ವಿದ್ಯಾನಗರ ರಸ್ತೆ ಡೇಂಜರ್‌, ಇನ್ನಷ್ಟು ಜೀವ ಹೋಗುತ್ತೆ ಹುಷಾರ್‌, ಇಲ್ಲಿ ಏನೇನೆಲ್ಲ ಸಮಸ್ಯೆ ಇದೆ?

vidyanagara-road-traffic-issue

ಶಿವಮೊಗ್ಗ: ವಿದ್ಯಾನಗರದಲ್ಲಿ ಹಾದು ಹೋಗಿರುವ ಬಿ.ಹೆಚ್.ರಸ್ತೆ ದಿನೇದಿನೆ ಡೇಂಜರಸ್‌ ಆಗಿ ರೂಪುಗೊಳ್ಳುತ್ತಿದೆ. ಈ ಡಬಲ್‌ ರೋಡ್‌ನಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾಗಿದೆ. » ಘಟನೆ 1 ನವೆಂಬರ್‌ 11: ಬೈಕ್‌ನಲ್ಲಿ ತೆರಳುತ್ತಿದ್ದ ಮಣಿಕಂಠ (22) ಎಂಬುವವರಿಗೆ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಮಣಿಕಂಠ ಸಾವನ್ನಪ್ಪಿದ್ದಾರೆ. ವಿದ್ಯಾನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಶಾಖೆ ಎದುರಿಗೆ ಘಟನೆ ಸಂಭವಿಸಿದೆ. » ಘಟನೆ 2 ಅಕ್ಟೋಬರ್‌ 9: ಎಸ್‌ಬಿಐ ಬ್ಯಾಂಕ್‌ ಬಳಿ … Read more

ಶಿವಮೊಗ್ಗದ ವಿದ್ಯಾನಗರದಲ್ಲಿ ಯುವಕನ ಮೇಲೆ ಹರಿದ ಲಾರಿ

Vidyanagara-Truck-and-Bike-incident - ಲಾರಿ

ಶಿವಮೊಗ್ಗ: ಹೆದ್ದಾರಿಯಲ್ಲಿ ಲಾರಿ ಹರಿದು ವ್ಯಕ್ತಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆ ಬಳಿಕ ಸ್ಥಳದಲ್ಲಿ ಲಾರಿ ನಿಲ್ಲಿಸದೆ ಪರಾರಿಯಾಗಿದೆ. ವಿದ್ಯಾನಗರದ ಎಸ್‌ಬಿಐ ಬ್ಯಾಂಕ್‌ ಮುಂಭಾಗ ಇಂದು ಸಂಜೆ ಘಟನೆ ಸಂಭವಿಸಿದೆ. ಮೃತರನ್ನ ಮಣಿ (21) ಎಂದು ಗುರುತಿಸಲಾಗಿದೆ. ಬೈಕ್‌ ಹಿಂಭಾಗ ನಜ್ಜುಗುಜ್ಜಾಗಿದೆ. ಟಿಲ್ಲರನ್ನು ಬೈಕ್‌ ಓವರ್‌ ಟೇಕ್‌ ಮಾಡುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು, ಅಪಘಾತದ ಬಳಿ ಚಾಲಕ ಲಾರಿಯನ್ನು ನಿಲ್ಲಿಸದೇ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಪೂರ್ವ ಸಂಚಾರ ಠಾಣೆ … Read more

ವಿದ್ಯಾನಗರ ಫ್ಲೈ ಓವರ್‌ ಕೆಳಗೆ ‘ಚಿನ್ನದ ನಾಣ್ಯʼಗಳಿರುವ ಚೀಲ ಕೊಟ್ಟು ಗಡಿಬಿಡಿಯಲ್ಲಿ ಹೋದ ಉಡುಪಿಯ ವ್ಯಕ್ತಿ

Police-Jeep-in-Shimoga-city

ಶಿವಮೊಗ್ಗ: ವಿದ್ಯಾನಗರ ಫ್ಲೈಓವರ್‌ನ ಕೆಳಗೆ ನಕಲಿ ಚಿನ್ನದ ನಾಣ್ಯಗಳನ್ನು (Gold Coins) ನೀಡಿ ತೆಲಂಗಾಣ ರಾಜ್ಯದ ವ್ಯಕ್ತಿಯೊಬ್ಬರಿಗೆ ₹4 ಲಕ್ಷ ವಂಚಿಸಲಾಗಿದೆ. ತೆಲಂಗಾಣ ರಾಜ್ಯದ ರಂಗಾರೆಡ್ಡಿ ಜಿಲ್ಲೆಯ ಪಸ್ಪುಲಾ ವಂಶಿ ಎಂಬುವವರು ವಂಚನೆಗೊಳಗಾಗಿದ್ದಾರೆ. ಪಸ್ಪುಲಾ ವಂಶಿಗೆ ಉಡುಪಿಯ ಸುರೇಶ್‌ ಎಂಬಾತನ ಪರಿಚಯವಾಗಿತ್ತು. ಕೆಲವು ತಿಂಗಳ ಹಿಂದೆ ಸುರೇಶ ಕರೆ ಮಾಡಿ ಚಿನ್ನದ ನಾಣ್ಯಗಳು ಸಿಕ್ಕಿವೆ ಎಂದು ತಿಳಿಸಿದ್ದ. ಚಿತ್ರದುರ್ಗಕ್ಕೆ ಕರೆಯಿಸಿಕೊಂಡು ಎರಡು ನಾಣ್ಯಗಳನ್ನು ಕೊಟ್ಟು ಕಳುಹಿಸಿದ್ದ. ತಮ್ಮೂರಿಗೆ ಕೊಂಡೊಯ್ದು ಪರೀಕ್ಷಿಸಿದಾಗ ಆ ಎರಡು ನಾಣ್ಯಗಳು ಚಿನ್ನದ್ದು ಎಂದು … Read more

ವಿದ್ಯಾನಗರದಲ್ಲಿ ಬ್ಯಾಂಕ್‌ ಮ್ಯಾನೇಜರ್‌, ಸಿಬ್ಬಂದಿ ಮೇಲೆ ಹಲ್ಲೆ, ಕಾರಣವೇನು?

Vidyanagara-Smart-city-board

ಶಿವಮೊಗ್ಗ: ಮನೆ ಬಾಗಿಲಿಗೆ ನೊಟೀಸ್‌ ಅಂಟಿಸಲು ತೆರಳಿದ್ದ ಕೆನರಾ ಬ್ಯಾಂಕ್‌ ಮ್ಯಾನೇಜರ್‌ (Manager) ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಸಲಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿ ಘಟನೆ ಸಂಭವಿಸಿದೆ. ಮಹಿಳೆಯೊಬ್ಬರು ವಿದ್ಯಾನಗರದ ಕೆನರಾ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದರು. ಮರುಪಾವತಿ ಮಾಡಿರಲಿಲ್ಲ. ಹಾಗಾಗಿ ಬ್ಯಾಂಕ್‌ನ ವ್ಯವಸ್ಥಾಪಕ ಮತ್ತು ಸಿಬ್ಬಂದಿ ಮಹಿಳೆಯ ಮನೆ ಬಾಗಿಲಿಗೆ ನೊಟೀಸ್‌ ಅಂಟಿಸಲು ತೆರಳಿದ್ದರು. ಆಗ ಮನೆ ಒಳಗಿಂದ ಬಂದ ಎರಡ್ಮೂರು ಮಂದಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ … Read more

ಹಿರಿಯರ ಪೂಜೆ ಮುಗಿಸಿ ಸಂಬಂಧಿಕರು, ಸ್ನೇಹಿತರನ್ನು ಕಳುಹಿಸಿದ ಮೇಲೆ ಮನೆಯವರಿಗೆ ಕಾದಿತ್ತು ಬಿಗ್‌ ಶಾಕ್

Vidyanagara-Smart-city-board

ಶಿವಮೊಗ್ಗ: ಹಿರಿಯರ ಪೂಜೆ ಸಂದರ್ಭ ಮನೆಯಲ್ಲಿ ಕಳಶಕ್ಕೆ ಹಾಕಿದ್ದ ಬಂಗಾರದ ಸರ (Gold Chain) ನಾಪತ್ತೆಯಾಗಿದೆ. ಶಿವಮೊಗ್ಗದ ವಿದ್ಯಾನಗರದ ಶಶಿಕುಮಾರ್‌ ಎಂಬುವವರ ಮನೆಯಲ್ಲಿ ಘಟನೆಯಾಗಿದೆ. ಶಶಿಕುಮಾರ್‌ ಅವರ ಮನೆಯಲ್ಲಿ ಹಿರಿಯರ ಪೂಜೆ ವೇಳೆ ಅವರ ತಾಯಿಯ ಬಂಗಾರದ ಸರವನ್ನು ಕಳಶಕ್ಕೆ ಸುತ್ತಿದ್ದರು. ರಾತ್ರಿ 7.30ರ ಬಳಿಕ ಸಂಬಂಧಿಕರು, ಸ್ನೇಹಿತರು ಸೇರಿ ಹಲವರು ಊಟಕ್ಕೆ ಬಂದಿದ್ದರು. ರಾತ್ರಿ 9.30ರ ಹೊತ್ತಿಗೆ ಕಳಶಕ್ಕೆ ಸುತ್ತಿದ್ದ ಚಿನ್ನದ ಸರ ನಾಪತ್ತೆಯಾಗಿತ್ತು ಎಂದು ಆರೋಪಿಸಲಾಗಿದೆ. ಊಟಕ್ಕೆ ಬಂದವರಿಗೆ ವಿಚಾರಿಸಿದ ಶಶಿಕುಮಾರ್‌ ಅವರು ಬಳಿಕ … Read more

ಎಣ್ಣೆ ಹೊಡೆಯೋರು, ಸಿಗರೇಟು ಸೇದೋರಿಗಾಗಿ ಶಿವಮೊಗ್ಗದಲ್ಲೊಂದು ಇಂದಿರಾ ಕ್ಯಾಂಟೀನ್‌

indira-Canteen-at-vidyanagara-in-Shimoga-city1.

ಶಿವಮೊಗ್ಗ : ಕಡಿಮೆ ದರದಲ್ಲಿ ಊಟ, ತಿಂಡಿ ಪೂರೈಸಬೇಕಿದ್ದ ಇಂದಿರಾ ಕ್ಯಾಂಟೀನ್‌ ಇಲ್ಲಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಆಗಿ ಪರಿವರ್ತನೆಯಾಗಿದೆ. ನಿರ್ಮಾಣವಾಗಿ ಉದ್ಘಾಟನೆಯಾಗದ ಇಂದಿರಾ ಕ್ಯಾಂಟೀನ್‌ (Indira Canteen) ಕಟ್ಟಡ ಕುಡುಕರ ಪಾಲಿನ ಸ್ವರ್ಗವಾಗಿದ್ದು, ಅಕ್ರಮ ಚಟುವಟಿಕೆಯ ಅಡ್ಡೆಯಾಗಿದೆ. ಇದನ್ನೂ ಓದಿ » ಜನರಿಂದ ತಪ್ಪಿಸಿಕೊಳ್ಳುವಾಗ ಗುಂಡಿಗೆ ಬಿದ್ದ ಕಳ್ಳ, ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ ಗ್ರಾಮಸ್ಥರು ಶಿವಮೊಗ್ಗದ ವಿದ್ಯಾನಗರ ಮುಖ್ಯ ರಸ್ತೆಯಲ್ಲಿ ಈಚೆಗೆ ಇಂದಿರಾ ಕ್ಯಾಂಟೀನ್‌ ನಿರ್ಮಿಸಲಾಗಿದೆ. ಈತನಕ ಕ್ಯಾಂಟೀನ್‌ ಉದ್ಘಾಟನೆಯಾಗಿಲ್ಲ. ಹಾಗಾಗಿ ಕಟ್ಟಡ ಅನಾಥವಾಗಿ ಉಳಿದುಕೊಂಡಿದೆ. … Read more

ವಿದ್ಯಾನಗರದಲ್ಲಿ ಮಾರಕಾಸ್ತ್ರಗಳಿಂದ ದಾಳಿ, ಯುವಕನ ತಲೆಗೆ ಗಂಭೀರ ಗಾಯ

Vidyanagara-Smart-city-board

SHIVAMOGGA LIVE NEWS | 23 JUNE 2024 SHIMOGA : ರೌಡಿ ಶೀಟರ್‌ ಒಬ್ಬನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ (Attack) ನಡೆಸಲಾಗಿದೆ. ವಿದ್ಯಾನಗರದ ಸಹ್ಯಾದ್ರಿ ಕಾಲೇಜು ಬಳಿ ಶನಿವಾರ ರಾತ್ರಿ ಘಟನೆ ಸಂಭವಿಸಿದೆ. ಗಾಯಗೊಂಡಿದ್ದ ರೌಡಿ ಶೀಟರ್‌ ಕಾರ್ತಿಕ್‌ ಅಲಿಯಾಸ್‌ ಕತ್ತೆ ಕಾರ್ತಿಕ್‌ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿದ್ದಾನೆ. ಹೊಸಮನೆ ನಿವಾಸಿ ಕಾರ್ತಿಕ್‌ನ ತಲೆ ಭಾಗ, ಕೈಗಳಿಗೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ರಕ್ತ ಸುರಿಯುತ್ತಿದ್ದರು ಮನೆಗೆ ತೆರಳಿದ್ದ. ಕೊನೆಗೆ ಆತನ ಕುಟುಂಬದವರೆ ಕಾರ್ತಿಕ್‌ನನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು … Read more

ವಿದ್ಯಾನಗರ ದರೋಡೆ ಕೇಸ್‌, ಲಲ್ಲಾಗೆ ಐದು ವರ್ಷ ಕಠಿಣ ಜೈಲು, 8 ಸಾವಿರ ಫೈನ್

Vidyanagara-Smart-city-board

SHIVAMOGGA LIVE NEWS | 15 JUNE 2024 SHIMOGA : ವಿದ್ಯಾನಗರ ಮುಖ್ಯರಸ್ತೆಯಿಂದ ಮತ್ತೂರು ಮಾರ್ಗದಲ್ಲಿ ದರೋಡೆಗೆ ಹೊಂಚುಹಾಕಿದ್ದ ಪ್ರಕರಣದಲ್ಲಿ ವ್ಯಕ್ತಿಯೊಬ್ಬನಿಗೆ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ (IMPRISONMENT) ಮತ್ತು 8 ಸಾವಿರ ರೂ. ದಂಡ ವಿಧಿಸಿದೆ. ಉತ್ತರ ಪ್ರದೇಶ ಮೀರತ್‌ನ ಸಲ್ಮಾನ್ ಅಲಿಯಾಸ್ ಲಲ್ಲಾ (24) ಅಪರಾಧಿ. 2020ರ ಸೆ.16ರಂದು ರಾತ್ರಿ ವಿದ್ಯಾನಗರ ಮುಖ್ಯ ರಸ್ತೆಯ ಕಡೆಯಿಂದ ಮತ್ತೂರು ಕಡೆಗೆ ಹೋಗುವ ರಸ್ತೆಯ ಬಳಿ … Read more

ವಿದ್ಯಾನಗರದಲ್ಲಿ ಬೆಳಗ್ಗೆ ವೈನ್‌ ಶಾಪ್‌ ಬಾಗಿಲು ತೆಗೆಯಲು ಬಂದ ಸಿಬ್ಬಂದಿಗೆ ಕಾದಿತ್ತು ಶಾಕ್‌, ಆಗಿದ್ದೇನು?

Vidyanagara-Smart-city-board

SHIVAMOGGA LIVE NEWS | 24 MAY 2024 SHIMOGA : ವಿದ್ಯಾನಗರ ಮುಖ್ಯರಸ್ತೆಯಲ್ಲಿರುವ ಶಿವಶಂಕರ ವೈನ್‌ ಶಾಪ್‌ನ ಬಾಗಿಲುನ್ನು ಆಯುಧದಿಂದ ಮೀಟಿ ಕಳ್ಳತನ ಮಾಡಲಾಗಿದೆ. ನಗದು ಮತ್ತು ಸಿಸಿಟಿವಿಯ DVR ಕಳುವಾಗಿದೆ ಎಂದು ಆರೋಪಿಸಿ ಕೋಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಾಗಿದೆ. ಇದನ್ನೂ ಓದಿ – ಕೃಷಿ ಹೊಂಡದಲ್ಲಿ ಬಿದ್ದ ಬಾಲಕನ ರಕ್ಷಣೆಗೆ ಧಾವಿಸಿದ ಯುವಕ, ಇಬ್ಬರು ಸಾವು, ಹೇಗಾಯ್ತು ಘಟನೆ? ಎಂದಿನಂತೆ ಬೆಳಗ್ಗೆ ವೈನ್‌ ಶಾಪ್‌ ಬಾಗಿಲು ತೆಗೆಯಲು ಸಿಬ್ಬಂದಿ ಬಂದಾಗ ಷಟರ್‌ ಬಾಗಿಲು ಮೀಟಿದಂತೆ … Read more

ವಿದ್ಯಾನಗರ ವೃತ್ತಾಕಾರ ಸೇತುವೆ ಮೇಲೆ ವಾಹನ ಸಂಚಾರ ಶುರು, ಮೊದಲ ದಿನ ಹೇಗಿತ್ತು ಜನರ ಪ್ರತಿಕ್ರಿಯೆ?

Railway-over-bridge-at-vidyanagara-Shimoga.

SHIVAMOGGA LIVE NEWS | 23 FEBRUARY 2024 SHIMOGA : ಉದ್ಘಾಟನೆ ಬೆನ್ನಿಗೆ ವಿದ್ಯಾನಗರ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅನುವು ಮಾಡಲಾಗಿದೆ. ಹೊಳೆಹೊನ್ನೂರು ರಸ್ತೆಗೆ ತೆರಳುವವರು ಮತ್ತು ಆ ಭಾಗದಿಂದ ಶಿವಮೊಗ್ಗ ಕಡೆಗೆ ಬರುವ ಬಹುತೇಕ ವಾಹನಗಳು ಸೇತುವೆ ಮೇಲೆ ಸಂಚರಿಸಿದವು. ಬಹುತೇಕರು ಹೊಸ ಸೇತುವೆ ಮೇಲೆ ವಾಹನ ಚಲಾಯಿಸಿ ಸಂಭ್ರಮಿಸಿದರು. ಟೇಪ್‌ ಕಟ್‌ ಮಾಡಿದ ಕೇಂದ್ರ ಸಚಿವ ಶಿವಮೊಗ್ಗಕ್ಕೆ ಆಗಮಿಸಿದ್ದ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ವಿದ್ಯಾನಗರ ರೈಲ್ವೆ … Read more