BREAKING NEWS | ಹೊಸನಗರದಲ್ಲಿ ಎಸಿಬಿ ದಾಳಿ, ಲಂಚದ ಹಣದ ಜೊತೆಗೆ ಸಿಕ್ಕಿಬಿದ್ದ ಅಧಿಕಾರಿ

Corruption-ACB-Raid-1.jpg

SHIVAMOGGA LIVE NEWS | 30 ಮಾರ್ಚ್ 2022 ಲಂಚದ ಹಣ ಸ್ವೀಕರಿಸುತ್ತಿದ್ದ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳು  ದಾಳಿ ನಡಸಿ, ಬಂಧಿಸಿದ್ದಾರೆ. ಹೊಸನಗರ ತಾಲೂಕು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್ 1 ಹೆಚ್ಚುವರಿ ಪ್ರಭಾರ ಪಿಡಿಓ ಮುರುಗೇಶ್ ಎಸಿಬಿ ಬಲಿಗೆ ಬಿದ್ದ ಅಧಿಕಾರಿ. ಒಂದು ಲಕ್ಷ ಲಂಚಕ್ಕೆ ಬೇಡಿಕೆ ಸ್ಥಳೀಯರೊಬ್ಬರಿಗೆ ಭೂ ಪರಿವರ್ತನೆಗೊಂಡ 10 ಗುಂಟೆ ಜಾಗದ ನಿವೇಶನಗಳಿಗೆ ಪ್ಲಾನಿಂಗ್ ಅಪ್ರೂವಲ್ ಮತ್ತು ಮ್ಯೂಟೇಶನ್ … Read more

ನೀರಿನ ಬಾಟಲಿ ಕೇಳಿ ಬಂದವನು ಅಂಗಡಿ ಮಾಲಕಿಯ ಮಾಂಗಲ್ಯ ಸರ ಕದ್ದೊಯ್ದ

crime name image

SHIVAMOGGA LIVE NEWS | 28 ಮಾರ್ಚ್ 2022 ನೀರಿನ ಬಾಟಲಿ ಖರೀದಿಗೆ ಬಂದವರು ಮಹಿಳೆಯ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದಾರೆ. KTM ಬೈಕಿನಲ್ಲಿ ಬಂದಿದ್ದ ಇಬ್ಬರು ಕಳ್ಳರು ಕೃತ್ಯ ಎಸಗಿದ್ದಾರೆ. ಅಂಗಡಿ ಮಾಲಕಿ ಜಯಮ್ಮ ಎಂಬುವವರ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯ್ದಿದ್ದಾರೆ. ಹೊಸನಗರ ತಾಲೂಕು ರಿಪ್ಪನ್ ಪೇಟೆಯಲ್ಲಿ ಘಟನೆ ಸಂಭವಿಸಿದೆ. ರಿಪ್ಪನ್ ಪೇಟೆಯ ಶಿವಮೊಗ್ಗ ರಸ್ತೆಯಲ್ಲಿ ಜಯಮ್ಮ ಅವರ ಕಿರಾಣಿ ಅಂಗಡಿ ಇದೆ. ಭಾನುವಾರ ಅಂಗಡಿಗೆ ಬಂದ ವ್ಯಕ್ತಿಯೊಬ್ಬ ನೀರಿನ ಬಾಟಲಿ ಕೇಳಿದ್ದಾನೆ. ಬಾಟಲಿ ಕೊಟ್ಟು ಜಯಮ್ಮ … Read more

ಅಡುಗೆ ಮನೆಯಲ್ಲಿ ಕಾಲಿಗೆ ಕುಟುಕಿದ ವಿಷ ಜಂತು, ಗೃಹಿಣಿ ಸಾವು

Woman-dies-of-Snake-Bite-in-Hosanagara-Ramachandra-pura

SHIVAMOGGA LIVE NEWS | 25 ಮಾರ್ಚ್ 2022 ಅಡುಗೆ ಮಾಡುವಾಗ ವಿಷ ಜಂತು ಕಡಿದು ಗೃಹಿಣಿಯೊಬ್ಬರು ಸಾವನ್ನಪ್ಪಿದ್ದಾರೆ. ಹೊಸನಗರ ತಾಲೂಕು ರಾಮಚಂದ್ರಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಾಮುಂಡೇಶ್ವರಿ ಬೆಟ್ಟದ ಬಳಿ ಘಟನೆ ಸಂಭವಿಸಿದೆ. ಸೌಮ್ಯ (24) ಮೃತ ಮಹಿಳೆ. ಮಧ್ಯಾಹ್ನ ಅಡುಗೆ ಮಾಡುವಾಗ ವಿಷ ಜಂತುವೊಂದು ಕಾಲಿಗೆ ಕುಟುಕಿದೆ. ಕೆಲ ಹೊತ್ತಿನ ಬಳಿಕ ನೋವು ಕಾಣಿಸಿಕೊಂಡು, ಕಾಲು ಊದಿಕೊಂಡಿದೆ. ಕೂಡಲೆ ಸೌಮ್ಯ  ಅವರನ್ನು ಹೊಸನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ … Read more

BSNL ವಿರುದ್ಧ ಗ್ರಾಮಸ್ಥರ ಸಿಟ್ಟು, ಅಧಿಕಾರಿಗಳಿಗೆ ಒಂದು ವಾರ ಗಡುವು

Aramanekoppa-Villagers-Protest-against-BSNL

SHIVAMOGGA LIVE NEWS | 7 ಮಾರ್ಚ್ 2022 ಬಿಎಸ್ಎನ್ಎಲ್ ಅಸಮರ್ಪಕ ಸಂಪರ್ಕದ ವಿರುದ್ಧ ಹೊಸನಗರ ತಾಲೂಕು ಅರಮನೆಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತಿಮನೆ ದೂರವಾಣಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಅಧಿಕಾರಿಗಳಿಗೆ ಒಂದು ವಾರದ ಗಡುವು ಕೂಡ ನೀಡಿದ್ದಾರೆ. ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವೇನು? ♦ ಮತ್ತಿಮನೆ ಕೇಂದ್ರದ ವ್ಯಾಪ್ತಿಯಲ್ಲಿ ಮತ್ತಿಮನೆ, ಸಮಗೋಡು, ಅರಮನೆಕೊಪ್ಪ, ಕಿರುಗುಳಿಗೆ, ಹಲಸಿನಕಟ್ಟೆ, ಓತನಾಡಿ, ತರುವೆ, ಕುಂದಗಲ್ಲು ಸೇರಿದಂತೆ ಹಲವು ಗ್ರಾಮಗಳು ಬರಲಿವೆ. ಇಲ್ಲಿ 250ಕ್ಕೂ ಹೆಚ್ಚು ಸ್ಥಿರ ದೂರವಾಣಿ … Read more

ಅರಸಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಕೆರೆ ಜಾಗ ಕಬಳಿಕೆ, ಹೋರಾಟಗಾರರಿಂದ ಪರಿಶೀಲನೆ

Lake-Survey-at-Arasalu-Village

SHIVAMOGGA LIVE NEWS | 6 ಮಾರ್ಚ್ 2022 ಕೆರೆ ಒಂದನ್ನು ಒತ್ತುವರಿ ಮಾಡಿ ಆ ಜಾಗದಲ್ಲಿ ಬೆಳೆ ಬೆಳೆಯುತ್ತಿರುವ ಆರೋಪದ ಹಿನ್ನೆಲೆ, ಇವತ್ತು ಪರಿಸರ ಪ್ರಿಯರ ತಂಡ ಪರಿಶೀಲನೆ ನಡೆಸಿತು. ಒತ್ತುವರಿ ಮಾಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದ್ದು, ಜಿಲ್ಲಾಡಳಿತ ತುರ್ತು ಕ್ರಮ ಕೈಗೊಂಡು ನೂರಾರು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಪರಿಸರ ಪ್ರಿಯರು ಆಗ್ರಹಿಸಿದ್ದಾರೆ. ಹೊಸನಗರ ತಾಲೂಕು ಅರಸಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಗುಡ್ಡದ ತೋಟ ಎಂಬಲ್ಲಿ ಕೆರೆ ಒತ್ತುವರಿ ಆಗಿರುವ ಆರೋಪವಿದೆ. ಈ … Read more

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್, ಪಿಎಸ್ಐ ವಿರುದ್ಧ ವಿಚಾರಣೆ

IPS office Lakshmi Prasad

SHIVAMOGGA LIVE NEWS | 6 ಮಾರ್ಚ್ 2022 ವ್ಯಕ್ತಿಯೊಬ್ಬರ ಮೇಲೆ ಪಿಎಸ್ಐ ಮತ್ತು ಕಾನ್ಸ್ ಟೇಬಲ್ ಒಬ್ಬರು ಲಾಠಿಯಿಂದ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದೆ. ಈ ಸಂಬಂಧ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಅವರು ತನಿಖೆಗೆ ಆದೇಶಿಸಿದ್ದಾರೆ. ವಿಡಿಯೋ ವೈರಲ್ ಆದ ಬೆನ್ನಿಗೆ ಪೊಲೀಸ್ ಇಲಾಖೆ ಪ್ರಕಟಣೆ ಹೊರಡಿಸಿದೆ. ‘ಸಾಮಾಜಿಕ ಜಾಲ ತಾಣದಲ್ಲಿ ಹೊಸನಗರ ಪೊಲೀಸ್ ಠಾಣೆ ಪಿಎಸ್ಐ ಅವರು ಮಾನಸಿಕ ಅಸ್ವಸ್ಥ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುತ್ತಾರೆ ಎಂದು ವಿಡಿಯೋ ವೈರಲ್ … Read more

BREAKING | ರಾತ್ರೋರಾತ್ರಿ ಗ್ರಾಮದ ಮುಂದೆ ವಾಮಾಚಾರ, ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ

vamachara-in-near-ripponpete-benavalli.

SHIVAMOGGA LIVE NEWS | 3 ಮಾರ್ಚ್ 2022 ರಾತ್ರೋರಾತ್ರಿ ಗ್ರಾಮವೊಂದರ ಮುಂದೆ ವಾಮಾಚಾರ ಮಾಡಲಾಗಿದೆ. ಊರಿನ ಸಂಪರ್ಕ ರಸ್ತೆ ಸಮೀಪ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಹೊಸನಗರ ತಾಲೂಕು ಬೆನವಳ್ಳಿ ಗ್ರಾಮದ ಮುಂದೆ ವಾಮಾಚಾರ ಮಾಡಿರುವುದು ಕಂಡು ಬಂದಿದೆ. ರಂಗೋಲಿ ಹಿಟ್ಟಿನ ಗೊಂಬೆ, ಮೊಟ್ಟೆ, ಬಟ್ಟೆ, ಕೂದಲು ಸೇರಿದಂತೆ ಹಲವು ವಸ್ತುಗಳು ಪತ್ತೆಯಾಗಿವೆ. ರಾತ್ರೋರಾತ್ರಿ ನಡೆದ ವಾಮಾಚಾರ ಬೆನವಳ್ಳಿ ಮತ್ತು ಕೆಂಚನಾಲ ಗ್ರಾಮಗಳ ಗಡಿಯಲ್ಲಿ ವಾಮಾಚಾರ ಮಾಡಲಾಗಿದೆ. ಬುಧವಾರ ಸಂಜೆ … Read more

ರಾತ್ರೋರಾತ್ರಿ ಕೋಟೆ ದೇವಸ್ಥಾನದ ಹುಂಡಿ ಕಳವು

Hosanagara taluk name Graphics

ಶಿವಮೊಗ್ಗದ ಲೈವ್.ಕಾಂ | RIPPONPETE NEWS | 15 ಫೆಬ್ರವರಿ 2022 ರಾತ್ರೋರಾತ್ರಿ ದೇವಸ್ಥಾನ ಒಂದರ ಬೀಗ ಮುರಿದು ಹುಂಡಿ ಕಳವು ಮಾಡಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ. ಸಮೀಪದ ಕೋಡೂರಿನ ಮುತ್ತಲ ಗ್ರಾಮದ ಹೊಸಹಳ್ಳಿ ಕೋಟೆ ಈಶ್ವರ ದೇವಸ್ಥಾನದ ಬೀಗ ಮುರಿದು ಹುಂಡಿ ಕಳವು ಮಾಡಲಾಗಿದೆ. ಶುಕ್ರವಾರ ರಾತ್ರಿ ಕಳ್ಳರು ದೇವಸ್ಥಾನದ ಬಾಗಿಲ ಬೀಗ ಮುರಿದು ಒಳನುಗ್ಗಿದ್ದು ಹುಂಡಿಯಲ್ಲಿದ್ದ ಹಣ ಹೊತ್ತೊಯ್ದಿದ್ದಾರೆ. ಈ ಬಗ್ಗೆ ದೇವಸ್ಥಾನದ ಅಧ್ಯಕ್ಷ ಬಸವರಾಜ ಗೌಡ ನೀಡಿದ ದೂರಿನ … Read more

ಹೊಸನಗರದಲ್ಲಿ ತಂದೆಯಿಂದಲೇ ಮಗನಿಗೆ ಚಾಕು ಇರಿತ

Hosanagara Police Station 1

ಶಿವಮೊಗ್ಗದ ಲೈವ್.ಕಾಂ | HOSANAGARA NEWS | 10 ಫೆಬ್ರವರಿ 2022 ಸಾರ್ವಜನಿಕ ಸ್ಥಳದಲ್ಲಿ ತಂದೆಯೇ ಮಗನಿಗೆ ಚಾಕುವಿನಿಂದ ಇರಿದ್ದಿದ್ದಾರೆ. ಕೌಟುಂಬಿಕ ಕಲಹವೆ ಘಟನೆಗೆ ಕಾರಣ ಎಂದು ತಿಳಿದು ಬಂದಿದೆ. ತೀರ್ಥೇಶ್ (33) ಗಾಯಗೊಂಡಿರುವವರು. ತಂದೆ ರಾಜಪ್ಪಗೌಡ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ. ಹೊಸನಗರದ ಗೊರಗೋಡು ಗ್ರಾಮದಲ್ಲಿ ತೀರ್ಥೇಶ್ ಅವರು ಕೆಲಸದ ನಿಮಿತ್ತ ಹೊಸನಗರಕ್ಕೆ ಬಂದಿದ್ದರು. ಇಲ್ಲಿನ ಹೊಟೇಲ್ ಒಂದರಲ್ಲಿ ತೀರ್ಥಶ್ ಊಟ ಮಾಡುತ್ತಿದ್ದಾಗ ತಂದೆ ರಾಜಪ್ಪಗೌಡ ಬಂದು ಗಲಾಟೆ ಮಾಡಿದ್ದಾರೆ. ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಬಂದಿದ್ದ ಚಾಕು … Read more

ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಬಾವಿಗೆ ಹಾರಿದ ತಾಯಿ

crime name image

ಶಿವಮೊಗ್ಗದ ಲೈವ್.ಕಾಂ | RIPPONPETE NEWS | 4 ಫೆಬ್ರವರಿ 2022 ನಾಲ್ಕು ವರ್ಷದ ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ಮಹಿಳೆಯೊಬ್ಬರು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಮತ್ತು ಆತನ ಮನೆಯವರ ಕಿರುಕುಳವೆ ಘಟನೆ ಕಾರಣ ಎಂದು ಮಹಿಳೆಯ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ. ಹೊಸನಗರ ತಾಲೂಕು ಬಿದರಹಳ್ಳಿಯ ಚಿಟ್ಟೆಗದ್ದೆಯ ವಿದ್ಯಾ (32), ಮಗಳು ತನ್ವಿ (4) ಮೃತರು. ಮನೆ ಬಳಿಯ ಬಾವಿಯಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ಬೆಳಗಿನ ಜಾವ ಬಾವಿಗೆ ಹಾರಿದ್ದಾರೆ ಗುರುವಾರ ಬೆಳಗಿನ ಜಾವ ವಿದ್ಯಾ, … Read more