ಅ.9ರ ಶಿಕಾರಿಪುರ ಬಂದ್‌ಗೆ ಶಿರಾಳಕೊಪ್ಪದಲ್ಲು ಬೆಂಬಲ
ಶಿರಾಳಕೊಪ್ಪ: ಟೋಲ್ ವಿರುದ್ಧ ಕಳೆದ ವರ್ಷದಿಂದ ಸತತ ಹೋರಾಟ ಮುಂದುವರಿಸಿದ್ದರೂ ಸಮಸ್ಯೆಗೆ ಪರಿಹಾರ ದೊರಕದ ಹಿನ್ನೆಲೆ ಅ.9ರಂದು ಕರೆ ನೀಡಿರುವ ಶಿಕಾರಿಪುರ ಬಂದ್‌ಗೆ (Bandh) ಶಿರಾಳಕೊಪ್ಪದಲ್ಲೂ ಬೆಂಬಲ ವ್ಯಕ್ತವಾಗಿದೆ ಎಂದು ಸಮಿತಿ ಅಧ್ಯಕ್ಷ ಶಿವರಾಜ್ ಪಾಟೀಲ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಂದ್ ಸಂಪೂರ್ಣ ಸ್ವಯಂ ಪ್ರೇರಿತವಾಗಿದ್ದು, ಯಾವುದೇ ರಾಜಕೀಯ ಪ್ರೇರಣೆ ಇಲ್ಲ. ಶಿರಾಳಕೊಪ್ಪ ಪಟ್ಟಣದ ವ್ಯಾಪಾರಿಗಳು ಮತ್ತು ಸಾರ್ವಜನಿಕರು ಈ ಹೋರಾಟಕ್ಕೆ ಸ್ವಯಂ ಪ್ರೇರಿತವಾಗಿ ಬೆಂಬಲ ನೀಡಲು ನಿರ್ಧಾರ ಮಾಡಿದಾರೆ ಎಂದರು. ಈ ಹೋರಾಟವು ಸಂಪೂರ್ಣ ಪಕ್ಷಾತೀತ. … Read more