ಪ್ರಯಾಣಿಕರಿಂದ ಬಸ್‌ ಕಂಡಕ್ಟರ್‌ಗೆ 15 ಲಕ್ಷ ವಂಚನೆ, ಏನಿದು ಪ್ರಕರಣ?

Crime-News-General-Image

ಶಿವಮೊಗ್ಗ: ಸರ್ಕಾರಿ ನೌಕರಿ (Government Job) ಕೊಡಿಸುವುದಾಗಿ ನಂಬಿಸಿ ಕೆಎಸ್‌ಆರ್‌ಟಿಸಿ ನಿವೃತ್ತ ಕಂಡಕ್ಟರ್‌ ಒಬ್ಬರಿಗೆ ₹15 ಲಕ್ಷ ವಂಚಿಸಲಾಗಿದೆ. ಕೊನೆಗೆ ಕೆಲಸವನ್ನೂ ಕೊಡಿಸದೆ, ಹಣವನ್ನೂ ಹಿಂತಿರುಗಿಸದೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದೆನ್ನೂ ಓದಿ » ಗಂಟಲಲ್ಲಿ ಸಿಲುಕಿದ ಚಿಕನ್‌ ಮೂಳೆ, ಆಪರೇಷನ್‌ ಮಾಡದೆ ಪಾರು ಮಾಡಿದ ಶಿವಮೊಗ್ಗದ ಡಾಕ್ಟರ್‌ಗಳು, ಹೇಗದು? ಕೆಂಚಪ್ಪ ಕಂಡಕ್ಟರ್‌ ಆಗಿದ್ದಾಗ ಬಸ್ಸಿನಲ್ಲಿ ಇಬ್ಬರು ಪ್ರಯಾಣಿಕರ ಪರಿಚಯವಾಗಿತ್ತು. ತಮಗೆ ಹಲವು ರಾಜಕಾರಣಿಗಳ ಪರಿಚಯವಿದ್ದು ಸರ್ಕಾರಿ ಕೆಲಸ ಕೊಡಿಸುವುದಾಗಿ … Read more

ಶಿವಮೊಗ್ಗದ ಯುವಕ ₹25 ಲಕ್ಷ ಹಣ ಕಳೆದುಕೊಂಡ, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಗೂಗಲ್‌ನಲ್ಲಿ ಹೊಟೇಲ್‌ಗಳಿಗೆ ರಿವ್ಯು (Review) ಬರೆದರೆ ಹಣ ಸಂಪಾದಿಸಬಹುದು ಎಂದು ನಂಬಿಸಿ ಶಿವಮೊಗ್ಗದ ಯುವಕನಿಗೆ ₹25.92 ಲಕ್ಷ ವಂಚಿಸಲಾಗಿದೆ. ಟೆಲಿಗ್ರಾಂ ಗ್ರೂಪ್‌ ಒಂದಕ್ಕೆ ಸೇರಿದ್ದ ಶಿವಮೊಗ್ಗದ ಯುವಕನಿಗೆ ಹೊಟೇಲ್‌ ರಿವ್ಯು ಮಾಡಿದರೆ ಅಧಿಕ ಲಾಭಾಂಶ ಸಂಪಾದಿಸಬಹುದು ಎಂದು ನಂಬಸಿಲಾಗಿತ್ತು. ರಿವ್ಯು ಬರೆಯಲು ಸೇರಿದಂತೆ ನಾನಾ ಕಾರಣಕ್ಕೆ ಯುವಕನಿಂದ ಹಣ ವರ್ಗಾಯಿಸಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ. ಜೂನ್‌ 11 ರಿಂದ ಜುಲೈ 8ರವರೆಗೆ ಯುವಕ ತನ್ನ ಖಾತೆಯಿಂದ ₹25.92 ಲಕ್ಷ ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾನೆ. ಇದನ್ನೂ ಓದಿ … Read more

ವಾಟ್ಸಪ್‌ ಗ್ರೂಪ್‌ ಅಡ್ಮಿನ್‌ಗೆ ಮೆಸೇಜ್‌ ಮಾಡಿದ್ದ ಟೀಚರ್‌ಗೆ ಕಾದಿತ್ತು ಆಘಾತ, ಠಾಣೆಗೆ ದೌಡು, ಆಗಿದ್ದೇನು?

Online-Fraud-Case-image

ಶಿವಮೊಗ್ಗ: ಷೇರು ವ್ಯವಹಾರದಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಕೊಡಿಸುವುದಾಗಿ ನಂಬಿಸಿ ಶಿವಮೊಗ್ಗ ಜಿಲ್ಲೆಯ ಶಿಕ್ಷಕಿಯೊಬ್ಬರಿಗೆ (ಹೆಸರು ಗೌಪ್ಯ) ₹40.85 ಲಕ್ಷ ವಂಚಿಸಲಾಗಿದೆ (Scam). ಇನ್‌ಸ್ಟಾಗ್ರಾಂನಲ್ಲಿ ಷೇರುಗಳಲ್ಲಿ ಹೂಡಿಕೆ ಕುರಿತು ಉಚಿತ ಸಲಹೆ ಎಂಬ ಜಾಹೀರಾತು ಇತ್ತು. ಅದರ ಮೇಲೆ ಕ್ಲಿಕ್‌ ಮಾಡಿದಾಗ ಶಿಕ್ಷಕಿಯ ಮೊಬೈಲ್‌ ನಂಬರ್‌ ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಸೇರ್ಪಡೆಯಾಗಿತ್ತು. ಅಲ್ಲಿ ಹಲವರು ಷೇರಿನಲ್ಲಿ ಹೂಡಿಕೆ ಮಾಡಿದ ಲಾಭ ಗಳಿಸಿರುವ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈ ಹಿನ್ನೆಲೆ ಶಿಕ್ಷಕಿಯು ವಾಟ್ಸಪ್‌ ಗ್ರೂಪ್‌ನ ಅಡ್ಮಿನ್‌ಗೆ ಮೆಸೇಜ್‌ … Read more

ಶಿವಮೊಗ್ಗದ ನಿರ್ಜನ ಪ್ರದೇಶದಲ್ಲಿ ಬೆಂಗಳೂರಿನ ವ್ಯಕ್ತಿಗೆ ಚಿನ್ನದ ನಾಣ್ಯ ಕೊಟ್ಟ ಸ್ನೇಹಿತ, ಆಮೇಲೆ ಕಾದಿತ್ತು ಆಘಾತ

Police-Van-Jeep-at-Shimoga-Nehru-Road

ಶಿವಮೊಗ್ಗ: ಜಿಲ್ಲೆಯ ಪ್ರವಾಸಿ ತಾಣಗಳನ್ನು ತೋರಿಸುವುದಾಗಿ ನಂಬಿಸಿ ಬೆಂಗಳೂರಿನ ಗುತ್ತಿಗೆದಾರರೊಬ್ಬರಿಗೆ ಲಕ್ಷಾಂತರ ರೂ. ವಂಚಿಸಲಾಗಿದೆ. (Gold Coins) ₹11 ಲಕ್ಷ ವಂಚನೆಯಾಗಿದೆ ಎಂದು ಆರೋಪಿಸಿ ಗುತ್ತಿಗೆದಾರ ಗೌತಮ್‌ ಭಂಡಾರಿ ಎಂಬುವವರು ದೂರು ನೀಡಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೇಗಾಯ್ತು ವಂಚನೆ? ಗೌತಮ್‌ ಭಂಡಾರಿ ಎಂಬುವವರಿಗೆ ಬೆಂಗಳೂರಿನಲ್ಲಿ ಶಿವಮೊಗ್ಗದ ಪ್ರದೀಪ ಎಂಬಾತನ ಪರಿಚಯವಾಗಿತ್ತು. ಪ್ರದೀಪ ಆಗಾಗ ಅವರಿಗೆ ಕರೆ ಮಾಡುತ್ತಿದ್ದ. ಶಿವಮೊಗ್ಗದಲ್ಲಿ ಟೂರಿಸ್ಟ್‌ ಜಾಗಗಳನ್ನು ತೋರಿಸುವುದಾಗಿ ಹೇಳುತ್ತಿದ್ದ. ಗೌತಮ್‌ ಭಂಡಾರಿ ಅವರು ತಮ್ಮ ಸ್ನೇಹಿತರಾದ ನಾಗೇಶ್‌, … Read more

ATMನಲ್ಲಿ ಡ್ರಾ ಆಗದಿದ್ದರು ಅಕೌಂಟ್‌ನಲ್ಲಿ ಹಣ ಕಟ್‌, CCTV ಚೆಕ್‌ ಮಾಡಿದ ಬ್ಯಾಂಕ್‌ ಸಿಬ್ಬಂದಿ ಆಘಾತ

Police-Jeep-With-Light-New.

ಶಿವಮೊಗ್ಗ: ATM ಮೆಷಿನ್‌ನಲ್ಲಿ ಡ್ರಾ ಮಾಡಿದ ಹಣ ಬಾರದೆ ಇರುವ ಕುರಿತು ಮೂರು ಪ್ರತ್ಯೇಕ ದೂರು ಬಂದ ಹಿನ್ನೆಲೆ ಪರಿಶೀಲಿಸಿದಾಗ ವ್ಯಕ್ತಿಯೊಬ್ಬ ಗಮ್‌ ಟೇಪ್‌ ಮಾದರಿ ವಸ್ತು ಅಂಟಿಸಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವಂಚಕನ ವಿರುದ್ಧ ಕೆನರಾ ಬ್ಯಾಂಕ್‌ ಸಿಬ್ಬಂದಿ ವಿನೋಬನಗರ ಠಾಣೆಗೆ ದೂರು ನೀಡಿದ್ದಾರೆ. ಮೇ 13ರಂದು ಮೂರು ಪ್ರತ್ಯೇಕ ಗ್ರಾಹಕರು ಪ್ರತ್ಯೇಕ ಸಮಯದಲ್ಲಿ ಎಟಿಎಂನಿಂದ ಹಣ ಬಿಡಿಸಿಕೊಳ್ಳಲು ಬಂದಿದ್ದರು. ಎಟಿಎಂನಿಂದ ಹಣ ಬಾರದಿದ್ದರು ಅಕೌಂಟ್‌ನಲ್ಲಿ ಹಣ ಕಡಿತವಾಗಿತ್ತು. ಈ ಸಂಬಂಧ ಕೆನರಾ ಬ್ಯಾಂಕ್‌ಗೆ … Read more

ಸಾವಿರ ಮೂಟೆ ಸಿಮೆಂಟ್‌ ಆರ್ಡರ್‌ ಮಾಡಿದ್ದ ಗುತ್ತಿಗೆದಾರನಿಗೆ ಕೊನೆಗೆ ಕಾದಿತ್ತು ಶಾಕ್‌, ಆಗಿದ್ದೇನು?

Crime-News-General-Image

SHIVAMOGGA LIVE NEWS | 9 JANUARY 2025 ಸಾಗರ : ಜೆಎಸ್‌ಡಬ್ಲು ಸಿಮೆಂಟ್‌ ಕಂಪನಿಯ (Cement) ಹೆಸರು ದುರ್ಬಳಕೆ ಮಾಡಿಕೊಂಡು ಗುತ್ತಿಗೆದಾರರೊಬ್ಬರಿಗೆ (ಹೆಸರು ಗೌಪ್ಯ) 3 ಲಕ್ಷ ರೂ. ವಂಚಿಸಲಾಗಿದೆ. ಸಾವಿರ ಚೀಲ ಸಿಮೆಂಟ್‌ ಅಗತ್ಯವಿದ್ದರಿಂದ ಆನ್‌ಲೈನ್‌ನಲ್ಲಿ ಜೆಎಸ್‌ಡಬ್ಲು ಸಿಮೆಂಟ್‌ ಕಂಪನಿಯ ಮೊಬೈಲ್‌ ನಂಬರ್‌ ಹುಡುಕಿದ್ದರು. ಇದನ್ನೂ ಓದಿ » ನೂರಾರು ಕನಸು ಹೊತ್ತಿದ್ದ ಯುವಕ ಹಾಸಿಗೆ ಹಿಡಿದ, ತುತ್ತು ಅನ್ನಕ್ಕು ಕುಟುಂಬದ ಪರದಾಟ ಸ್ವಲ್ಪ ಸಮಯದ ಬಳಿಕ ಗುತ್ತಿಗೆದಾರನ ಮೊಬೈಲ್‌ಗೆ ಕರೆ ಬಂದಿದ್ದು ಮಾತನಾಡಿದ ವ್ಯಕ್ತಿ, … Read more

ಶಿವಮೊಗ್ಗದಲ್ಲಿ ಬ್ಯಾಂಕ್‌ ಉದ್ಯೋಗಿಗೇ ಲಕ್ಷ ಲಕ್ಷ ರೂ. ವಂಚಿಸಿದ ಸೈಬರ್‌ ವಂಚಕರು

SMS-Fraud-Shimoga-CEN-Police-Station.

SHIMOGA NEWS, 27 NOVEMBER 2024 ಕ್ರೈಮ್‌ ಸುದ್ದಿ : ಪ್ರತಿಷ್ಠಿತ ಟ್ರೇಡಿಂಗ್‌ ಕಂಪನಿಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು ಬ್ಯಾಂಕ್‌ (Bank Employee) ಉದ್ಯೋಗಿಯೊಬ್ಬರಿಗೆ (ಹೆಸರು ಗೌಪ್ಯ) ಆನ್‌ಲೈನ್‌ ವಂಚಕರು 11.26 ಲಕ್ಷ ರೂ. ವಂಚಿಸಿದ್ದಾರೆ. ಶೇ.5 ರಿಂದ ಶೇ.30ರಷ್ಟು ಲಾಭ ಬ್ಯಾಂಕ್‌ ಒಂದರ ಮಹಿಳಾ ಉದ್ಯೋಗಿಯ ಮೊಬೈಲ್‌ಗೆ ಪ್ರತಿಷ್ಠಿತ ಷೇರು ವಹಿವಾಟು ಸಂಸ್ಥೆಯೊಂದರ ಹೆಸರಿನಲ್ಲಿ ಮೆಸೇಜ್‌ ಬಂದಿತ್ತು. ಪರಿಶೀಲಿಸಿದ ಬ್ಯಾಂಕ್‌ ಉದ್ಯೋಗಿ ಹಣ ಹೂಡಿಕೆಗೆ ಒಪ್ಪಿಗೆ ಸೂಚಿಸಿದ್ದರಿಂದ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಲಾಗಿತ್ತು. ಆ ಲಿಂಕ್‌ … Read more

ಶಿವಮೊಗ್ಗದ ಇನ್ಷುರೆನ್ಸ್‌ ಕಂಪನಿಯ ಏರಿಯಾ ಮ್ಯಾನೇಜರ್‌ಗೆ 23 ಲಕ್ಷ‌ ರೂ. ವಂಚನೆ, ಮೋಸ ಹೋಗಿದ್ದು ಹೇಗೆ?

SMS-Fraud-Shimoga-CEN-Police-Station.

SHIMOGA, 5 AUGUST 2024 : ಪಾರ್ಟ್‌ ಟೈಮ್‌ ಕೆಲಸದ (Job) ಆಮಿಷವೊಡ್ಡಿ ಇನ್ಷುರೆನ್ಸ್‌ ಕಂಪನಿಯೊಂದರ ಏರಿಯಾ ಮ್ಯಾನೇಜರ್‌ಗೆ 23.61 ಲಕ್ಷ ರೂ. ವಂಚಿಸಲಾಗಿದೆ. ಹೆಚ್ಚಿನ ಲಾಭಾಂಶದ ಆಸೆ ಹುಟ್ಟಿಸಿ ಹಣ ಹೂಡಿಕೆ ಮಾಡಿಸಿಕೊಂಡು ಬಳಿಕ ಹಣವನ್ನು ಹಿಂತಿರುಗಿಸಿಲ್ಲ. ಏರಿಯಾ ಮ್ಯಾನೇಜರ್‌ (ಹೆಸರು ಗೌಪ್ಯ) ಮೊಬೈಲ್‌ನಲ್ಲಿದ್ದ ಟೆಲಿಗ್ರಾಂ ಅಪ್ಲಿಕೇಷನ್‌ಗೆ ಪಾರ್ಟ್‌ ಟೈಮ್‌ ಜಾಬ್‌ ಕುರಿತು ಮೆಸೇಜ್‌ ಬಂದಿತ್ತು. ಟಾಸ್ಕ್‌ಗಳನ್ನು ಪೂರೈಸಿದರೆ ಹಣ ನೀಡಲಾಗುತ್ತದೆ ಎಂದು ತಿಳಿಸಲಾಗಿತ್ತು. ಮೊದಲಿಗೆ ಅಮೆಜಾನ್‌, ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾಡೆಕ್ಟ್‌ ರಿವ್ಯು ಮಾಡುವಂತೆ ಸೂಚಿಸಲಾಗಿತ್ತು. ಆ … Read more

ಶಿವಮೊಗ್ಗದ ಸರ್ಕಾರಿ ಅಧಿಕಾರಿಗೆ 32 ಲಕ್ಷ ರೂ. ವಂಚನೆ, ಆಗಿದ್ದೇನು?

Online-Fraud-Case-image

SHIVAMOGGA LIVE NEWS | 8 MARCH 2024 SHIMOGA : ಆನ್‌ಲೈನ್‌ ಟ್ರೇಡಿಂಗ್‌ನಲ್ಲಿ ಷೇರುಗಳನ್ನು ಖರೀದಿಸಿ ಹೋಲ್ಡ್‌ ಮಾಡಿದರೆ ಅಧಿಕ ಲಾಭಾಂಶ ದೊರೆಯಲಿದೆ ಎಂದು ನಂಬಿಸಿ ಅಧಿಕಾರಿಯೊಬ್ಬರಿಗೆ 32.45 ಲಕ್ಷ ರೂ. ವಂಚಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ (ಹೆಸರು ಗೌಪ್ಯ) ಇನ್‌ಸ್ಟಾಗ್ರಾಂನಲ್ಲಿ ಟ್ರೇಡಿಂಗ್‌ನ ಲಿಂಕ್‌ ಕ್ಲಿಕ್‌ ಮಾಡಿದಾಗ ವಾಟ್ಸಪ್‌ ಗ್ರೂಪ್‌ ಒಂದಕ್ಕೆ ಸೇರಿದ್ದರು. ಅಲ್ಲಿ ನಿಮಿಷ ಗುಪ್ತಾ ಎಂಬ ಹೆಸರಿನಲ್ಲಿ ಚಾಟಿಂಗ್‌ ಮಾಡಿದ್ದು, ಮೊಬೈಲ್‌ನಲ್ಲಿ ಆಪ್‌ ಡೌನ್‌ಲೋಡ್‌ ಮಾಡುವಂತೆ ಸೂಚಿಸಲಾಗಿತ್ತು. ಅಲ್ಲದೆ, ಆ … Read more

‘ಷೇರು ವ್ಯವಹಾರದಲ್ಲಿ 200 ಪರ್ಸೆಂಟ್‌ ಲಾಭ’, ತಿಳಿಯಲು ಮುಂದಾದ ಮಹಿಳೆಗೆ ಕಾದಿತ್ತು ದೊಡ್ಡ ಆಘಾತ, ಏನದು?

SMS-Fraud-Shimoga-CEN-Police-Station.

SHIVAMOGGA LIVE NEWS | 26 FEBRUARY 2024 SHIMOGA : ಷೇರು ವ್ಯವಹಾರದಲ್ಲಿ ಅತ್ಯಧಿಕ ಲಾಭವಿದೆ ಎಂದು ಆಸೆ ಹುಟ್ಟಿಸಿ ಶಿವಮೊಗ್ಗದ ಗೃಹಿಣಿಯೊಬ್ಬರಿಗೆ 16.42 ಲಕ್ಷ ರೂ. ವಂಚಿಸಲಾಗಿದೆ. ಈ ಸಂಬಂಧ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟ್ರೇಡಿಂಗ್‌ ಕುರಿತು ಕೋಚಿಂಗ್‌ ನೀಡಲಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ಪೇಜ್‌ ಒಂದರಲ್ಲಿ ಪ್ರಕಟಿಸಲಾಗಿತ್ತು. ಅಲ್ಲಿದ್ದ ಲಿಂಕ್‌ ಕ್ಲಿಕ್‌ ಮಾಡಿದ್ದ ಶಿವಮೊಗ್ಗದ ಗೃಹಿಣಿ (ಹೆಸರು ಗೌಪ್ಯ) ಒಂದು ವಾಟ್ಸಪ್‌ ಗ್ರೂಪ್‌ ಸೇರಿದ್ದರು. ಅಲ್ಲಿ ಟ್ರೇಡಿಂಗ್‌ ಎಂದರೇನು, ಲಾಭ ಪಡೆಯುವುದು … Read more