಧಾಮದ ಸಿಇಒ ಅಮರಾಕ್ಷರ, ಇಂದೋರ್‌ ಮತ್ತು ಔರಂಗಾಬಾದ್‌ ಮೃಗಾಲಯದ ಅಧಿಕಾರಿಗಳು ಇಂದು ತ್ಯಾವರೆಕೊಪ್ಪದ ಮೃಗಾಲಯಕ್ಕೆ ಭೇಟಿ ನೀಡಿದ್ದರು. ಪ್ರಾಣಿಗಳ ವಿನಿಮಯಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು, ಶಿವಮೊಗ್ಗ ಮೃಗಾಲಯದ … Read more

ಶಿವಮೊಗ್ಗ – ಸಾಗರ ಮಧ್ಯೆ 4 ಕಡೆ ರೈಲ್ವೆ ಗೇಟ್‌ ಪರಿಶೀಲನೆ, ವಾಹನ ಸಂಚಾರ ನಿಷೇಧ, ಪರ್ಯಾಯ ಮಾರ್ಗ ಪ್ರಕಟ

070923-Railway-Track-with-Electric-lane-in-Shimoga-Sagara-Route.webp

ರೈಲ್ವೆ ಸುದ್ದಿ: ಶಿವಮೊಗ್ಗ – ಸಾಗರ ಮಧ್ಯೆ ಮಾರ್ಗದಲ್ಲಿ ನಾಲ್ಕು ಕಡೆ ರೈಲ್ವೆ ಲೆವೆಲ್‌ ಕ್ರಾಸಿಂಗ್‌ (Level Crossing) ಗೇಟ್‌ಗಳನ್ನು ತೆರೆದು ಪರಿಶೀಲನೆ ನಡೆಸಲಾಗುತ್ತದೆ. ಆದ್ದರಿಂದ ಆ ಮಾರ್ಗಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಆದೇಶಿಸಿದ್ದಾರೆ. ಯಾವ್ಯಾವ ರಸ್ತೆಯಲ್ಲಿ ಯಾವಾಗ ರಿಪೇರಿ? ಜೇಡಿಸರ ರಸ್ತೆ: ಸೆ.22ರ ಬೆಳಗ್ಗೆ 7 ಗಂಟೆಯಿಂದ ಸೆ.23ರ ರಾತ್ರಿ 11 ಗಂಟೆವರೆಗೆ ವಾಹನ ಸಂಚಾರ ನಿಷೇಧ. ಪರ್ಯಾಯ ಮಾರ್ಗ: ಆನಂದಪುರದಿಂದ ಜೇಡಿಸರ ಹಾಗೂ ಸಿದ್ದೇಶ್ವರ … Read more

ಸಕ್ರೆಬೈಲು ಆನೆಗಳಿಗೆ ಶಿವಮೊಗ್ಗ ದಸರಾಕ್ಕೆ ಆಹ್ವಾನ, ಯಾವೆಲ್ಲ ಆನೆಗಳು ಭಾಗವಹಿಸಲಿವೆ? ಇಲ್ಲಿದೆ ಡಿಟೇಲ್ಸ್‌

Sakrebyle-Elephant-welcomed-for-Shimoga-Dasara

ಶಿವಮೊಗ್ಗ ದಸರಾ: ನಾಡ ದೇವಿ ಚಾಮುಂಡೇಶ್ವರಿಯ ವೈಭವದ ಅಂಬಾರಿ ಮೆರವಣಿಗೆಗೆ ಈ ಬಾರಿಯು ಸಕ್ರೆಬೈಲು ಬಿಡಾರದ ಮೂರು ಆನೆಗಳು ಆಗಮಿಸಲಿವೆ. ಇವತ್ತು ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಲಾಯಿತು. ಶಾಸಕ ಎಸ್‌.ಎನ್.ಚನ್ನಬಸಪ್ಪ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಮಾಜಿ ಕಾರ್ಪೊರೇಟರ್‌ಗಳು ಸಕ್ರೆಬೈಲು ಬಿಡಾರಕ್ಕೆ ತೆರಳಿ ಆನೆಗಳಿಗೆ ಪೂಜೆ ಸಲ್ಲಿಸಿ ಆಹ್ವಾನ ನೀಡಿದರು. ಸಾಗರ ನೇತೃತ್ವದಲ್ಲಿ ಮೂರು ಆನೆಗಳು ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌.ಎನ್.ಚನ್ನಬಸಪ್ಪ, ಈ ಬಾರಿಯು ಮೂರು ಆನೆಗಳು ಆಗಮಿಸಲಿವೆ. ಸಾಗರ ಆನೆ ಶ್ರೀ ಚಾಮುಂಡೇಶ್ವರಿ … Read more

ಕೈಮರ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ, ಸವಾರನ ಕಾಲಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

ACCIDENT-NEWS-GENERAL-IMAGE.

#Bhadravati, #road accident, #car bike collision, #injury, #road safety, #local news, #police case, #Karnataka ಭದ್ರಾವತಿ: ಚಲಿಸುತ್ತಿದ್ದ ಬೈಕ್‌ಗೆ ಕಾರು ಡಿಕ್ಕಿ (Collision) ಹೊಡೆದು ಬೈಕ್‌ ಸವಾರನ ಕಾಲಿಗೆ ಗಂಭೀರ ಗಾಯವಾಗಿದೆ. ಭದ್ರಾವತಿ ತಾಲೂಕು ಕೈಮರ ಸರ್ಕಲ್‌ನಲ್ಲಿ ಘಟನೆ ಸಂಭವಿಸಿದೆ. ಅರಹತೊಳಲು ಗ್ರಾಮದ ಲೋಕೇಶಪ್ಪ ಅವರು ಬೈಕ್‌ನಲ್ಲಿ ತೆರಳುವಾಗ ಕಾರು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಲೋಕೇಶಪ್ಪ ಅವರ ಎಡಗಾಲಿಗೆ ತೀವ್ರ ಗಾಯವಾಗಿದೆ. ಅಪಘಾತ ಪಡಿಸಿದ ಕಾರು ಚಾಲಕನೆ ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಹೆಚ್ಚಿನ … Read more