ಮೆಗ್ಗಾನ್ ಆಸ್ಪತ್ರೆ ಮುಂಭಾಗ ಬೊಲೆರೋ ಪಲ್ಟಿ, ಗಾಯಾಳುಗಳನ್ನು ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

210821 Bolero Accident at sagara road near mc gann hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಆಗಸ್ಟ್ 2021 ಪಾದಚಾರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ತರಕಾರಿ ತುಂಬಿದ್ದ ವಾಹನ ಪಲ್ಟಿಯಾಗಿದೆ. ವಾಹನದ ಅಡಿಗೆ ಸಿಲುಕಿದ್ದ ಪಾದಚಾರಿ ಮತ್ತು ವಾಹನದಲ್ಲಿದವರನ್ನು ಅಗ್ನಿಶಾಮಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ. ಮೆಗ್ಗಾನ್ ಆಸ್ಪತ್ರೆ ಮುಂಭಾಗ ಸಾಗರ ರಸ್ತೆಯಲ್ಲಿ ಘಟನೆ ಸಂಭವಿಸಿದೆ. ಅಗ್ನಿಶಾಮಕ ಠಾಣೆ ಬಳಿ ಅಪಘಾತವಾಗಿದ್ದು, ಕರ್ತವ್ಯದಲ್ಲಿದ್ದ ಸಿಬ್ಬಂದಿಗಳು ಅಪಘಾತಕ್ಕೀಡಾದವರನ್ನು ರಕ್ಷಿಸಿದ್ದಾರೆ. ಹೇಗಾಯ್ತು ಅಪಘಾತ? ಗುರುವಾರ ರಾತ್ರಿ ಬೊಲೆರೊ ಪಿಕಪ್ ವಾಹನ ತರಕಾರಿ ತುಂಬಿಕೊಂಡು ಶಿವಮೊಗ್ಗ ಎಪಿಎಂಸಿ ಕಡೆಗೆ … Read more

BREAKING NEWS | ಜೋಗ ಜಲಪಾತದಲ್ಲಿ ಅಧಿಕಾರಿಗಳ ದಾಳಿ, ಹೋಂ ಗಾರ್ಡ್’ಗಳು ಸೇರಿ ಏಳು ಮಂದಿ ವಿರುದ್ಧ ಕೇಸ್

JOG FALLS GENERAL IMAGE

ಶಿವಮೊಗ್ಗ ಲೈವ್.ಕಾಂ | SAGARA NEWS | 21 ಆಗಸ್ಟ್ 2021 ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಜೋಗ ಜಲಪಾತದ ಮೇಲೆ ಪೊಲೀಸರ ವಿಶೇಷ ತಂಡ ದಾಳಿ ನಡೆಸಿದೆ. ಕರೋನ ನಿಯಮ ಉಲ್ಲಂಘಿಸಿ ಪ್ರವಾಸಿಗರನ್ನು ಜಲಪಾತ ವೀಕ್ಷಣೆಗೆ ಬಿಟ್ಟ ಆರೋಪದಡಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಈ ಪೈಕಿ ಮೂವರು ಹೋಂ ಗಾರ್ಡ್ ಸಿಬ್ಬಂದಿಗಳಿದ್ದಾರೆ. ಜೋಗ ಜಲಪಾತ ವೀಕ್ಷಣೆಗೆ ಬರುವವರಿಗೆ RTPCR ನೆಗೆಟಿವ್ ವರದಿ ಅಥವಾ ಎರಡನೇ ಡೋಸ್ ಲಸಿಕೆ ಪಡೆದ ವರದಿ ಕಡ್ಡಾಯಗೊಳಿಸಲಾಗಿದೆ. ಈ … Read more

ಶಿವಮೊಗ್ಗದಲ್ಲಿ ಮನೆಗೆ ನುಗ್ಗಿ ದರೋಡೆ, ಮಗು ಸಾಯಿಸುವುದಾಗಿ ಬೆದರಿಸಿ ಹಣ, ಚಿನ್ನಾಭರಣ ದೋಚಿ ಪರಾರಿ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2021 ಮಂಕಿ ಕ್ಯಾಪ್ ಧರಿಸಿಕೊಂಡು ಬಂದು ಮನೆಯೊಂದಕ್ಕೆ ನುಗ್ಗಿ ಹಾಡಹಗಲೆ ದರೋಡೆ ಮಾಡಲಾಗಿದೆ. ಮನೆಯಲ್ಲಿದ್ದ ಒಬ್ಬರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಯಾರಾದರೂ ಕಿರುಚಾಡಿದರೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿ, ಹಣ, ಚಿನ್ನಾಭರಣ ಕದ್ದೊಯ್ಯಲಾಗಿದೆ. ಶಿವಮೊಗ್ಗ ತಾಲೂಕು ಚಿಕ್ಕಮರಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜಯಣ್ಣಗೌಡ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮಂಕಿ ಕ್ಯಾಪ್ ಧರಿಸಿ, ಎರಡು ಬೈಕ್’ನಲ್ಲಿ ಬಂದ ನಾಲ್ವರು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೇಗಾಯ್ತು … Read more

ಶಿವಮೊಗ್ಗದಿಂದ ಸಾಗರಕ್ಕೆ ತೆರಳುತ್ತಿದ್ದ ಬೈಕ್’ಗೆ ಹಿಂದಿನಿಂದ ಕಾರು ಡಿಕ್ಕಿ, ಗಂಡ ಸಾವು, ಪತ್ನಿಗೆ ಗಾಯ

050821 Bike Accident Near Sagara City 1

ಶಿವಮೊಗ್ಗ ಲೈವ್.ಕಾಂ | SAGARA NEWS | 5 ಆಗಸ್ಟ್ 2021 ಕಾರು ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತ್ನಿಗೆ ಗಾಯವಾಗಿದ್ದು ಸಾಗರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬಿ.ಹೆಚ್.ರಸ್ತೆಯ ಬೃಂಗಿ ಮಠದ ಸಮೀಪ ಘಟನೆ ಸಂಭವಿಸಿದೆ. ಬೈಕ್ ಸವಾರ ನರೇಂದ್ರ (38) ಗಂಭೀರ ಗಾಯಗೊಂಡು ಮೃತರಾಗಿದ್ದಾರೆ. ಅವರ ಪತ್ನಿ ರಾಜೇಶ್ವರಿ ಅವರನ್ನು ಸಾಗರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಹೇಗಾಯ್ತು ಘಟನೆ? ಹಿಂದಿನಿಂದ ಬರುತ್ತಿದ್ದ ಕಾರು, ಚಾಲಕನ ನಿಯಂತ್ರಣ ತಪ್ಪಿ ಬೈಕಿಗೆ ಡಿಕ್ಕಿಯಾಗಿದೆ. … Read more

ಶಿವಮೊಗ್ಗ ರೈಲ್ವೆ ನಿಲ್ದಾಣ ಬಳಿ, ರಿಂಗ್ ರಸ್ತೆಯಲ್ಲಿ, ಹೊಸ ಲಾರಿ ಅಪಘಾತ

040821 Truck Accident Near Railway Station 1

ಶಿವಮೊಗ್ಗ ಲೈವ್.ಕಾಂ | 04 AUGUST 2021 ಚಾಲಕನ ನಿಯಂತ್ರಣ ತಪ್ಪಿದ ಹೊಸ ಕ್ಯಾಂಟರ್ ಲಾರಿಯೊಂದು ಡಿವೈಡರ್ ಮೇಲೆ ಹಾರಿ ನಿಂತಿದೆ. ಅದೃಷ್ಟವಶಾತ್ ಯಾವುದೆ ಹಾನಿ ಸಂಭವಿಸಿಲ್ಲ. ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ, ಅಮೀರ್ ಅಹಮದ್ ಕಾಲೋನಿ ಮುಂಭಾಗ ಘಟನೆ ಸಂಭವಿಸಿದೆ. ಚಾಲಕ ಗಾಯಗೊಂಡಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ಉಷಾ ನರ್ಸಿಂಗ್ ಹೋಂ ಕಡೆಯಿಂದ ಬಂದ ಕ್ಯಾಂಟರ್ ಲಾರಿ, ಅಪಘಾತಕ್ಕೀಡಾಗಿದೆ. ಅತಿ ವೇಗವಾಗಿದ್ದಿದ್ದರಿಂದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದೆ. ಡಿವೈಡರ್‌ನ ಮಧ್ಯದಲ್ಲಿ ಲಾರಿ ಸಿಕ್ಕಿಬಿದ್ದಿದೆ. … Read more

ರೋಗಿಯ ಆರೈಕೆಗೆ ಬಂದಿದ್ದವರಿಗೆ ಶಾಕ್ ಕೊಟ್ಟ ಬೈಕ್ ಕಳ್ಳರು

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯ ಆರೈಕೆಗೆ ಬಂದಿದ್ದವರ ಬೈಕ್ ನಾಪತ್ತೆಯಾಗಿದೆ. ಆಸ್ಪತ್ರೆ ಆವರಣದ ಪಾರ್ಕಿಂಗ್ ಜಾಗದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಬೈಕನ್ನು ಕಳುವು ಮಾಡಲಾಗಿದೆ. ಇದನ್ನೂ ಓದಿ | ವಿನೋಬನಗರದ 60 ಅಡಿ ರಸ್ತೆಯಲ್ಲಿ ಪಲ್ಸರ್ NS ಬೈಕ್ ನಾಪತ್ತೆ, ರಾತ್ರಿ ನಿಲ್ಲಿಸಿದ್ದು ಮಧ್ಯರಾತ್ರಿಯೊಳಗೆ ಮಿಸ್ಸಿಂಗ್ ವೀರಾಪುರದ ಸುರೇಶ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಸುರೇಶ್ ಅವರ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನೋಡಿಕೊಳ್ಳಲು ಮೆಗ್ಗಾನ್ ಆಸ್ಪತ್ರೆಗೆ … Read more

ವಿನೋಬನಗರದ 60 ಅಡಿ ರಸ್ತೆಯಲ್ಲಿ ಪಲ್ಸರ್ NS ಬೈಕ್ ನಾಪತ್ತೆ, ರಾತ್ರಿ ನಿಲ್ಲಿಸಿದ್ದು ಮಧ್ಯರಾತ್ರಿಯೊಳಗೆ ಮಿಸ್ಸಿಂಗ್

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ವಿನೋಬಗರದ 60 ಅಡಿ ರಸ್ತೆಯಲ್ಲಿ ನಿಲ್ಲಿಸಿದ್ದ ಪಲ್ಸರ್ ಎನ್ಎಸ್ 200 ಬೈಕ್ ಕಳ್ಳತನವಾಗಿದೆ. ರಾತ್ರಿ ನಿಲ್ಲಿಸಿದ್ದ ಬೈಕ್ ಮಧ್ಯರಾತ್ರಿಯೊಳಗೆ ಕಣ್ಮರೆಯಾಗಿದೆ. ಜೀವನ್ ಎಂಬುವವರಿಗೆ ಸೇರಿದ ಬೈಕನ್ನು ಖದೀಮರು ಕದ್ದೊಯ್ದಿದ್ದಾರೆ. ಜಟ್ ಪಟ್ ನಗರದ ಸಮೀಪ ವಿನೋಬಗರ 60 ಅಡಿ ರಸ್ತೆಯಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಹೇಗಾಯ್ತು ಘಟನೆ? ಜೀವನ್ ತನ್ನ ಸ್ನೇಹಿತನೊಂದಿಗೆ ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ತೆರಳಿದ್ದರು. ಹಾಗಾಗಿ ರಾತ್ರಿ 10.30ರ ಹೊತ್ತಿಗೆ ವಿನೋಬನಗರದ 60 … Read more

ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಮೊಬೈಲ್ ಕಳ್ಳತನ, ಕೃತ್ಯದ ಹಿಂದಿದ್ದಾರಾ ಬೈಕ್ನಲ್ಲಿ ಬಂದ ಮೂವರು?

Kote Police Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಶಿವಮೊಗ್ಗ ನಗರದಲ್ಲಿ ಮೊಬೈಲ್ ಕಳ್ಳತನದ ಮತ್ತೊಂದು ಪ್ರಕರಣ ವರದಿಯಾಗಿದೆ. ನಗರದ ಹೊಳೆ ಬಸ್ ಸ್ಟಾಪ್ ಬಳಿ ಖಾಸಗಿ ಕಂಪನಿಯೊಂದರ ಉದ್ಯೋಗಿಯ ಮೊಬೈಲ್ ಕಳವು ಮಾಡಲಾಗಿದೆ. ಗೌತಮ್ ಎಂಬುವವರಿಗೆ ಸೇರಿದ ಮೊಬೈಲನ್ನು ಖದೀಮರು ಕದ್ದೊಯ್ದಿದ್ದಾರೆ. ಕೆಲಸ ಮುಗಿಸಿಕೊಂಡು ರಾತ್ರಿ 9.30ರ ಹೊತ್ತಿಗೆ ಹೊಳೆ ಬಸ್ ಸ್ಟಾಪ್ ಬಳಿ ಬಂದಿದ್ದಾರೆ. ಈ ಸಂದರ್ಭ ಕರೆ ಬಂದಿದ್ದರಿಂದ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ನಂತರ ತಮ್ಮ ಬ್ಯಾಗ್ನಲ್ಲಿ ಮೊಬೈಲ್ ಇರಿಸಿ, ಮನೆ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗ್ಗೆ ನಾಪತ್ತೆ

Car Theft General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗಾಗುವುದರಲ್ಲಿ ಕಣ್ಮರೆಯಾಗಿದೆ. ಸರ್ವಿಸ್ ಸೆಂಟರ್ ಒಂದರ ಮುಂದೆ ಕಾರು ನಿಲ್ಲಿಸಿದ್ದ ಮಾಲೀಕ ನಂತರ ಬಂದು ನೋಡಿದಾಗ ಇರಲಿಲ್ಲ. ಮತ್ತೂರಿನ ಪ್ರಶಾಂತ್ ಎಂಬುವವರಿಗೆ ಸೇರಿದ ಟೊಯೋಟಾ ಇಟಿಯೋಸ್ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ. ಊರುಗಡೂರು ಬಳಿ ಬೈಪಾಸ್ ರಸ್ತೆಯಲ್ಲಿರುವ ಸರ್ವಿಸ್ ಸೆಂಟರ್ ಒಂದರ ಮುಂದೆ ಪ್ರಶಾಂತ್ ಅವರು ಕಾರು ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗ್ಗೆ ಬಂದು ಪರಿಶೀಲಿಸಿದಾಗ ಕಾರು … Read more

ಶಿವಮೊಗ್ಗದ ಹರಿಗೆ ಬಳಿ ರೈಲಿಗೆ ಸಿಲುಕಿ ವ್ಯಕ್ತಿ ಸಾವು

Railway Shivamogga Board 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2021 ರೈಲಿಗೆ ಸಿಲುಕಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಬಟ್ಟೆ ಒಗೆಯಲು ಹೋಗಿದ್ದಾಗ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಶಿವಮೊಗ್ಗದ ಹರಿಗೆ ಬಳಿ ಘಟನೆ ಸಂಭವಿಸಿದೆ. ಇಲ್ಲಿನ ನಾಗರಾಜ್ (55) ಮೃತರು. ಸಮೀಪದ ಚಾನೆಲ್ ಬಳಿ ಬಟ್ಟೆ ಒಗೆಯಲು ತೆರಳಿದ್ದರು. ಹಿಂತಿರುಗುವಾಗ ರೈಲ್ವೆ ಹಳಿ ದಾಟುತ್ತಿದ್ದಾಗ ಘಟನೆ ಸಂಭವಿಸಿರುವ ಶಂಕೆಯಿದೆ. ಘಟನೆ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ. (ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ … Read more