ಶಿವಮೊಗ್ಗದ ರೈತನಿಗೆ ಲಕ್ಷ ಲಕ್ಷ ಮೋಸ, ಆಗಿದ್ದೇನು?

Online-Fraud-In-Shimoga

ಶಿವಮೊಗ್ಗ: ಪ್ರಧಾನ ಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮದ ಅಡಿ ಮನೆ ಕಟ್ಟಲು ಸಾಲ (Housing Loan) ಕೊಡಿಸುವುದಾಗಿ ನಂಬಿಸಿ ರೈತರೊಬ್ಬರಿಗೆ ₹3,36,000 ವಂಚಿಸಲಾಗಿದೆ. ಮೋಸ ಆಗಿದ್ದು ಹೇಗೆ? ಅಕ್ಟೋಬರ್ 27ರಂದು ಶಿವಮೊಗ್ಗದ ರೈತರೊಬ್ಬರ (Farmer) ಮೊಬೈಲ್‌ಗೆ ಅಪರಿಚಿತ ನಂಬರ್‌ಗಳಿಂದ ವಾಟ್ಸ್‌ಆ್ಯಪ್ ಮೆಸೇಜು (Whatsapp) ಮತ್ತು ಕರೆಗಳು ಬಂದಿದ್ದವು. ವಂಚಕರ ಪೈಕಿ ಒಬ್ಬರು ತಮ್ಮನ್ನು ಪ್ರಿಯಾ ಕುಮಾರಿ ಎಂದು ಪರಿಚಯಿಸಿಕೊಂಡು, ಮನೆ ಕಟ್ಟಲು ₹20 ಲಕ್ಷ ಸಾಲ (Loan) ನೀಡುವುದಾಗಿ ಹೇಳಿದ್ದರು. ಸಾಲ ಮಂಜೂರಾಗುತ್ತದೆ ಎಂದು ನಂಬಿಸಿ, ವಂಚಕರು … Read more

ಇಡ್ಲಿ ಗಾಡಿಯಲ್ಲಿ ಗ್ರಾಹಕ ಬಿಟ್ಟು ಹೋದ ಬ್ಯಾಗ್‌ನಲ್ಲಿತ್ತು ₹1,00,000 ಹಣ, ಮುಂದೇನಾಯ್ತು?

Idly-Stall-Owner-handed-over-the-money

ಶಿವಮೊಗ್ಗ: ಗ್ರಾಹಕರು ಬಿಟ್ಟು ಹೋಗಿದ್ದ ಇದ್ದ ಚೀಲವನ್ನು (Money) ಇಡ್ಲಿ ಗಾಡಿ ಮಾಲೀಕ ತಿರುಮೂರ್ತಿ ಅವರು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ವಾಪಸ್ಸು ನೀಡಿದರು. ಆನವಟ್ಟಿಯ ಮಧುಕೇಶವ್ ಅವರು ನ.4ರಂದು ಸಂಜೆ ಶಿವಮೊಗ್ಗಕ್ಕೆ ಬಂದು ಆಲ್ಗೊಳ ವೃತ್ತದಲ್ಲಿ ಇಡ್ಲಿಗಾಡಿಯಲ್ಲಿ ಉಪಹಾರ ಸೇವನೆಗೆ ಹೋಗಿದ್ದರು. ಉಪಹಾರ ಸೇವನೆ ಸಂದರ್ಭ ಗಾಡಿ ಮೇಲಿಟ್ಟಿದ್ದ ಚೀಲವನ್ನು ಮರೆತು ವಾಪಸ್ಸು ಹೋಗಿದ್ದರು. ತಿರುಮೂರ್ತಿ ಅವರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ₹1,00,000 ಹಣ ಇತ್ತು. ಕೂಡಲೆ ಅವರು ತುಂಗಾನಗರ ಪೊಲೀಸ್ ಠಾಣೆಗೆ ತೆರಳಿ ಇನ್ಸ್‌ಪೆಕ್ಟ‌ರ್ ಕೆ.ಟಿ.ಗುರುರಾಜ … Read more

ಒಂದೇ ಒಂದು ಮೆಸೇಜ್‌ ಮಾಡಿ ₹3.96 ಲಕ್ಷ ಕಳೆದುಕೊಂಡ ಭದ್ರಾವತಿ ವ್ಯಕ್ತಿ

Bhadravathi-Old-Town-Police-Station

ಭದ್ರಾವತಿ: ಹಣ ಡಬಲ್‌ (Money) ಆಗಲಿದೆ ಎಂದು ಟೆಲಿಗ್ರಾಂ ಅಪ್ಲಿಕೇಷನ್‌ನಲ್ಲಿ ಬಂದ ಮೆಸೇಜ್‌ ನಂಬಿ ಭದ್ರಾವತಿಯ ವ್ಯಕ್ತಿಯೊಬ್ಬರು ₹3.96 ಲಕ್ಷ ಕಳೆದಕೊಂಡಿದ್ದಾರೆ. ಹೇಗಾಯ್ತು ವಂಚನೆ? ಭದ್ರಾವತಿ ವ್ಯಕ್ತಿಯೊಬ್ಬರು ಮಗ ಮತ್ತು ಅಳಿಯನ ಜೊತೆಗೆ ಮಾತನಾಡುತ್ತಿದ್ದಾಗ ಜೈದೀಪ್‌ ಭಾರತಿ ಎಂಬ ಹೆಸರಿನಲ್ಲಿ ಟೆಲಿಗ್ರಾಂ ಅಪ್ಲಿಕೇಷನ್‌ಗೆ ಮೆಸೇಜ್‌ ಬಂದಿತ್ತು. ಹಣ ಹೂಡಿಕೆ ಮಾಡಿದರೆ ಡಬಲ್‌ ಆಗಲಿದೆ ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ಭದ್ರಾವತಿ ವ್ಯಕ್ತಿ ಆ ಮೆಸೇಜ್‌ಗೆ ರಿಪ್ಲೆ ಮಾಡಿದ್ದರು. ಮೂರು ವಿವಿಧ ಅಕೌಂಟ್‌ ಕೊಟ್ಟಿದ್ದರು ಭದ್ರಾವತಿಯ ವ್ಯಕ್ತಿಗೆ ಜೈದೀಪ್‌ … Read more

ಶಿವಮೊಗ್ಗದಲ್ಲಿ ಡಾಕ್ಟರ್‌ಗೆ ₹1.81 ಕೋಟಿ ಪಂಗನಾಮ, ಆಗಿದ್ದೇನು?

Shimoga-doctor-lost-1.81-crore-rupees.

ಶಿವಮೊಗ್ಗ: ಹೂಡಿಕೆ, ಅಧಿಕ ಲಾಭದ ಆಸೆ ತೋರಿಸಿ ಜನರನ್ನು ವಂಚಿಸುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ವಿದ್ಯಾವಂತರೆ ವಂಚಕರ ಬಲೆಗೆ ಬೀಳುತ್ತಿದ್ದಾರೆ. ಶಿವಮೊಗ್ಗದ ವೈದ್ಯೆಯೊಬ್ಬರು (Doctor) ವಂಚಕರ ವ್ಯೂಹಕ್ಕೆ ಸಿಲುಕಿ ₹1.81 ಕೋಟಿ ಕಳೆದುಕೊಂಡಿದ್ದಾರೆ. ವಂಚಕರ ಬಲೆಗೆ ವೈದ್ಯೆ ವೈದ್ಯೆಯೊಬ್ಬರಿಗೆ (ಹೆಸರು ಗೌಪ್ಯ) ಪ್ರತಿಷ್ಠಿತ ಷೇರು ವ್ಯವಹಾರ ಸಂಸ್ಥೆಯ ಹೆಸರು ಹೇಳಿಕೊಂಡು ಅಪರಿಚಿತರು ಕರೆ ಮಾಡಿದ್ದರು. ಹಣ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ತಿಳಿಸಿದ್ದರು. ಅಲ್ಲದೆ ಪ್ರತಿಷ್ಠಿತ ಷೇರು ವ್ಯವಹಾರ ಸಂಸ್ಥೆಯ ವೆಬ್‌ಸೈಟ್‌ ಮೂಲಕ … Read more

ಕೆಲಸ ಮಾಡುತ್ತಿದ್ದ ಫೈನಾನ್ಸ್‌ ಸಂಸ್ಥೆಗೇ ₹3,00,000 ವಂಚಿಸಿದ ಕ್ವಾಲಿಟಿ ಮ್ಯಾನೇಜರ್‌, ಏನಿದು ಕೇಸ್‌?

Sagara Police Station Building

ಸಾಗರ: ಗ್ರಾಹಕರು ಮರುಪಾವತಿ ಮಾಡಿದ್ದ ಸಾಲದ ಕಂತಿನ ಹಣವನ್ನು ಫೈನಾನ್ಸ್‌ (Finance) ಸಂಸ್ಥೆಗೆ ಕಟ್ಟದೆ ವಂಚಿಸಿದ ಬ್ರಾಂಚ್‌ ಕ್ವಾಲಿಟಿ ಮ್ಯಾನೇಜರ್‌ ವಿರುದ್ಧ ಪ್ರಕರಣ ದಾಖಲಾಗಿದೆ. ಲೆಕ್ಕ ಪರಿಶೋಧನೆ ಮಾಡಿದಾಗ ಕ್ವಾಲಿಟಿ ಮ್ಯಾನೇಜರ್‌ ₹3.03 ಲಕ್ಷ ವಂಚಿಸಿರುವು ಬೆಳಕಿಗೆ ಬಂದಿದೆ. ಫೈನಾನ್ಸ್‌ ಸಂಸ್ಥೆಯೊಂದು ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಿಸುತ್ತದೆ. ಅವರು ಸಾಲ ಮರುಪಾವತಿ ಮಾಡಿದ್ದನ್ನು ಕ್ವಾಲಿಟಿ ಮ್ಯಾನೇಜರ್‌ ಫೈನಾನ್ಸ್‌ ಸಂಸ್ಥೆಗೆ ಮರುಪಾವತಿಸಬೇಕು. 2024ರ ಡಿಸೆಂಬರ್‌ 10 ರಿಂದ 2025ರ ಮೇ 12ರವರೆಗೆ ₹3.03 ಲಕ್ಷವನ್ನು ಫೈನಾನ್ಸ್‌ ಸಂಸ್ಥೆಗೆ … Read more

ಮಹಿಳಾ ಅಧಿಕಾರಿಗೆ ಮತ್ತೊಬ್ಬ ಮಹಿಳಾ ಅಧಿಕಾರಿಯಿಂದ ಬಂತು ವಾಟ್ಸಪ್‌ ಮೆಸೇಜ್‌, ಆಮೇಲೆ ಕಾದಿತ್ತು ಶಾಕ್

SMS-Fraud-Shimoga-CEN-Police-Station.

ಶಿವಮೊಗ್ಗ: ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ (Hacked) ಮಾಡಿ ಮತ್ತೊಬ್ಬ ಮಹಿಳಾ ಅಧಿಕಾರಿಗೆ ಹಣಕ್ಕೆ ಬೇಡಿಕೆ ಇಟ್ಟು ₹60,000 ವಂಚಿಸಲಾಗಿದೆ. ಹ್ಯಾಕ್‌ ವಿಚಾರ ಗೊತ್ತಾಗಿದ್ದರಿಂದ ಮಹಿಳಾ ಅಧಿಕಾರಿ ಇನ್ನಷ್ಟು ಹಣ ಕಳೆದುಕೊಳ್ಳುವುದು ತಪ್ಪಿದೆ. ಶಿವಮೊಗ್ಗದ ಮಹಿಳಾ ಅಧಿಕಾರಿಯೊಬ್ಬರ ವಾಟ್ಸಪ್‌ ಹ್ಯಾಕ್‌ ಮಾಡಿದ ದುಷ್ಕರ್ಮಿಗಳು ಮತ್ತೊಬ್ಬ ಮಹಿಳಾ ಅಧಿಕಾರಿಗೆ ಮೆಸೇಜ್‌ ಕಳುಹಿಸಿದ್ದರು. ತಮ್ಮ ಯುಪಿಐ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಆದ್ದರಿಂದ ಸಾಗರ್‌ ಕುಮಾರ್‌ ಎಂಬುವವರ ಮೊಬೈಲ್‌ ನಂಬರ್‌ಗೆ ತುರ್ತಾಗಿ ₹60,000 ಫೋನ್‌ ಪೇ ಮೂಲಕ ವರ್ಗಾಯಿಸುವಂತೆ ತಿಳಿಸಲಾಗಿತ್ತು. ಇದನ್ನು … Read more

ಮುತ್ತಿನಕೊಪ್ಪದ ದಾರಿಯಲ್ಲಿ ಕಳೆದು ಹೋಯ್ತು ಮೊಬೈಲ್‌, ಎರಡು ದಿನದ ಬಳಿಕ ವ್ಯಕ್ತಿಗೆ ಕಾದಿತು ಬಿಗ್‌ ಶಾಕ್‌, ಆಗಿದ್ದೇನು?

Crime-News-General-Image

ಭದ್ರಾವತಿ: ಮೊಬೈಲ್‌ ಫೋನ್‌ ಕಳೆದು ಹೋದ ಬಳಿಕ ವ್ಯಕ್ತಿಯೊಬ್ಬರ ಬ್ಯಾಂಕ್‌ ಖಾತೆಯಿಂದ ₹1.60 ಲಕ್ಷ ಹಣ ಕಡಿತವಾಗಿದೆ. ಫೋನ್‌ ಪೇನಿಂದ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಭದ್ರಾವತಿ ತಾಲೂಕಿನ ವ್ಯಕ್ತಿಯೊಬ್ಬರು ಕೆಲಸದ ನಿಮಿತ್ತ ಮುತ್ತಿನಕೊಪ್ಪಕ್ಕೆ ತೆರಳಿದ್ದರು. ಈ ವೇಳೆ ಅವರ ಮೊಬೈಲ್‌ ಫೋನ್‌ ಕಳೆದು ಹೋಗಿತ್ತು. ಬಳಿಕ ಹೊಸ ಮೊಬೈಲ್‌ ಖರೀದಿಸಿ, ಡೂಪ್ಲಿಕೇಟ್‌ ಸಿಮ್‌ ಪಡೆದು ಆನ್‌ ಮಾಡುತ್ತಿದ್ದಂತೆ ಕೆನರಾ ಬ್ಯಾಂಕ್‌ನಿಂದ ಹಣ ಕಡಿತದ ಎಸ್‌ಎಂಎಸ್‌ಗಳು  ಬಂದಿದ್ದವು. ಇದನ್ನೂ ಓದಿ » ಶಿವಮೊಗ್ಗದ ಖಾಸಗಿ ಬಡಾವಣೆಗಳಲ್ಲಿ ನಿವೇಶನ ಹಂಚಿಕೆ, … Read more

ಬೆಳ್ಳಂಬೆಳಗ್ಗೆ ಮನೆ ಬಳಿ ದಿಢೀರ್‌ ಪ್ರತ್ಯಕ್ಷವಾದ ಅಪರಿಚಿತರು, ದೇವರ ಹೆಸರಿನಲ್ಲಿ ವಂಚಿಸಿದರು, ಏನಿದು ಕೇಸ್?

Crime-News-General-Image

ಸಾಗರ: ದೇವರ (God) ಹೆಸರಿನಲ್ಲಿ ಹೇಳಿ ಹಣ, ಸರ, ಕಾಲು ಚೈನ್‌ ಪಡೆದ ಇಬ್ಬರು ಪರಾರಿಯಾಗಿದ್ದಾರೆ. ಸಾಗರ ತಾಲೂಕಿನ ಖೈರಾ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಪ್ರಜ್ವಲ್‌ ಎಂಬುವವರ ಮನೆಗೆ ಬೆಳಗ್ಗೆ 7 ಗಂಟೆ ಹೊತ್ತಿಗೆ ಬಂದ ಇಬ್ಬರು ಅಪರಿಚಿತರು ದೇವರ ಹೆಸರು ಹೇಳಿ 1000 ರೂ. ಹಣ ಪಡೆದಿದ್ದಾರೆ. ಅಲ್ಲದೆ 3000 ರೂ. ಮೌಲ್ಯದ ಸರವನ್ನ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು, ನೇತ್ರಾವತಿ ಎಂಬುವವರ ಮನೆ ಬಳಿ ಹೋಗಿ, ಅವರಿಗೆ ಮೋಸ ಮಾಡಿ 700 ರೂ. ನಗದು, … Read more

ಹೊಟೇಲ್‌ನಲ್ಲಿ ಮುದ್ದೆ, ಮಟನ್‌ ತಿಂದು, ಮಾಲೀಕನ ಕುತ್ತಿಗೆಗೆ ಚಾಕು ಇರಿದ ಗ್ರಾಹಕ, ಆಗಿದ್ದೇನು?

crime name image

ಶಿವಮೊಗ್ಗ : ಊಟದ ಹಣ (Money) ಕೊಡುವಂತೆ ಕೇಳಿದ ಹೊಟೇಲ್‌ ಮಾಲೀಕನಿಗೆ ಗ್ರಾಹಕನೊಬ್ಬ ಚಾಕುವಿನಿಂದ ಇರುದಿದ್ದಾನೆ. ಹೊಟೇಲ್‌ ಮಾಲೀಕನನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಹೊಟೇಲ್‌ ಮಾಲೀಕ ಕೃಷ್ಣಪ್ಪ ಗಾಯಗೊಂಡಿದ್ದಾರೆ. ಶಿವಮೊಗ್ಗ – ಹೊನ್ನಾಳಿ ರಸ್ತೆಯ ದೀಪಕ್‌ ವೈನ್‌ ಸ್ಟೋರ್‌ ಪಕ್ಕದಲ್ಲಿರುವ ಖುಷಿ ಫಾಸ್ಟ್‌ ಫುಡ್‌ ಹೊಟೇಲ್‌ನಲ್ಲಿ ಘಟನೆ ಸಂಭವಿಸಿದೆ. ಕುತ್ತಿಗೆಗೆ ಚಾಕು ಇರಿದ ಗ್ರಾಹಕ ಕೃಷ್ಣಪ್ಪ ಅವರ ಫಾಸ್ಟ್‌ ಫುಡ್‌ ಹೊಟೇಲ್‌ಗೆ ಬಂದ ವ್ಯಕ್ತಿಯೊಬ್ಬ ಮುದ್ದೆ ಮತ್ತು ತಲೆ ಮಟನ್‌ ಸೇವಿಸಿದ್ದ. ಬಿಲ್‌ (Money) … Read more

ಶಿವಮೊಗ್ಗದ ಯುವತಿಗೆ ಮುಂಬೈ ಪೊಲೀಸರಿಂದ ಫೋನ್‌, ಆಮೇಲೆ ಕಾದಿತ್ತು ದೊಡ್ಡ ಶಾಕ್‌

Online-Fraud-In-Shimoga

SHIMOGA NEWS, 9 NOVEMBER 2024 : ಮುಂಬೈ ಸೈಬರ್‌ (Cyber) ಪೊಲೀಸ್‌ ಎಂದು ಕರೆ ಮಾಡಿ, 23 ವರ್ಷದ ಯುವತಿಯ ಬ್ಯಾಂಕ್‌ ಖಾತೆಯಿಂದ 4 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಯುವತಿಯ ಹೆಸರಿನಲ್ಲಿ ಇರಾನ್‌ಗೆ ಪಾರ್ಸಲ್‌ ಹೋಗುತ್ತಿದೆ. ಅದರಲ್ಲಿ ಡ್ರಗ್ಸ್‌ ಇದ್ದು, ವಿಚಾರಣೆ ನೆಪದಲ್ಲಿ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಪಾರ್ಸಲ್‌ನಲ್ಲಿ ಡ್ರಗ್ಸ್‌ ಇದೆ ಶಿವಮೊಗ್ಗದ ಯುವತಿಗೆ ಪ್ರತಿಷ್ಠಿತ ಕೊರಿಯರ್‌ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದ. ‘ಮುಂಬೈನಿಂದ ಇರಾನ್‌ಗೆ … Read more