ಶಿವಮೊಗ್ಗದಲ್ಲಿ ಮಂಕಿ ಪಾಕ್ಸ್ ಕಾಯಿಲೆ ಮುನ್ನೆಚ್ಚರಿಕೆ, ವಿದೇಶದಿಂದ ಬಂದವರ ಮೇಲೆ ನಿಗಾ, ಆಸ್ಪತ್ರೆಗಳಲ್ಲಿ ಬೆಡ್ ಮೀಸಲು

Mc-Gann-Hospital

SHIVAMOGGA LIVE NEWS | SHIMOGA | 11 ಜೂನ್ 2022 ಮಂಕಿಪಾಕ್ಸ್ ಇನ್ನೂ ನಮ್ಮ ದೇಶದಲ್ಲಿ ವರದಿಯಾಗಿಲ್ಲ. ಆದರೂ ಮುನ್ನೆಚ್ಚರಿಕೆ ಕ್ರಮವಾಗಿ ತಾಲೂಕು ಆಸ್ಪತ್ರೆಗಳಲ್ಲಿ 2 ರಿಂದ 4 ಮತ್ತು ಜಿಲ್ಲಾಸ್ಪತ್ರೆಯಲ್ಲಿ 10 ಹಾಸಿಗೆ ಮೀಸಲಿಡುವಂತೆ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ವಿವಿಧ ಕಾರ್ಯಕ್ರಮಗಳು ಹಾಗೂ ಮಂಕಿಪಾಕ್ಸ್ ಕುರಿತು ಮುಂಜಾಗ್ರತಾ ಕ್ರಮಗಳ ಕುರಿತ ಸಭೆಯಲ್ಲಿ ಮಾತನಾಡಿ, ಮಂಕಿಪಾಕ್ಸ್ ರೋಗ ಲಕ್ಷಣಗಳೊಂದಿಗೆ ರೋಗಿಯ ಟ್ರಾವೆಲ್ ಹಿಸ್ಟರಿ ಅಥವಾ ಅಂತಹ … Read more

ಮೊದಲ ಪ್ರಯತ್ನದಲ್ಲೇ UPSC ಪರೀಕ್ಷೆ ಪಾಸಾದ ಶಿವಮೊಗ್ಗದ ವೈದ್ಯ

UPSC-rank-641-dr-prahanth-kumar

SHIVAMOGGA LIVE NEWS | EXAM | 30 ಮೇ 2022 ಶಿವಮೊಗ್ಗದ ವೈದ್ಯರೊಬ್ಬರು ಮೊದಲ ಪ್ರಯತ್ನದಲ್ಲಿಯೆ ಯುಪಿಎಸ್’ಸಿ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 641ನೇ ರಾಂಕ್ ಪಡೆದಿದ್ದಾರೆ. ಎಲ್.ಬಿ.ಎಸ್ ನಗರದ ನಿವಾಸಿ ಡಾ. ಪ್ರಶಾಂತ್ ಕುಮಾರ್ ಅವರು 641ನೇ ರಾಂಕ್ ಪಡೆದಿದ್ದಾರೆ. ಯಾವುದೆ ಸಂಸ್ಥೆಗಳಿಂದ ಕೋಚಿಂಗ್ ಪಡೆಯದೆ, ಸ್ವಯಂ ಪ್ರಯತ್ನದಿಂದ ಪಾಸಾಗಿದ್ದಾರೆ. 2020ರಲ್ಲಿ ಶಿವಮೊಗ್ಗ ಮೆಡಿಕಲ್ ಕಾಲೇಜಿನಲ್ಲಿ ಪ್ರಶಾಂತ್ ಕುಮಾರ್ ಅವರು ಎಂಬಿಬಿಎಸ್ ಪದವಿ ಪಡೆದಿದ್ದರು ‘ದೊಡ್ಡ ಮಟ್ಟದಲ್ಲಿ ಜನ ಸೇವೆ ಮಾಡುವ ಉದ್ದೇಶದಿಂದ ಯುಪಿಎಸ್’ಸಿ ಪರೀಕ್ಷೆ … Read more

ಲಕ್ಷ್ಮೀ ಟಾಕೀಸ್ ಬಳಿ ಫ್ರೀಡಂ ಪಾರ್ಕಿಗೆ ಜಿಲ್ಲಾಧಿಕಾರಿ ಭೇಟಿ, ಏನೆಲ್ಲ ಪರಿಶೀಲಿಸಿದರು?

DC-Visit-To-Freedom-Park-in-Shimoga

SHIVAMOGGA LIVE NEWS | FREEDOM PARK | 06 ಮೇ 2022 ಹಳೇ ಜೈಲು ಆವರಣದಲ್ಲಿರುವ ಫ್ರೀಡಂ ಪಾರ್ಕ್ಗೆ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಶೀಲನೆಗೆ ಕಾರಣವೇನು? ಫ್ರೀಡಂ ಪಾರ್ಕ್ (FREEDOM PARK) ನಿರ್ವಹಣೆ ಅತ್ಯಂತ ಕಳಪೆಯಾಗಿದೆ ಎಂದು ಸಾರ್ವಜನಿಕರು ಮತ್ತು ಜಿಲ್ಲಾ ಬಿಜೆಪಿ ಮುಖಂಡ ಎಸ್.ದತ್ತಾತ್ರಿ ಅವರ ದೂರು ನೀಡಿದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿದರು. ಜಿಲ್ಲಾಧಿಕಾರಿ ಅವರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದರು. ಅದರಂತೆ ಡಿಸಿ ಅವರು … Read more

ಶಿವಮೊಗ್ಗದಲ್ಲಿ ಗ್ರಾಮ ಪಂಚಾಯಿತಿ 5 ಸ್ಥಾನಕ್ಕೆ ಚುನಾವಣೆ, ನೀತಿ ಸಂಹಿತೆ ಜಾರಿ, ಹೇಗಿರುತ್ತೆ ಪ್ರಕ್ರಿಯೆ?

Shimoga Dc Dr.selvamani

SHIVAMOGGA LIVE NEWS | ELECTION | 06 ಮೇ 2022 ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಶಿವಮೊಗ್ಗ ಜಿಲ್ಲೆಯ ಗ್ರಾಮ ಪಂಚಾಯ್ತಿಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಅವರು ಆದೇಶ ಹೊರಡಿಸಿದ್ದಾರೆ. ವೇಳಾಪಟ್ಟಿ ಏನು? ಮೇ 05ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಮೇ 10ಕ್ಕೆ ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ. ಮೇ 11ರಂದು ನಾಮಪತ್ರಗಳನ್ನು ಪರಿಶೀಲಿಸಲಾಗುತ್ತದೆ. ಮೇ 13ರಂದು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ … Read more

ವಾಹನ ಸವಾರರೆ ಗಮನಿಸಿ, ಮಾರಿಕಾಂಬ ಜಾತ್ರೆ ಹಿನ್ನೆಲೆ ಶಿವಮೊಗ್ಗ ಸಿಟಿಯಲ್ಲಿ ರಸ್ತೆ ಸಂಚಾರದಲ್ಲಿ ಬದಲಾವಣೆ

Marikamba-Jathre-Flex-in-Shimoga-city.

SHIVAMOGGA LIVE NEWS | 21 ಮಾರ್ಚ್ 2022 ಕೋಟೆ ಶ್ರೀ ಮಾರಕಾಂಬೆ ಜಾತ್ರೆ ಅಂಗವಾಗಿ ಶಿವಮೊಗ್ಗ ನಗರದ ವಿವಿಧೆಡೆ ವಾಹನಗಳಿಗೆ ಬದಲಿ ಮಾರ್ಗ ಸೂಚಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಮಾರ್ಚ್ 22 ರಿಂದ ಮಾರ್ಚ್ 26ರವರೆಗೆ ಜಾತ್ರೆ ನಡೆಯಲಿದೆ. ಯಾವ್ಯಾವ ದಿನ, ಯಾವೆಲ್ಲ ರಸ್ತೆ ಬಂದ್ ಆಗಲಿದೆ? » ನಗರದ ಗಾಂಧಿಬಜಾರ್ ಮತ್ತು ಮಾರಿಕಾಂಬ ದೇವಸ್ಥಾನದ ಸುತ್ತಮುತ್ತಲಿನ ಹಾಗೂ ಎಸ್.ಪಿ.ಎಂ.ರಸ್ತೆಯಲ್ಲಿ ಸುಗುಮ ಸಂಚಾರದ ಹಿತದೃಷ್ಟಿಯಿಂದ ತಾತ್ಕಾಲಿಕವಾಗಿ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. » ಬೆಂಗಳೂರು- ಭದ್ರಾವತಿ-ಎನ್.ಆರ್.ಪುರ ಕಡೆಯಿಂದ … Read more

ಶಿವಮೊಗ್ಗದಲ್ಲಿ ರಾತ್ರಿ ಬೈಕ್ ಸಂಚಾರ ನಿಷೇಧ, ಅಂಗಡಿಗಳು ಬಂದ್ ಮಾಡಲು ಟೈಮ್ ಫಿಕ್ಸ್

Police Bandobasth at Shimoga city

ಶಿವಮೊಗ್ಗದ ಲೈವ್.ಕಾಂ | SHIMOGA NEWS | 21 ಫೆಬ್ರವರಿ 2022 ಸೀಗೆಹಟ್ಟಿಯ ಯುವಕ ಹರ್ಷ ಹತ್ಯೆ ಬೆನ್ನಿಗೆ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದೆ. ಈ ಹಿನ್ನೆಲೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಫೆ.23ರ ರಾತ್ರಿ ವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ. ಶಿವಮೊಗ್ಗ ನಗರದ ವ್ಯಾಪ್ತಿಯಲ್ಲಿ ಫೆ.23ರ ರಾತ್ರಿ 9 ಗಂಟೆವರೆಗೆ ನಿಷೇಧಾಜ್ಞೆ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಐದಕ್ಕಿಂತಲೂ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ. ಏನೆಲ್ಲ ನಿಷೇಧವಿರುತ್ತೆ? » ಮೆರವಣಿಗೆ, … Read more

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಿಡ್ ಆಹ್ವಾನ, ಅಧಿಕಾರಿಗಳಿಂದ ಕಾಮಗಾರಿ ಪರಿಶೀಲನೆ, ಹೇಗೆ ನಡೆಯುತ್ತಿದೆ ಕೆಲಸ?

Airport Plain plance aircraft general image 1

ಶಿವಮೊಗ್ಗದ ಲೈವ್.ಕಾಂ | SHIMOGA NEWS | 5 ಫೆಬ್ರವರಿ 2022 ಶಿವಮೊಗ್ಗ ವಿಮಾನ ನಿಲ್ದಾಣದ ಮೊದಲ ಹಂತದ ಕಾಮಗಾರಿ ಭರದಿಂದ ಸಾಗಿದೆ. ಈ ನಡುವೆ ವಿಮಾನಯಾನ ಸೇವೆ ಒದಗಿಸುವ ಸಂಬಂಧ ಗುತ್ತಿಗೆ ಪಡೆಯಲು ವಿವಿಧ ಕಂಪನಿಗಳಿಗೆ ಆಹ್ವಾನ ನೀಡಲಾಗಿದೆ. ಇನ್ನೊಂದೆಡೆ ಕಾಮಗಾರಿ ಕುರಿತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿ ಅವರು ಪರಿಶೀಲನೆ ನಡೆಸಿದರು. ಅಧಿಕಾರಿಗಳಿಂದ ಕಾಮಗಾರಿ ಪರಿಶೀಲನೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಸೆಲ್ವಕುಮಾರ್, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ನೇತೃತ್ವದ ಅಧಿಕಾರಿಗಳ ತಂಡ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣ … Read more

ಶಿವಮೊಗ್ಗದ ಹೊಸ ಜಿಲ್ಲಾಧಿಕಾರಿ ಬಗ್ಗೆ ಗೊತ್ತಿರಬೇಕಾದ ಮೂರು ವಿಚಾರಗಳಿವು

Shimoga Dc Dr.selvamani

ಶಿವಮೊಗ್ಗದ ಲೈವ್.ಕಾಂ | SHIMOGA NEWS | 13 ಜನವರಿ 2022 ಶಿವಮೊಗ್ಗ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಡಾ. ಆರ್. ಸೆಲ್ವಮಣಿ ಅವರು ಅಧಿಕಾರ ಸ್ವೀಕರಿಸಿದರು. ಕೋಲಾರ ಜಿಲ್ಲಾಧಿಕಾರಿಯಾಗಿದ್ದ ಡಾ. ಸೆಲ್ವಮಣಿ ಅವರನ್ನು ಶಿವಮೊಗ್ಗ ಡಿಸಿಯಾಗಿ ಮಂಗಳವಾರ ವರ್ಗಾವಣೆ ಮಾಡಲಾಗಿತ್ತು. ಈವರೆಗೆ ಶಿವಮೊಗ್ಗ ಡಿಸಿಯಾಗಿದ್ದ ಕೆ.ಬಿ.ಶಿವಕುಮಾರ್‌ ಅವರಿಗೆ ಯಾವುದೇ ಸ್ಥಳ ಸೂಚಿಸಿಲ್ಲ. ಮೂರು ಪ್ರಮುಖಾಂಶ 1986ರಲ್ಲಿ ಜನಿಸಿದ ಡಾ. ಆರ್.ಸೆಲ್ವಮಣಿ 2013ನೇ ಬ್ಯಾಚ್‌ನ ಐಎಎಸ್ ಅಧಿಕಾರಿ. ಮೂಲತಃ ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯವರು. ಮಂಗಳೂರು ಜಿಪಂ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿದ್ದ … Read more

ಡಿಸಿ ಕಚೇರಿ ಸಿಬ್ಬಂದಿ ಕಣ್ಮರೆಯಾಗಿ 24 ಗಂಟೆ, ಮೊಬೈಲ್ ಸಿಗ್ನಲ್ ಕೊನೆಯಾದಾಗಿ ಸಿಕ್ಕ ಸ್ಥಳದಲ್ಲಿ ಶೋಧ, ಈವರೆಗೂ ಏನೆಲ್ಲ ಆಗಿದೆ?

290921 Giriraj FDA missing from Shimoga

ಶಿವಮೊಗ್ಗ ಲೈವ್.ಕಾಂ | SHIMOGA / BHADRAVATHI NEWS | 29 ಸೆಪ್ಟೆಂಬರ್ 2021 ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಪ್ ಸಂದೇಶ ಕಳುಹಿಸಿ ಕಣ್ಮರೆಯಾಗಿರುವ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಪತ್ತೆ ಕಾರ್ಯ ಮುಂದುವರೆದಿದೆ. 24 ಗಂಟೆ ಕಳೆದರೂ ಅವರ ಕುರಿತು ಸುಳಿವು ಸಿಕ್ಕಿಲ್ಲ. ಜಿಲ್ಲಾಧಿಕಾರಿ ಕಚೇರಿಯ ಎಫ್’ಡಿಎ ಗಿರಿರಾಜ್ ಕಣ್ಮರೆಯಾಗಿ ಒಂದು ದಿನವಾಗಿದೆ. ಈತನಕ ಅವರಿಗಾಗಿ ಅಧಿಕಾರಿಗಳು, ಪೊಲೀಸರು ವಿವಿಧೆಡೆ ಶೋಧ ಕಾರ್ಯ ನಡೆಸಿದ್ದಾರೆ. ಆದರೆ ಎಲ್ಲಿಯೂ ಗಿರಿರಾಜ್ ಕುರಿತು ಸುಳಿವು ಸಿಕ್ಕಿಲ್ಲ. ಈವರೆಗೂ ಏನೆಲ್ಲ ಬೆಳವಣಿಗೆಯಾಗಿದೆ? … Read more

ಬೆಳ್ಳಿ ಗೆದ್ದ ಐಎಎಸ್ ಅಧಿಕಾರಿ, ಅವರು ಆಡಿ ಬೆಳೆದ ವಿನೋಬನಗರ ರಸ್ತೆಯಲ್ಲಿ ಸಿಹಿ ಹಂಚಿ ಜನರ ಖುಷಿ

050921 Celebration at Vinobanagara over paralympics

ಶಿವಮೊಗ್ಗ ಲೈವ್.ಕಾಂ |SHIMOGA NEWS | 5 ಸೆಪ್ಟೆಂಬರ್ 2021 ಐಎಎಸ್ ಅಧಿಕಾರಿ ಸುಹಾಸ್ ಯತಿರಾಜ್ ಪ್ಯಾರಾಲಿಂಪಿಕ್ಸ್’ನಲ್ಲಿ ಬೆಳ್ಳಿ ಪದಕ ಗೆಲ್ಲುತ್ತಿದ್ದಂತೆ ಶಿವಮೊಗ್ಗದಲ್ಲಿ ಅವರು ಆಡಿ ಬೆಳೆದ ರಸ್ತೆಯ ನಿವಾಸಿಗಳು ಸಂಭ್ರಮಾಚರಣೆ ಮಾಡಿದರು. ನೆರೆಹೊರೆಯ ಮನೆಯವರು ಸಿಹಿ ಹಂಚಿ ಖುಷಿಪಟ್ಟರು. ಅಲ್ಲದೆ ಫೋನ್ ಮೂಲಕ ಶುಭಾಶಯಗಳನ್ನು ತಿಳಿಸಿದರು. ಸುಹಾಸ್ ಯತಿರಾಜ್ ಅವರು ಪ್ಯಾರಾಲಿಂಪಿಕ್ಸ್ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ದೇಶಾದ್ಯಂತ ಜನರು ಅಭಿನಂದನೆ ಸಲ್ಲಿಸಿದರು. … Read more