ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ವಂಚನೆ

crime name image

ಶಿವಮೊಗ್ಗದ ಲೈವ್.ಕಾಂ | SHIMOGA NEWS | 10 ಫೆಬ್ರವರಿ 2022 ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಲಕ್ಷ ಲಕ್ಷ ರೂಪಾಯಿ ವಂಚನೆ ಮಾಡಲಾಗಿದೆ. ಶಿವಮೊಗ್ಗದ ಉದ್ಯಮಿಯೊಬ್ಬರು ಈ ಸಂಬಂಧ ದೂರು ನೀಡಿದ್ದಾರೆ. ಉದ್ಯಮಿ ರಂಗನಾಥ ಎಂಬುವವರು ವಂಚನೆ ಒಳಗಾಗಿದ್ದಾರೆ. ರೈಲ್ವೆ ಇಲಾಖೆಯಲ್ಲಿ ಜನರಲ್ ಮ್ಯಾನೇಜರ್ ಎಂದು ಹೇಳಿಕೊಂಡಿದ್ದ ಚಿಕ್ಕಣ್ಣ ಎಂಬಾತ ವಂಚನೆ ಮಾಡಿದ್ದಾನೆ. ಆತ ಆಂಧ್ರದ ಅನಂತಪುರ ಜಿಲ್ಲೆಯ ಹೇಮಾವತಿ ತಾಲೂಕಿನವನು. ವಂಚನೆ ಆಗಿದ್ದು ಹೇಗೆ? 2019ರಲ್ಲಿ ರಂಗನಾಥ ಅವರಿಗೆ ಚಿಕ್ಕಣ್ಣ ಎಂಬುವವರ ಪರಿಚಯವಾಗಿತ್ತು. … Read more

ಎಸಿಬಿ ದಾಳಿ ವೇಳೆ ಸಿಕ್ತು ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ, ಇನ್ನೂ ಮುಂದುವರೆದಿದೆ ಶೋಧ ಕಾರ್ಯ

241121 Gold and money found in Shimoga during ACB Raid

ಶಿವಮೊಗ್ಗ ಲೈವ್.ಕಾಂ | SHIMOGA NEWS | 24 ನವೆಂಬರ್ 2021 ಶಿವಮೊಗ್ಗದಲ್ಲಿರುವ ಗದಗ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಶೋಧ ಕಾರ್ಯ ಮುಂದುವರೆಸಿದ್ದಾರೆ. ಈಗಾಗಲೆ ಮನೆಯಲ್ಲಿ ರಾಶಿ ರಾಶಿ ಚಿನ್ನ, ಕಂತೆ ಕಂತೆ ಹಣ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಚಾಲುಕ್ಯ ನಗರ ಮತ್ತು ಗೋಪಾಳದಲ್ಲಿ ರುದ್ರೇಶಪ್ಪಗೆ ಸೇರಿದ ಮನೆಗಳಿವೆ. ಬೆಳಗ್ಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ಮನೆಯ ಮೂಲೆ ಮೂಲೆಯನ್ನು ಶೋಧಿಸಿದ್ದಾರೆ. ರಾಶಿ ರಾಶಿ ಚಿನ್ನ … Read more

ಡಿ.ಕೆ.ಶಿವಕುಮಾರ್ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು 15 ಲಕ್ಷ ಪಂಗನಾಮ, ಮಹಿಳೆ ಸೇರಿ ಇಬ್ಬರ ವಿರುದ್ಧ ಕೇಸ್

crime name image

ಶಿವಮೊಗ್ಗ ಲೈವ್.ಕಾಂ | SHIMOGA NEWS | 11 ನವೆಂಬರ್ 2021 ಡಿ.ಕೆ.ಶಿವಕುಮಾರ್ ಅವರ ಆಪ್ತ ಕಾರ್ಯದರ್ಶಿ ಎಂದು ಹೇಳಿಕೊಂಡು KSRTC ಚಾಲಕರೊಬ್ಬರಿಗೆ 15 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. KSRTC ನಿವೃತ್ತ ಚಾಲಕ ಕೆಂಚಪ್ಪ ಮೋಸ ಹೋದವರು. ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಕೆಂಚಪ್ಪ ಅವರಿಂದ 15 ಲಕ್ಷ ರೂ. ಪಡೆದಿದ್ದ ಆರೋಪಿಗಳು, ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಸತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೂರು ದಾಖಲಾಗಿದೆ. … Read more

ಹೊಳೆಬೆನವಳ್ಳಿಯಲ್ಲಿ ನಡುರಾತ್ರಿ ದೇವಸ್ಥಾನದ ಬೀಗ ಒಡೆದು ಕಳ್ಳರು, ಚಾಕು ತೋರಿಸಿ ಜನರಿಗೆ ಬೆದರಿಕೆ

ಶಿವಮೊಗ್ಗ ಲೈವ್.ಕಾಂ | SHIMOGA NEWS | 28 ಸೆಪ್ಟೆಂಬರ್ 2021 ನಡುರಾತ್ರಿ ದೇವಸ್ಥಾನದ ಬಾಗಿಲಿನ ಬೀಗ ಮುರಿದು ಚಿನ್ನಾಭರಣ ಕಳ್ಳತನ ಮಾಡಲಾಗಿದೆ. ಕಳ್ಳರನ್ನು ಹಿಡಿಯಲು ಮುಂದಾದ ಸಾರ್ವಜನಿಕರಿಗೆ ಚಾಕು ತೋರಿಸಿ ಕಳ್ಳರು ಪರಾರಿಯಾಗಿದ್ದಾರೆ. ಶಿವಮೊಗ್ಗದ ಹೊಳೆಬೆನವಳ್ಳಿ ಗ್ರಾಮದಲ್ಲಿ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಘಟನೆ ಸಂಭವಿಸಿದೆ. ದೇವಸ್ಥಾನದ ಬಾಗಿಲಿಗೆ ಹಾಕಲಾಗಿದ್ದ ಬೀಗವನ್ನು ಒಡೆದು ಮದ್ಯರಾತ್ರಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಜೋರು ಶಬ್ದ, ಗಂಟು ಕಟ್ಟಿ ಓಡಿದ ಕಳ್ಳರು ನಡುರಾತ್ರಿ ಜೋರು ಶಬ್ದವಾಗಿದ್ದರಿಂದ ದೇವಸ್ಥಾನದ ಸಮೀಪದ ಮನೆಯಲ್ಲಿದ್ದವರು … Read more

ಕಂತೆ ಕಂತೆ ನೋಟುಗಳ ಸಹಿತ ಹೊಳೆಹೊನ್ನೂರು ಪೊಲೀಸರಿಗೆ ಸಿಕ್ಕಿಬಿದ್ದ ವಂಚಕ

190621 Holehonnur Police Arrest Lorry Money Theif 1

ಶಿವಮೊಗ್ಗ ಲೈವ್.ಕಾಂ | HOLEHONNUR NEWS | 19 JUNE 2021 ಲಾರಿ ಕೊಡಿಸುವುದಾಗಿ ನಂಬಿಸಿ ಕಂತೆ ಕಂತೆ ದುಡ್ಡು ಪಡೆದುಕೊಂಡು ಎಸ್ಕೇಪ್‍ ಆಗಿದ್ದ ಭದ್ರಾವತಿಯ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಆತನಿಂದ ಕಂತೆ ಕಂತೆ ಹಣವನ್ನು ವಶಕ್ಕೆ ಪಡೆಯಲಾಗಿದೆ. ಭದ್ರಾವತಿ ತಾಲೂಕು ವೀರಾಪುರದ ರಾಜೇಂದ್ರ (30) ಬಂಧಿತ. ಈತನಿಂದ ಐದು ಲಕ್ಷ ರೂ. ಹಣವನ್ನು ವಶಕ್ಕೆ ಪಡೆಯಲಾಗಿದೆ. ಎನಿದು ಪ್ರಕರಣ? ಸೊರಬ ತಾಲೂಕು ಕುಪ್ಪಗಡ್ಡೆ ಗ್ರಾಮದ ಸುರೇಶ್ ಅವರು ಲಾರಿ ಖರೀದಿಗೆ ಮುಂದಾಗಿದ್ದರು. ಆಗ ಪರಿಚಿತನಾದ ರಾಜೇಂದ್ರ, … Read more

ಸಾಗರಕ್ಕೆ ತೆರಳುತ್ತಿದ್ದ ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ದರೋಡೆ

ಶಿವಮೊಗ್ಗ ಲೈವ್.ಕಾಂ |SORABA NEWS | 26 NOVEMBER 2020 ಮುಂಬೈನಿಂದ ಸಾಗರಕ್ಕೆ ಬರುತ್ತಿದ್ದ ಕಾರು ಅಡ್ಡಗಟ್ಟಿ ಲಕ್ಷಾಂತರ ರುಪಾಯಿ ಹಣ ದೋಚಲಾಗಿದೆ. ಸಾಗರದ ಉದ್ಯಮಿಯೊಬ್ಬರಿಗೆ ಈ ಹಣ ಸೇರಿತ್ತು ಎಂದು ಹೇಳಲಾಗುತ್ತಿದೆ. ಹೇಗಾಯ್ತು ಘಟನೆ? ಮುಂಬೈನಿಂದ ಹಣ ತೆಗೆದುಕೊಂಡು ಸ್ವಿಫ್ಟ್ ಕಾರಿನಲ್ಲಿ ಬರಲಾಗುತ್ತಿತ್ತು. ಸೊರಬ ತಾಲೂಕು ತವನಂದಿ ಗ್ರಾಮದ ಬಳಿ ಗುಂಪೊಂದು ಕಾರನ್ನು ಅಡ್ಡಗಟ್ಟಿದೆ. ಕಾರಿನ ಚಾಲಕ ಮತ್ತು ಆತನ ಜೊತೆಗಿದ್ದ ಮತ್ತೊಬ್ಬನಿಗೆ ಥಳಿಸಲಾಗಿದೆ. ಕಾರಿನಲ್ಲಿದ್ದ ಲಕ್ಷಾಂತರ ರುಪಾಯಿ ಹಣವನ್ನು ದೋಚಲಾಗಿದೆ. ಸಾಗರಕ್ಕೆ ಬರುತ್ತಿತ್ತು ಕಾರು … Read more

ಮೂಟೆಯಲ್ಲಿ ಹಣ ತಂದು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ, ಝಣಝಣ ಕಂಡು ದಂಗಾದ ಚುನಾವಣಾ ಸಿಬ್ಬಂದಿ

ಶಿವಮೊಗ್ಗ ಲೈವ್.ಕಾಂ | 03 ಏಪ್ರಿಲ್ 2019 ಹೆಲಿಕಾಪ್ಟರ್’ನಲ್ಲಿ ತೆರಳಿ ಶಿಕಾರಿಪುರ ವಿಧಾನಸಭೆ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿದ್ದ ವಿನಯ್ ರಾಜವತ್, ಎತ್ತಿನಗಾಡಿಯಲ್ಲಿ ಬಂದು ಲೋಕಸಭೆ ಚುನಾವಣೆಗೆ ನಾಮಿನೇಷನ್ ಮಾಡಿದ್ದಾರೆ. ಅಷ್ಟೇ ಅಲ್ಲ, ಮೂಟೆಯಲ್ಲಿ ನಾಣ್ಯಗಳನ್ನು ತಂದು ಠೇವಣಿ ಹಣ ಕಟ್ಟಿದ್ದಾರೆ. ಇವತ್ತು ಜಿಲ್ಲಾ ಚುನಾವಣಾಧಿಕಾರಿ ಕಚೇರಿಯಲ್ಲಿ ವಿದ್ಯಾರ್ಥಿ ಸಂಘಟನೆ ರಾಜ್ಯಾಧ್ಯಕ್ಷ ವಿನಯ್ ರಾಜವತ್ ನಾಮಪತ್ರ ಸಲ್ಲಿಸಿದ್ದಾರೆ. ಅಡಕೆ ಹಾಳೆ ಟೋಪಿ, ಮಲೆನಾಡು ಶೈಲಿಯ ಬಟ್ಟೆ ತೊಟ್ಟು, ಎತ್ತಿನಗಾಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ನಾಮಪತ್ರ ಸಲ್ಲಿಸಲು ತೆರಳುವಾಗ ಮೂಟೆ … Read more

ಭದ್ರಾವತಿ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ಮೆಷಿನ್ ಒಡೆದು ಹಣ ದೋಚಲು ಯತ್ನ

ಶಿವಮೊಗ್ಗ ಲೈವ್.ಕಾಂ | 01 ಏಪ್ರಿಲ್ 2019 ಭದ್ರಾವತಿ ನ್ಯೂ ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಎಟಿಎಂ ಯಂತ್ರವನ್ನು ಹಾನಿಗೊಳಿಸಿರುವ ಕಳ್ಳರು, ತಮ್ಮ ಪ್ರಯತ್ನ ಕೈಗೊಡದೆ ಬರಿಗೈಯಲ್ಲಿ ತೆರಳಿದ್ದಾರೆ. ಹೊಸ ಸಿದ್ದಾಪುರ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಕಳ್ಳರು ನುಗ್ಗಿದ್ದಾರೆ. ಎಟಿಎಂ ಮೆಷಿನ್ ಒಡೆದು, ಹಣ ದೋಚಲು ಯತ್ನಿಸಿದ್ದಾರೆ. ಇದರಿಂದ ಎಟಿಎಂ ಮೆಷಿನ್’ಗೆ ಹಾನಿಯಾಗಿದೆ. ಆದರೆ ಕಳ್ಳರಿಗೆ ಹಣ ದೋಚಲು ಸಾದ್ಯವಾಗಿಲ್ಲ. ಹಾಗಾಗಿ ಬರಿಗೈಯಲ್ಲಿ ತೆರಳಿದ್ದಾರೆ. ನ್ಯೂಟೌನ್ ಪೊಲೀಸ್ … Read more