ರಾತ್ರಿ ವಾಕಿಂಗ್‌ ಮಾಡುತ್ತಿದ್ದ ಶಿಕ್ಷಕನ ಮೇಲೆ ನಾಲ್ವರು ಅಪರಿಚಿತರಿಂದ ದಾಳಿ, ಮುಂದೇನಾಯ್ತು?

Police-Van-Jeep-at-Shimoga-Nehru-Road

ಶಿವಮೊಗ್ಗ : ರಾತ್ರಿ ಊಟ ಮುಗಿಸಿ ಮನೆ ಸಮೀಪ ವಾಕಿಂಗ್‌ (Walking) ಮಾಡುತ್ತಿದ್ದ ಶಿಕ್ಷಕರೊಬ್ಬರಿಗೆ ಹೊಡೆದ ನಾಲ್ವರು ಯುವಕರು ಮೊಬೈಲ್‌ ಕಸಿದುಕೊಂಡು ಪರಾರಿಯಾಗಿದ್ದಾರೆ. ವಿನೋಬನಗರ ಪೊಲೀಸ್‌ ಠಾಣೆ ವ್ಯಾಪ್ತಿಯ ಅರವಿಂದ ನಗರದಲ್ಲಿ ಘಟನೆ ಸಂಭವಿಸಿದೆ. ಶಿಕ್ಷಕ ವೀರೇಶ್‌ ಅವರು ರಾತ್ರಿ 10 ಗಂಟೆ ಹೊತ್ತಿಗೆ ಅರವಿಂದ ನಗರದಿಂದ ಸೂರ್ಯ ಲೇಔಟ್‌ ಕಡೆಗೆ ವಾಕಿಂಗ್‌ ಮಾಡುತ್ತಿದ್ದರು. ಈ ವೇಳೆ ಎದುರಾದ ನಾಲ್ವರು ಅಪರಿಚಿತ ಯುವಕರು ವೀರೇಶ್‌ ಅವರ ಹಣೆಗೆ ಹೊಡೆದು, ಶರ್ಟ್‌ ಜೇಬಿನಲ್ಲಿದ್ದ ರೆಡ್‌ ಮಿ ಮೊಬೈಲ್‌ ಕಸಿದುಕೊಂಡಿದ್ದಾರೆ … Read more

ವಾಕಿಂಗ್‌ ಮಾಡುತ್ತಿದ್ದಾಗ ಕುಸಿದು ಬಿದ್ದು MBBS ವಿದ್ಯಾರ್ಥಿ ಸಾವು

mbbs-student-pruthivraj-succumbe-during-walking.

SHIMOGA NEWS, 19 SEPTEMBER 2024 : ವಾಕಿಂಗ್‌ ಮಾಡುತ್ತಿದ್ದಾಗ ಕುಸಿದು ಬಿದ್ದು ವೈದ್ಯಕೀಯ (MBBS) ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗದ ಹೆಲಿಪ್ಯಾಡ್‌ನಲ್ಲಿ ಬುಧವಾರ ಸಂಜೆ ಘಟನೆ ಸಂಭವಿಸಿದೆ. ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಥಮ ವರ್ಷದ ಎಂಬಿಬಿಎಸ್‌ ವಿದ್ಯಾರ್ಥಿ ಪೃಥ್ವಿರಾಜ್‌ (20) ಮೃತಪಟ್ಟಿದ್ದಾನೆ. ಸಂಜೆ ವಾಯು ವಿಹಾರಕ್ಕೆ ತೆರಳಿದ್ದಾಗ ಕುಸಿದು ಬಿದ್ದಿದ್ದಾನೆ. ಕೂಡಲೆ ಆತನನ್ನು ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಆ ಹೊತ್ತಿಗಾಗಲೆ ಪೃಥ್ವಿರಾಜ್‌ ಕೊನೆಯುಸಿರೆಳೆದಿದ್ದ. ಶರಾವತಿ ನಗರದ ನಿವಾಸಿ ಮುತ್ತಣ್ಣ ಎಂಬುವವರ ಪೃಥ್ವಿ ಶಿವಮೊಗ್ಗದ ಹೆಲಿಪ್ಯಾಡ್‌ನಲ್ಲಿ … Read more

ಆಗುಂಬೆ ಮುಖ್ಯ ರಸ್ತೆಯಲ್ಲಿ ಕಾಡಾನೆ ಸಂಚಾರ, ವಿಡಿಯೋ ವೈರಲ್

Elephant-on-Agumbe-Road.

THIRTHAHALLI | ಆಗುಂಬೆಯಲ್ಲಿ (AGUMBE) ಕಾಡಾನೆ (WILD ELEPHANT) ಆತಂಕ ಮುಂದುವರೆದಿದೆ. ಹೆದ್ದಾರಿಯಲ್ಲಿ (HIGHWAY) ಕಾಡಾನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರೊಬ್ಬರು ಮೊಬೈಲ್ ಮೂಲಕ ವಿಡಿಯೋ (VIDEO VIRAL) ಸೆರೆ ಹಿಡಿದಿದ್ದಾರೆ. ಆಗುಂಬೆಯ ಅರಣ್ಯ ಇಲಾಖೆ ಚಿಕ್ ಪೋಸ್ಟ್ ಸಮೀಪದಲ್ಲೇ ಕಾಡಾನೆ ಪ್ರತ್ಯಕ್ಷವಾಗಿದೆ. ಒನ್ ಕೆಬಿ ಫಾಲ್ಸ್ ಸಮೀಪ ಕಾಡಾನೆ ಕಾಣಿಸಿಕೊಂಡಿದೆ. ಹೆಬ್ರಿ ಮುಖ್ಯ ರಸ್ತೆಯಲ್ಲಿ ಕಾಡಾನೆ ನಡೆದುಕೊಂಡು ಬಂದಿದೆ. ಸ್ವಲ್ಪ ದೂರದವರೆಗೂ ನಡೆದು ಬರುವ ಆನೆ ಬಳಿಕ ಕಾಡಿಗೆ ತೆರಳುತ್ತದೆ. ಇದೆ ಮಾರ್ಗದಲ್ಲಿ ತೆರಳುತ್ತಿದ್ದ ಸ್ಥಳೀಯರು ಕಾಡನೆಯನ್ನು ಕಂಡು … Read more

ಗೋಪಾಳದಲ್ಲಿ ವಾಕಿಂಗ್ ತೆರಳಿದ್ದ ವೆಂಕಟೇಶ್ ಮೇಲೆ ಹಲ್ಲೆ ಕೇಸ್, ಇಬ್ಬರು ವಶಕ್ಕೆ

Arrest News Graphics

ಶಿವಮೊಗ್ಗದ ಗೋಪಾಳದಲ್ಲಿ ವೆಂಕಟೇಶ್ ಎಂಬುವವರ ಮೇಲೆ ಹಲ್ಲೆ ನಡೆದ ಪ್ರಕರಣ ಸಂಬಂಧ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ. ತುಂಗಾ ನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಪಡಿಸಿಕೊಂಡಿದ್ದಾರೆ. ರಂಗನಾಥ ಬಡಾವಣೆಯ ಸಲ್ಮಾನ್ (20), ಅಣ್ಣಾನಗರದ ಸೈಯದ್ ಸುಬಾನ್ (18) ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಅಸ್ಲಾಂ ಎಂಬಾತನಿಗೆ ಶೋಧ ಕಾರ್ಯ ನಡೆಸಲಾಗುತ್ತಿದೆ. ವಾಕಿಂಗ್ ಹೋದವರ ಮೇಲೆ ಹಲ್ಲೆ ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಎಂಬುವವರು ನಾಯಿ ಹಿಡಿದುಕೊಂಡು ವಾಕಿಂಗ್ ತೆರಳುತ್ತಿದ್ದರು. ಈ ವೇಳೆ ಅವರ ಮೇಲೆ ಸಲ್ಮಾನ್, ಸೈಯದ್ … Read more

ಶಿವಮೊಗ್ಗದಲ್ಲಿ ವಾಕಿಂಗ್ ತೆರಳಿದ್ದ ವ್ಯಕ್ತಿ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಸಂಸದ ಸೇರಿ ಹಲವರು ಆಸ್ಪತ್ರೆಗೆ ದೌಡು

Attack-on-a-person-in-Gopala-in-Shimoga

SHIVAMOGGA LIVE NEWS | 3 ಮಾರ್ಚ್ 2022 ಸಾಕು ನಾಯಿ ಕರೆದುಕೊಂಡು ವಾಕಿಂಗ್ ತೆರಳಿದ್ದ ವ್ಯಕ್ತಿಯೊಬ್ಬರ ಮೇಲೆ ನಾಲ್ವರು ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಮೆಗ್ಗಾನ್ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸಂಸದ ಬಿ.ವೈ.ರಾಘವೇಂದ್ರ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದ್ದಾರೆ. ಗೋಪಾಳದ ಪದ್ಮಾ ಟಾಕೀಸ್ ಬಳಿ ಇಂದು ಸಂಜೆ ಘಟನೆ ಸಂಭವಿಸಿದೆ. ಸ್ಥಳೀಯರಾದ ವೆಂಕಟೇಶ್ ಅವರ ಮೇಲೆ ಹಲ್ಲೆಯಾಗಿದೆ. ತಲೆಗೆ ತೀವ್ರ ಗಾಯವಾಗಿದ್ದು, ಅವರನ್ನು ಕೂಡಲೆ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. … Read more

ಶಿವಮೊಗ್ಗದಲ್ಲಿ ವಾಕಿಂಗ್, ಜಾಗಿಂಗ್ ಪ್ರಿಯರಿಗೆ ಗುಡ್ ನ್ಯೂಸ್

SHIVAMOGGA-CITY-TALUK-NEWS-

ಶಿವಮೊಗ್ಗ ಲೈವ್.ಕಾಂ | SHIMOGA NEWS | 20 JUNE 2021 ವಾಕಿಂಗ್, ಜಾಗಿಂಗ್, ಯೋಗ ಪ್ರಿಯರಿಗೆ ಲಾಕ್‍ ಡೌನ್‍ನಿಂದ ರಿಲೀಫ್‍ ಸಿಕ್ಕಿದೆ. ಶಿವಮೊಗ್ಗ ಜಿಲ್ಲೆಯ ಪಾರ್ಕು, ಸ್ಟೇಡಿಯಂನಲ್ಲಿ ವ್ಯಾಯಾಮ ಮಾಡಲು ಅವಕಾಶ ನೀಡಲಾಗಿದೆ. ಜಿಲ್ಲಾಧಿಕಾರಿ ಅವರಿಗೆ ಇರುವ ವಿಶೇಷ ಅಧಿಕಾರ ಬಳಕೆ ಮಾಡಿಕೊಂಡು ಯೋಗ, ವಾಕಿಂಗ್, ಜಾಗಿಂಗ್‍ಗೆ ಅವಕಾಶ ನೀಡಲಾಗುತ್ತಿದೆ. ಆದರೆ ಹೆಚ್ಚು ಜನ ಸೇರಬಾರದು ಎಂಬ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು. ಇದನ್ನೂ ಓದಿ | ಶಿವಮೊಗ್ಗ, ಭದ್ರವತಿಗೆ ಪ್ರತ್ಯೇಕ … Read more

ಮಹತ್ವದ ಗುರಿ, 400 ದಿನಗಳ ಕಾಲ್ನಡಿಗೆ, ಶಿವಮೊಗ್ಗಕ್ಕೆ ಬಂದರು ಸಾಹಸಿ

030621 Alone Walk From Bidar to Chamarajanagara 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 4 JUNE 2021 ಮಹತ್ವದ ಗುರಿಯೊಂದಿಗೆ ಬೆಂಗಳೂರು ಮೂಲದ ವ್ಯಕ್ತಿಯೊಬ್ಬರು ಕರ್ನಾಟಕದ ಉದ್ದಗಲಕ್ಕೆ ಪಾದಯಾತ್ರೆ ನಡೆಸುತ್ತಿದ್ದಾರೆ. ಶಿವಮೊಗ್ಗಕ್ಕೆ ಭೇಟಿ ನೀಡಿದ್ದ ಇವರು, ಇಲ್ಲಿಯು ಹಲವರೊಂದಿಗೆ ಸಂವಾದ ನಡೆಸಿದರು. ಬೆಂಗಳೂರು ಮೂಲದ ವಿವೇಕಾನಂದ ಅವರು ಬೀದರ್ ಜಿಲೆಯ ಔರಾದ್ ತಾಲುಕಿನಿಂದ ದಕ್ಷಿದ ಚಾಮರಾಜನಗರದವರೆಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಸುಮಾರು 400 ದಿನಗಳ ಪಾದಯಾತ್ರೆಯಲ್ಲಿ ಈಗಾಗಲೇ ಅರ್ಧದಷ್ಟು ಕ್ರಮಿಸಿದ್ದಾರೆ. ಲಾಕ್ ಡೌನ್ ನಡುವೆಯು ಒಂದೆ ಒಂದು ರುಪಾಯಿ ಖರ್ಚು ಮಾಡದೆ. ಯಾರಿಂದಲೂ ಒಂದು … Read more