ಜೋಗ ಜಲಪಾತಕ್ಕೆ ಬರುವ ಪ್ರವಾಸಿಗರಿಗೆ ಸ್ವಲ್ಪ ರಿಲೀಫ್

JOG FALLS GENERAL IMAGE

ಶಿವಮೊಗ್ಗ ಲೈವ್.ಕಾಂ | SHIMOGA NEWS | 15 ಸೆಪ್ಟೆಂಬರ್ 2021 ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಶಿವಮೊಗ್ಗ ಜಿಲ್ಲಾಡಳಿತ ರಿಲೀಫ್ ನೀಡಿದೆ. ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯಗೊಳಿಸಿದ್ದ ಜಿಲ್ಲಾಡಳಿತ ಈಗ ಹೊಸ ನಿಯಮ ಜಾರಿಗೊಳಿಸಿದೆ. ಇನ್ಮುಂದೆ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರಿಗೆ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿ ಕಡ್ಡಾಯವಿಲ್ಲ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಮಕೃಷ್ಣ ತಿಳಿಸಿದ್ದಾರೆ. ಲಸಿಕೆ ಹಾಕಿಸಿದ್ದರಷ್ಟೇ ಜೋಗ ದರ್ಶನ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರು … Read more

ಮಂಡಗದ್ದೆಯಲ್ಲಿ ಕೆರೆ ಬಳಿ ನವಜಾತ ಶಿಶುವಿನ ಮೃತದೇಹ ಪತ್ತೆ

Mandagadde Graphics by smg live

ಶಿವಮೊಗ್ಗ ಲೈವ್.ಕಾಂ | MANDAGADDE NEWS | 15 ಸೆಪ್ಟೆಂಬರ್ 2021 ಕೆರೆಯೊಂದರ ಸಮೀಪ ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದೆ. ಆಗಷ್ಟೆ ಜನಿಸಿದ ಮಗುವನ್ನು ಬಿಟ್ಟು ಹೋಗಿರುವ ಸಾಧ್ಯತೆ ಇದೆ. ಮಂಡಗದ್ದೆ ಸಮೀಪದ ಗುತ್ಯಮ್ಮ ದೇವಸ್ಥಾನದ ಕೆರೆ ಸಮೀಪ ಮಗುವಿನ ಮೃತದೇಹ ಪತ್ತೆಯಾಗಿದೆ. ಸ್ಥಳೀಯರು ಮೀನು ಹಿಡಿಯಲು ತೆರಳಿದ್ದಾಗ ಮೃತದೇಹ ಇರುವುದು ಬೆಳಕಿಗೆ ಬಂದಿದೆ. ಮಗುವನ್ನು ಇಲ್ಲಿ ಬಿಟ್ಟು ಹೋದ ಮೇಲೆ ಮೃತಪಟ್ಟಿದೆಯೋ ಅಥವಾ ಮೃತಪಟ್ಟ ಬಳಿಕ ಇಲ್ಲಿ ಇರಿಸಲಾಯಿತೋ ಎಂಬುದು ತಿಳಿದು ಬಂದಿಲ್ಲ. ಜೆಸಿ ಆಸ್ಪತ್ರೆಯ … Read more

ತಾಯಿಯ ಕಪಾಳಕ್ಕೆ ಹೊಡೆದು, ಕುತ್ತಿಗೆ ಮೇಲೆ ಕಾಲಿಟ್ಟು ಕೊಲೆ ಮಾಡಿದ ಮಗ

murder graphical image

ಶಿವಮೊಗ್ಗ ಲೈವ್.ಕಾಂ | SHIMOGA NEWS | 14 ಸೆಪ್ಟೆಂಬರ್ 2021 ತಾಯಿಯ ಕಪಾಳಕ್ಕೆ ಹೊಡೆದು, ಆಕೆಯ ಕುತ್ತಿಗೆಯನ್ನು ತುಳಿದು ಮಗನೇ ಹತ್ಯೆ ಮಾಡಿದ ಭೀಕರ ಘಟನೆ ನಡೆದಿದೆ. ಈ ಸಂಬಂಧ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ವನಜಾಕ್ಷಿ (45) ಮೃತ ಮಹಿಳೆ. ಬುಳ್ಳಾಪುರ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ದೇವರಾಜ್ (27) ತನ್ನ ತಂದೆ ಮತ್ತು ತಾಯಿ ಜೊತೆಗೆ ಜಗಳವಾಡಿದ್ದಾನೆ. ಈ ವೇಳೆ ಸಿಟ್ಟಿಗೆದ್ದು ತಾಯಿಯ ಕಪಾಳಕ್ಕೆ ಹೊಡೆದಿದ್ದಾನೆ. ಆಕೆ ಕುಸಿದು ಬೀಳುತ್ತಿದ್ದಂತೆ ಕುತ್ತಿಗೆ ಮೇಲೆ ಕಾಲಿಟ್ಟು ತುಳಿದಿದ್ದಾನೆ. … Read more

ನಮ್ಮೂರ ಹೆಣ್ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಅಂತಾ ಊರ ಮುಂದೆ ಬ್ಯಾನರ್ ಕಟ್ಟಿದ ಗ್ರಾಮಸ್ಥರು, ಕಾರಣವೇನು?

140921 Sagara Villagers Protest Agianst Wine Shop

ಶಿವಮೊಗ್ಗ ಲೈವ್.ಕಾಂ | SAGARA NEWS | 14 ಸೆಪ್ಟೆಂಬರ್ 2021 ತಮ್ಮ ಬೇಡಿಕೆ ಈಡೇರುವವರೆಗೂ ನಮ್ಮೂರ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ. ಹೀಗಂತ ಗ್ರಾಮಸ್ಥರು ಪಟ್ಟು ಹಿಡಿದು, ಪ್ರತಿಭಟನೆ ಆರಂಭಿಸಿದ್ದಾರೆ. ಇದು ಜಿಲ್ಲಾಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸಾಗರ ತಾಲೂಕು ಪಡವಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳಿಕೊಪ್ಪದ ಗ್ರಾಮಸ್ಥರು ವಿಭಿನ್ನ ಹೋರಾಟ ಆರಂಭಿಸಿದ್ದಾರೆ. ತಮ್ಮ ಬೇಡಿಕೆ ಈಡೇರುವವರೆಗೂ ಹೆಣ್ಣು ಮಕ್ಕಳನ್ನ ಶಾಲೆಗೆ ಕಳುಹಿಸುವುದಿಲ್ಲ ಎಂದು ಜಿಲ್ಲಾಡಳಿತ ಮತ್ತು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಈ ಬಗ್ಗೆ ಊರಿನ ಮುಂದೆ … Read more

ಹೊಸನಗರದಲ್ಲಿ ವಾಡಿಕೆಗಿಂತಲೂ ಐದು ಪಟ್ಟು ಹೆಚ್ಚು ಮಳೆ, ಆರು ದಿನದಲ್ಲಿ ಅತ್ಯಧಿಕ, ಈವರೆಗೂ ಎಷ್ಟು ಮಳೆಯಾಗಿದೆ?

rain in shimoga

ಶಿವಮೊಗ್ಗ ಲೈವ್.ಕಾಂ | HOSANAGARA NEWS | 13 ಸೆಪ್ಟೆಂಬರ್ 2021 ಹೊಸನಗರ ತಾಲೂಕಿನಲ್ಲಿ ಈ ತಿಂಗಳು ವಾಡಿಕೆಗಿಂತಲೂ ಐದು ಪಟ್ಟು ಹೆಚ್ಚು ಮಳೆಯಾಗಿದೆ. ಅದರಲ್ಲೂ ಕಳೆದ ಆರು ದಿನದಲ್ಲಿ ಅತ್ಯಧಿಕ ಮಳೆ ಸುರಿದಿದೆ. ಸೆಪ್ಟೆಂಬರ್ ತಿಂಗಳಲ್ಲಿ ಹೊಸನಗರ ತಾಲೂಕಿನಲ್ಲಿ 219 ಮಿ.ಮೀ ವಾಡಿಕೆ ಮಳೆಯಾಗಬೇಕಿತ್ತು. ಆದರೆ ಈ ಭಾರಿ 1150.20 ಮಿ.ಮೀ ಮಳೆಯಾಗಿದೆ. ಕಳೆದ ಆರು ದಿನದಲ್ಲಿ ಹೊಸನಗರ ತಾಲೂಕಿನಲ್ಲಿ 875.4 ಮಿ.ಮೀ ಮಳೆಯಾಗಿದೆ. ಸೆಪ್ಟೆಂಬರ್ 8ರಿಂದ ವರುಣ ಅಬ್ಬರಿಸಲು ಆರಂಭಿಸಿದ್ದಾನೆ. ಆ ದಿನ ತಾಲೂಕಿನಲ್ಲಿ … Read more

ಹಣಗೆರೆಯಿಂದ ಹಿಂತಿರುಗುತ್ತಿದ್ದಾಗ ಬೈಕ್ ಸ್ಕಿಡ್, ಗಾಯ, ಚಿಕಿತ್ಸೆ ಪಡೆದು ಮರಳಿದಾಗ ಕಾದಿತ್ತು ಶಾಕ್

ಶಿವಮೊಗ್ಗ ಲೈವ್.ಕಾಂ | SHIMOGA NEWS | 13 ಸೆಪ್ಟೆಂಬರ್ 2021 ಹಣಗೆರೆಯಲ್ಲಿ ಪೂಜೆ ಸಲ್ಲಿಸಿ ಮರಳುತ್ತಿದ್ದಾಗ ಬೈಕ್ ಸ್ಕಿಡ್ ಆಗಿ ದಂಪತಿ ಗಾಯಗೊಂಡಿದ್ದಾರೆ. ಬೇರೊಂದು ವಾಹನದಲ್ಲಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಹಿಂತಿರುಗಿದಾಗ, ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಬೈಕ್ ನಾಪತ್ತೆಯಾಗಿದೆ. ಶಿವಮೊಗ್ಗದ ಇನಾಯತ್ ಉಲ್ಲಾ ಅವರ ಬೈಕ್ ಕಳುವಾಗಿದೆ. ತಮ್ಮ ಪತ್ನಿ ಜೊತೆಗೆ ಅವರು ಹಣಗೆರೆ ಕಟ್ಟೆಗೆ ತೆರಳಿ, ಪೂಜೆ ಸಲ್ಲಿಸಿ ಹಿಂತಿರುಗುತ್ತಿದ್ದರು. ಸಿರಿಗೆರೆ ಅರಣ್ಯ ಚೆಕ್ ಪೋಸ್ಟ್ ಸಮೀಪ ಬೈಕ್ ಸ್ಕಿಡ್ ಆಗಿದೆ. ಕಾರಲ್ಲಿ … Read more

ವಿದ್ಯುತ್ ತಂತಿಗೆ ತಾಗುತ್ತದೆ ಅಂತಾ ರೆಂಬೆಗಳನ್ನು ಕಡಿದವರ ವಿರುದ್ಧ ಕೇಸ್

120921 Case Against Tree Cutting Near Umblebyle

ಶಿವಮೊಗ್ಗ ಲೈವ್.ಕಾಂ | SHIMOGA NEWS | 12 ಸೆಪ್ಟೆಂಬರ್ 2021 ಅನುಮತಿ ಪಡೆಯದೆ ಮರಗಳ ಕಡಿತಲೆ ಮಾಡಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಕಡಿದ ಮರಗಳು ಮತ್ತು ಟ್ರಾಕ್ಟರನ್ನು ವಶಪಡಿಸಿಕೊಳ್ಳಲಾಗಿದೆ. ಉಂಬ್ಳೇಬೈಲು – ಕೈದೊಟ್ಲು ಗ್ರಾಮಗಳ ನಡುವೆ ಘಟನೆ ಸಂಭವಿಸಿದೆ. ಮರ ಕಡಿಯುತ್ತಿರುವ ಕುರಿತು ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಅನುಮತಿ ಪಡೆಯದೆ ಮರ ಕಡಿಯುತ್ತಿರುವುದು ಬೆಳಕಿಗೆ ಬಂದಿದೆ. ನಿರಂತರ ಜ್ಯೋತಿ ವಿದ್ಯುತ್ ಮಾರ್ಗಕ್ಕೆ ಕಡಿತಲೆ ನಿರಂತರ ಜ್ಯೋತಿ … Read more

‘ಬಾಣಂತಿ, ಮಗು ಇದ್ದ ವಾಹನ ಲಾಂಚ್’ಗೆ ಹತ್ತಿಸದ ಸಿಬ್ಬಂದಿ’

Sigandur Launch with people 1

ಶಿವಮೊಗ್ಗ ಲೈವ್.ಕಾಂ | TUMARI NEWS | 8 ಸೆಪ್ಟೆಂಬರ್ 2021 ಸಿಗಂದೂರು ಲಾಂಚ್’ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು ಎಂಬ ಆಗ್ರಹ ಪುನಃ ಮುನ್ನಲೆಗೆ ಬಂದಿದೆ. ಅಂಬಾರಗೋಡ್ಲು – ಕಳಸವಳ್ಳಿ ನಡುವೆ ಶರಾವತಿ ಹಿನ್ನೀರಿನಲ್ಲಿ ಸಂಚರಿಸುವ ಲಾಂಚ್’ನಲ್ಲಿ ಸ್ಥಳೀಯರಿಗೆ ಮೊದಲ ಆದ್ಯತೆ ನೀಡಬೇಕು. ಸ್ಥಳೀಯರಿಗೆ ಅನುಕೂಲ ಮಾಡಿಕೊಡುವುದೆ ಈ  ಲಾಂಚ್’ಗಳ ಮೂಲ ಉದ್ದೇಶವಾಗಿದೆ ಎಂದು ಜನಪರ ಹೋರಾಟ ವೇದಿಕೆ ಮುಖಂಡ ಪ್ರದೀಪ್ ಮಾವಿನಕೈ ಒತ್ತಾಯಿಸಿದ್ದಾರೆ. ಬಾಣಂತಿ ಇದ್ದ ವಾಹನ ಹತ್ತಿಸಲಿಲ್ಲ ಇತ್ತೀಚೆಗೆ ಲಾಂಚ್ ಸಿಬ್ಬಂದಿ ಸ್ಥಳೀಯ … Read more

ಒಂದೇ ಸೀರೆಗೆ ಕೊರಳೊಡ್ಡಿ ತಾಯಿ, ಮಗಳು ಆತ್ಮಹತ್ಯೆ

Suicide-Hanging-General

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟೆಂಬರ್ 2021 ಗೃಹಿಣಿಯೊಬ್ಬರು ಮಗಳಿಗೆ ನೇಣು ಬಿಗಿದು, ತಾವೂ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲದ ಭೀತಿಯಿಂದಾಗಿ ಘಟನೆ ನಡೆದಿರುವ ಶಂಕೆ ಇದೆ. ಸಂಗೀತಾ (35) ಮತ್ತು ಮಧುಶ್ರೀ (11) ಮೃತರು. ಭದ್ರಾವತಿ ಸುಭಾಷ್ ನಗರದಲ್ಲಿ ಘಟನೆ ಸಂಭವಿಸಿದೆ. ಒಂದೇ ಸೀರೆಗೆ ಕೊರಳೊಡಿದರು ತಾಯಿ, ಮಗಳು ಇಬ್ಬರು ಒಂದೇ ಸೀರೆಗೆ ಕೊರಳೊಡ್ಡಿದ್ದಾರೆ. ಸೀರೆಯ ಒಂದು ಬದಿಯಿಂದ ಕುಣಿಕೆ ಹೆಣೆದು ಮಧುಶ್ರೀಯನ್ನು ನೇಣಿಗೇರಿಸಿದ ಸಂಗೀತಾ, ಮತ್ತೊಂದು ತುದಿಗೆ ತಾನು … Read more

ಜಮೀನಿನಲ್ಲಿ ವಿಷ ಸೇವಿಸಿದ್ದ ರೈತ ಹನ್ನೆರಡು ದಿನದ ಬಳಿಕ ಆಸ್ಪತ್ರೆಯಲ್ಲಿ ಕೊನೆಯುಸಿರು

farmer suicide poison

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 7 ಸೆಪ್ಟೆಂಬರ್ 2021 ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತ ಹನ್ನೆರಡು ದಿನದ ಬಳಿಕ ಕೊನೆಯುಸಿರೆಳೆದಿದ್ದಾರೆ. ಸಾಲ ಬಾಧೆಗೆ ಮನನೊಂದು ಅವರು ವಿಷ ಕುಡಿದಿದ್ದರು. ಮಂಜಪ್ಪ (72) ಆತ್ಮಹತ್ಯೆ ಮಾಡಿಕೊಂಡಿದ್ದ ರೈತ. ಆಗಸ್ಟ್ 26ರಂದು ಮಂಜಪ್ಪ ಅವರು ತಮ್ಮ ಜಮೀನಿನಲ್ಲಿ ವಿಷ ಸೇವಿಸಿದ್ದರು. ವಿಚಾರ ತಿಳಿದು ಕುಟುಂಬದವರು ಮತ್ತು ಸ್ಥಳೀಯರು ಮಂಜಪ್ಪ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊನೆಯುಸಿರೆಳೆದಿದ್ದಾರೆ. ಮಂಜಪ್ಪ ಅವರು ಸಾಗರ … Read more