ಶಿವಮೊಗ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಡ್ರೈವರ್‌ ಮೇಲೆ ಕಂಡಕ್ಟರ್‌ನಿಂದ ಹಲ್ಲೆ, ಕಾರಣವೇನು?

KSRTC-Bus-General-Image-Shimoga-Bangalore

SHIVAMOGGA LIVE NEWS | 7 AUGUST 2023 SHIMOGA : ಬಸ್‌ ಚಾಲನೆ ವಿಚಾರವಾಗಿ ಚಾಲಕ (Driver) ಮತ್ತು ಕಂಡಕ್ಟರ್‌ ಮಧ್ಯೆ ಜಗಳವಾಗಿದೆ. ಈ ವೇಳೆ ಚಾಲಕನ ಮೇಲ್ಲೆ ಹಲ್ಲೆ ನಡೆದಿದ್ದು, ಮೆಗ್ಗಾನ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶಿವಮೊಗ್ಗ – ಕೊಯಮತ್ತೂರು ಕೆಎಸ್‌ಆರ್‌ಟಿಸಿ ಬಸ್‌ ಚಾಲಕ (Driver) ಪೆದ್ದಣ್ಣ (58) ಹಲ್ಲೆಗೊಳಗಾದವರು. ನಿರ್ವಾಹಕ ಕಂ ಚಾಲಕ ನಾಗರಾಜ ನರೇಂದ್ರ ಎಂಬುವವರ ವಿರುದ್ಧ ಆರೋಪ ಕೇಳಿ ಬಂದಿದೆ. ಏನಿದು ಪ್ರಕರಣ? ಜು.25ರಂದು ಪೆದ್ದಣ್ಣ ಅವರು ಕರ್ತವ್ಯಕ್ಕೆ ಹಾಜರಾಗಿ … Read more

ಶಿವಮೊಗ್ಗದಲ್ಲಿ ಆಟೋ ಮೇಲೆ ದಾಳಿ, ಚಾಲಕನಿಗೆ ಹಲ್ಲೆ, ಈಶ್ವರಪ್ಪ ಕಾಲಿಗೆ ಬಿದ್ದು ರಕ್ಷಣೆ ಬೇಡಿದ ಡ್ರೈವರ್

Auto-Glass-Break-Sominakoppa-in-Shimoga

SHIVAMOGGA LIVE NEWS | 15 MAY 2023 SHIMOGA : ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದೇನೆ ಎಂದಿದ್ದಕ್ಕೆ ಆಟೋ ಚಾಲಕನ ಮೇಲೆ ಹಲ್ಲೆ ನಡೆಸಿ, ಆಟೋ (Auto) ಮೇಲೆ ದಾಳಿ ಮಾಡಲಾಗಿದೆ. ಶಿವಮೊಗ್ಗದ ಸೋಮಿನಕೊಪ್ಪದಲ್ಲಿ ಘಟನೆ ಸಂಭವಿಸಿದೆ. ಘಟನೆಯಿಂದ ವಿಚಲಿತನಾಗಿರುವ ಆಟೋ ಚಾಲಕ ಜಿಲ್ಲಾ ರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರ ಕಾಲಿಗೆ ಬಿದ್ದು ರಕ್ಷಣೆಗೆ ಮೊರೆ ಇಟ್ಟಿದ್ದಾರೆ. ಏನಿದು ಪ್ರಕರಣ? ಚಾಲಕ ಹರೀಶ್‌ ರಾವ್‌ ಎಂಬುವವರು ಆಟೋ (Auto) ಚಲಾಯಿಸಿಕೊಂಡು ಬರುತ್ತಿದ್ದ … Read more

ಶಿವಮೊಗ್ಗದ ಈ ಆಟೋ ಈಗ ‘ಪುನೀತ ರಥ’, ಚಾಲಕನ ಮನೆ, ಮನ, ಮೊಬೈಲ್ ತುಂಬಾ ಅಪ್ಪು ಅಮರ

Puneeth-Rajkumar-Fan-Auto-Driver-Basavaraju

SHIVAMOGGA LIVE NEWS | 19 DECEMBER 2022 ಶಿವಮೊಗ್ಗ : ನಟ ಪುನೀತ್ ರಾಜಕುಮಾರ್ ಅವರನ್ನು ಕನ್ನಡಿಗರು ನಿತ್ಯ ಸ್ಮರಿಸುತ್ತಿದ್ದಾರೆ. ಶಿವಮೊಗ್ಗದ ಆಟೋ ಚಾಲಕರೊಬ್ಬರು ಸ್ಮರಣೆಯ ಜೊತೆಗೆ ಪ್ರತಿದಿನ ಪೂಜೆ ಮಾಡುತ್ತಿದ್ದಾರೆ. ಪುನೀತ್ ರಾಜಕುಮಾರ್ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸದೆ ಈ ಚಾಲಕ ತನ್ನ ಆಟೋ ಸ್ಟಾರ್ಟ್ ಮಾಡುವುದಿಲ್ಲ. ಇವರ ಅಭಿಮಾನಕ್ಕೆ ಶಿವಮೊಗ್ಗದ ಅಪ್ಪು ಅಭಿಮಾನಿಗಳು ತಲೆ ಬಾಗಿದ್ದಾರೆ. (puneeth rajkumar auto) ಸಂತೆ ಕಡೂರಿನ ಬಸವರಾಜು ಅವರು ಶಿವಮೊಗ್ಗದಲ್ಲಿ ಆಟೋ ಓಡಿಸಿಕೊಂಡಿದ್ದಾರೆ. ಪುನೀತ್ ರಾಜಕುಮಾರ್ … Read more

ಡ್ರೈವರ್’ಗೆ ಚಾಲಕನಾದ ಶಿವಮೊಗ್ಗ RTO ಅಧಿಕಾರಿ, ವಿಭಿನ್ನ ಬೀಳ್ಕೊಡುಗೆ

RTO-Deepak-becomes-driver-for-a-driver

SHIVAMOGGA LIVE NEWS | SHIMOGA | 2 ಜುಲೈ 2022 ನಿವೃತ್ತರಾದ ಚಾಲಕರೊಬ್ಬರನ್ನು (DRIVER) ಅಧಿಕಾರಿಯೊಬ್ಬರು ತಾವೇ ಕಾರು ಚಾಲನೆ ಮಾಡಿ, ಮನೆಗೆ ಬಿಟ್ಟು ವಿಭಿನ್ನವಾಗಿ ಬೀಳ್ಕೊಡುಗೆ ನೀಡಿದ್ದಾರೆ. ಶಿವಮೊಗ್ಗದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ (RTO) ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದ ಸ್ವಾಮಿಗೌಡ ಅವರು ನಿವೃತ್ತರಾಗಿದ್ದಾರೆ. ಅವರಿಗಾಗಿ ಶಿವಮೊಗ್ಗ RTO ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು. ಸಮಾರಂಭದ ಬಳಿಕ ಸ್ವಾಮಿಗೌಡ ಅವರನ್ನು ಸಾರಿಗೆ ಅಧಿಕಾರಿ ದೀಪಕ್ ಎಲ್. ಅವರು, ಅವರ ಮನೆಗೆ ಬಿಟ್ಟು ಬಂದರು. ಸಾರಿಗೆ ಅಧಿಕಾರಿ … Read more

ಶಿವಮೊಗ್ಗ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಚಾಲಕನ ಕಿವಿಗೆ ಹೊಡೆದು, ಕೈ ತಿರುಗಿಸಿ ಹಲ್ಲೆ

KSRTC-Bus-After-Curfew-In-Shimoga-city

SHIVAMOGGA LIVE NEWS |  ASSAULT | 06 ಮೇ 2022 ಕೆಎಸ್ಆರ್​ಟಿಸಿ ಬಸ್ ಒಂದನ್ನು ಹಿಂಬಾಲಿಸಿಕೊಂಡು ಬಂದ ಇಬ್ಬರು ಬಸ್ ನಿಲ್ದಾಣದಲ್ಲಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಕಿವಿಗೆ ಹೊಡೆದು, ಕೈ ತಿರುಗಿಸಿದ್ದಾರೆ. ಚಾಲಕ ಸೋಮಲಿಂಗಪ್ಪ ಹನುಮಂತಪ್ಪ ಯಾದವ್ ಹಲ್ಲೆಗೊಳಗಾದವರು. ಇರ್ಷದ್ ಅಹಮದ್ ಮತ್ತು ಆತನ ಸಹಚರ ಕೃತ್ಯ ಎಸಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ? ಸೋಮಲಿಂಗಪ್ಪ ಅವರು ಮೈಸೂರು – ಶಿವಮೊಗ್ಗ- ಹೊಸಪೇಟೆ ಮಾರ್ಗದ ಕೆಎಸ್ಆರ್​ಟಿಸಿ ಬಸ್ ಚಾಲಕರಾಗಿದ್ದಾರೆ. ಶಿವಮೊಗ್ಗ ಬೈಪಾಸ್ … Read more

ಶಿವಮೊಗ್ಗ – ಸಂಸ್ಥೆಯೊಂದಕ್ಕೆ ಮ್ಯಾನೇಜರ್ ಬೇಕಾಗಿದ್ದಾರೆ | ಮತ್ತೊಂದೆಡೆ ಚಾಲಕ ಹುದ್ದೆ ಖಾಲಿ ಇದೆ

jobs news shivamogga live

SHIVAMOGGA LIVE NEWS |  SHIVAMOGGA JOBS | 28 ಏಪ್ರಿಲ್ 2022 ಚಾಲಕ ಬೇಕಾಗಿದ್ದಾರೆ ಶಿವಮೊಗ್ಗದಲ್ಲಿ ಟಾಟಾ ಏಸ್ ವಾಹನಕ್ಕೆ ಚಾಲಕರು ಬೇಕಾಗಿದ್ದಾರೆ. 10 ಸಾವಿರ ರೂ. ಸಂಬಳ ಇರಲಿದೆ. ಆಸಕ್ತರು 7899759589 ನಂಬರ್ ಸಂಪರ್ಕಿಸಿ. ಮ್ಯಾನೇಜರ್ ಬೇಕಾಗಿದ್ದಾರೆ ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿರುವ ವೆಲ್ಡಿಂಗ್ ವರ್ಕ್ ಶಾಪ್’ನಲ್ಲಿ ಕೆಲಸ ಮಾಡಲು ಅನುಭವಿ ಮ್ಯಾನೇಜರ್ ಬೇಕಾಗಿದ್ದಾರೆ. ಪುರುಷ ಅಭ್ಯರ್ಥಿಗೆ ಮಾತ್ರ. ಸಂಪರ್ಕಿಸಿ 9448183398. ಇದನ್ನೂ ಓದಿ – ಆಲ್ಕೊಳ ಸರ್ಕಲ್’ನಲ್ಲಿ ತಪ್ಪಿತು ದುರಂತ, ಆಟೋ ಚಾಲಕನ ಸಮಯ ಪ್ರಜ್ಞೆಯಿಂದ … Read more

ಆಲ್ಕೊಳ ಸರ್ಕಲ್’ನಲ್ಲಿ ತಪ್ಪಿತು ದುರಂತ, ಆಟೋ ಚಾಲಕನ ಸಮಯ ಪ್ರಜ್ಞೆಯಿಂದ ಉಳಿಯಿತು ಮಗುವಿನ ಪ್ರಾಣ

Auto-Driver-Rescues-Baby-in-Shimoga

SHIVAMOGGA LIVE NEWS | POT HOLE | 28 ಏಪ್ರಿಲ್ 2022 ಆಟೋ ಚಾಲಕರೊಬ್ಬರ ಸಮಯ ಪಜ್ಞೆ ಮತ್ತು ಧೈರ್ಯ ಮಗುವಿನ ಪ್ರಾಣ ಕಾಪಾಡಿದೆ. ಶಿವಮೊಗ್ಗ ನಗರದ ಪ್ರಮುಖ ರಸ್ತೆಯೊಂದರ ಪಕ್ಕದಲ್ಲಿ ತೋಡಲಾಗಿದ್ದ ಗುಂಡಿಯೊಳಗೆ ಬಿದ್ದ ಮಗುವನ್ನು ಆಟೋ ಚಾಲಕ ರಕ್ಷಣ ಮಾಡಿದ್ದಾರೆ. ಶಿವಮೊಗ್ಗದ ಆಲ್ಕೊಳ ಸರ್ಕಲ್’ನಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಆಟೋ ಚಾಲಕ ಲೋಕೇಶ್ ಅವರ ಸಮಯ ಪ್ರಜ್ಞೆ ದುರ್ಘಟನೆ ತಪ್ಪಿಸಿದೆ. ಏನಿದು ಘಟನೆ? ಕಳೆದ ರಾತ್ರಿ ತಾಯಿ ಮತ್ತು ಮೂರು ವರ್ಷದ … Read more

ಆಟೋದಲ್ಲಿ ಸಿಕ್ಕ ಮೊಬೈಲ್ ಆಟೋ ಚಾಲಕನಿಗೆ ಮಾರಲು ಹೋಗಿ ಸಿಕ್ಕಿಬಿದ್ದ ಪ್ರಯಾಣಿಕ, ಮುಂದೇನಾಯ್ತು?

Auto-Driver-Swamy-Gives-Back-Mobile-To-Doctor

SHIVAMOGGA LIVE NEWS | SHIMOGA FM | 22 ಏಪ್ರಿಲ್ 2022 ಪ್ರಯಾಣಿಕನೊಬ್ಬ ಆಟೋದಲ್ಲಿ ಸಿಕ್ಕ ಮೊಬೈಲನ್ನು ಆಟೋ ಚಾಲಕನಿಗೆ ಮಾರಾಟ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಕೊನೆಗೆ ಮೊಬೈಲ್ ಕಳೆದುಕೊಂಡಿದ್ದ ವೈದ್ಯರಿಗೆ ಆ ಮೊಬೈಲ್ ತಲುಪಿಸಲಾಗಿದೆ. ಆಟೋ ಚಾಲಕನ ಸಮಯ ಪ್ರಜ್ಞೆ ಮತ್ತು ಪ್ರಮಾಣಿಕತೆಯಿಂದಾಗಿ ಮೊಬೈಲ್ ಫೋನ್ ವಾರಸುದಾರರ ಕೈ ಸೇರಿದೆ. ಗಡಿಬಿಡಿಯಲ್ಲಿ ಮೊಬೈಲ್ ಬಿಟ್ಟರು ಸ್ವಾಮಿ ಎಂಬುವವರ ಆಟೋದಲ್ಲಿ ವೈದ್ಯರೊಬ್ಬರು ಖಾಸಗಿ ಬಸ್ ನಿಲ್ದಾಣದಿಂದ ಗಾಡಿಕೊಪ್ಪದ ಶರಾವತಿ ಡೆಂಟಲ್ ಕಾಲೇಜಿಗೆ ತೆರಳಿದ್ದಾರೆ. ಇಳಿಯುವಾಗ ಅವಸರದಲ್ಲಿ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ಚಾಲಕನನ್ನು ಕೆಳಗೆ ಎಳೆದು ಹಲ್ಲೆ

crime name image

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಬೈಕ್ ಸವಾರನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಫಯಾಜ್ ಪಾಷಾ ಗಾಯಗೊಂಡಿದ್ದಾರೆ. ಅವರಿಗೆ ಮಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಏನಿದು ಪ್ರಕರಣ? ಕುಣಿಗಲ್’ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಪಾಸ್ ರಸ್ತೆಯ ತುಂಗಾ ಸೇತುವೆ ಬಳಿ ತೆರಳುತಿತ್ತು. ದಿಢೀರನೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಚಾಲಕ ಫಯಾಜ್ ಪಾಷಾ ಬೈಕ್ … Read more

ಭದ್ರಾವತಿಯಲ್ಲಿ ಟೈರ್ ಸ್ಪೋಟಗೊಂಡು ಬೈಕುಗಳಿಗೆ ಡಿಕ್ಕಿ ಹೊಡೆದ ಕಾರು

Car-Accident-at-Bhadravathi.

SHIVAMOGGA LIVE NEWS | 13 ಮಾರ್ಚ್ 2022 ಕಾರಿನ ಟೈರ್ ಸ್ಪೋಟಗೊಂಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ಭದ್ರಾವತಿಯಲ್ಲಿ ಸಂಭವಿಸಿದೆ. ಮಹಿಳೆಯೊಬ್ಬರು ಚಲಾಯಿಸುತ್ತಿದ್ದ ಕಾರು ಇಲ್ಲಿ ಭವಾನಿ ಹೊಟೇಲ್ ಸಮೀಪ ಘಟನೆ ನಡೆದಿದೆ. ಕಾರಿನ ಟೈರ್ ಸ್ಪೋಟಗೊಂಡಿದ್ದರಿಂದ ಚಾಲಕಿಯ ನಿಯಂತ್ರಣ ತಪ್ಪಿ ವಾಹನಗಳಿಗೆ ಡಿಕ್ಕಿಯಾಗಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಬೈಕುಗಳಿಗೆ ಹಾನಿಯಾಗಿದೆ. ಭದ್ರಾವತಿ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಇದನ್ನೂ ಓದಿ | ಇವತ್ತಿನ ಎಲ್ಲಾ ಸುದ್ದಿಗಳನ್ನು ಓದಲು ಕ್ಲಿಕ್ ಮಾಡಿ ಈ ಮೇಲ್ – … Read more