ಶಿವಮೊಗ್ಗ ಲೈವ್.ಕಾಂ | BHADRAVATHI NEWS | 13 ಅಕ್ಟೋಬರ್ 2020
ವೇತನ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ನಿರಾವರಿ ನಿಗಮದ BRLBCಯ ನಾಲ್ಕು ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ದಿನಗೂಲಿ ಮತ್ತು ಗುತ್ತಿಗೆ ನೌಕರರು ಮಿಲ್ಟ್ರಿಕ್ಯಾಂಪ್ನಲ್ಲಿರುವ ನೀರಾವರಿ ಇಲಾಖೆ ಕಛೇರಿ ಮುಂದೆ ಪ್ರತಿಭಟನೆ ನೆಡೆಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ನಾಲ್ಕು ವಿಭಾಗಗಳಲ್ಲಿ 500 ಮಂದಿ ದಿನಗೂಲಿ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಹಿಂದಿನ ಗುತ್ತಿಗೆದಾರ ಎರಡು ತಿಂಗಳ ವೇತನ ನೀಡಿರಲಿಲ್ಲ. ಹಾಗಾಗಿ ಹೋರಾಟ ನಡೆಸಿದ ಪರಿಣಾಮ ಹೊಸ ಗುತ್ತಿಗೆ ನೇಮಕ ಮಾಡಲಾಗಿದೆ. ಹೊಸ ಗುತ್ತಿಗೆದಾರ ಇಎಸ್ಐ, ಪಿಎಫ್ ಕಂತು ಹಾಗೂ ವೇತನ ವ್ಯತ್ಯಾಸದ ಹಣ ತುಂಬಿಲ್ಲ ಎಂದು ಆರೋಪಿಸಿದರು.
ವೇತನವಿಲ್ಲದೆ ದಿನಗೂಲಿ ನೌಕರರ ಬದುಕು ದುಸ್ಥರವಾಗಿದೆ. ಆದ್ದರಿಂದ ಹಳೆ ಗುತ್ತಿಗೆದಾರ ಎರಡು ತಿಂಗಳ ವೇತನವನ್ನು ತಕ್ಷಣ ನೀಡಬೇಕು ಮತ್ತು ಹೊಸ ಗುತ್ತಿಗೆದಾರರು ಇಎಸ್ಐ, ಪಿಎಫ್ ಕಂತು ಹಣ ತುಂಬಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನಾಕಾರರ ಮನವಿಗೆ ಸ್ಪಂಧಿಸಿದ ಕಾರ್ಯಪಾಲಕ ಇಂಜಿನಿಯರ್ ರವಿಚಂದ್ರನ್ ಗುತ್ತಿಗೆದಾರರನ್ನು ಕರೆಸಿ ಮತನಾಡಿ ಸಮಸ್ಯೆ ಪರಿಹರಿಸುವ ಭರವಸೆ ನೀಡಿದರು.
ನೀರಾವರಿ ಇಲಾಖೆ ದಿನಗೂಲಿ ಹಾಗೂ ಗುತ್ತಿಗೆ ನೌಕರರ ಸಂಘದ ಅಧ್ಯಕ್ಷ ಹರೀಶ್, ಪ್ರಕಾಶ್ ಕುಮಾರ್, ಕರಿಬಸಪ್ಪ, ಬೊಮ್ಮನಕಟ್ಟೆ ಪ್ರಕಾಶ್, ದೇವೇಂದ್ರಪ್ಪ, ಅಸ್ಮಾ ಬಾನು, ಮೇರಿ, ಶೋಭಾ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಇದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]