ಉಷಾ ನರ್ಸಿಂಗ್ ಹೋಂ ಬಳಿ ಟೀ ಕುಡಿದು ಬರುವಷ್ಟರಲ್ಲಿ ಬೈಕ್ ಕದ್ದ ಖದೀಮರು
SHIVAMOGGA LIVE NEWS | SHIMOGA | 20 ಏಪ್ರಿಲ್ 2022 ಟೀ ಕುಡಿದು ಬರುವಷ್ಟರಲ್ಲಿ ಬೈಕ್ ಕಳವು ಮಾಡಲಾಗಿದೆ. ಶಿವಮೊಗ್ಗದ ರವೀಂದ್ರ ನಗರ ಗಣಪತಿ ದೇವಸ್ಥಾನದ ಪಕ್ಕದ ನಂದಿನಿ ಹಾಲಿನ ಬೂತ್ ಬಳಿ ಘಟನೆ ಸಂಭವಿಸಿದೆ. ರವೀಂದ್ರನಗರದ ಅನಂತಮೂರ್ತಿ ಎಂಬುವವರಿಗೆ ಸೇರಿದ ಸ್ಪ್ಲೆಂಡರ್ ಬೈಕ್ ಕಳುವಾಗಿದೆ. ಬೆಳಗ್ಗೆ 7.45ರ ಹೊತ್ತಿಗೆ ನಂದಿನಿ ಹಾಲಿನ ಬೂತ್’ನಲ್ಲಿ ಟೀ ಕುಡಿಯಲು ಬೈಕಿನಲ್ಲಿ ಬಂದಿದ್ದಾರೆ. ಬೂತ್ ಪಕ್ಕದಲ್ಲೆ ರಸ್ತೆಯಲ್ಲಿ ಬೈಕ್ ನಿಲ್ಲಿಸಿದ್ದರು. ಟೀ ಕುಡಿದು ಹಿಂತಿರುಗಿದಾಗ ಸ್ಪ್ಲೆಂಡರ್ ಬೈಕ್ ನಾಪತ್ತೆಯಾಗಿತ್ತು. … Read more