ಭದ್ರಾವತಿಯಲ್ಲಿ ರೈಲಿನಿಂದ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಶಿವಮೊಗ್ಗದಲ್ಲಿ ಸಾವು

Electric-Locomotive-train-for-Shimoga

ಶಿವಮೊಗ್ಗ: ಭದ್ರಾವತಿ ಸಮೀಪ ರೈಲಿನಿಂದು (Train) ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೃತರ ವಾರಸುದಾರರು ಇದ್ದಲ್ಲಿ ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ » ಮಹಿಳೆಯರಿಗೆ ಗುಡ್‌ ನ್ಯೂಸ್‌, ಶಿವಮೊಗ್ಗದಲ್ಲಿ ನಾಳೆ ಉತ್ಸವ್‌ ಮೇಳ, ಏನೇನೆಲ್ಲ ಇರುತ್ತೆ? ನವೆಂಬರ್‌ 28ರಂದು ವ್ಯಕ್ತಿಯೊಬ್ಬರು ರೈಲಿನಿಂದ ಬಿದ್ದು ಗಾಯಗೊಂಡಿದ್ದರು. ಅವರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಅವರು ಮೃತಪಟ್ಟಿದ್ದಾರೆ. ಮೃತರಿಗೆ ಅಂದಾಜು 45 ವರ್ಷ ವಯಸ್ಸಾಗಿದೆ. … Read more

ರೈಲ್ವೆ ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಮಹ್ವತದ ಬದಲಾವಣೆ, ಪ್ರಯೋಗ ಆರಂಭ, ಏನಿದು?

Prayanikare-Gamanisi-Indian-Railway-News

ರೈಲ್ವೆ ನ್ಯೂಸ್‌: ತತ್ಕಾಲ್‌ ಟಿಕೆಟ್‌ (Tatkal Ticket) ಬುಕಿಂಗ್‌ನಲ್ಲಿ ನಡೆಯುತ್ತಿದ್ದ ವಂಚನೆ ತಡೆಗಟ್ಟಲು ಮತ್ತು ಏಜೆಂಟರಿಗೆ ಕಡಿವಾಣ ಹಾಕಲು ರೈಲ್ವೆ ಇಲಾಖೆ ಮಹತ್ವದ ಹೆಜ್ಜೆ ಇರಿಸಿದೆ. ತತ್ಕಾಲ್‌ ಟಿಕೆಟ್‌ ಬುಕಿಂಗ್‌ನಲ್ಲಿ ಮಹತ್ವದ ಬದಲಾವಣೆ ತರಲು ಮುಂದಾಗಿದೆ. ಇನ್ನು ಮುಂದೆ ರೈಲ್ವೆ ಟಿಕೆಟ್‌ ಕಾಯ್ದಿರಿಸುವಿಕೆ ಕೌಂಟರ್‌ಗಳಿಂದ ತತ್ಕಾಲ್ ಟಿಕೆಟ್‌ಗಳನ್ನು ಕಾಯ್ದಿರಿಸುವಾಗ, ಪ್ರಯಾಣಿಕರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಈ ಒಟಿಪಿಯನ್ನು ತಿಳಿಸಿದ ನಂತರವೇ ಟಿಕೆಟ್ ನೀಡಲಾಗುತ್ತದೆ. ರಾಣಿ ಕಮಲಾಪತಿ ನಿಲ್ದಾಣದಿಂದ ದೆಹಲಿಗೆ ಹೋಗುವ ಶತಾಬ್ದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊದಲು … Read more

ರೈಲ್ವೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

railway-track-general-image.webp

ಶಿವಮೊಗ್ಗ: ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಂದಾಜು 50 ವರ್ಷದ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕಡು ಗೋಧಿ ಮೈಬಣ್ಣ, ಕೋಲು ಮುಖ ಹೊಂದಿದ್ದು, ಕಡು ಗುಲಾಬಿ ಬಣ್ಣದ ಶರ್ಟ್ ಮತ್ತು ಕಪ್ಪು-ಬಿಳಿ ಬಣ್ಣದ ಲುಂಗಿ ಧರಿಸಿದ್ದಾರೆ. ಸಂಬಂಧಿಗಳು ಇದ್ದಲ್ಲಿ ಶಿವಮೊಗ್ಗ ರೈಲ್ವೆ ಪೊಲೀಸ್ ಠಾಣೆಯ ಎಸ್‌ಐ ಅವರನ್ನು ಖುದ್ದಾಗಿ ಅಥವಾ ದೂ.ಸಂ: 08182-222974/ 948082124ಗೆ ಸಂಪರ್ಕಿಸುವಂತೆ ರೈಲ್ವೆ ಪೊಲೀಸ್ ಪ್ರಕಟಣೆ ತಿಳಿಸಿದೆ. ಇದನ್ನೂ ಓದಿ » ಶಿವಮೊಗ್ಗದ ಲಾಡ್ಜ್‌ನಲ್ಲಿ ಬೆಂಕಿ … Read more

ಶಿವಮೊಗ್ಗದ ಒಂದು ರೈಲ್ವೆ ನಿಲ್ದಾಣ ಸೇರಿ ರಾಜ್ಯದ ನಾಲ್ಕು ನಿಲ್ದಾಣಗಳಿಗೆ ಸಂತರ ಹೆಸರು

Railway-Track-in-Shimoga-station

ಬೆಂಗಳೂರು: ವಿಜಯಪುರ, ಬೆಳಗಾವಿ, ಬೀದರ್ ಮತ್ತು ಶಿವಮೊಗ್ಗ ಜಿಲ್ಲೆಯ ಸೂರಗೊಂಡನಕೊಪ್ಪ ರೈಲ್ವೆ ನಿಲ್ದಾಣಗಳಿಗೆ ಹೊಸ ನಾಮಕರಣ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್‌ ಪತ್ರ ಬರೆದಿದ್ದಾರೆ. ವಿಜಯಪುರ ರೈಲು ನಿಲ್ದಾಣಕ್ಕೆ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ರೈಲು ನಿಲ್ದಾಣ, ಬೆಳಗಾವಿ ನಿಲ್ದಾಣಕ್ಕೆ ಶ್ರೀ ಬಸವ ಮಹಾಸ್ವಾಮೀಜಿ, ಬೀದರ್ ನಿಲ್ದಾಣಕ್ಕೆ ಶ್ರೀ ಚನ್ನಬಸವ ಪಟ್ಟದ್ದೇವರು ಮತ್ತು ಸೂರಗೊಂಡನಕೊಪ್ಪ ನಿಲ್ದಾಣಕ್ಕೆ ಭಾಯಗಡ ರೈಲು ನಿಲ್ದಾಣ ಎಂದು ನಾಮಕರಣ ಮಾಡಬೇಕೆಂದು ಪ್ರಸ್ತಾಪಿಸಿದ್ದಾರೆ. ಸರ್ಕಾರ ಈ ನಿಲ್ದಾಣಗಳಿಗೆ ಸಂತರ … Read more

ಶಿವಮೊಗ್ಗ, ಹುಬ್ಬಳ್ಳಿ ಜನಶತಾಬ್ದಿ ರೈಲುಗಳ ಕುರಿತು ನೈಋತ್ಯ ರೈಲ್ವೆಯಿಂದ ಮಹತ್ವದ ಅಪ್‌ಡೇಟ್‌

shimoga-to-bangalore-jan-shatabdi-train-railway.webp

ರೈಲ್ವೆ ಸುದ್ದಿ: ಶಿವಮೊಗ್ಗ ಮತ್ತು ಹುಬ್ಬಳ್ಳಿ ಜನಶತಾಬ್ದಿ (Jan Shatabdi) ರೈಲುಗಳು ತಿಪಟೂರು ನಿಲ್ದಾಣದಲ್ಲಿ ನೀಡುತ್ತಿದ್ದ ನಿಲುಗಡೆ ಅವಧಿಯನ್ನು ಮತ್ತೆ ಮುಂದುವರೆಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ. ತಿಪಟೂರು ನಿಲ್ದಾಣದಲ್ಲಿ ರೈಲು ಸಂಖ್ಯೆ 12079/12080 ಕೆಎಸ್ಆರ್ ಬೆಂಗಳೂರು – ಎಸ್ಎಸ್ಎಸ್ ಹುಬ್ಬಳ್ಳಿ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ಮತ್ತು 12089/12090 ಕೆಎಸ್ಆರ್ ಬೆಂಗಳೂರು – ಶಿವಮೊಗ್ಗ ಟೌನ್ – ಕೆಎಸ್ಆರ್ ಬೆಂಗಳೂರು ಜನ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲುಗಳಿಗೆ ನೀಡಲಾಗಿದ್ದ ತಾತ್ಕಾಲಿಕ ನಿಲುಗಡೆಯನ್ನು ಇನ್ನೂ … Read more

ರಸ್ತೆ ರಿಪೇರಿ ಎಫಕ್ಟ್‌, ಆರು ಗಂಟೆಯಿಂದ ಆನ್‌ಲೋಡ್‌ ಆಗದೆ ನಿಂತಲ್ಲೆ ನಿಂತ ಗೂಡ್ಸ್‌ ರೈಲು

Goods-Train-Stopped-in-Shimoga-Railway-station.

ಶಿವಮೊಗ್ಗ: ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಬಳಿ ರಿಪೇರಿ ಕಾಮಗಾರಿ ರೈಲ್ವೆ ಇಲಾಖೆಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಆರು ಗಂಟೆಗು ಹೆಚ್ಚು ಹೊತ್ತಿನಿಂದ ಗೂಡ್ಸ್‌ ರೈಲು (Goods Train) ಅನ್‌ ಲೋಡ್‌ ಆಗದೆ ನಿಂತಲ್ಲಿಯೇ ನಿಲ್ಲುವಂತಾಗಿದೆ. ರೈಲ್ವೆ ನಿಲ್ದಾಣದಲ್ಲಿ ಕೊನೆಯ ಪ್ಲಾಟ್‌ ಫಾರಂ ಅನ್ನು ಗೂಡ್ಸ್‌ ರೈಲುಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ. ಗೂಡ್ಸ್‌ ರೈಲುಗಳ ಬಳಿ ಲಾರಿಗಳು ತೆರಳಲು ಅನುವಾಗುವಂತೆ ಸಂರ್ಪಕ ರಸ್ತೆಯನ್ನು ನಿರ್ಮಿಸಲಾಗಿದೆ. ಶಾಂತಿನಗರ ಕ್ರಾಸ್‌ ಬಳಿ ಹೊನ್ನಾಳಿ ರಸ್ತೆಯ ಫ್ಲೈ ಓವರ್‌ ಪಕ್ಕದಿಂದ ಲಾರಿಗಳು ರೈಲ್ವೆ … Read more

ಶಿವಮೊಗ್ಗ – ಭದ್ರಾವತಿ ರೈಲು ಮಾರ್ಗ ಪರಿಶೀಲನೆ, ವಾಹನಗಳ ಸಂಚಾರಕ್ಕೆ ಬದಲಿ ಮಾರ್ಗ

Shimoga-Yeshwanthapura-Train-South-Western-Railway

ರೈಲ್ವೆ ಸುದ್ದಿ: ಶಿವಮೊಗ್ಗ – ಭದ್ರಾವತಿ ನಡುವಿನ ಎಲ್‌.ಸಿ (level crossing) 42,46 ಮತ್ತು 47 ಗಳನ್ನು ಮುಚ್ಚಲು ಮತ್ತು ಪರೀಕ್ಷೆಗಾಗಿ ಅ.28 ರಿಂದ ನ.3 ರವರೆಗೆ ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಎಲ್‌ಸಿ 43- ಯಲವಟ್ಟಿ ರಸ್ತೆ: ಅ.28ರ ಬೆಳಗ್ಗೆ 8 ರಿಂದ ಅ.29 ರ ಸಂಜೆ 6ರವರೆಗೆ ಎಲ್.ಸಿ.46 ಮುಖಾಂತರ ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ. ಎಲ್‌ಸಿ 46- … Read more

ಶಿವಮೊಗ್ಗ ರೈಲ್ವೆ ನಿಲ್ದಾಣದ ಪ್ರೀ ಪೇಯ್ಡ್‌ ಆಟೋ ಕೌಂಟರ್‌ ಹೇಗಿದೆ? ಕಾರ್ಯನಿರ್ವಾಹಣೆ ಹೇಗೆ? ಇಲ್ಲಿದೆ ಪಾಯಿಂಟ್ಸ್‌

251025 Prepaid Auto booking in Shimoga railway station

ಶಿವಮೊಗ್ಗ: ಬಹು ವರ್ಷದ ಬೇಡಿಕೆಯಾಗಿದ್ದ ಪ್ರೀ ಪೇಯ್ಡ್‌ ಆಟೋ (Pre Paid) ವ್ಯವಸ್ಥೆ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿ ಆರಂಭವಾಗಿದೆ. ಮೊದಲ ದಿನದಿಂದಲೇ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರೈಲು ಇಳಿದ ಪ್ರಯಾಣಿಕರು ಯಾವುದೇ ಕಿರಿಕಿರಿ ಇಲ್ಲದೆ ಆಟೋದಲ್ಲಿ ನಿಗದಿತ ಸ್ಥಳಕ್ಕೆ ತಲುಪುತ್ತಿದ್ದಾರೆ. ಪ್ರೀ ಪೇಯ್ಡ್‌ ಆಟೋ ವ್ಯವಸ್ಥೆ ಅಗತ್ಯತೆ ಕುರಿತು ಈ ಹಿಂದೆ ಶಿವಮೊಗ್ಗ ಲೈವ್.ಕಾಂ ವರದಿ ಮಾಡಿತ್ತು. ಪ್ರೀ ಪೇಯ್ಡ್‌ ವ್ಯವಸ್ಥೆ ಜಾರಿಯಾದ ಮೇಲೆ ಪ್ರಯಾಣಿಕರ ಅಭಿಪ್ರಾಯ ಸಹಿತ ವರದಿ ಪ್ರಕಟಿಸಲಾಯಿತು. ಪ್ರೀ ಪೇಯ್ಡ್‌ ಆಟೋ … Read more

ರೈಲು ಇಳಿದು ಹಬ್ಬದ ಖುಷಿಯಲ್ಲಿ ನಿಲ್ದಾಣದಿಂದ ಹೊರ ಹೋಗುತ್ತಿದ್ದ ನಾಲ್ವರಿಗೆ ರೈಲ್ವೆ ಪೊಲೀಸರಿಂದ ಶಾಕ್, ಆಗಿದ್ದೇನು?

251025-case-filed-against-4-members-for-taking-crackers-in-train.webp

ಶಿವಮೊಗ್ಗ: ನಿಷೇಧವಿದ್ದರು ರೈಲಿನಲ್ಲಿ ಪಟಾಕಿ ಸಾಗಿಸಿದ ಆರೋಪದ ಹಿನ್ನೆಲೆ ನಾಲ್ವರ ವಿರುದ್ಧ ಶಿವಮೊಗ್ಗ ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಟಾಕಿ (Crackers) ಬಾಕ್ಸ್‌ಗಳನ್ನು ವಶಕ್ಕೆ ಪಡೆದು ನಾಲ್ವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆಪರೇಷನ್‌ ಸಂರಕ್ಷ ಹೆಸರಿನಲ್ಲಿ ಕಾರ್ಯಾಚರಣೆ ನಡೆಸಿದ ರೈಲ್ವೆ ಪೊಲೀಸರು, ಶಿವಮೊಗ್ಗ ನಿಲ್ದಾಣದಲ್ಲಿ ಪಟಾಕಿ ಬಾಕ್ಸ್‌ ಸಹಿತ ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ರೈಲಿನಲ್ಲಿ ಪಟಾಕಿ ಸಾಗಣೆ ನಿಷೇಧವಿದೆ. ಹಾಗಿದ್ದು ಪಟಾಕಿ ತಂದಿದ್ದಕ್ಕೆ ನೊಟೀಸ್‌ ನೀಡಿ, ಪಟಾಕಿಗಳನ್ನು ವಶಕ್ಕೆ ಪಡೆದಿದ್ದಾರೆ. ನಾಲ್ವರು ಆರೋಪಿಗಳು ನ್ಯಾಯಾಲಯಕ್ಕೆ … Read more

ಶಿವಮೊಗ್ಗ ರೈಲ್ವೆ ನಿಲ್ದಾಣ, ಅನುಮಾನದ ಮೇಲೆ ಮಹಿಳೆ ವಿಚಾರಣೆ, ಸಖಿ ಕೇಂದ್ರಕ್ಕೆ ರವಾನೆ, ಏನಿದು ಕೇಸ್‌?

251025-Woman-rescued-at-Shimoga-Railway-Station.webp

ಶಿವಮೊಗ್ಗ: ಪತಿಯ ಕಿರುಕುಳ ತಾಳದೆ ರಾಜ್ಯ ಬಿಟ್ಟು ಬಂದಿದ್ದ 28 ವರ್ಷದ ಮಹಿಳೆಯೊಬ್ಬರನ್ನು ಶಿವಮೊಗ್ಗದ ರೈಲ್ವೆ (Railway) ಪೊಲೀಸರು ರಕ್ಷಣೆ ಮಾಡಿದ್ದಾರೆ. ಆಂಧ್ರದ ಕಡಪ ಜಿಲ್ಲೆಯ 28 ವರ್ಷದ ಮಹಿಳೆ, ರೈಲಿನಲ್ಲಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಅನುಮಾನದ ಮೇರೆಗೆ ನಿಲ್ದಾಣದಲ್ಲಿ ರೈಲ್ವೆ ಪೊಲೀಸರು ಆಕೆಯ ವಿಚಾರಣೆ ಮಾಡಿದಾಗ ಪತಿಯ ಕಿರುಕುಳದ ಕುರಿತು ಮಾಹಿತಿ ನೀಡಿದ್ದರು. ಮದ್ಯ ಸೇವಿಸಿ ಬಂದು ಪತಿ ತನ್ನ ಮೇಲೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದ. ಇದರಿಂದ ಮನನೊಂದು ಊರು ಬಿಟ್ಟು ಬಂದಿರುವುದಾಗಿ ಆಕೆ … Read more