ನಡುರಾತ್ರಿ ಮನೆಯೊಳಗೆ ನುಗ್ಗಿದ ಅಪರಿಚಿತ, ಯಜಮಾನನ ಮುಖಕ್ಕೆ ಬ್ಲೇಡ್’ನಿಂದ ಇರಿದ

theft case general image

SHIVAMOGGA LIVE NEWS | BLADE | 17 ಮೇ 2022 ಮನೆಯೊಳಗೆ ಮಲಗಿದ್ದ ವ್ಯಕ್ತಿಯೊಬ್ಬರ ಕೆನ್ನೆ, ಹಣೆ, ಕುತ್ತಿಗೆಗೆ ಅಪರಿಚಿತನೊಬ್ಬ ಬ್ಲೇಡ್’ನಿಂದ (BLADE) ಇರಿದು ಪರಾರಿಯಾಗಿದ್ದಾನೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಭದ್ರಾವತಿ (BHADRAVATHI) ತಾಲೂಕು ರಾಮನಕೊಪ್ಪ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಯಲವಟ್ಟಿ ಗ್ರಾಮದ ಕುಮಾರನಾಯ್ಕ ಗಾಯಾಳು ಹೇಗಾಯ್ತು ಘಟನೆ? ಯಲವಟ್ಟಿಯ ಕುಮಾರನಾಯ್ಕ ರಾಮನಕೊಪ್ಪದಲ್ಲಿರುವ ತನ್ನ ಹೆಂಡತಿ ಮನೆಯಲ್ಲಿ ವಾಸವಿದ್ದ. ಭಾನುವಾರ ರಾತ್ರಿ 1.30ರ ಹೊತ್ತಿಗೆ ಅಪರಿಚಿತನೊಬ್ಬ ಮನೆಯೊಳಗೆ ಪ್ರವೇಶ ಮಾಡಿದ್ದಾನೆ. … Read more

ತೀರ್ಥಹಳ್ಳಿಯಲ್ಲಿ ಪತಿ ಎದುರಲ್ಲೇ ಪತ್ನಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ

Thirthahalli-Board-in-Thirthahalli-Taluk

SHIVAMOGGA LIVE NEWS | RAPE | 12 ಮೇ 2022 ಪತಿ ಎದುರಲ್ಲೆ ಪತ್ನಿಯನ್ನು ವಿವಸ್ತ್ರಗೊಳಿಸಿ ಅತ್ಯಾಚಾರಕ್ಕೆ ಯತ್ನಿಸಲಾಗಿದೆ. ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ತವರು ಕ್ಷೇತ್ರದಲ್ಲಿ ಘಟನೆ ಸಂಭವಿಸಿದೆ. ರಾತ್ರಿ ಬಸ್ ಇಳಿದು ನಡೆದು ಹೋಗುತ್ತಿದ್ದ ದಲಿತ ದಂಪತಿ ಮೇಲೆ ನಾಲ್ವರ ಗುಂಪೊಂದು ದಾಳಿ ಮಾಡಿದೆ. ಪತಿ ಮೇಲೆ ಹಲ್ಲೆ ನಡೆಸಿ, ಪತ್ನಿಯ ಮಾನಭಂಗಕ್ಕೆ ಯತ್ನಿಸಿದ್ದಾರೆ. ತೀರ್ಥಹಳ್ಳಿ ತಾಲೂಕಿನ ಗ್ರಾಮವೊಂದರಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ವಾಸಿ 26 ವರ್ಷದ ಮಹಿಳೆಯ ಮಾನಭಂಗಕ್ಕೆ ಯತ್ನಿಸಲಾಗಿದೆ. … Read more

ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಕಡೆಯವರಿಂದ ಯುವಕನ ಮನೆಗೆ ನುಗ್ಗಿ ಹಲ್ಲೆ

crime name image

SHIVAMOGGA LIVE NEWS | ASSAULT | 09 ಮೇ 2022 ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಕಡೆಯವರು ಯುವಕನೊಬ್ಬನ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಿವಮೊಗ್ಗದ ಹಳೆ ಮಂಡ್ಲಿಯಲ್ಲಿ ಯುವಕನ ಮನೆಗೆ ನುಗ್ಗಿ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಯುವತಿ ಮತ್ತು ಇಬ್ಬರು ಯುವಕರ ವಿರುದ್ಧ ಪ್ರಕರಣ ದಾಖಲಾಗಿದೆ. (ಖಾಸಗಿತನದ ದೃಷ್ಟಿಯಿಂದ ಯುವಕ, ಯುವತಿ ಹೆಸರನ್ನು ಬಹಿರಂಗಗೊಳಿಸುತ್ತಿಲ್ಲ). ಯುವಕ ಮತ್ತು ಯುವತಿ ಶಿವಮೊಗ್ಗದ ಪ್ರತಿಷ್ಠಿತ ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಪರಸ್ಪರ … Read more

ಶಿವಮೊಗ್ಗ – ಭದ್ರಾವತಿ KSRTC ಬಸ್ ಕಂಡಕ್ಟರ್ ಮೇಲೆ ಏಕಾಏಕಿ ಹಲ್ಲೆ

Shimoga Bhadravathi Bus in Shimoga Bus Stand

SHIVAMOGGA LIVE NEWS | ASSAULT| 05 ಮೇ 2022 ಶಿವಮೊಗ್ಗದ KSRTC ಬಸ್ ನಿಲ್ದಾಣದ ಮುಂಭಾಗ ಶಿವಮೊಗ್ಗ- ಭದ್ರಾವತಿ ಸರ್ಕಾರಿ ಬಸ್ ಕಂಡಕ್ಟರ್ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಹೆಲ್ಮೆಟ್’ನಿಂದ ಹೊಡೆದಿದ್ದಾನೆ. ಡ್ರೈವರ್ ಮತ್ತು ನಿಲ್ದಾಣಾಧಿಕಾರಿ ಅವರು ಜಗಳ ಬಿಡಿಸಿದ್ದಾರೆ. ಕಂಡಕ್ಟರ್ ನಾಗರಾಜ್ ಹಲ್ಲೆಗೊಳಗಾದವರು. ನಾಗರಾಜ್ ಅವರು ಶಿವಮೊಗ್ಗ- ಭದ್ರಾವತಿ KSRTC ಬಸ್ ನಿರ್ವಾಹಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿಲ್ದಾಣದ ಮುಂದೆ ಭದ್ರಾವತಿಗೆ ತೆರಳುವ ಬಸ್ಸುಗಳು ನಿಲ್ಲುವ ಪ್ಲಾಟ್ ಫಾರಂನಲ್ಲಿ ನಿಂತಿದ್ದಾಗ, ಮನೆಯವರು ಕರೆ ಮಾಡಿದ್ದಾರೆ. … Read more

ನಡುರಸ್ತೆಯಲ್ಲಿ ಸಾಲದ ಹಣಕ್ಕಾಗಿ ಕಿತ್ತಾಟ, ಒಬ್ಬನಿಗೆ ಚಾಕು ಇರಿತ

crime name image

SHIVAMOGGA LIVE NEWS | Crime News Today | 12 ಏಪ್ರಿಲ್ 2022 ಸಾಲದ ಹಣ ಹಿಂತಿರುಗಿಸುವಂತೆ ಕೇಳಿದ್ದಕ್ಕೆ ಚಾಕುವಿನಿಂದ ಹಲ್ಲೆ ನಡೆಸಲಾಗಿದೆ. ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗೋಂಧಿ ಚಟ್ನಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಶಬರೀಶ (32) ಹಲ್ಲೆಗೊಳಗಾದವರು. ಹರೀಶ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸಾಲದ ಹಣಕ್ಕೆ ಗಲಾಟೆ ಹರೀಶನಿಗೆ ಶಬರೀಶ 40 ಸಾವರ ರೂ. ಹಣವನ್ನು ಸಾಲವಾಗಿ ನೀಡಿದ್ದರು. ಅದನ್ನು ಹಿಂತಿರುಗಿಸುವಂತೆ … Read more

ಮೇಯಲು ಹೋಗಿದ್ದ ಹಸುವಿನ ಕಾಲು ಕತ್ತರಿಸಿದ ದುಷ್ಕರ್ಮಿಗಳು

Assault-on-Cow-in-Shimoga-Horabailu-Choradi

SHIVAMOGGA LIVE NEWS | 20 ಮಾರ್ಚ್ 2022 ಮೇಯಲು ಹೋಗಿದ್ದ ಹಸುವಿನ ಕಾಲನ್ನು ದುಷ್ಕರ್ಮಿಗಳು ಕತ್ತರಿಸಿದ್ದಾರೆ. ಮಚ್ಚಿನಿಂದ ಹಲ್ಲೆ ನಡೆಸಿ ಹಸುವಿನ ಕಾಲು ಕತ್ತರಿಸಲಾಗಿದೆ. ಶಿವಮೊಗ್ಗ ತಾಲೂಕು ಚೋರಡಿ ಸಮೀಪದ ಹೊರಬೈಲು ಗ್ರಾಮದಲ್ಲಿ ಘಟನೆ ಸಂಭವಿಸಿದೆ. ನಾಗರಾಜ ಎಂಬುವವರಿಗೆ ಸೇರಿದ ಹಸುವಿನ ಕಾಲು ಕತ್ತರಿಸಲಾಗಿದೆ. ಎಲ್ಲಾ ಹಸುಗಳನ್ನು ಮೇವಿಗಾಗಿ ಕಾಡಿಗೆ ಬಿಡಲಾಗಿತ್ತು. ಸಂಜೆ ಹೊತ್ತಿಗೆ ಎಲ್ಲಾ ಹಸುಗಳು ಮನೆಗೆ ಹಿಂತಿರುಗಿವೆ. ಒಂದು ಹಸು ಮಾತ್ರ ಮರಳಿರಲಿಲ್ಲ. ಮರುದಿನ ಬೆಳಗ್ಗೆ ಖಾಲಿ ಹೊಲದಲ್ಲಿ ಹಸು ಇರುವುದು ಗೊತ್ತಾಗಿದೆ. ಸಮೀಪಕ್ಕೆ … Read more

ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಬಸ್ ಅಡ್ಡಗಟ್ಟಿ ಚಾಲಕನನ್ನು ಕೆಳಗೆ ಎಳೆದು ಹಲ್ಲೆ

crime name image

SHIVAMOGGA LIVE NEWS | 20 ಮಾರ್ಚ್ 2022 ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ಅಡ್ಡಗಟ್ಟಿ ಚಾಲಕನ ಮೇಲೆ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಬೈಕ್ ಸವಾರನೊಬ್ಬನ ವಿರುದ್ಧ ಪ್ರಕರಣ ದಾಖಲಾಗಿದೆ. ಬಸ್ ಚಾಲಕ ಫಯಾಜ್ ಪಾಷಾ ಗಾಯಗೊಂಡಿದ್ದಾರೆ. ಅವರಿಗೆ ಮಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಏನಿದು ಪ್ರಕರಣ? ಕುಣಿಗಲ್’ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸು ಬೈಪಾಸ್ ರಸ್ತೆಯ ತುಂಗಾ ಸೇತುವೆ ಬಳಿ ತೆರಳುತಿತ್ತು. ದಿಢೀರನೆ ಬೈಕ್ ಸವಾರನೊಬ್ಬ ಅಡ್ಡ ಬಂದಿದ್ದಾನೆ. ಚಾಲಕ ಫಯಾಜ್ ಪಾಷಾ ಬೈಕ್ … Read more

ಸಾಗರದ MDF ಸಂಸ್ಥೆ ಸಭೆಯಲ್ಲಿ ಗದ್ದಲ, ಶಾಸಕರ ಎದುರಲ್ಲೇ ಕೈ ಕೈ ಮಿಲಾಯಿಸಿದ ಗುಂಪುಗಳು

Attack-on-Shripad-Hegde-Nisrani-at-LB-College

SHIVAMOGGA LIVE NEWS | 13 ಮಾರ್ಚ್ 2022 ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (MDF) ಸಂಸ್ಥೆಯಲ್ಲಿ ಆಂತರಿಕ ಕಲಹ ತಾರಕಕ್ಕೇರಿದೆ. ಸರ್ವ ಸದಸ್ಯರ ಸಭೆಯಲ್ಲಿ ಎರಡು ಗುಂಪುಗಳು ಕೈ ಕೈ ಮಿಲಾಯಿಸಿವೆ. ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿ ಕಲಹಕ್ಕೆ ಕಾರಣವಾಗಿದೆ. ಶಿವಮೊಗ್ಗ ಹಾಲು ಒಕ್ಕೂಟದ ಅಧ್ಯಕ್ಷ, MDF ಸಂಸ್ಥೆಯ ಉಪಾಧ್ಯಕ್ಷರಾಗಿದ್ದ ಶ್ರೀಪಾದ ಹೆಗಡೆ ನಿಸರಾಣಿ ಸೇರಿ ಇಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ. ಸಾಗರದ ದೇವರಾಜ ಅರಸು ಕಲಾಭವನದಲ್ಲಿ ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ ಸಂಸ್ಥೆಯ 56ನೇ ಸರ್ವ ಸದಸ್ಯರ … Read more

ಹೊಟ್ಟೆ ತುಂಬಾ ಊಟ ಮಾಡಿ ಅಡುಗೆ ಭಟ್ಟನ ಮುಖದ ಮೇಲೆ ಬಿಸಿ ಎಣ್ಣೆ ಎರಚಿದರು, ದಾಂಧಲೆಯ ವಿಡಿಯೋ ವೈರಲ್

crime name image

SHIVAMOGGA LIVE NEWS | 15 ಮಾರ್ಚ್ 2022 ಹೊಟ್ಟೆ ಬಿರಿಯುವ ಹಾಗೆ ಮಾಂಸದೂಟ ಮಾಡಿ ಯುವಕರ ಗುಂಪು ಬಿಲ್ ಕೇಳಿದಾಗ ಜಗಳ ಶುರು ಮಾಡಿ ಹೊಟೇಲ್ ಮಾಲೀಕನ ಮೇಲೆ ಹಲ್ಲೆ ನಡೆಸಿದ್ದಾರೆ. ಅಡುಗೆ ಭಟ್ಟನ ಮುಖದ ಮೇಲೆ ಬಾಣೆಲೆಯಲ್ಲಿದ್ದ ಬಿಸಿ ಎಣ್ಣೆಯನ್ನು ಎರಚಿದ್ದಾರೆ. ಭದ್ರಾವತಿಯ ಜನ್ನಾಪುರದಲ್ಲಿ ಘಟನೆ ಸಂಭವಿಸಿದೆ. ಮಿಲ್ಟ್ರಿ ಹೊಟೇಲ್ ಒಂದರಲ್ಲಿ ಹೊಟ್ಟೆ ಬಿರಿಯುವ ಹಾಗೆ ಮಾಂಸದ ಊಟ ಮಾಡಿದ ಯುವಕರ ಗುಂಪು, ಬಿಲ್ ಕೇಳಿದಾಗ ಗಲಾಟೆ ಶುರು ಮಾಡಿದ್ದಾರೆ. ಮಾಲೀಕನ ಮೇಲೆ ಹಲ್ಲೆ ಜನ್ನಾಪುರದ … Read more

BREAKING | ಶಿವಮೊಗ್ಗದಲ್ಲಿ ವ್ಯಕ್ತಿಗೆ ಚಾಕು ಇರಿತ, ಪರಿಚಿತನಿಂದ ಕೃತ್ಯ

breaking news graphics

SHIVAMOGGA LIVE | 8 ಮಾರ್ಚ್ 2022 ಕ್ಷುಲಕ ವಿಚಾರಕ್ಕೆ ಜಗಳವಾಗಿ ವ್ಯಕ್ತಿಯಿಬ್ಬರಿಗೆ ಚಾಕು ಇರಿಯಲಾಗಿದೆ. ಗಂಭೀರ ಗಾಯಗೊಂಡಿರುವ ವ್ಯಕ್ತಿಯನ್ನು ಮೆಗ್ಗಾನ್ ಆಸ್ಪತ್ರಗೆ ದಾಖಲು ಮಾಡಲಾಗಿದೆ. ಬಾಪೂಜಿನಗರದ ಪಾಚಾ ಖಾನ್ (40) ಚಾಕು ಇರಿತಕ್ಕೆ ಒಳಗಾದವರು. ದೇಹದ ವಿವಿಧೆಡೆ ಚಾಕು ಇರಿತದಿಂದ ಗಾಯವಾಗಿದೆ. ಶಂಕರಮಠ ರಸ್ತೆಯ ಟಾಟಾ ಶೋ ರೂಂ ಬಳಿ ಘಟನೆ ಸಂಭವಿಸಿದೆ. ಚಾಕು ಇರಿತಕ್ಕೆ ಕಾರಣವೇನು? ಪಾಚಾ ಸಾಬ್ ಮತ್ತು ಆರ್‌ಎಂಎಲ್ ನಗರದ ದಸ್ತಗೀರ್ ಮಧ್ಯೆ ಒಂದು ಲಕ್ಷ ರೂ. ಹಣಕಾಸು ವಿಚಾರವಾಗಿ ಜಗಳ … Read more