ಶಿವಮೊಗ್ಗದಲ್ಲಿ ವಿಜೃಂಭಣೆಯಿಂದ ಶ್ರೀಕಾಂತ್‌ ಜನ್ಮದಿನಾಚರಣೆ, ಹೇಗಿತ್ತು ಸಂಭ್ರಮ? ಯಾರೆಲ್ಲ ಏನೆಲ್ಲ ಹೇಳಿದರು?

M-Srikanth-Birthday-in-Shimoga-minister-madhu-bangarappa-wishes

ಶಿವಮೊಗ್ಗ : ಕಾಂಗ್ರೆಸ್‌ ಮುಖಂಡ ಎಂ.ಶ್ರೀಕಾಂತ್‌ ಜನ್ಮದಿನವನ್ನು (Birthday) ಅವರ ಅಭಿಮಾನಿಗಳು ವಿಜೃಂಭಣೆಯಿಂದ ಆಚರಿಸಿದರು. ನಗರದ ಬಂಜಾರ ಕನ್ವೆನ್ಷನ್‌ ಹಾಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಎಂ.ಶ್ರೀಕಾಂತ್‌ ಕೇಕ್‌ ಕತ್ತರಿಸಿ ಜನ್ಮದಿನ ಆಚರಿಸಿಕೊಂಡರು. ಇದಕ್ಕೂ ಮುನ್ನ ಬಂಜಾರ ಕನ್ವೆನ್ಷನ್‌ ಹಾಲ್‌ಗೆ ಎಂ.ಶ್ರೀಕಾಂತ್‌ ಅವರಿಗೆ ಅದ್ಧೂರಿ ಸ್ವಾಗತ ನೀಡಲಾಯಿತು. ಮೆರವಣಿಗೆ ಮೂಲಕ ಅವರನ್ನು ಸಭಾಂಗಣಕ್ಕೆ ಕರೆತರಲಾಯಿತು. ಬಳಿಕ ನಟ ಪುನಿತ್‌ ರಾಜ್‌ಕುಮಾರ್‌ ಅಭಿನಯದ ರಾಜಕುಮಾರ ಸಿನಿಮಾದ ಹಾಡಿನ ಮೂಲಕ ಅಭಿಮಾನಿಗಳು ಜನ್ಮದಿನದ ಶುಭಕೋರಿದರು. ಯಾರೆಲ್ಲ ಏನೆಲ್ಲ ಹೇಳಿದರು? ನಮ್ಮ ತಂದೆ ಬಂಗಾರಪ್ಪ … Read more

ಶಿವಮೊಗ್ಗಕ್ಕೆ ಇವತ್ತು ಬಿ.ಕೆ.ಹರಿಪ್ರಸಾದ್‌, ಎರಡು ದಿನ ಪ್ರವಾಸ, ಯಾವೆಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ?

220225 BK Hariprasad MLC

ಶಿವಮೊಗ್ಗ : ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಎರಡು ದಿನ ಶಿವಮೊಗ್ಗ ಪ್ರವಾಸ (Tour) ಕೈಗೊಂಡಿದ್ದಾರೆ. ಫೆ.22 ಮತ್ತು 23ರಂದು ವಿವಿಧೆಡೆಗೆ ಭೇಟಿ ನೀಡಿಲಿದ್ದು, ಹಲವು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಫೆ.22ರಂದು ಇಂಟರ್‌ಸಿಟಿ ರೈಲಿನಲ್ಲಿ ಮಧ್ಯಾಹ್ನ 3.12ರಂದು ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಶಿವಮೊಗ್ಗ ಸರ್ಕ್ಯೂಟ್‌ ಹೌಸ್‌ನಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಫೆ.23ರಂದು ತೀರ್ಥಹಳ್ಳಿಯ ಬೆಜ್ಜವಳ್ಳಿಯಲ್ಲಿ ಬೆಳಗ್ಗೆ 10.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜದ ಸಭಾಭವನದ ಕಾಮಗಾರಿ ವೀಕ್ಷಿಸಲಿದ್ದಾರೆ. ತೀರ್ಥಹಳ್ಳಿಯಲ್ಲಿ ಮುಸ್ಲಿಂ ಒಕ್ಕೂಟ ಆಯೋಜಿಸಿರುವ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ … Read more

ಶಿವಮೊಗ್ಗದಲ್ಲಿ ವಿಜಯೇಂದ್ರ, ‘ಶಾಸಕರ ಖರೀದಿಗೆ ಕಾಂಗ್ರೆಸ್‌ ಪಕ್ಷದೊಳಗೆ ಪೈಪೋಟಿ’

BY-Vijayendra-in-Shimoga-speaks-about-Operation.

SHIMOGA NEWS, 18 NOVEMBER 2024 : ಕಾಂಗ್ರೆಸ್‌ ಪಕ್ಷದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಪೈಪೋಟಿ ಏರ್ಪಟ್ಟಿದೆ. ಈ ಪೈಪೋಟಿಯ ಕಾರಣಕ್ಕೆ ಕಾಂಗ್ರೆಸ್‌ನಲ್ಲಿ ಕುದುರೆ ವ್ಯಾಪಾರ (Operation) ನಡೆಯುತ್ತಿದೆ. ಯಾವುದೇ ಕಾರಣಕ್ಕೂ ಬಿಜೆಪಿ ಆಪರೇಷನ್‌ ಮಾಡುತ್ತಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಿದರು. ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ವೈ.ವಿಜಯೇಂದ್ರ, ಶಾಸಕ ರವಿ ಗಾಣಿಗ ಮಾತ್ರವಲ್ಲದೆ ಮುಖ್ಯಮಂತ್ರಿಯವರು ಕೂಡ ಶಾಸಕರ ಖರೀದಿಯ ಕುರಿತು ಹೇಳಿಕೆ ನೀಡಿದ್ದಾರೆ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವ ಸಮಯ ಹತ್ತಿರವಾಗಿದೆ. ಹಾಗಾಗಿ ಕಾಂಗ್ರೆಸ್‌ ಪಕ್ಷದೊಳಗೇ ಕುದುರೆ … Read more

ಶಿವಮೊಗ್ಗದಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ, ನೇಣು ಬಿಗಿದು ಆತ್ಮಹತ್ಯೆಯ ಸವಾಲೊಡ್ಡಿದ ಮುಖಂಡ

Congress-Protest-in-Shimoga-against-Governor

SHIMOGA, 19 AUGUST 2024 : ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ (Governor) ನಡೆ ಖಂಡಿಸಿ ಶಿವಮೊಗ್ಗದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಯಿತು. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು. ಅಲ್ಲದೆ ರಾಜ್ಯಪಾಲರ ನಡೆ ಖಂಡಿಸಿ ಮನವಿ ಸಲ್ಲಿಸಲಾಯಿತು. ಮೆರವಣಿಗೆ, ಟೈರ್‌ಗೆ ಬೆಂಕಿ ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಅಮೀರ್‌ ಅಹಮದ್‌ ವೃತ್ತ, ನೆಹರು ರೋಡ್‌, ಗೋಪಿ ಸರ್ಕಲ್‌, ಬಾಲರಾಜ ಅರಸ್‌ … Read more

ರೈಲು ಅಪಘಾತ, ಕೇಂದ್ರ ಸಚಿವರ ರಾಜೀನಾಮೆಗೆ ಶಿವಮೊಗ್ಗದಲ್ಲಿ ಒತ್ತಾಯ

North-Block-cogress-memorandum-about-railway-in-Shimoga

SHIVAMOGGA LIVE NEWS | 18 JUNE 2024 SHIMOGA : ಪಶ್ಚಿಮ ಬಂಗಾಳದ ಡಾರ್ಜಲಿಂಗ್ ಜಿಲ್ಲೆಯಲ್ಲಿ ಸೋಮವಾರ ಸಂಭವಿಸಿದ ರೈಲು (Railway) ಅಪಘಾತದಲ್ಲಿ 9 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಈ ಘಟನೆಯ ನೈತಿಕ ಹೊಣೆ ಹೊತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ತಕ್ಷಣ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶಿವಮೊಗ್ಗ ನಗರ ಉತ್ತರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಯಿತು. ದೇಶಕ್ಕೆ ಬುಲೆಟ್ ರೈಲು ಕೊಡುತ್ತೇವೆ … Read more

ಶಿವಮೊಗ್ಗದಲ್ಲಿ ಮತ್ತೆ ಗೆದ್ದು 2 ದಾಖಲೆ ನಿರ್ಮಿಸಿದ ಬಿ.ವೈ.ರಾಘವೇಂದ್ರ, ಏನೇನದು?

BY-Raghavendra-Celebration-in-Shimoga

SHIVAMOGGA LIVE NEWS | 5 JUNE 2024 RESULT NEWS : ಸೋಲರಿಯದ ಸರದಾರ ಎಸ್‌.ಬಂಗಾರಪ್ಪ ಅವರನ್ನು ತಮ್ಮ ಮೊದಲ ಚುನಾವಣೆಯಲ್ಲಿ ಬಿ.ವೈ.ರಾಘವೇಂದ್ರ ಸೋಲಿಸಿದ್ದರು. ಆ ನಂತರ ಬಂಗಾರಪ್ಪ ಪುತ್ರ ಮತ್ತು ಪುತ್ರಿಯಲ್ಲಿ ಸೋಲಿಸಿ ಅಪರೂಪದ ದಾಖಲೆ (Record) ಬರೆದಿದ್ದಾರೆ. ಯಡಿಯೂರಪ್ಪ ಕುಟುಂಬ V/S ಬಂಗಾರಪ್ಪ ಕುಟುಂಬ ಶಿವಮೊಗ್ಗದಲ್ಲಿ ನಡೆದ ಕಳೆದ ಐದು ಲೋಕಸಭೆ ಚುನಾವಣೆ ಯಡಿಯೂರಪ್ಪ ಕುಟುಂಬ ಮತ್ತು ಬಂಗಾರಪ್ಪ ಕುಟುಂಬ ನೇರಾನೇರ ಮುಖಾಮುಖಿಯಾಗಿವೆ. ಎಲ್ಲದರಲ್ಲು ಯಡಿಯೂರಪ್ಪ ಮತ್ತು ಬಿ.ವೈ.ರಾಘವೇಂದ್ರ ಜೈತ್ರಯಾತ್ರೆ ಮುಂದುವರೆಸಿಕೊಂಡು ಬಂದಿದ್ದಾರೆ. … Read more

‘ಭ್ರಮೆಯಲ್ಲಿದೆ ಕಾಂಗ್ರೆಸ್‌’, ಜೆಡಿಎಸ್‌ ಆರೋಪ, ‘ಅತಿವೃಷ್ಟಿ ನಿರ್ವಹಣೆ ಹೇಗೆ?’, ಮಾಜಿ ಶಾಸಕ ಪ್ರಶ್ನೆ

Kadidal-Gopal-and-KB-Prasanna-Kumar-press-meet

SHIVAMOGGA LIVE NEWS | 30 MAY 2024 SHIMOGA : ವಿಧಾನ ಪರಿಷತ್ ಚುನಾವಣೆಯನ್ನು ಕಾಂಗ್ರೆಸ್ ಹಣ ಬಲದಲ್ಲಿ (Money Power) ಗೆಲ್ಲಬಹುದು ಎಂಬ ಭ್ರಮೆಯಲ್ಲಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಕಡಿದಾಳ್‌ ಗೋಪಾಲ್ ಆರೋಪಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಋತ್ಯ ಶಿಕ್ಷಕರ ಕ್ಷೇತ್ರದ ಭೋಜೇಗೌಡ ಹಾಗೂ ಪದವೀಧರ ಕ್ಷೇತ್ರದ ಡಾ.ಧನಂಜಯ ಸರ್ಜಿ ಪರ ಕ್ಷೇತ್ರ ವ್ಯಾಪ್ತಿಯಲ್ಲಿ ಉತ್ತಮ ಪ್ರತಿಕ್ರಿಯೆ ಇದೆ. ಆದರೆ, ಕಾಂಗ್ರೆಸ್ ಹಣ ಹಂಚುವ ಮೂಲಕ ಮತ ಸೆಳೆಯಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಡಾ.ಧನಂಜಯ … Read more

ಶಿವಮೊಗ್ಗದಲ್ಲಿ ಸಚಿವ ಸಂತೋಷ್‌ ಲಾಡ್‌, ವಾರ್‌ ರೂಂಗೆ ಭೇಟಿ, ಏನೆಲ್ಲ ಹೇಳಿದರು? ಇಲ್ಲಿದೆ 5 ಪಾಯಿಂಟ್

300424 Santosh Lad in Shimoga loksabha election campaign

SHIVAMOGGA LIVE NEWS | 30 APRIL 2024 ELECTION NEWS : ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಪರ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದರು. ಇದೇ ವೇಳೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ, ವಿಜಯೇಂದ್ರ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಲಾಡ್‌ ಪತ್ರಿಕಾಗೋಷ್ಠಿಯ 5 ಪ್ರಮುಖಾಂಶ ಪ್ರಧಾನಿ ನರೇಂದ್ರ ಮೋದಿ ಅವರ ಸುಳ್ಳುಗಳು ಮತ್ತು ರಾಜ್ಯ ಸರ್ಕಾರದ ಗ್ಯಾರಂಟಿಗಳೇ ಕಾಂಗ್ರೆಸ್ ಗೆಲುವಿಗೆ ಸಹಕಾರಿ. ದೇಶ ಕಂಡ 14 ಪ್ರಧಾನಿಗಳಲ್ಲಿ … Read more

ಶಿವಮೊಗ್ಗಕ್ಕೆ ಬರ್ತಿದ್ದಾರೆ ರಾಹುಲ್‌ ಗಾಂಧಿ, ಸಿನಿಮಾ ನಟ, ನಟಿಯರು, ಯಾವಾಗ, ಎಲ್ಲೆಲ್ಲಿ ಭೇಟಿ ಕೊಡ್ತಾರೆ?

Congress-Candidate-Geetha-Shivarajkumar.

SHIVAMOGGA LIVE NEWS | 27 APRIL 2024 ELECTION NEWS : ಶಿವಮೊಗ್ಗ ಲೋಕಸಭೆ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರಕ್ಕೆ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಮೇ 2ರಂದು ನಗರಕ್ಕೆ ಆಗಮಿಸಲಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಅಂದು ಮಧ್ಯಾಹ್ನ 12 ಗಂಟೆಗೆ ನಗರದ ಫ್ರೀಡಂ ಪಾರ್ಕ್‌ಲ್ಲಿ ಸಮಾವೇಶ ಆಯೋಜಿಸಲಾಗಿದೆ. ಸಾರ್ವಜನಿಕರನ್ನು ಉದ್ದೇಶಿಸಿ ರಾಹುಲ್‌ ಗಾಂಧಿ ಮಾತನಾಡಲಿದ್ದಾರೆ. ಶಿವಮೊಗ್ಗ ನಗರ, ಶಿಕಾರಿಪುರ, ಭದ್ರಾವತಿ, ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಗುರಿಯಾಗಿಸಿ ಕೊಂಡು ಕಾರ್ಯಕ್ರಮ … Read more

ಗಾಜನೂರಿನಲ್ಲಿ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ ಸ್ಪೋಟ, ಕಾರಣವೇನು?

Gajanur-Congress-Party-workers-angry-over-leaders.

SHIVAMOGGA LIVE NEWS | 25 APRIL 2024 GAJANURU : ಪಕ್ಷದ ಮುಖಂಡರು ತಮ್ಮನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಗಾಜನೂರಿನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದರು. ಗಾಜನೂರಿನ ಗ್ರಂಥಾಲಯ ಸಮೀಪ ಗಾಜನೂರು ನಾಗರಾಜ್‌, ಶಿವಕುಮಾರ್‌ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಇದೇ ವೇಳೆ ಮಾತನಾಡಿದ ಗಾಜನೂರು ನಾಗರಾಜ್‌, ವಿಧಾನಸಭೆ ಚುನಾವಣೆ ಸಂದರ್ಭ ಮನೆ ಮನೆಗೆ ತೆರಳಿ ಗ್ಯಾರಂಟಿ ಕಾರ್ಡ್‌ ಹಂಚಿದ್ದೆವು. ಈಗಲು ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದೇವೆ. ಹಾಗಿದ್ದೂ, ಕಳೆದ ಒಂದು ತಿಂಗಳಿಂದ ಪಕ್ಷದ ಬ್ಲಾಕ್‌ … Read more