ತೀರ್ಥಹಳ್ಳಿಯಲ್ಲಿ ದೇವಸ್ಥಾನದ ಬೀಗ ಒಡೆದು ಕಾಣಿಕ ಕಳ್ಳತನ

Maluru-Police-Station-in-Thirthahalli-taluk.webp

SHIVAMOGGA LIVE NEWS | 2 DECEMBER 2024 ತೀರ್ಥಹಳ್ಳಿ : ದೇವಸ್ಥಾನವೊಂದರ (Temple) ಬಾಗಿಲಿನ ಬೀಗ ಮುರಿದು ಹುಂಡಿಯಲ್ಲಿದ್ದ ಕಾಣಿಕೆ ಹಣ ಕಳ್ಳತನ ಮಾಡಲಾಗಿದೆ. ತೀರ್ಥಹಳ್ಳಿ ತಾಲೂಕು ಮುಂಡುವಳ್ಳಿ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ಅರ್ಚಕ ಪ್ರಶಾಂತ್‌ ಅಡಿಗ ರಾತ್ರಿ ಪೂಜೆ ಮುಗಿಸಿ ದೇವಸ್ಥಾನದ ಬೀಗ ಹಾಕಿ ತೆರಳಿದ್ದರು. ಮರುದಿನ ಬೆಳಗ್ಗೆ ದೇಗುಲದ ಬಳಿ ಆಗಮಿಸಿದಾಗ ದೇಗುಲದ ಮುಂದಿನ ಬಾಗಿಲಿನ ಬೀಗ ಮುರಿದಿತ್ತು. ಒಳಗೆ ಹುಂಡಿಯ ಬೀಗವನ್ನು ಒಡೆಯಲಾಗಿತ್ತು. ಅದರಲ್ಲಿದ್ದ ಸುಮಾರು 15 … Read more

ಭದ್ರಾ ಡ್ಯಾಮ್‌, ನಾಲೆಯ ಗೇಟ್‌ ಬಂದ್‌ ಮಾಡುವಾಗ ಕ್ರೇನ್‌ನ ಕೇಬಲ್‌ ಕಟ್

Bhadra-dam-General-Image

SHIVAMOGGA LIVE NEWS | 2 DECEMBER 2024 ಭದ್ರಾವತಿ : ಭದ್ರಾ ಜಲಾಶಯದ (Bhadra Dam) ಬಲದಂಡೆ ಕಾಲುವೆಗೆ ಗೇಟ್‌ ಅಳವಡಿಸುವ ಕ್ರೇನ್‌ನ ಕೇಬಲ್‌ ತುಂಡಾಗಿದ್ದರಿಂದ ನಾಲೆಗೆ ಒಂದು ದಿನ ಹೆಚ್ಚುವರಿಯಾಗಿ ನೀರು ಹರಿದಿದೆ. ಭಾನುವಾರ ಬೇರೊಂದು ಕ್ರೇನ್‌ ತರಿಸಿ ನಾಲೆಯ ಗೇಟ್‌ ಬಂದ್‌ ಮಾಡಲಾಗಿದೆ. ನ.29ರಂದು ಭದ್ರಾ ಜಲಾಶಯದ ಬಲದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರ (ಕಾಡಾ) ತಿಳಿಸಿತ್ತು. ಅಂದು ಗೇಟ್‌ ಬಂದ್‌ ಮಾಡುವಾಗ ಬೃಹತ್‌ ಕ್ರೇನ್‌ನ … Read more

ಮೆಗ್ಗಾನ್‌ ಆಸ್ಪತ್ರೆಯಿಂದ ಹೊರ ಬಂದು ಆಟೋ ಹತ್ತಿದ್ದ ಮಹಿಳೆಗೆ ಆಘಾತ

Mc-Gann-Hospital-Shimoga

SHIVAMOGGA LIVE NEWS | 1 DECEMBER 2024 ಶಿವಮೊಗ್ಗ : ಮೆಗ್ಗಾನ್‌ ಆಸ್ಪತ್ರೆಯಲ್ಲಿ (Hospital) ಜನ ದಟ್ಟಣೆ ಹೆಚ್ಚಿದ್ದ ಸಂದರ್ಭ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನ ಜಿಪ್‌ ತೆಗೆದು ಒಳಗಿದ್ದ 2.20 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವ ಮಾಡಲಾಗಿದೆ. ಈ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ತಡವಾಗಿ ಪ್ರಕರಣ ದಾಖಲಾಗಿದೆ. ತಬಸುಮ್‌ ಎಂಬುವರ ಬ್ಯಾಗ್‌ನಿಂದ ಚಿನ್ನಾಭರಣ ಕಳ್ಳತನವಾಗಿದೆ. ತಬಸುಮ್‌ ತಮ್ಮ ತಾಯಿಯನ್ನು ವೈದ್ಯರ ಬಳಿ ಪರೀಕ್ಷೆಗೆ ಕರೆತಂದಿದ್ದರು. ಈ ಸಂದರ್ಭ ಮೆಗ್ಗಾನ್‌ ಆಶ್ಪತ್ರೆಯಲ್ಲಿ ಜನ ದಟ್ಟಣೆ ಹೆಚ್ಚಿತ್ತು. … Read more

ಅಡಿಕೆ ಬೆಳೆಗಾರರ ಸಮಾವೇಶ ಮುಂದೂಡಿಕೆ, ಕಾರಣವೇನು?

Areca-Farm-Adike-tota-in-Shimoga

SHIVAMOGGA LIVE NEWS | 1 DECEMBER 2024 ಸಾಗರ: ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘ ಡಿಸೆಂಬರ್ 6ರಂದು ಆಯೋಜಿಸಿದ್ದ ಅಡಿಕೆ ಬೆಳೆಗಾರರ (Adike) ಸಮಾವೇಶವನ್ನು ಜನವರಿ 18ಕ್ಕೆ ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷ ವ.ಶಂ.ರಾಮಚಂದ್ರ ಭಟ್ ತಿಳಿಸಿದ್ದಾರೆ. ಡಿ. 6ರಂದು ನಿಗದಿಯಾಗಿದ್ದ ಸಮಾವೇಶಕ್ಕೆ ಕೇಂದ್ರದ ಕೃಷಿ ಸಚಿವರು ಪಾಲ್ಗೊಳ್ಳುವ ಭರವಸೆ ನೀಡಿದ್ದರು. ಆಡಳಿತಾತ್ಮಕ ಕಾರಣಗಳಿಗಾಗಿ ಅಂದು ಸಮಾವೇಶಕ್ಕೆ ಬರಲು ಸಚಿವರಿಗೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅನಿವಾರ್ಯವಾಗಿ ಸಮಾವೇಶವನ್ನು ಮುಂದೂಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ » ಶಿವಮೊಗ್ಗ … Read more

ಶಿವಮೊಗ್ಗ ಜಿಲ್ಲೆಯ 71 ಸಾವಿರ ರೈತರ ಖಾತೆಗೆ ವಿಮೆ ಪರಿಹಾರ

Agriculture-News-Farmer

SHIVAMOGGA LIVE NEWS | 1 DECEMBER 2024 ಶಿವಮೊಗ್ಗ : ಜಿಲ್ಲೆಯಲ್ಲಿ ತೋಟಗಾರಿಕೆ ಬೆಳೆಗಳಿಗೆ 2023-24ನೇ ಸಾಲಿನಲ್ಲಿ ಹವಾಮಾನ ವೈಪರೀತ್ಯದಿಂದ ಉಂಟಾದ ಬೆಳೆ ನಷ್ಟಕ್ಕೆ 156.14 ಲಕ್ಷ ರೂ. ಬೆಳೆ ವಿಮೆ (Insurance) ಪರಿಹಾರ ಬಿಡುಗಡೆಯಾಗಿದೆ. ಡಿ.2ರಂದು ರೈತರ ಖಾತೆಗಳಿಗೆ ವಿಮೆ ಹಣ ಜಮಾ ಆಗಲಿದೆ ಎಂದ ಸಂಸದ ಬಿ.ವೈ.ರಾಘವೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಡಿಕೆ, ಮಾವು, ಮೆಣಸು ಮತ್ತು ಶುಂಠಿ ಬೆಳೆಗಳಿಗೆ ಜಿಲ್ಲೆಯ 73,271 ರೈತರು ವಿಮೆ ಪಾವತಿಸಿದ್ದರು. ಅದರಲ್ಲಿ 71,177 ರೈತರಿಗೆ ವಿಮೆ ಪರಿಹಾರ … Read more

ಶಿವಮೊಗ್ಗದಲ್ಲಿ ಮಳೆ ಸಾಧ್ಯತೆ, ಕಡಿಮೆಯಾದ ಚಳಿ ತೀವ್ರತೆ

WEATHER-REPORT-SHIMOGA-

WEATHER REPORT | 1 DECEMBER 2024 ಶಿವಮೊಗ್ಗ : ಜಿಲ್ಲೆಯ ವಿವಿಧೆಡೆ ಚಳಿ ಪ್ರಮಾಣ ತುಸು ಕಡಿಮೆಯಾಗಿದೆ. ಅಲ್ಲಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾದ ವರದಿಯಾಗಿದೆ. ಇವತ್ತು ಕೂಡ ಜಿಲ್ಲೆಯ ವಿವಿಧೆಡೆ ಮೋಡ ಕವಿದ ವಾತಾವರಣ ಮತ್ತು ಮಳೆಯಾಗುವ ಸಾಧ್ಯತೆ ಇದೆ. ಇವತ್ತು ಎಲ್ಲಲ್ಲಿ ಎಷ್ಟಿರುತ್ತೆ ತಾಪಮಾನ? ಶಿವಮೊಗ್ಗ, ಭದ್ರಾವತಿ ತಾಲೂಕುಗಳಲ್ಲಿ ಇವತ್ತು ಗರಿಷ್ಠ 28 ಡಿಗ್ರಿ, ಕನಿಷ್ಠ 19 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಇರಲಿದೆ. ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ಇವತ್ತು ಗರಿಷ್ಠ 32 … Read more

ಶಿವಮೊಗ್ಗದಿಂದ ಚನ್ನಗಿರಿಗೆ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಗೆ ಕಾದಿತ್ತು ಶಾಕ್

Crime-News-General-Image

SHIVAMOGGA LIVE NEWS | 1 DECEMBER 2024 ಶಿವಮೊಗ್ಗ : ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ (BAG) ಕಂತೆ ಕಂತೆ ಹಣ ಕಳ್ಳತನ ಮಾಡಲಾಗಿದೆ. ಮನೆ ಕಟ್ಟಲು ಬ್ಯಾಂಕ್‌ನಿಂದ ಹಣ ಬಿಡಿಸಿಕೊಂಡು ಚನ್ನಗಿರಿಯ ತಮ್ಮೂರಿಗೆ ಕೊಂಡೊಯ್ಯುತ್ತಿರುವಾಗ ಘಟನೆ ಸಂಭವಿಸಿದೆ. ಚನ್ನಗಿರಿಯ ಚಿಕ್ಕಮ್ಮ ಎಂಬುವವರಿಗೆ ಸೇರಿದ 1.50 ಲಕ್ಷ ರೂ. ಹಣ ಕಳುವಾಗಿದೆ ಎಂದು ಆರೋಪಿಸಲಾಗಿದೆ. ಚಿಕ್ಕಮ್ಮ ಅವರ ವ್ಯಾನಿಟಿ ಬ್ಯಾಗಿನಲ್ಲಿ 2.19 ಲಕ್ಷ ರೂ. ಹಣವಿತ್ತು. ಘಟನೆ ಸಂಭವಿಸಿದ್ದು ಹೇಗೆ? ಚಿಕ್ಕಮ್ಮ ಚನ್ನಗಿರಿಯಲ್ಲಿ … Read more

ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ ದಿನ?

DINA-BHAVISHYA

DINA BHAVISHYA | 1 DECEMBER 2024 ಮೇಷ ವ್ಯರ್ಥವಾಗಿ ಹಣ ಖರ್ಚು ಮಾಡಬೇಡಿ. ತಾಯಿಯ ಕಡೆಯರಿಂದ ಆರ್ಥಿಕ ಶಕ್ತಿ. ಪರಶಿವನ ಆರಾಧನೆಯಿಂದ ನೆಮ್ಮದಿ. ವೃಷಭ ಕೈಗಾರಿಕಾ ಕ್ಷೇತ್ರದಲ್ಲಿರುವವರಿಗೆ ಲಾಭ. ಆಧ್ಯಾತ್ಮ ಚಿಂತನೆಯಿಂದ ನೆಮ್ಮದಿ. ಉದ್ಯೋಗ ಸ್ಥಳದಲ್ಲಿ ಸನ್ಮಾನ, ಗೌರವ ಲಭಿಸಲಿದೆ. ಮಿಥುನ ಹೊಗಳಿಕೆ ಮಾತುಗಳಿಗೆ ಮರುಳಾಗಬೇಡಿ. ನಿರ್ವಹಣೆ ಕೊರತೆಯಿಂದ ಉದ್ಯೋಗ ಸ್ಥಳದಲ್ಲಿ ಹಿನ್ನಡೆ. ಕರ್ಕಾಟಕ ಒಂಟಿತನದಿಂದ ಮಾನಸಿಕ ಒತ್ತಡ. ವಿಷಜಂತುಗಳಿಂದ ಜೀವಕ್ಕೆ ಕುತ್ತು ಬರುವ ಸಾಧ್ಯತೆ. ಸಿಂಹ ಮದುವೆ ವಿಷಯದಲ್ಲಿ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗದೆ ಗೊಂದಲ. … Read more

ಮಾಜಿ ಸಿಎಂ ಬಂಗಾರಪ್ಪ ಓದಿದ ಶಾಲೆಗೆ ಮಧು ಬಂಗಾರಪ್ಪ ಭೇಟಿ

Madhu-Bangarappa-visit-to-Shiralakoppa-school.

SHIVAMOGGA LIVE NEWS | 30 NOVEMBER 2024 ಶಿಕಾರಿಪುರ : ಮಾಜಿ ಮುಖ್ಯಮಂತ್ರಿ ಎಸ್‌.ಬಂಗಾರಪ್ಪ ಓದಿದ ಶಾಲೆಗೆ ಇವತ್ತು ಶಿಕ್ಷಣ ಸಚಿವ ಮಧು ಬಂಗಾರಪ್ಪ ಭೇಟಿ (Visit) ನೀಡಿದ್ದರು. ಶಾಲೆ ಆವರಣದಲ್ಲಿ ಓಡಾಡಿ, ತಮ್ಮ ತಂದೆಯ ನೆನಪು ಮಾಡಿಕೊಂಡರು. ಶಿಕಾರಿಪುರ ತಾಲೂಕು ಶಿರಾಳಕೊಪ್ಪದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗಕ್ಕೆ ಸಚಿವ ಮಧು ಬಂಗಾರಪ್ಪ ಭೇಟಿ ನೀಡಿದ್ದರು. ಈ ಸಂದರ್ಭ ಮಕ್ಕಳು ಹೂವು ನೀಡಿ ಸಚಿವರನ್ನು ಸ್ವಾಗತಿಸಿದರು. ಸರ್ಕಾರಿ ಶಾಲೆಗಳಲ್ಲಿ ಓದಿದ ಹಲವರು ದೊಡ್ಡ … Read more

ಸಭೆಯಲ್ಲಿ ದಿಢೀರ್‌ ಅಸ್ವಸ್ಥರಾದ IAS ಅಧಿಕಾರಿ, ತಕ್ಷಣ ಆರೈಕೆ ಮಾಡಿದ ಡಾ.ಸರ್ಜಿ

IAS-officer-BB-Kaveri-ill-during-ZP-KDP-Meeting

SHIVAMOGGA LIVE NEWS | 30 NOVEMBER 2024 ಶಿವಮೊಗ್ಗ : ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ವೇಳೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಬಿ.ಬಿ.ಕಾವೇರಿ ದಿಢೀರ್‌ ಅಸ್ವಸ್ಥರಾಗಿದ್ದಾರೆ (Ill). ತಕ್ಷಣ ನೆರವಿಗೆ ಧಾವಿಸಿದ ವಿಧಾನ ಪರಿಷತ್‌ ಸದಸ್ಯ ಡಾ. ಧನಂಜಯ ಸರ್ಜಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಟರಾಜ್‌ ಆರೈಕೆ ಮಾಡಿದರು. ಜಿಲ್ಲಾ ಪಂಚಾಯಿತಿಯ ಅಬ್ದುಲ್‌ ನಜೀರ್‌ ಸಾಬ್‌ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಸಭೆ ಮಧ್ಯೆ ಉಸ್ತುವಾರಿ … Read more