ನೆಟ್ ವರ್ಕ್ ಸಮಸ್ಯೆ, ಕೇಂದ್ರ ಸಚಿವರಿಗೆ ಹಳ್ಳಿಗಳ ಹೆಸರಿನ ಪಟ್ಟಿ ಸಹಿತ ಮನವಿ, ಯಾವೆಲ್ಲ ಊರಿನ ಹೆಸರಿದೆ?

BY-Raghavendra-Submits-Memorandum-to-telecom-ministry.

ಶಿವಮೊಗ್ಗ | ಜಿಲ್ಲೆಯಲ್ಲಿ ನೆಟ್ ವರ್ಕ್ (NETWORK) ಸಮಸ್ಯೆ ಉಂಟಾಗಿರುವ ಗ್ರಾಮಗಳಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಅವರು ಕೇಂದ್ರ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಮಾಡಿದರು. ದೆಹಲಿಯಲ್ಲಿ ದೂರ ಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಭೇಟಿಯಾಗಿದ್ದರು. ಜಿಲ್ಲೆಯ 80 ಗ್ರಾಮಗಳು ಸೇರಿದಂತೆ ಶಿವಮೊಗ್ಗ ಲೋಕಸಭೆ ಕ್ಷೇತ್ರ ವ್ಯಾಪ್ತಿಯ 96 ಗ್ರಾಮಗಳಲ್ಲಿ ನೆಟ್ ವರ್ಕ್ ಸಮಸ್ಯೆ ಇದೆ. ಇಲ್ಲಿ ಬಿ.ಎಸ್.ಎನ್.ಎಲ್ ವತಿಯಿಂದ ಟವರ್ ನಿರ್ಮಿಸುವಂತೆ … Read more

BREAKING NEWS | ಮಂಗೋಟೆಯಲ್ಲಿ ಗ್ರಾಮಸ್ಥರಿಂದ ದಿಢೀರ್ ಪ್ರತಿಭಟನೆ, KSRTC ಬಸ್’ಗಳನ್ನು ತಡೆದು ಆಕ್ರೋಶ

Bhadravathi-Mangote-Villagers-Held-Protest-against-KSRTC

SHIVAMOGGA LIVE NEWS | BHADRAVATHI | 26 ಜುಲೈ 2022 ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಗ್ರಾಮಸ್ಥರು ದಿಢೀರ್ ಪ್ರತಿಭಟನೆ ಕೈಗೊಂಡಿದ್ದಾರೆ. KSRTC ಬಸ್’ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಭದ್ರಾವತಿ ತಾಲೂಕು ಮಂಗೋಟೆ ಗ್ರಾಮದ ಜನರು KSRTC ಬಸ್’ಗಳನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಹೊನ್ನಾಳಿ ಕಡೆಯಿಂದ ಸಾಸ್ವೆಹಳ್ಳಿ ಮೂಲಕ ಶಿವಮೊಗ್ಗಕ್ಕೆ ಬರುತ್ತಿರುವ ಬಸ್ಸುಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸ್ ತಡೆಯಲು ಕಾರಣವೇನು? ಮಂಗೂಟೆಯಲ್ಲಿ ಸಮರ್ಪಕವಾಗಿ ಬಸ್ ವ್ಯವಸ್ಥೆ ಇಲ್ಲ. ಇದರಿಂದ ವಿದ್ಯಾರ್ಥಿಗಳು, ಗ್ರಾಮಸ್ಥರು ನಿತ್ಯ … Read more

ಬೇಡರ ಹೊಸಳ್ಳಿ ಬಳಿ ಚಲಿಸುತ್ತಿದ್ದ ಬೈಕ್’ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಕಾರು

crime name image

SHIVAMOGGA LIVE NEWS | SHIMOGA | 20 ಜುಲೈ 2022 ಚಲಿಸುತ್ತಿದ್ದ ಬೈಕ್’ಗೆ (BIKE) ಹಿಂಬದಿಯಿಂದ ಕಾರು (CAR) ಡಿಕ್ಕಿ ಹೊಡೆದು ಸವಾರ ಗಂಭೀರ ಗಾಯಗೊಂಡಿದ್ದಾನೆ. ಆತನನ್ನು ನಂಜಪ್ಪ ಆಸ್ಪತ್ರೆಗೆ (NANJAPPA HOSPITAL) ದಾಖಲು ಮಾಡಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಬೆಂಗಳೂರಿನ ಖಾಸಗಿ ಕಂಪನಿ ಉದ್ಯೋಗಿ ರುದ್ರಮೂರ್ತಿ ಗಾಯಗೊಂಡಿರುವ ಬೈಕ್ ಸವಾರ. ಹೊಸಳ್ಳಿ ಫಸ್ಟ್ ಕ್ಯಾಂಪ್’ನಲ್ಲಿರುವ ಮನೆಗೆ ಬಂದಿದ್ದ ರುದ್ರಮೂರ್ತಿ, ಬೈಕ್’ನಲ್ಲಿ ಹೊನ್ನಾಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ಬೇಡರ ಹೊಸಳ್ಳಿ (BEDARA HOSALLI) ಗ್ರಾಮದ ಬಳಿ ರುದ್ರಮೂರ್ತಿ ಚಲಿಸುತ್ತಿದ್ದ … Read more

ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ ಕುಮದ್ವತಿ ನದಿಯಲ್ಲಿ ಪತ್ತೆ

Lady-Found-dead-at-Kumadvathi-river-near-choradi

SHIVAMOGGA LIVE NEWS | SHIMOGA | 12 ಜುಲೈ 2022 ಮೂರು ದಿನದ ಹಿಂದೆ ನಾಪತ್ತೆಯಾಗಿದ್ದ ವೃದ್ಧೆ ಶವವಾಗಿ (DEATH) ಪತ್ತೆಯಾಗಿದ್ದಾರೆ. ಕುಮದ್ವತಿ ನದಿಯಲ್ಲಿ (KUMADVATHI RIVER) ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಶಿವಮೊಗ್ಗ ತಾಲ್ಲೂಕು ಚೋರಡಿಯ (CHORADI) ರತ್ನಮ್ಮ (63) ಮೃತರು. ಶನಿವಾರ ಬೆಳಗ್ಗೆ ರತ್ನಮ್ಮ ನಾಪತ್ತೆಯಾಗಿದ್ದರು. ಪೂಜೆಗೆ ಬಂದವರು ನಾಪತ್ತೆ ರತ್ನಮ್ಮ ಅವರು ಕುಮದ್ವತಿ ನದಿ ಸಮೀಪದ ಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆಗೆ ಆಗಮಿಸಿದ್ದರು. ಬಹು ಹೊತ್ತಾದರೂ ಮನೆಗೆ ಮರಳಿರಲಿಲ್ಲ. ಹಾಗಾಗಿ ಕುಟುಂಬದವರು ಹುಡುಕಾಟ ನಡೆಸಿದ್ದರು. … Read more

ಹರಾಜಿಗೆ ಉತ್ಸಾಹ, ನಿರ್ಮಾಣಕ್ಕೆ ತಾತ್ಸಾರ, ಮಕ್ಕಳಿಗಾಗಿ ‘ಟಾರ್ಪಲ್ ಬಸ್ ಸ್ಟಾಪ್’, ಯಾಕಿಂಗೆ?

Yedavatti-Tarpal-Bus-Stand-in-Thirthahalli

SHIVAMOGGA LIVE NEWS | THIRTHAHALLI | 8 ಜುಲೈ 2022 ಗ್ರಾಮ ಪಂಚಾಯಿತಿ ನಿರ್ಲಕ್ಷ್ಯದಿಂದ ಬೇಸತ್ತು, ಗ್ರಾಮಸ್ಥರೆ ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ. ಮಳೆಗಾಲದಲ್ಲಿ ಮಕ್ಕಳು, ಹಿರಿಯರು ಮಳೆಯಲ್ಲಿ ನಿಂತು ಬಸ್ಸಿಗೆ ಕಾಯುವುದನ್ನು ತಪ್ಪಿಸಲು ಈ ಕ್ರಮ ಕೈಗೊಂಡಿದ್ದಾರೆ. ತೀರ್ಥಹಳ್ಳಿ ತಾಲೂಕು ಕನ್ನಂಗಿ (KANNANGI) ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯಡವತ್ತಿ (YEDAVATTI) ಗ್ರಾಮದ ಜನರು, ಟಾರ್ಪಲ್ ಹೊದಿಕೆಯ ಬಸ್ ನಿಲ್ದಾಣ ನಿರ್ಮಿಸಿಕೊಂಡಿದ್ದಾರೆ. ಬಸ್ ನಿಲ್ದಾಣ ನಿರ್ಮಿಸಿಕೊಡಲು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ. ಈ ಹಿನ್ನೆಲೆ … Read more

ಮಂಡಗದ್ದೆ ಬಳಿ ಚಂದ್ರಶೇಖರ ಗುರೂಜಿ ಹೆಂಡತಿ ಮನೆಯಲ್ಲಿ ನೀರವ ಮೌನ

Chandrashekar-Guruji-Saral-Vastu

SHIVAMOGGA LIVE NEWS | THIRTHAHALLI | 5 ಜುಲೈ 2022 ಸರಳ ವಾಸ್ತು ಚಂದ್ರಶೇಖರ ಗುರೂಜಿ ಅವರ ಹತ್ಯೆ ವಿಚಾರ ತಿಳಿದು, ಮಂಡಗದ್ದೆ ಸಮೀಪ ಇರುವ ಅವರ ಹೆಂಡತಿ ಮನೆಯಲ್ಲಿ ನೀರವ ಮೌನ ಆವರಿಸಿದೆ. ಒಂದು ತಿಂಗಳ ಹಿಂದೆಯಷ್ಟೆ ಪತ್ನಿಯೊಂದಿಗೆ ಚಂದ್ರಶೇಖರ ಗುರೂಜಿ (Chandrashekhar Guruji) ಅವರು ಇಲ್ಲಿಗೆ ಬಂದಿದ್ದರು. ಚಂದ್ರಶೇಖರ ಗುರೂಜಿ ಅವರ ಪತ್ನಿ ಅಂಕಿತಾ ಅವರು, ತೀರ್ಥಹಳ್ಳಿ ತಾಲೂಕು ಮಂಡಗದ್ದೆ ಸಮೀಪದ ಹೆಮ್ಮಕ್ಕಿ ಗ್ರಾಮದವರು. ಮೂರು ವರ್ಷದ ಹಿಂದೆ ಚಂದ್ರಶೇಖರ ಗುರೂಜಿ ಅವರು … Read more

BREAKING NEWS | ಆಗುಂಬೆ ಗುಡ್ಡೆಕೇರಿ ಬಳಿ ಅಪಘಾತ, ಬೈಕ್ ಸವಾರ ಸಾವು

Car-Bike-accident-near-guddekoppa-agumbe

SHIVAMOGGA LIVE NEWS | THIRTHAHALLI | 5 ಜುಲೈ 2022 ಕಾರು, ಬೈಕ್ ಮುಖಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ತೀರ್ಥಹಳ್ಳಿ ತಾಲೂಕು ಆಗುಂಬೆ ಸಮೀಪದ ಗುಡ್ಡೆಕೇರಿ ಬಳಿ ಘಟನೆ ಸಂಭವಿಸಿತ್ತು. ಸುನಿಲ್, ಮೃತ ದುರ್ದೈವಿ. ಗುಡ್ಡೆಕೇರಿ ಗ್ರಾಮ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ಸಂಭವಿಸಿತ್ತು. ಕೈಮರದಿಂದ ಗುಡ್ಡೆಕೇರಿ ಕಡೆಗೆ ಸುನಿಲ್ ಬೈಕ್ ಚಲಾಯಿಸಿಕೊಂಡು ತೆರಳುತ್ತಿದ್ದರು. ಮಂಗಳೂರಿನಿಂದ ಶಿವಮೊಗ್ಗದ ಕಡೆಗೆ ಬರುತ್ತಿದ್ದ ಕಾರು ಮುಖಾಮುಖಿ ಡಿಕ್ಕಿಯಾಗಿವೆ. ಗಂಭೀರ ಗಾಯಗೊಂಡಿದ್ದ ಸುನಿಲ್’ರನ್ನು … Read more

ಶಿವಮೊಗ್ಗದಲ್ಲಿ KSRTC ಬಸ್, ಖಾಸಗಿ ಬಸ್ ಮಧ್ಯೆ ಭೀಕರ ಅಪಘಾತ

KSRTC-Bus-KKB-bus-collision-near-totadakere

SHIVAMOGGA LIVE NEWS | SHIMOGA | 1 ಜುಲೈ 2022 ಬಸ್ಸುಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಇಬ್ಬರ ಚಾಲಕರು ಸೇರಿ 40 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಶಿವಮೊಗ್ಗತ ಲಕ್ಕಿನಕೊಪ್ಪ ಗ್ರಾಮದ ಸಮೀಪದ ತೋಟದ ಕೆರೆ ಬಳಿಕ ಘಟನೆ ಸಂಭವಿಸಿದೆ. KSRTC BUS ಮತ್ತು ಕೆಕೆಬಿ ಸಂಸ್ಥೆಯ ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಚಾಲಕರಿಗೆ ಗಂಭೀರ ಗಾಯ KSRTC ಬಸ್ ಶೃಂಗೇರಿಯಿಂದ ಶಿವಮೊಗ್ಗಕ್ಕೆ ಆಗಮಿಸುತ್ತಿತ್ತು. ಖಾಸಗಿ ಬಸ್ … Read more

ಖಾಲಿ ಜಾಗದಲ್ಲಿ ಮದ್ಯ ಸೇವನೆಗೆ ಅಕ್ಷೇಪ, ಮನೆಗೆ ನುಗ್ಗಿ ಚಾಕು ಇರಿತ

Sagara-Rural-Police-Station-General-Image

SHIVAMOGGA LIVE NEWS | SAGARA | 29 ಜೂನ್ 2022 ಖಾಲಿ ಜಾಗದಲ್ಲಿ ಮದ್ಯ ಸೇವನೆಗೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಮನೆಗೆ ನುಗ್ಗಿ ವ್ಯಕ್ತಿಯೊಬ್ಬರಿಗೆ ಚಾಕು ಇರಿಯಲಾಗಿದೆ. ಕುಟುಂಬದವರ ಮುಂದೆ ಚಾಕು ಇರಿದು, ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಗರದ ಕುಗ್ವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಸುರೇಶ್ ಎಂಬುವವರಿಗೆ ಚಾಕು ಇರಿದಿದ್ದು, ಎಡಗೈಗೆ ಗಾಯವಾಗಿದೆ. ಏನಿದು ಪ್ರಕರಣ? ಸುರೇಶ್ ಅವರ ಮನೆ ಪಕ್ಕದ ಖಾಲಿ ಜಾಗದಲ್ಲಿ ಮೂವರು ಯುವಕರು ಮದ್ಯಾಹ್ನ ಮದ್ಯ ಸೇವನೆ ಮಾಡುತ್ತಿದ್ದರು. ಇದನ್ನು … Read more

ದೇವಸ್ಥಾನದಲ್ಲಿ ಅಪ್ರಾಪ್ತೆಯ ಮದುವೆ, 8 ಮಂದಿ ವಿರುದ್ಧ ಕೇಸ್, ಆರೋಪಿಗಳು ನಾಪತ್ತೆ

HIVAMOGGA-NEWS- map

SHIVAMOGGA LIVE NEWS | SHIMOGA | 28 ಜೂನ್ 2022 ದೇವಸ್ಥಾನ ಒಂದರಲ್ಲಿ ಅಪ್ರಾಪ್ತೆಯೊಬ್ಬಳಿಗೆ ವಿವಾಹ ಮಾಡಿಸಲಾಗಿದೆ. ದೂರದ ಸಂಬಂಧಿಯೊಬ್ಬರ ಜೊತೆಗೆ ವಿವಾಹವಾಗಿದೆ (CHILD MARRIAGE). ಈಗ ಬಾಲಕಿಯನ್ನು ರಕ್ಷಣೆ ಮಾಡಿ ಬಾಲಕಿಯರ ಬಾಲ ಮಂದಿರದಲ್ಲಿ ಇರಿಸಲಾಗಿದೆ. ಶಿವಮೊಗ್ಗ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ದೇವಸ್ಥಾನದಲ್ಲಿ ಬಾಲಕಿಗೆ ವಿವಾಹ (CHILD MARRIAGE) ಮಾಡಿಸಲಾಗಿತ್ತು. ಚಿಕ್ಕಮಗಳೂರಿನ ದೂರದ ಸಂಬಂಧಿಯೊಬ್ಬರ ಜೊತೆಗೆ ಬಾಲಕಿ ಮದುವೆಯಾಗಿದ್ದಳು. 17 ವರ್ಷದ ಬಾಲಕಿಗೆ ವಿವಾಹ ಮಾಡಿಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. … Read more