BREAKING NEWS – ಸಿಗಂದೂರು ಸೇತುವೆ ಉದ್ಘಾಟನೆ ದಿನಾಂಕ ಪ್ರಕಟಿಸಿದ ಸಂಸದ ರಾಘವೇಂದ್ರ

BY-Raghavendra-Meets-Nitin-Gadkari-speaks-about-sigandur-bridge

ಶಿವಮೊಗ್ಗ: ದೇಶದ ಎರಡನೇ ಅತಿ ಉದ್ದದ ತೂಗು ಸೇತುವೆ ಸಿಗಂದೂರು ಸೇತುವೆ (Sigandur Bridge) ಜುಲೈ 14ರಂದು ಲೋಕಾರ್ಪಣೆ ಆಗಲಿದೆ‌. ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಸೇತುವೆ ಉದ್ಘಾಟಿಸಲಿದ್ದಾರೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ರಾಘವೇಂದ್ರ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸ್ಥಳ ಇನ್ನಷ್ಟೆ ನಿಗದಿ ಆಗಬೇಕಿದೆ ಎಂದರು. ಇಂದಿನಿಂದ ಎರಡನೇ ಹಂತದ ಲೋಡ್ ಟೆಸ್ಟ್ ನಡೆಯಲಿದೆ. ಅಲ್ಲದೆ ಕೊನೆಯ ಹಂತದ ಕೆಲಸ … Read more

ಸಿಗಂದೂರಿಗೆ ತೆರಳುತ್ತಿದ್ದ ಟಿಟಿ ಅಪಘಾತ, ಮುಂಭಾಗ ನಜ್ಜುಗುಜ್ಜು, ಹೇಗಾಯ್ತು ಘಟನೆ?

Bangalore-Based-tempo-traveller-mishap-at-kumsi

ಶಿವಮೊಗ್ಗ: ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಟೆಂಪೊ ಟ್ರಾವಲರ್‌ (Tempo Traveller) ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದೆ. ಕುಂಸಿ – ಚಿಕ್ಕದಾನವಂದಿ ಗ್ರಾಮದ ಮಧ್ಯೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಘಟನೆ ಸಂಭವಿಸಿದೆ. ಬೆಂಗಳೂರಿನ ದೇವನಹಳ್ಳಿ ನಿವಾಸಿಗಳು ಸಿಗಂದೂರು ದೇವಸ್ಥಾನಕ್ಕೆ ತೆರಳುವಾಗ ಅಪಘಾತವಾಗಿದೆ. ಬೆಳಗ್ಗೆ 5.30ರ ಹೊತ್ತಿಗೆ ಟೆಂಪೊ ಟ್ರಾವಲರ್‌ ವಾಹನ ಹೆದ್ದಾರಿಯಲ್ಲಿ ತೆರಳುವಾಗ ನಾಯಿಯೊಂದು ರಸ್ತೆಗೆ ಅಡ್ಡ ಬಂದಿದೆ ಎಂದು ಆರೋಪಿಸಲಾಗಿದೆ. ನಾಯಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ … Read more

ಸಿಗಂದೂರು ಸೇತುವೆ, ಮೊದಲ ಲೋಡ್‌ ಟೆಸ್ಟ್‌ ಪಾಸ್‌, ಏನಿದು ಪರೀಕ್ಷೆ? ಹೇಗೆ ನಡೆಯುತ್ತೆ?

Load-Test-of-Sigandur-Bridge-at-Sagara.

ಸಾಗರ: ಶರಾವತಿ ಹಿನ್ನೀರಿನಲ್ಲಿ ನಿರ್ಮಿಸಲಾಗಿರುವ ಸಿಗಂದೂರು ಸೇತುವೆ (Bridge) ಕಾಮಗಾರಿ ಪೂರ್ಣಗೊಂಡಿದೆ. ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ನಲ್ಲಿ ಸೇತುವೆ ಪಾಸ್‌ ಆಗಿದೆ. ಈ ಪರೀಕ್ಷೆಯ ಫೋಟೊ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕಳೆದ ಭಾನುವಾರದಿಂದ ಬುಧವಾರದವರೆಗೆ ಮೊದಲ ಹಂತದ ಲೋಡ್‌ ಟೆಸ್ಟಿಂಗ್‌ ನಡೆಸಲಾಯಿತು. ಲಾರಿಗಳಲ್ಲಿ ನೂರು ಟನ್‌ ಲೋಡ್‌ ತುಂಬಿ ಸೇತುವೆ ಮೇಲೆ ನಿಲ್ಲಿಸಿ ಪರೀಕ್ಷೆ ನಡೆಲಾಗಿದೆ. ಮೊದಲ ಹಂತದ ಪರೀಕ್ಷೆಯಲ್ಲಿ ಸಿಗಂದೂರು ಸೇತುವೆ ಪಾಸ್‌ ಆಗಿದೆ. ಏನಿದು ಲೋಡ್‌ ಟೆಸ್ಟ್‌? ಹೇಗೆ ನಡೆಯಲಿದೆ? ಹೊಳೆಬಾಗಿಲು … Read more

ಸಿಗಂದೂರು ಸೇತುವೆ ವೈಭವ ಕಣ್ತುಂಬಿಕೊಂಡ ಕನ್ನಡದ ನಟ, ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಪ್ರಕಟ

Kannada-Actor-Sharan-visits-sigandur-temple-and-bridge.

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಶ್ರೀ ಚೌಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದ ನಟ ಶರಣ್‌, ಲಾಂಚ್‌ನಲ್ಲಿ ತೆರಳುವಾಗ ತೂಗು ಸೇತುವೆ ಮುಂಭಾಗ ವಿಡಿಯೋ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಇದನ್ನೂ ಓದಿ » ಸಿಗಂದೂರು ಸೇತುವೆ, ಮತ್ತೊಂದು ಮಹತ್ವದ ಬೆಳವಣಿಗೆ, ಫೋಟೊ ಹಂಚಿಕೊಂಡ ಸಂಸದ ರಾಘವೇಂದ್ರ ಅಂಬರಗೋಡ್ಲು – ಕಳಸವಳ್ಳಿ ಮಧ್ಯೆ ತೂಗು ಸೇತುವೆ ನಿರ್ಮಾಣವಾಗುತ್ತಿದೆ. ಸೇತುವೆ (Bridge) ಉದ್ಘಾಟನೆ ನಂತರ ಇಲ್ಲಿನ ಲಾಂಚ್‌ ಸೇವೆ ಸ್ಥಗಿತಗೊಳ್ಳುವ ಸಾಧ್ಯತೆ … Read more

ಸಿಗಂದೂರು ಸೇತುವೆ, ಮತ್ತೊಂದು ಡ್ರೋಣ್‌ ವಿಡಿಯೋ ರಿಲೀಸ್‌ ಮಾಡಿದ ಸಂಸದ ರಾಘವೇಂದ್ರ

Sigandur-Bridge-new-drone-video.

ಸಾಗರ : ಸಿಗಂದೂರು ಸೇತುವೆ (Bridge) ಕಾಮಗಾರಿ ಕೊನೆಯ ಹಂತಕ್ಕೆ ತಲುಪಿದೆ. ಈ ನಡುವೆ ಸಂಸದ ರಾಘವೇಂದ್ರ ಮತ್ತೆ ಎರಡು ಡ್ರೋಣ್‌ ವಿಡಿಯೋಗಳನ್ನು ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೂರು ನಿಮಿಷದ ವಿಡಿಯೋದಲ್ಲಿ ಸಿಗಂದೂರು ಸೇತುವೆಯ (Bridge) ಕುರಿತು ಪ್ರಮುಖ ಮಾಹಿತಿಗಳನ್ನು ಷೇರ್‌ ಮಾಡಲಾಗಿದೆ.ಇಲ್ಲಿದೆ ವಿಡಿಯೋ.. ಇದನ್ನೂ ಓದಿ » ಜೋಗ ಜಲಪಾತ, ಪ್ರವಾಸಿಗರಿಗೆ ಮತ್ತೆ ನಿಷೇಧ, ಎಷ್ಟು ದಿನ? ಕಾರಣವೇನು?  

ಸಿಗಂದೂರು ಲಾಂಚ್‌, ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ ಅಟ್ಯಾಕ್‌, ಕಾರಣವೇನು?

Sigandur-Launch-in-Sharavathi-River

ಸಾಗರ : ಸಿಗಂದೂರು ಲಾಂಚ್‌ಗೆ (Launch) ವಾಹನಗಳನ್ನು ಬಿಡುವ ವಿಚಾರದಲ್ಲಿ ಜಗಳವಾಗಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ನೇಮಿಸಿರುವ ಟಿಕೆಟ್ ಕಲೆಕ್ಟರ್ ಸೇರಿ ಹಲವರ ವಿರುದ್ಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೇಮಕವಾಗಿರುವ ಟಿಕೆಟ್ ಕಲೆಕ್ಟರ್ ಮತ್ತು 10-15 ಸಹಚರರ ವಿರುದ್ದ ಎಫ್‌ಐಆರ್‌ ದಾಖಲಿಸಲಾಗಿದೆ. ಗಲಾಟೆ ಆಗಿದ್ದೇಕೆ? ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಶಿವಪುರದ ನಿವಾಸಿ ಪ್ರಣತಿ, ತಂದೆ ಪ್ರಸನ್ನ, ತಾಯಿ ಪ್ರಭಾ, ಸಹೋದರ … Read more

ನಟ ಶಿವರಾಜ್‌ ಕುಮಾರ್‌ಗಾಗಿ ಶಿವಮೊಗ್ಗದಲ್ಲಿ ಪೂಜೆ, ಸಿಗಂದೂರಿನಲ್ಲಿ ಹೋಮ

Special-Pooja-for-Shivaraj-kumar-at-marikamba-temple-and-sigandur

SHIVAMOGGA LIVE NEWS, 24 DECEMBER 2024 ಶಿವಮೊಗ್ಗ : ಶಸ್ತ್ರ ಚಿಕಿತ್ಸೆಗೆ (Operation) ಒಳಗಾಗುತ್ತಿರುವ ನಟ ಶಿವರಾಜ್‌ ಕುಮಾರ್‌ ಅವರ ಆರೋಗ್ಯ ಶೀಘ್ರ ಸುಧಾರಿಸಲಿ ಎಂದು ಪ್ರಾರ್ಥಿಸಿ ಜಿಲ್ಲೆಯ ವಿವಿಧೆಡೆ ವಿಶೇಷ ಪೂಜೆ ನೆರವೇರಿದವು. » ಎಂ.‍ಶ್ರೀಕಾಂತ್‌ ಅಭಿಮಾನಿಗಳಿಂದ ಪೂಜೆ ಕಾಂಗ್ರೆಸ್‌ ಮುಖಂಡ ಎಂ.ಶ್ರೀಕಾಂತ್‌ ಅಭಿಮಾನಿ ಬಳಗದ ವತಿಯಿಂದ ಶಿವಮೊಗ್ಗ ಕೋಟೆ ಶ್ರೀ ಮಾರಿಕಾಂಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಕರುನಾಡ ಚಕ್ರವರ್ತಿ ಶಿವರಾಜ್‌ ಕುಮಾರ್‌ ಅವರಿಗೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿ. ಶೀಘ್ರ ಗುಣವಾಗಿ. ಅವರಿಗೆ ಆರೋಗ್ಯ, … Read more

BREAKING NEWS | ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆ

Siganduru-Bridge-in-sagara-taluk

SAGARA NEWS, 13 NOVEMBER 2024 : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು (Youths) ಕಣ್ಮರೆಯಾಗಿದ್ದಾರೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಇವತ್ತು ಘಟನೆ ಸಂಭವಿಸಿದೆ. ಚೇತನ್‌, ಸಂದೀಪ್‌ ಮತ್ತು ರಾಜು ಎಂಬುವವರು ಕಣ್ಮರೆಯಾಗಿದ್ದಾರೆ. ಇವರು ಸಿಗಂದೂರು, ಹುಲಿದೇವರ ಬನ ಮತ್ತು ಗಿಣಿವಾರದವರು ಎಂದು ತಿಳಿದು ಬಂದಿದೆ. ಯುವಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ. ಇದನ್ನೂ ಓದಿ » ಹೊಳೆ ಸ್ಟಾಪ್‌ನಲ್ಲಿ ಡಿವೈಡರ್‌ಗೆ ಬಸ್‌ ಡಿಕ್ಕಿ, ತಪ್ಪಿದ ಅನಾಹುತ

ಸಿಗಂದೂರು ಲಾಂಚ್‌, ಹೊಳೆಬಾಗಿಲಲ್ಲಿ ರೈತರಿಂದ ಪ್ರತಿಭಟನೆ, ಕಾರಣವೇನು?

-farmers-protest-against-launch-and-taxi.

SAGARA NEWS, 12 NOVEMBER 2024 : ಸಿಗಂದೂರು ಲಾಂಚ್‌ನಲ್ಲಿ (Launch) ರೈತ ಮುಖಂಡರೊಬ್ಬರ ವಿರುದ್ಧ ಲಾಂಚ್‌ ಮತ್ತು ಟ್ಯಾಕ್ಸಿ ಚಾಲಕರು ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ ರೈತ ಸಂಘದ (ಹೆಚ್.ಗಣಪತಿಯಪ್ಪ ಸ್ಥಾಪಿತ) ಜಿಲ್ಲಾ ಘಟಕದ ವತಿಯಿಂದ ಹೊಳೆಬಾಗಿಲು ಲಾಂಚ್‌ ತಟದಲ್ಲಿ ಪ್ರತಿಭಟನೆ ನಡೆಸಲಾಯಿತು. ರೈತ ಸಂಘದ ಆರೋಪವೇನು? ಜಿಲ್ಲಾ ರೈತ ಸಂಘದ ಮುಖಂಡರೊಬ್ಬರು ಹೊಳೆಬಾಗಿಲು ಮೂಲಕ ಬ್ಯಾಕೋಡಿಗೆ ಶನಿವಾರ ಬಂದು, ಪುನಃ ಮರಳುವಾಗ ಅವರ ವಾಹನವನ್ನು ಲಾಂಚ್‌ಗೆ ಹಾಕುವ ವಿಚಾರದಲ್ಲಿ ಸ್ಥಳೀಯ ವಾಹನ ಚಾಲಕರು ಮತ್ತು … Read more

ಸಿಗಂದೂರು ಲಾಂಚ್‌, ಸ್ಥಳ ಪರಿಶೀಲನೆ ಬಳಿಕ ಕಡವು ನಿರೀಕ್ಷಕರಿಂದ ಮಹತ್ವದ ಪತ್ರ

Sigandur-Launch-in-sharavathi-back-water.

SHIVAMOGGA LIVE NEWS | 18 JUNE 2024 SAGARA : ಶರಾವತಿ ಹಿನ್ನೀರು ಭಾಗದಲ್ಲಿ ನೀರಿನ ಮಟ್ಟ ಸಂಪೂರ್ಣ ತಗ್ಗಿದೆ. ಈ ಹಿನ್ನೆಲೆ ಜೂನ್‌ 19ರಿಂದ ಸಿಗಂದೂರು ಲಾಂಚ್‌ನಲ್ಲಿ (Launch) ವಾಹನಗಳ ಸಾಗಣೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಜಲಸಾರಿಗೆ ಮಂಡಳಿಯ ಶಿವಮೊಗ್ಗ ವಲಯದ ಕಡವು ನಿರೀಕ್ಷಕ ಸಾಗರ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ಪತ್ರದಲ್ಲಿ ತಿಳಿಸಿದ್ದಾರೆ. ಅಂಬರಗೋಡ್ಲು ಕಳಸವಳ್ಳಿ ಮಾರ್ಗದಲ್ಲಿ ಶರಾವತಿ ಹಿನ್ನೀರಿನ ಮಟ್ಟ ಕಡಿಮೆಯಾಗಿದೆ. ಸ್ಥಳ ಪರಿಶೀಲನೆ ವೇಳೆ, ಬಸ್ಸು ಸೇರಿದಂತೆ ಯಾವುದೇ ವಾಹನಗಳನ್ನು … Read more