ನಡುರಸ್ತೆಯಲ್ಲಿ ಸಾಲದ ಹಣಕ್ಕಾಗಿ ಕಿತ್ತಾಟ, ಒಬ್ಬನಿಗೆ ಚಾಕು ಇರಿತ

crime name image

SHIVAMOGGA LIVE NEWS | Crime News Today | 12 ಏಪ್ರಿಲ್ 2022 ಸಾಲದ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಂಧಿ ಚಟ್ನಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಶಬರೀಶ (32) ಹಲ್ಲೆಗೊಳಗಾದವರು. ಹರೀಶ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಾಲದ ಹಣಕ್ಕೆ ಗಲಾಟೆ ಹರೀಶನಿಗೆ ಶಬರೀಶ 40 ಸಾವರ ರೂ. ಹಣವನ್ನು ಸಾಲವಾಗಿ ನೀಡಿದ್ದರು. ಅದನ್ನು ಹಿಂತಿರುಗಿಸುವಂತೆ … Read more

ಗೋಂಧಿ ಚಟ್ನಳ್ಳಿಯಲ್ಲಿ ಪೊಲೀಸರ ದಾಳಿ, ಹೊಲ, ಗದ್ದೆಗೆ ಹಾರಿ ಓಡಿದ ಆರೋಪಿ

police jeep

SHIVAMOGGA LIVE NEWS | CRIME NEWS| 11 ಏಪ್ರಿಲ್ 2022 ಮನೆ ಮುಂದೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಖಾಕಿ ಪಡೆಯನ್ನು ಕಂಡ ಕೂಡಲೆ ಮದ್ಯ ಖರೀದಿಗೆ ಬಂದವರು ಮತ್ತು ಮಾರಾಟಗಾರ ಪರಾರಿಯಾಗಿದ್ದಾರೆ. ಶಿವಮೊಗ್ಗ ತಾಲೂಕು ಗೋಂಧಿ ಚಟ್ನಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ನಾಗರಾಜ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ನಾಗರಾಜ ತನ್ನ ಮನೆಯ ಮುಂಭಾಗ ಅಕ್ರಮವಾಗಿ ಮದ್ಯ ಮಾರಾಟ … Read more

ಕುಂಸಿ ಪೊಲೀಸ್ ಠಾಣೆಯಲ್ಲಿ ಗೃಹ ಸಚಿವರ ವಿರುದ್ಧ ದೂರು

Congress-Complaint-against-Home-minister-in-Kumsi.

SHIVAMOGGA LIVE NEWS | POLITICS | 9 ಏಪ್ರಿಲ್ 2022 ಕೋಮು ಗಲಭೆಗೆ ಪ್ರಚೋದನೆ ನೀಡುವ ಹೇಳಿಕೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರ ವಿರುದ್ಧ ಕಾನೂನು ಕ್ರಮ ಕೈಕೊಳ್ಳಬೇಕು ಎಂದು ಆಗ್ರಹಿಸಿ ಶಿವಮೊಗ್ಗ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಂಸಿ ಠಾಣೆಗೆ ದೂರು ನೀಡಲಾಯಿತು. ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದ ಚಂದ್ರು ಹತ್ಯೆಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ … Read more

ಮಲ್ಲಾಪುರ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷೆ, ಅವಿರೋಧ ಆಯ್ಕೆ

Ayanur Graphics

SHIVAMOGGA LIVE NEWS | GRAMA PANCHAYAT PRESIDENT | 8 ಏಪ್ರಿಲ್ 2022 ಆಯನೂರು ಸಮೀಪದ ಮಲ್ಲಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮೀನಾಕ್ಷಮ್ಮ ಮಲ್ಲೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಘುನಾಥ ಚುನಾವಣಾಧಿಕಾರಿ ಆಗಿ ಕಾರ್ಯ ನಿರ್ವಹಿಸಿದರು. ಮೀನಾಕ್ಷಮ್ಮ ಮಲ್ಲೇಶಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆ ದೀಪಾ ಮುರುಳಿ, ಮಾಜಿ ಅಧ್ಯಕ್ಷ ಕುಮಾರನಾಯ್ಕ, ತಿಮ್ಮಪ್ಪ, ಮಹಮ್ಮದ್ ಬಷೀರ್, ಸದಸ್ಯರಾದ ರೇಣುಕಮ್ಮ, … Read more

ರಾತ್ರೋರಾತ್ರಿ ಶಿಕ್ಷಕಿ ಮನೆ ಬಾಗಿಲು ತಟ್ಟಿದ ವ್ಯಕ್ತಿ, ಕೇಸ್ ದಾಖಲು

holehonnur name graphics

SHIVAMOGGA LIVE NEWS | 7 ಏಪ್ರಿಲ್ 2022 ಶಿಕ್ಷಕಿಯೊಬ್ಬರ ಮನೆ ಬಾಗಿಲು ತಟ್ಟಿ ಅಶ್ಲೀಲ ಪದಗಳಿಂದ ನಿಂದಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ನಂಜುಂಡ (40) ಎಂಬಾತನ ವಿರುದ್ಧ ಶಿಕ್ಷಕಿ ದೂರು ನೀಡಿದ್ದಾರೆ. ಶಿಕ್ಷಕಿಯ ಸಂಬಂಧಿಯಾಗಿರುವ ನಂಜುಂಡ, ಈಚೆಗೆ ಶಿಕ್ಷಕಿಯನ್ನು ಹಿಂಬಾಲಿಸುವುದು, ಅವರ ಮನೆಯ ಬಾಗಿಲು ತಟ್ಟುವುದನ್ನು ಮಾಡುತ್ತಿದ್ದಾನೆ. ಶಿಕ್ಷಕಿಯ ಪತಿ ಕಳೆದ ವರ್ಷ ಮೃತಪಟ್ಟಿದ್ದಾರೆ. ಆ ನಂತರ ನಂಜುಂಡ ಈ ರೀತಿ ನಡೆದುಕೊಳ್ಳುತ್ತಿದ್ದಾನೆ ಎಂದು ಆರೋಪಿಸಲಾಗಿದೆ. ಮಾರ್ಚ್ 3ರ ರಾತ್ರಿ ನಂಜುಂಡ … Read more

ಆಯನೂರಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದವನನ್ನು ಕೆರೆಗೆ ಹಾರಿ ರಕ್ಷಿಸಿದ ಪೊಲೀಸರು

Ayanur Graphics

SHIVAMOGGA LIVE NEWS | 5 ಏಪ್ರಿಲ್ 2022 ಕೆರೆಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುರಹೊನ್ನೆ ಗ್ರಾಮದ ರವಿ (28) ಆತ್ಮಹತ್ಯೆಗೆ ಯತ್ನಿಸಿದ ಯುವಕ. ಈತ ಮದ್ಯ ವ್ಯಸನಿಯಾಗಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸಿದ್ದೇಶ್ವರ ದೇವಸ್ಥಾನ ಬಳಿ ಇರುವ ಕೆರೆಗೆ ಹಾರಿದ್ದಾನೆ ಎಂದು ಆರೋಪಿಸಲಾಗಿದೆ.   ರವಿ ಆತ್ಮಹತ್ಯೆಗೆ ಯತ್ನಿಸಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೆ ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೆರೆಗೆ ಹಾರಿ … Read more

ಕೂಡ್ಲಿ ಜಾತ್ರೆ | ತುಂಗಾ – ಭದ್ರಾ ಸಂಗಮದಲ್ಲಿ ಮಿಂದೆದ್ದ ಭಕ್ತ ಸಮೂಹ, ಹೇಗಿದೆ ಈ ಭಾರಿ ವೈಭವ?

Shimoga-Kudli-Sangameshwara-Jathre

SHIVAMOGGA LIVE NEWS | 3 ಏಪ್ರಿಲ್ 2022 ಶಿವಮೊಗ್ಗದ ಕೂಡ್ಲಿಯಲ್ಲಿ ಪುರಾಣ ಪ್ರಸಿದ್ಧ ಶ್ರೀ ಸಂಗೇಶ್ವರ ಸ್ವಾಮಿ ಜಾತ್ರೆ ಅದ್ಧೂರಿಯಿಂದ ನಡೆಯುತ್ತಿದೆ. ತುಂಗಾ, ಭದ್ರಾ ಸಂಗಮ ಕ್ಷೇತ್ರದಲ್ಲಿ ಪುಣ್ಯ ಸ್ನಾನ ಮಾಡಿ, ಭಕ್ತರು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇವತ್ತು ರಥೋತ್ಸವ ನಡೆಯಲಿದ್ದು ಸುಮಾರು 200 ಹಳ್ಳಿಯ ಜನರು ಪಾಲ್ಗೊಳ್ಳಲಿದ್ದಾರೆ. ಯುಗಾದಿ ಹಬ್ಬದಂದು ಶ್ರೀ ಸಂಗಮೇಶ್ವರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಸುತ್ತಮುತ್ತಲ ಗ್ರಾಮಗಳು, ನೆರಹೊರೆಯ ಜಿಲ್ಲೆಯಿಂದಲು ಭಕ್ತರು ಇಲ್ಲಿಗೆ ಆಗಮಿಸಿ ಪುಣ್ಯ ಸ್ನಾನ ಮಾಡುತ್ತಾರೆ. ಸಂಗಮದಲ್ಲಿ ವಿಶೇಷ … Read more

ಹೊಳೆಹೊನ್ನೂರು ಸಮೀಪ ವಿದ್ಯುತ್ ಗ್ರೌಂಡ್ ಆಗಿ ರೈತ ಸಾವು

holehonnur name graphics

SHIVAMOGGA LIVE NEWS | 1 ಏಪ್ರಿಲ್ 2022 ವಿದ್ಯುತ್ ಗ್ರೌಂಡ್ ಆಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತೋಟದಲ್ಲಿರುವ ಬಾವಿಯಲ್ಲಿ ಇಳಿದು ಮೋಟಾರ್‌ ಪಂಪ್ ಫೂಟ್‌ಬಾಲ್‌ಗೆ ನೀರು ತುಂಬುವಾಗ ವಿದ್ಯುತ್ ಗ್ರೌಂಡ್ ಆಗಿ ರೈತ ಮೃತಪಟ್ಟಿದ್ದಾನೆ. ಕಲ್ಲಿಹಾಳಿನ ಮನು (45) ಮೃತ ದುರ್ದೈವಿ. ಮನು ಅವರ ಚಿಕ್ಕಪ್ಪ ಬಸವರಾಜಪ್ಪ ಎಂಬುವವರ ತೋಟದಲ್ಲಿರುವ ಬಾವಿಯಲ್ಲಿ ಇಳಿದು ಮೋಟಾರ್ ಪಂಪ್ ಫುಟ್‌ಬಾಲ್ ಗೆ ನೀರು ತುಂಬುವಾಗ ವಿದ್ಯುತ್ ಗೌಂಡ್ ಆಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ … Read more

ಸ್ನೇಹಿತನ ಕುತ್ತಿಗೆ, ಕಾಲುಗಳ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಂದವರಿಗೆ ಜೀವಾವಧಿ ಶಿಕ್ಷೆ

Shimoga District Court

SHIVAMOGGA LIVE NEWS | 1 ಏಪ್ರಿಲ್ 2022 ಹಣಕಾಸು ವಿಚಾರಕ್ಕೆ ಸ್ನೇಹಿತನ ಕೊಲೆಗೈದ ನಾಲ್ವರಿಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 20 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಪಾವತಿಸಲು ವಿಫಲರಾದಲ್ಲಿ ಹೆಚ್ಚುವರಿ 6 ತಿಂಗಳು ಸಾದಾ ಕಾರಾಗೃಹ ಶಿಕ್ಷೆ ನೀಡಿದೆ. ಗಾಜನೂರಿನ ದುರ್ಗ ಅಲಿಯಾಸ್ ದುರ್ಗಪ್ಪ (29), ಉಮೇಶ (30), ಸುರೇಂದ್ರ ಅಲಿಯಾಸ್ ಸುರೇಶ (30) ಹಾಗೂ ಶಂಕರ ಅಲಿಯಾಸ್ ಶಿವಶಂಕರ (24) … Read more

ಕೊಮ್ಮನಾಳು ಗ್ರಾಮದಲ್ಲಿ ಮನೆ ಗೇಟಿನೊಳಗೆ ನಿಲ್ಲಿಸಿದ್ದ ಪಲ್ಸರ್ ಬೈಕ್ ನಾಪತ್ತೆ

bike theft reference image

SHIVAMOGGA LIVE NEWS | 30 ಮಾರ್ಚ್ 2022 ಬೈಕ್ ಕಳ್ಳರ ಹಾವಳಿ ಮುಂದುವರೆದಿದೆ. ಶಿವಮೊಗ್ಗದಲ್ಲಿ ಮನೆ ಗೇಟಿನೊಳಗೆ ನಿಲ್ಲಿಸಿದ್ದ ಪಲ್ಸರ್ ಬೈಕನ್ನು ಕಳ್ಳರು ಕದ್ದೊಯ್ದಿದ್ದಾರೆ. ಕೊಮ್ಮನಾಳು ಗ್ರಾಮದ ಪುನೀತ್ ಕುಮಾರ್ ಎಂಬುವವರಿಗೆ ಸೇರಿದ ಪಲ್ಸರ್ 125 ಬೈಕ್ ಕಳ್ಳತನವಾಗಿದೆ. ಹೇಗಾಯ್ತು ಕಳ್ಳತನ? ಪುನೀತ್ ಅವರು 2020ರಲ್ಲಿ ಪಲ್ಸರ್ ಬೈಕ್ ಖರೀದಿಸಿದ್ದರು. ಕೊಮ್ಮನಾಳು ಗ್ರಾಮದ ತಮ್ಮ ಮನೆಯ ಗೇಟಿನೊಳಗೆ ನಿತ್ಯ ಬೈಕ್ ನಿಲ್ಲಿಸುತ್ತಿದ್ದರು. ಮಾರ್ಚ್ 12ರಂದು ರಾತ್ರಿ ಬೈಕನ್ನು ಮನೆ ಗೇಟಿನೊಳಗೆ ನಿಲ್ಲಿಸಿದ್ದರು. 12 ಗಂಟೆಗೆ ನೋಡಿದಾಗ … Read more