‘ರೈತರ ಪಾಲಿಗೆ ಮರಣ ಶಾಸನವಾಗುತ್ತೆ ಮಸೂದೆ’, ರೈತ ಸಂಘ ಆಕ್ರೋಶ

Raitha-Sanga-HR-Basavarajappa-Led-protest-in-Shimoga

  SHIMOGA | ರೈತರು, ಗ್ರಾಹಕ ವಿರೋಧಿ ವಿದ್ಯುತ್ ತಿದ್ದುಪಡಿ (ELECTRICITY BILL) ಮಸೂದೆಯನ್ನು ಜಾರಿಗೊಳಿಸಬಾರದು, ಅತಿವೃಷ್ಟಿ ಆಗಿರುವ ಹಾನಿಗೆ ಕೂಡಲೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗೀಕರಣ ಮಾಡುವ ಉದ್ದೇಶದಿಂದ ವಿದ್ಯುತ್ ತಿದ್ದುಪಡಿ ಮಸೂದೆಯ (ELECTRICITY BILL) … Read more

ಜಮೀನಿನಲ್ಲಿ ಕೆಲಸ ಮಾಡುವಾಗ ವಿದ್ಯುತ್ ಶಾಕ್, ರೈತ ಸಾವು

Hosanagara taluk name Graphics

ರಿಪ್ಪನ್ ಪೇಟೆ | ಜಮೀನಿನಲ್ಲಿ ವಿದ್ಯುತ್ ಅವಘಡ (ELECTRIC SHOCK) ಸಂಭವಿಸಿ ರೈತರೊಬ್ಬರು (FARMER DEATH) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳ್ಳೂರು (BELLUR) ಗ್ರಾಮದ ರೈತ ಹಿರಿಯಣ್ಣ (58) ಎಂಬುವವರು ಮೃತರು. ಭಾನುವಾರ ಹಿರಿಯಣ್ಣ ಅವರು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಿರಿಯಣ್ಣ ಅವರು ತಳಲೆ (TALALE) ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿದ್ದಾರೆ. ಅವರ ಪತ್ನಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದು, ಪ್ರಸ್ತುತ ಸದಸ್ಯರಾಗಿದ್ದಾರೆ. ಇವರಿಗೆ ಮೂವರು ಪುತ್ರಿಯರಿದ್ದಾರೆ. ಇದನ್ನೂ … Read more

ಬ್ಯಾಂಕ್ ನೊಟೀಸ್, ವಿಷ ಸೇವಿಸಿದ್ದ ರೈತ ಚಿಕಿತ್ಸೆ ಫಲಿಸದೆ ಸಾವು

farmer suicide poison

SHIVAMOGGA LIVE NEWS | SORABA | 5 ಜುಲೈ 2022 ಸಾಲ ಕಟ್ಟುವಂತೆ ಬ್ಯಾಂಕ್’ನಿಂದ ನೊಟೀಸ್ ಬಂದ ಹಿನ್ನೆಲೆ ಮನನೊಂದು ರೈತರೊಬ್ಬರು (FARMER) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೊರಬ ತಾಲೂಕು ಗುಡ್ಡೆಕೊಪ್ಪದ ರೈತರ ಗಜೇಂದ್ರ (27) ಮೃತ ದುರ್ದೈವಿ. ಜೂನ್ 26ರಂದು ಗಜೇಂದ್ರ, ತಮ್ಮ ಮನೆಯಲ್ಲಿಯೆ ವಿಷ ಸೇವಿಸಿದ್ದರು. ಚಿಕಿತ್ಸೆಗಾಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಸೋಮವಾರ ಮೃತರಾಗಿದ್ದಾರೆ. ಗಜೇಂದ್ರ ಅವರು ಕೃಷಿ ಚಟುವಟಿಕೆಗಾಗಿ ಆರು ವರ್ಷದ ಹಿಂದೆ ಬ್ಯಾಂಕ್ … Read more

‘ಹೀಗೆ ಮಾಡಿದರಷ್ಟೆ ಮಾಜಿ ಸಿಎಂ ಬಂಗಾರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ’

Thi-Na-Srinivas-General-Image

SHIVAMOGGA LIVE NEWS | SORABA | 11 ಜೂನ್ 2022 ಬಗರ್‌ಹುಕುಂ ಮತ್ತು ಅರಣ್ಯಹಕ್ಕು ಸಾಗುವಳಿದಾರರಿಗೆ ಭೂಮಿಯ ಹಕ್ಕು ನೀಡಿದಾಗ ಮಾತ್ರ ಮಾಜಿ ಮುಖ್ಯಮಂತ್ರಿ ಎಸ್‌. ಬಂಗಾರಪ್ಪ ಅವರ ಆತ್ಮಕ್ಕೆ ಶಾಂತಿ ಸಿಗಲು ಸಾಧ್ಯ ಎಂದು ಮಲೆನಾಡು ರೈತ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ತೀ.ನ.ಶ್ರೀನಿವಾಸ್ ಹೇಳಿದರು. farmers world ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೀ.ನ.ಶ್ರೀನಿವಾಸ್ ಅವರು, ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ರೈತರ ಹಿತ ಕಾಯುವಲ್ಲಿ ವಿಫಲರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು … Read more

ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಮುಂದೆ ಗ್ರಾಮಸ್ಥರ ಆಕ್ರೋಶ

Farmers-protest-in-front-of-Holehonnuru-Pattana-Panchayath

SHIVAMOGGA LIVE NEWS | PROTEST | 27 ಮೇ 2022 ತಮ್ಮ ಕೆಲಸ ಮಾಡಿಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿರುವುದು ಮತ್ತು ವಿನಾಕಾರಣ ದಾಖಲೆಗಳಿಗಾಗಿ ಅಲೆಸುವುದನ್ನು ಖಂಡಿಸಿ ಡಣಾಯಕಪುರ ಗ್ರಾಮಸ್ಥರು, ರೈತ ಸಂಘ ಮತ್ತು ಹಸಿರು ಸೇನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಹೊಳೆಹೊನ್ನೂರು ಪಟ್ಟಣ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಗ್ರಾಮಸ್ಥರು, ಅಧಿಕಾರಿಗಳ ವಿಳಂಬ ನೀತಿಯನ್ನು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ಆರೋಪಗಳೇನು? ಆಗ್ರಹವೇನು? ಇ-ಸ್ವತ್ತು, ಎನ್ಒಸಿ, ಖಾತೆ ಬದಲಾವಣೆ, ಲೈಸೆನ್ಸ್ ಒದಗಿಸುವುದು ಸೇರಿದಂತೆ ಹಲವು … Read more

ಭಾರಿ ಮಳೆಗೆ ವ್ಯಕ್ತಿ ಬಲಿ, ಸ್ಥಳಕ್ಕೆ ತಹಶೀಲ್ದಾರ್ ಭೇಟಿ

death-at-Thirtahalli-rain

SHIVAMOGGA LIVE NEWS | DEATH | 20 ಮೇ 2022 ಭಾರಿ ಮಳೆಗೆ ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ. ಗದ್ದೆಯಲ್ಲಿ ಕಾಲು ಜಾರಿ ಹೊಂಡಕ್ಕೆ ಬಿದ್ದು ವ್ಯಕ್ತಿ ಮೃತರಾಗಿದ್ದಾರೆ. ಶಂಕರ, ಮೃತ ದುರ್ದೈವಿ. ತೀರ್ಥಹಳ್ಳಿ ತಾಲೂಕು ಮೇಲಿನ ತೂದೂರಿನಲ್ಲಿ ಘಟನೆ ಸಂಭವಿಸಿದೆ. ಶಂಕರ ಅವರು ರಾತ್ರಿ ಗದ್ದೆಗೆ ತೆರಳಿದ್ದರು. ಬೆಳಗ್ಗೆ ಬಹು ಹೊತ್ತು ಮನೆ ಮರಳಿರಲಿಲ್ಲ. ಹಾಗಾಗಿ ಮನೆಯವರು ಹುಡುಕಿಕೊಂಡು ಹೋದಾಗ ಘಟನೆ ಬೆಳಕಿಗೆ ಬಂದಿದೆ. ಕಾಲು ಜಾರಿ ಹೊಂಡಕ್ಕೆ ಬಿದ್ದು ಶಂಕರ್ ಮೃತಪಟ್ಟಿದ್ದಾರೆ. ತೀರ್ಥಹಳ್ಳಿ … Read more

ಆಗುಂಬೆಯಲ್ಲಿ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ, ಗುರುತು ಪತ್ತೆಗೆ ಪೊಲೀಸ್ ಪ್ರಕಟಣೆ

farmer suicide poison

SHIVAMOGGA LIVE NEWS | SUICIDE | 17 ಮೇ 2022 ಆಗುಂಬೆಯಲ್ಲಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರ ಗುರುತು ಪತ್ತೆಯಾಗದ ಹಿನ್ನೆಲೆ ಪೊಲೀಸರು ಪ್ರಕಟಣೆ ಹೊರಡಿಸಿದ್ದಾರೆ. ಇದನ್ನೂ ಓದಿ – ಹಾಸ್ಟೆಲ್ ಕೊಠಡಿಯಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿ ನೇಣಿಗೆ ಶರಣು ಆಗುಂಬೆ ಪಟ್ಟಣದ ಮೊಬೈಲ್ ಟವರ್ ಬಳಿ ವ್ಯಕ್ತಿಯೊಬ್ಬ ವಿಷ ಸೇವಿಸಿ ಒದ್ದಾಡುತ್ತಿದ್ದರು. ಕೂಡಲೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದೆ ಚಿಕಿತ್ಸೆಗೆ ಸ್ಪಂದಿಸದೆ ವ್ಯಕ್ತಿ ಮೃತಪಟ್ಟಿದ್ದಾರೆ. ಮೃತರಿಗೆ ಸುಮಾರು 60 … Read more

ಆಗುಂಬೆ ಬಳಿ ರೈತನ ಮೇಲೆ ಕಾಡುಕೋಣ ದಾಳಿ

Bison-in-Shimoga-Tyavarekoppa-Simhadhama-Kadu-Kona

SHIVAMOGGA LIVE NEWS | 5 ಏಪ್ರಿಲ್ 2022 ಅಡಕೆ ತೋಟಕ್ಕೆ ನುಗ್ಗಿದ್ದ ಕಾಡುಕೋಣ ಓಡಿಸಲು ಹೋಗಿದ್ದ ರೈತನ ಮೇಲೆ ದಾಳಿಯಾಗಿದೆ. ಗಂಭೀರ ಗಾಯಗೊಂಡಿರುವ ರೈತನನ್ನು ಕೂಡಲೆ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಗುಂಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಕಾಡುಕೋಣ ತಿವಿದು ಅಸಿಮನೆ ರಾಘವೇಂದ್ರ ಎಂಬ ರೈತ ಗಂಭೀರ ಗಾಯಗೊಂಡಿದ್ದಾರೆ. ಸೋಮವಾರ ಸಂಜೆ ಆರು ಗಂಟೆ ಹೊತ್ತಿಗೆ ರಾಘವೇಂದ್ರ ತಮ್ಮ ಮನೆ ಮುಂದಿರುವ ಅಡಕೆ ತೋಟಕ್ಕೆ ಬಂದಿದ್ದ ಕಾಡುಕೋಣವನ್ನು ಓಡಿಸಲು ಪತ್ನಿ ಜೊತೆ ಹೋಗಿದ್ದರು. ಆ … Read more

ಹೊಳೆಹೊನ್ನೂರು ಸಮೀಪ ವಿದ್ಯುತ್ ಗ್ರೌಂಡ್ ಆಗಿ ರೈತ ಸಾವು

holehonnur name graphics

SHIVAMOGGA LIVE NEWS | 1 ಏಪ್ರಿಲ್ 2022 ವಿದ್ಯುತ್ ಗ್ರೌಂಡ್ ಆಗಿ ರೈತರೊಬ್ಬರು ಮೃತಪಟ್ಟಿದ್ದಾರೆ. ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ತೋಟದಲ್ಲಿರುವ ಬಾವಿಯಲ್ಲಿ ಇಳಿದು ಮೋಟಾರ್‌ ಪಂಪ್ ಫೂಟ್‌ಬಾಲ್‌ಗೆ ನೀರು ತುಂಬುವಾಗ ವಿದ್ಯುತ್ ಗ್ರೌಂಡ್ ಆಗಿ ರೈತ ಮೃತಪಟ್ಟಿದ್ದಾನೆ. ಕಲ್ಲಿಹಾಳಿನ ಮನು (45) ಮೃತ ದುರ್ದೈವಿ. ಮನು ಅವರ ಚಿಕ್ಕಪ್ಪ ಬಸವರಾಜಪ್ಪ ಎಂಬುವವರ ತೋಟದಲ್ಲಿರುವ ಬಾವಿಯಲ್ಲಿ ಇಳಿದು ಮೋಟಾರ್ ಪಂಪ್ ಫುಟ್‌ಬಾಲ್ ಗೆ ನೀರು ತುಂಬುವಾಗ ವಿದ್ಯುತ್ ಗೌಂಡ್ ಆಗಿದೆ. ಹೊಳೆಹೊನ್ನೂರು ಠಾಣೆಯಲ್ಲಿ … Read more

ಶಿವಮೊಗ್ಗ – ಶಿಕಾರಿಪುರ – ರಾಣೆಬೆನ್ನೂರು ರೈಲ್ವೆ ಮಾರ್ಗ ಭೂ ಸ್ವಾಧೀನದಿಂದ ಬೇಸತ್ತು ರೈತ ಆತ್ಮಹತ್ಯೆ

farmer suicide poison

ಶಿವಮೊಗ್ಗದ ಲೈವ್.ಕಾಂ | SHIKARIPURA NEWS | 19 ಫೆಬ್ರವರಿ 2022 ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ನೂತನ ರೈಲ್ವೆ ಮಾರ್ಗ ನಿರ್ಮಾಣ ಯೋಜನೆಗೆ ಮೂರು ಎಕರೆ ಅಡಕೆ ತೋಟ ಭೂಸ್ವಾಧೀನಗೊಂಡಿದ್ದರಿಂದ ಮನನೊಂದ ರೈತ ತೋಟದಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ ಅರುಣ್ ನಾಯ್ಕ (35) ಆತ್ಮಹತ್ಯೆ ಮಾಡಿಕೊಂಡ ರೈತ. ಶಿವಮೊಗ್ಗ-ಶಿಕಾರಿಪುರ ರೈಲ್ವೆ ಮಾರ್ಗಕ್ಕೆ ಪ್ರಾಥಮಿಕ ಹಂತದ ಸರ್ವೇ ಕಾರ್ಯ ಮುಗಿದಿದ್ದು, ಜಮೀನು ಸ್ವಾಧೀನಪಡಿಸಿಕೊಂಡಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಪರಿಹಾರ ವಿತರಣಾ ಕಾರ್ಯ ಕೈಗೊಂಡಿದೆ. ತಾಲೂಕಿನ … Read more