ಒಂದು ಬೈಕ್ ಕಳ್ಳತನದ ತನಿಖೆ ನಡೆಸುತ್ತಿದ್ದ ಭದ್ರಾವತಿ ಪೊಲೀಸರಿಗೆ ಮೂರು ಬೈಕ್ ಸಹಿತ ಸಿಕ್ಕಿಬಿದ್ದ ಕಳ್ಳ

Arrest News Graphics

ಶಿವಮೊಗ್ಗ ಲೈವ್.ಕಾಂ | BHADRAVATHI NEWS | 27 ಆಗಸ್ಟ್ 2021 ಬೈಕ್ ಕಳ್ಳತನ ಮಾಡಿದ್ದ ಆರೋಪಿಯೊಬ್ಬನನ್ನು ಭದ್ರಾವತಿ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಕೂಬಾ ಮಸೀದಿ ಬಳಿ ಬೈಕ್ ಕಳವಾಗಿದ್ದ ಸಂಬಂಧ ಪ್ರಕರಣದ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಯುವಕ ಸಿಕ್ಕಿಬಿದ್ದಿದ್ದಾನೆ. ಭದ್ರಾವತಿ ಇಂದಿರಾ ನಗರದ ಮಹಮ್ಮದ್ ಹರ್ಷದ್ (22) ಬಂಧಿತ. ಆಗಸ್ಟ್ 18ರಂದು ಮಸೀದಿ ಬಳಿ ಸೈಯದ್ ಮುಸ್ತಫಾ ಎಂಬುವವರ ಬೈಕ್ ಕಳ್ಳತನ ಮಾಡಿದ್ದ. ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಮಹಮ್ಮದ್ ಹರ್ಷದ್ ಸಿಕ್ಕಿಬಿದ್ದಿದ್ದಾನೆ. ಆರೋಪಿಯಿಂದ ಮೂರು ಬೈಕ್’ಗಳನ್ನು … Read more

ರಾತ್ರೋರಾತ್ರಿ ಶಿವಮೊಗ್ಗದ ತುಂಗಾ ನದಿ ತೀರದಲ್ಲಿರುವ ದೇವಸ್ಥಾನದ ಬೀಗ ಒಡೆದು ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 25 ಆಗಸ್ಟ್ 2021 ದೇವಸ್ಥಾನದ ಬೀಗ ಮುರಿದ ಕಳ್ಳರು ದೇವರ ಅಭರಣ, ನಗದು ದೋಚಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಳ್ಳರ ಪತ್ತೆ ಕಾರ್ಯ ಆರಂಭಿಸಿದ್ದಾರೆ. ಶಿವಮೊಗ್ಗದ ತುಂಗಾ ನದಿ ತೀರದಲ್ಲಿರುವ ಅಪ್ಪಾಜಿರಾವ್ ಕಾಂಪೌಂಡ್’ನ ಶ್ರೀ ಮುನೇಶ್ವರ ದೇವಸ್ಥಾನಲ್ಲಿ ಕಳ್ಳತನ ಮಾಡಲಾಗಿದೆ. ರಾತ್ರಿ ವೇಳೆ ದೇಗುಲದ ಬೀಗ ಒಡೆದು ಕಳವು ಮಾಡಿದ್ದಾರೆ. ಹೇಗಾಯ್ತು ಘಟನೆ? ದೇವಸ್ಥಾನದಲ್ಲಿ ಪೂಜೆ ಮುಗಿಸಿದ ಬಳಿಕ ಆಡಳಿತ ಮಂಡಳಿಯವರು ಬೀಗ ಹಾಕಿ ತೆರಳಿದ್ದರು. … Read more

ಹಾಡೋನಹಳ್ಳಿಯಲ್ಲಿ ಮನೆ ಬಾಗಿಲು ಮುರಿದ ಖದೀಮರು, ಚಿನ್ನಾಭರಣ, ನಗದು ಕಳ್ಳತನ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 23 ಆಗಸ್ಟ್ 2021 ಮನೆಯಲ್ಲಿ ಯಾರೂ ಇಲ್ಲದ ವೇಳೆ ಬಾಗಿಲು ಮುರಿದು ಚಿನ್ನಾಭರಣ ಮತ್ತು ಹಣ ಕಳ್ಳತನ ಮಾಡಲಾಗಿದೆ. ಶಿವಮೊಗ್ಗ ತಾಲೂಕು ಹಾಡೋನಹಳ್ಳಿಯಲ್ಲಿ ಘಟನೆ ಸಂಭವಿಸಿದೆ. ಹಾಡೋನಹಳ್ಳಿಯ ಮಂಜುಳಾ ಎಂಬುವವರು ತಮ್ಮ ಸಹೋದರಿಯ ಮನೆಗೆ ತೆರಳಿದ್ದರು. ಈ ವೇಳೆ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಮನೆಯ ಬೀರುವಿನಲ್ಲಿ ಇಟ್ಟಿದ್ದ ಬಂಗಾರದ ಜುಮುಕಿ, ಬಟನ್ಸ್, ಕಾಲುಚೈನ್, ಬೆಳ್ಳಿಯ ಗುಂಡು, ಅರಿಶಿಣ ಕುಂಕುಮದ ಬೆಳ್ಳಿ ಬಟ್ಟಲು, ಐದು ಸಾವಿರ ರೂ. … Read more

ಗಾಂಧಿ ಬಜಾರ್’ನಲ್ಲಿ ನಿಲ್ಲಿಸಿದ್ದ ಮೊಪೆಡ್ ವಾಹನದಲ್ಲಿದ್ದ 1.85 ಲಕ್ಷ ರೂ. ಮಾಯ

Kote Police station building

ಶಿವಮೊಗ್ಗ ಲೈವ್.ಕಾಂ | SHIMOGA NEWS | 21 ಆಗಸ್ಟ್ 2021 ನಿಲ್ಲಿಸಿದ್ದ ಮೊಪೆಡ್ ವಾಹನದಲ್ಲಿದ್ದ 1.85 ಲಕ್ಷ ರೂ. ಕಳ್ಳತನವಾಗಿದೆ. ಗಾಂಧಿ ಬಜಾರ್ ಮುಖ್ಯ ರಸ್ತೆಯಲ್ಲೇ ಕಳ್ಳರು ಹಣ ಕದ್ದೊಯ್ದಿದ್ದಾರೆ. ಈ ಸಂಬಂಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆಯೊಬ್ಬರು ಸ್ವ ಸಹಾಯ ಸಂಘದಿಂದ ಸಾಲ ಪಡೆದು, ಹಣವನ್ನು ಮೊಪೆಡ್ ವಾಹನದಲ್ಲಿ ಇಟ್ಟಿದ್ದರು. ಗಾಂಧಿ ಬಜಾರ್’ನಲ್ಲಿ ಕೆಲವು ವಸ್ತುಗಳ ಖರೀದಿಗೆ ಬಂದಿದ್ದರು. ಆಗ ಘಟನೆ ಸಂಭವಿಸಿದೆ. ಏನಿದು ಪ್ರಕರಣ? ಹೇಗಾಯ್ತ ಘಟನೆ? ಬೊಮ್ಮನಕಟ್ಟೆಯ ನಾಗರಾತ್ನ … Read more

ಶಿವಮೊಗ್ಗದಲ್ಲಿ ಮನೆಗೆ ನುಗ್ಗಿ ದರೋಡೆ, ಮಗು ಸಾಯಿಸುವುದಾಗಿ ಬೆದರಿಸಿ ಹಣ, ಚಿನ್ನಾಭರಣ ದೋಚಿ ಪರಾರಿ

theft case general image

ಶಿವಮೊಗ್ಗ ಲೈವ್.ಕಾಂ | SHIMOGA NEWS | 5 ಆಗಸ್ಟ್ 2021 ಮಂಕಿ ಕ್ಯಾಪ್ ಧರಿಸಿಕೊಂಡು ಬಂದು ಮನೆಯೊಂದಕ್ಕೆ ನುಗ್ಗಿ ಹಾಡಹಗಲೆ ದರೋಡೆ ಮಾಡಲಾಗಿದೆ. ಮನೆಯಲ್ಲಿದ್ದ ಒಬ್ಬರಿಗೆ ಚಾಕುವಿನಿಂದ ಹಲ್ಲೆ ಮಾಡಲಾಗಿದೆ. ಯಾರಾದರೂ ಕಿರುಚಾಡಿದರೆ ಮಗುವನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿ, ಹಣ, ಚಿನ್ನಾಭರಣ ಕದ್ದೊಯ್ಯಲಾಗಿದೆ. ಶಿವಮೊಗ್ಗ ತಾಲೂಕು ಚಿಕ್ಕಮರಡಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಜಯಣ್ಣಗೌಡ ಎಂಬುವವರ ಮನೆಯಲ್ಲಿ ಘಟನೆ ನಡೆದಿದೆ. ಮಂಕಿ ಕ್ಯಾಪ್ ಧರಿಸಿ, ಎರಡು ಬೈಕ್’ನಲ್ಲಿ ಬಂದ ನಾಲ್ವರು ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಹೇಗಾಯ್ತು … Read more

ರೋಗಿಯ ಆರೈಕೆಗೆ ಬಂದಿದ್ದವರಿಗೆ ಶಾಕ್ ಕೊಟ್ಟ ಬೈಕ್ ಕಳ್ಳರು

Mc-Gann-Hospital

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಮೆಗ್ಗಾನ್ ಆಸ್ಪತ್ರೆಯಲ್ಲಿ ರೋಗಿಯ ಆರೈಕೆಗೆ ಬಂದಿದ್ದವರ ಬೈಕ್ ನಾಪತ್ತೆಯಾಗಿದೆ. ಆಸ್ಪತ್ರೆ ಆವರಣದ ಪಾರ್ಕಿಂಗ್ ಜಾಗದಲ್ಲಿ ಲಾಕ್ ಮಾಡಿ ನಿಲ್ಲಿಸಿದ್ದ ಬೈಕನ್ನು ಕಳುವು ಮಾಡಲಾಗಿದೆ. ಇದನ್ನೂ ಓದಿ | ವಿನೋಬನಗರದ 60 ಅಡಿ ರಸ್ತೆಯಲ್ಲಿ ಪಲ್ಸರ್ NS ಬೈಕ್ ನಾಪತ್ತೆ, ರಾತ್ರಿ ನಿಲ್ಲಿಸಿದ್ದು ಮಧ್ಯರಾತ್ರಿಯೊಳಗೆ ಮಿಸ್ಸಿಂಗ್ ವೀರಾಪುರದ ಸುರೇಶ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನವಾಗಿದೆ. ಸುರೇಶ್ ಅವರ ತಂದೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ನೋಡಿಕೊಳ್ಳಲು ಮೆಗ್ಗಾನ್ ಆಸ್ಪತ್ರೆಗೆ … Read more

ವಿನೋಬನಗರದ 60 ಅಡಿ ರಸ್ತೆಯಲ್ಲಿ ಪಲ್ಸರ್ NS ಬೈಕ್ ನಾಪತ್ತೆ, ರಾತ್ರಿ ನಿಲ್ಲಿಸಿದ್ದು ಮಧ್ಯರಾತ್ರಿಯೊಳಗೆ ಮಿಸ್ಸಿಂಗ್

vinobanagara polic station and police jeep

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ವಿನೋಬಗರದ 60 ಅಡಿ ರಸ್ತೆಯಲ್ಲಿ ನಿಲ್ಲಿಸಿದ್ದ ಪಲ್ಸರ್ ಎನ್ಎಸ್ 200 ಬೈಕ್ ಕಳ್ಳತನವಾಗಿದೆ. ರಾತ್ರಿ ನಿಲ್ಲಿಸಿದ್ದ ಬೈಕ್ ಮಧ್ಯರಾತ್ರಿಯೊಳಗೆ ಕಣ್ಮರೆಯಾಗಿದೆ. ಜೀವನ್ ಎಂಬುವವರಿಗೆ ಸೇರಿದ ಬೈಕನ್ನು ಖದೀಮರು ಕದ್ದೊಯ್ದಿದ್ದಾರೆ. ಜಟ್ ಪಟ್ ನಗರದ ಸಮೀಪ ವಿನೋಬಗರ 60 ಅಡಿ ರಸ್ತೆಯಲ್ಲಿ ಬೈಕ್ ನಿಲ್ಲಿಸಲಾಗಿತ್ತು. ಹೇಗಾಯ್ತು ಘಟನೆ? ಜೀವನ್ ತನ್ನ ಸ್ನೇಹಿತನೊಂದಿಗೆ ಕಾರ್ಯನಿಮಿತ್ತ ರಿಪ್ಪನ್ ಪೇಟೆಗೆ ತೆರಳಿದ್ದರು. ಹಾಗಾಗಿ ರಾತ್ರಿ 10.30ರ ಹೊತ್ತಿಗೆ ವಿನೋಬನಗರದ 60 … Read more

ಶಿವಮೊಗ್ಗದ ಹೊಳೆ ಬಸ್ ಸ್ಟಾಪ್ ಬಳಿ ಮೊಬೈಲ್ ಕಳ್ಳತನ, ಕೃತ್ಯದ ಹಿಂದಿದ್ದಾರಾ ಬೈಕ್ನಲ್ಲಿ ಬಂದ ಮೂವರು?

Kote Police Station 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಶಿವಮೊಗ್ಗ ನಗರದಲ್ಲಿ ಮೊಬೈಲ್ ಕಳ್ಳತನದ ಮತ್ತೊಂದು ಪ್ರಕರಣ ವರದಿಯಾಗಿದೆ. ನಗರದ ಹೊಳೆ ಬಸ್ ಸ್ಟಾಪ್ ಬಳಿ ಖಾಸಗಿ ಕಂಪನಿಯೊಂದರ ಉದ್ಯೋಗಿಯ ಮೊಬೈಲ್ ಕಳವು ಮಾಡಲಾಗಿದೆ. ಗೌತಮ್ ಎಂಬುವವರಿಗೆ ಸೇರಿದ ಮೊಬೈಲನ್ನು ಖದೀಮರು ಕದ್ದೊಯ್ದಿದ್ದಾರೆ. ಕೆಲಸ ಮುಗಿಸಿಕೊಂಡು ರಾತ್ರಿ 9.30ರ ಹೊತ್ತಿಗೆ ಹೊಳೆ ಬಸ್ ಸ್ಟಾಪ್ ಬಳಿ ಬಂದಿದ್ದಾರೆ. ಈ ಸಂದರ್ಭ ಕರೆ ಬಂದಿದ್ದರಿಂದ ಮೊಬೈಲ್ನಲ್ಲಿ ಮಾತನಾಡಿದ್ದಾರೆ. ನಂತರ ತಮ್ಮ ಬ್ಯಾಗ್ನಲ್ಲಿ ಮೊಬೈಲ್ ಇರಿಸಿ, ಮನೆ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗ್ಗೆ ನಾಪತ್ತೆ

Car Theft General Image 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 3 ಆಗಸ್ಟ್ 2021 ಶಿವಮೊಗ್ಗದ ಬೈಪಾಸ್ ರಸ್ತೆಯಲ್ಲಿ ರಾತ್ರಿ ನಿಲ್ಲಿಸಿದ್ದ ಕಾರು ಬೆಳಗಾಗುವುದರಲ್ಲಿ ಕಣ್ಮರೆಯಾಗಿದೆ. ಸರ್ವಿಸ್ ಸೆಂಟರ್ ಒಂದರ ಮುಂದೆ ಕಾರು ನಿಲ್ಲಿಸಿದ್ದ ಮಾಲೀಕ ನಂತರ ಬಂದು ನೋಡಿದಾಗ ಇರಲಿಲ್ಲ. ಮತ್ತೂರಿನ ಪ್ರಶಾಂತ್ ಎಂಬುವವರಿಗೆ ಸೇರಿದ ಟೊಯೋಟಾ ಇಟಿಯೋಸ್ ಕಾರನ್ನು ಕಳ್ಳರು ಕದ್ದೊಯ್ದಿದ್ದಾರೆ. ಊರುಗಡೂರು ಬಳಿ ಬೈಪಾಸ್ ರಸ್ತೆಯಲ್ಲಿರುವ ಸರ್ವಿಸ್ ಸೆಂಟರ್ ಒಂದರ ಮುಂದೆ ಪ್ರಶಾಂತ್ ಅವರು ಕಾರು ನಿಲ್ಲಿಸಿ ಮನೆಗೆ ತೆರಳಿದ್ದರು. ಬೆಳಗ್ಗೆ ಬಂದು ಪರಿಶೀಲಿಸಿದಾಗ ಕಾರು … Read more

ಶಿವಮೊಗ್ಗದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಪೈಪ್ ರಾತ್ರೋರಾತ್ರಿ ನಾಪತ್ತೆ

Shivamogga City 1

ಶಿವಮೊಗ್ಗ ಲೈವ್.ಕಾಂ | SHIMOGA NEWS | 2 ಆಗಸ್ಟ್ 2021 ಮನೆ ಮುಂದೆ ನಿಲ್ಲಿಸಿದ್ದ ಕಾರುಗಳ ಗಾಜು ಒಡೆಯುವುದು, ಟೈರ್ ಬಿಚ್ಚಿಕೊಂಡು ಹೋಗುವುದು, ಕಾರಿನ ಒಳಗಿದ್ದ ವಸ್ತುಗಳನ್ನು ಕದ್ದೊಯ್ಯುವ ಪ್ರಕರಣಗಳನ್ನು ಕೇಳಿದ್ದೇವೆ. ಈಗ ಕಾರಿನ ಸೈಲೆನ್ಸರ್ ಪೈಪನ್ನು ಕದ್ದೊಯ್ದಿರುವ ಪ್ರಕರಣ ವರದಿಯಾಗಿದೆ. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಸೈಲೆನ್ಸರ್ ಪೈಪನ್ನು ರಾತ್ರೋರಾತ್ರಿ ಕಳುವು ಮಾಡಲಾಗಿದೆ. ಶಿವಮೊಗ್ಗದ ಮಂಜುನಾಥ ಬಡಾವಣೆಯಲ್ಲಿ ಘಟನೆ ವರದಿಯಾಗಿದೆ. ಹೇಗಾಯ್ತು ಘಟನೆ? ಮಂಜುನಾಥ ಬಡಾವಣೆಯ ಸತೀಶ್ ಕುಮಾರ್ ಅವರು ಪಾತ್ರೆ ವ್ಯಾಪಾರ ಮಾಡುತ್ತಾರೆ. … Read more