ಪೆಟ್ರೋಲ್ ವಿಚಾರವಾಗಿ ಇಬ್ಬರ ನಡುವೆ ಹೊಡೆದಾಟ, ಕೊಲೆ ಬೆದರಿಕೆ

crime name image

SHIVAMOGGA LIVE NEWS | 2 ಮಾರ್ಚ್ 2022 ಬೈಕಿನಿಂದ ಪೆಟ್ರೋಲ್ ತೆಗೆದುಕೊಂಡ ವಿಚಾರ ಸಂಬಂಧ ಇಬ್ಬರ ಮಧ್ಯೆ ಮಾತಿಗೆ ಬೆಳೆದು, ಹೊಡೆದಾಟವಾಗಿದೆ. ಕೊಲೆ ಬೆದರಿಕೆಯನ್ನು ಒಡ್ಡಲಾಗಿದೆ. ಸಾಗರ ತಾಲೂಕು ನೇರಲಗಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಅಣ್ಣಪ್ಪ ಅವರ ಬೈಕಿನಿಂದ ಗಣಪತಿ ಎಂಬುವವರು ಪೆಟ್ರೋಲ್ ತೆಗೆದುಕೊಂಡಿದ್ದರು. ಈ ಕುರಿತು ಅಣ್ಣಪ್ಪ ಅವರ ಸೊಸೆಗೆ ತಿಳಿಸಿದ್ದರು. ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ಅಣ್ಣಪ್ಪ ಅವರು ಮನೆಗೆ ಬಂದಾಘ ಬೈಕಿನಲ್ಲಿ ಪೂರ್ಣ ಪೆಟ್ರೋಲ್ ಖಾಲಿಯಾಗಿತ್ತು. ಈ ಸಂಬಂಧ ಗಣಪತಿ … Read more

ತ್ಯಾಗರ್ತಿ ಮಾರ್ಗವಾಗಿ ಆನಂದಪುರಕ್ಕೆ ತೆರಳುತ್ತಿದ್ದ ಬೈಕ್’ಗೆ ವಾಹನ ಡಿಕ್ಕಿ

sagara graphics

SHIVAMOGGA LIVE NEWS | 2 ಮಾರ್ಚ್ 2022 ಬೈಕ್’ನಲ್ಲಿ ತೆರಳುತ್ತಿದ್ದವರೆಗೆ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಕಲ್ಲುಕೊಪ್ಪ ಬಸ್ ನಿಲ್ದಾಣದ ಬಳಿ ಘಟನೆ ಸಂಭವಿಸಿದೆ. ಬೈಕ್ ಸವಾರರಾದ ಶಿವರಾಜ್ ಮತ್ತು ಮಹೇಂದ್ರ ಅವರು ಗಾಯಗೊಂಡಿದ್ದಾರೆ. ಸೊರಬದ ಬೆಲವಂತಕೊಪ್ಪದಿಂದ ತ್ಯಾಗರ್ತಿ ಮಾರ್ಗವಾಗಿ ಆನಂದಪುರದ ಕಡೆಗೆ ತರಳುತ್ತಿದ್ದಾಗ ಎದುರಿನಿಂದ ಬಂದ ವಾಹನವೊಂದು ಡಿಕ್ಕಿ ಹೊಡೆದಿದೆ. ಶಿವರಾಜ್ ಮತ್ತು ಮಹೇಂದ್ರ ಗಾಯಗೊಂಡಿದ್ದು, ಸ್ಥಳೀಯರು, ಇತರೆ ವಾಹನ ಸವಾರರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸೋಮವಾರ ರಾತ್ರಿ ಘಟನೆ … Read more

ರಸ್ತೆ ಪಕ್ಕ ನಡೆದು ಹೋಗುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿ, ಗಾಯ

Sagara Police Station Building

SHIVAMOGGA LIVE NEWS | 2 ಮಾರ್ಚ್ 2022 ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಹಿಂಬದಿಯಿಂದ ಬಂದು ಡಿಕ್ಕಿ ಹೊಡೆಸಿದ ಬೈಕ್ ಸವಾರನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರಕರಣ ದಾಖಲಾಗಿದೆ. ಸಾಗರದ ಸುಭಾಷ್ ನಗರದ ಚಾಂಪ್ಲಾನಾಯ್ಕ ಅವರು ಕೆಲಸದ ನಿಮಿತ್ತ ಪಟ್ಟಣಕ್ಕೆ ತೆರಳಿದ್ದರು. ರಸ್ತೆ ಪಕ್ಕದಲ್ಲಿ ನಡೆದುಕೊಂಡು ಮನೆಗೆ ಹಿಂತಿರುಗುತ್ತಿದ್ದರು. ಕೆಳದಿ ಸರ್ಕಲ್ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಬೈಕ್ ಸವಾರ ಚಾಂಪ್ಲಾನಾಯ್ಕ ಅವರಿಗೆ ಡಿಕ್ಕಿ ಹೊಡೆಸಿದ್ದಾನೆ. ಘಟನೆಯಲ್ಲಿ ಚಾಂಪ್ಲಾನಾಯ್ಕ ಅವರ ಹಣೆ, ಕಣ್ಣಿನ ಭಾಗ, ಮೂಗು, ಎಡ … Read more

ಭದ್ರಾವತಿಯಲ್ಲಿ ಇಸ್ಪೀಟ್, ಓಸಿ, ಮಟ್ಕಾ, ಇಬ್ಬರ ವಿರುದ್ಧ ಕೇಸ್

Bhadravathi Name Graphics

SHIVAMOGGA LIVE NEWS | 2 ಮಾರ್ಚ್ 2022 ಜೂಜಾಟದಲ್ಲಿ ತೊಡಗಿದ್ದ ಇಬ್ಬರ ವಿರುದ್ಧ ಭದ್ರಾವತಿಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ. ಭದ್ರಾವತಿ ಹೊಸಮನೆ ಎನ್.ಎಂ.ಸಿ 4ನೇ ಕ್ರಾಸ್ ಕನ್ಸರ್’ವೆನ್ಸಿಯಲ್ಲಿ ಇಸ್ಪೀಟ್ ಜೂಜಾಟ ನಡೆಸುತ್ತಿರುವ ಕುರಿತು ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಸಂಬಂಧ ಪ್ರದೀಪ್ ಕುಮಾರ್ ಎಂಬಾತನ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ. ಇನ್ನು, ಭದ್ರಾವತಿ ಕುಪುಂಪು ನಗರದ ಕೆರೆಕೋಡಮ್ಮ ದೇಗುಲದ ಹಿಂಭಾಗದಲ್ಲಿ ಓಸಿ ಮಟ್ಕಾ ಆಡಿಸುತ್ತಿರುವ ಸಂಬಂಧ ಪ್ರಕರಣ ದಾಖಲಾಗಿದೆ. ಕೆಂಚಪ್ಪ … Read more

ಮನೆ ಬಾಗಿಲು ಬೀಗ ಮುರಿದು ಚಿನ್ನಾಭರಣ, ನಗದು, ನಿವೇಶನದ ಮೂಲ ದಾಖಲೆ ಕದ್ದೊಯ್ದ ಖದೀಮರು

theft case general image

SHIVAMOGGA LIVE NEWS | 2 ಮಾರ್ಚ್ 2022 ಮನೆ ಬಾಗಲಿಗೆ ಹಾಕಿದ್ದ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಚಿನ್ನಾಭರಣ, ನಗದು ಮತ್ತು ನಿವೇಶನದ ಮೂಲಕ ದಾಖಲೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಶಿವಮೊಗ್ಗ ತಾಲೂಕು ಹುರುಳಿಹಳ್ಳಿ ಗ್ರಾಮದ ಶಿವರಾಜ ಎಂಬುವವರ ಮನೆಯಲ್ಲಿ ಘಟನೆ ಸಂಭವಿಸಿದೆ. ಶಿವರಾಜ ಅವರ ತಾಯಿ ಕೆಲಸಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ. ಮನೆಗೆ ಬಂದಾಗ ಬಾಗಿಲು ಬೀಗ ಮುರಿದಿರುವುದು ಗೊತ್ತಾಗಿದೆ. ರೂಂನ ಬೀರುವಿನಲ್ಲಿದ್ದ 25 ಸಾವಿರ ಮೌಲ್ಯದ 3 ಉಂಗುರ, 80 ಸಾವಿರ ರೂ. ನಗದು, … Read more

ಶಿವಮೊಗ್ಗದಲ್ಲಿ ರಾತ್ರೋರಾತ್ರಿ 250 ಕೆ.ಜಿ. ಅಡಕೆ ನಾಪತ್ತೆ

Areca-Nuts-General-Image

SHIVAMOGGA LIVE NEWS | 1 ಮಾರ್ಚ್ 2022 ರಾತ್ರೋರಾತ್ರಿ ಸುಮಾರು 250 ಕೆ.ಜಿ.ಯಷ್ಟು ಸಿಪ್ಪೆಗೋಟು ಅಡಕೆ ಕಳ್ಳತನವಾಗಿದೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಳೆ ಹೊನ್ನಾಪುರದ ರಮೇಶ್ ಎಂಬುವವರಿಗೆ ಸೇರಿದ 250 ಕೆ.ಜಿ. ಸಿಪ್ಪೆಗೋಟು ಅಡಕೆ ಕಳವಾಗಿದೆ. ರಮೇಶ್ ಅವರು ಮನೆ ಬಳಿಕ ಅಡಕೆಯನ್ನು ಒಣಗಿಸಲು ಹಾಕಿದ್ದರು. ರಾತ್ರಿ 11 ಗಂಟೆಗೆ ಅಡಕೆಯನ್ನು ಪರಿಶೀಲಿಸಿ ಬಂದಿದ್ದರು. ಬೆಳಗ್ಗೆ 6 ಗಂಟೆಗೆ ಎದ್ದು ನೋಡಿದಾಗ, ಸುಮಾರು 250 ಕೆ.ಜಿ.ಯಷ್ಟು ಅಡಕೆ ಕಳ್ಳತನವಾಗಿತ್ತು. ಇದರ ಮೌಲ್ಯ … Read more

ಜೂಜಾಟದಲ್ಲಿ ತೊಡಗಿದ್ದವರ ವಿರುದ್ಧ ಆನವಟ್ಟಿ ಠಾಣೆಯಲ್ಲಿ ಎರಡು ಪ್ರತ್ಯೇಕ ಕೇಸ್

soraba anavatti graphics

SHIVAMOGGA LIVE NEWS | 1 ಮಾರ್ಚ್ 2022 ಸಾರ್ವಜನಿಕ ಸ್ಥಳದಲ್ಲಿ ಇಸ್ಪೀಟ್ ಜೂಜಾಟ ಆಡುತ್ತಿದ್ದವರ ವಿರುದ್ಧ, ಸೊರಬ ತಾಲೂಕು ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ. ಕೇಸ್ 1 : ಚಿಕ್ಕ ಹಿಡಗೋಡು ಗ್ರಾಮ ಇಲ್ಲಿನ ಆರೊಟ್ಟಿ ಕೆರೆ ಬಳಿ ಸುಮಾರು 8 ಮಂದಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದರು. ಖಚಿತ ಮಾಹಿತಿ ಮೇರೆಗೆ ಪರಿಶೀಲನೆ ನಡೆಸಿದ ಪೊಲೀಸ್ ಸಿಬ್ಬಂದಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕೇಸ್ 2 : ಬಿಳಗಲಿ ಗ್ರಾಮ ರಸ್ತೆ ಪಕ್ಕದ ಮರವೊಂದರ … Read more

ಸೇತುವೆ ಕಟ್ಟೆಗೆ ಲಾರಿ ಡಿಕ್ಕಿ, ಹಿಂಬದಿ ಇದ್ದ ಅಕೇಶಿಯಾ ಪೋಲ್ಸ್ ಬಿದ್ದು ವೈದ್ಯ ಸೇರಿ ಇಬ್ಬರಿಗೆ ಗಾಯ

Sagara Rural Police Station

SHIVAMOGGA LIVE NEWS | 1 ಮಾರ್ಚ್ 2022 ಲಾರಿಯೊಂದು ಸೇತುವೆಗೆ ಡಿಕ್ಕಿ ಹೊಡೆದು ಹಿಂಬದಿಯಲ್ಲಿದ್ದ ಅಕೇಶಿಯಾ ಪೋಲ್’ಗಳು ಬಿದ್ದು ಆಯುರ್ವೇದ ವೈದ್ಯ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ. ಸಾಗರ ತಾಲೂಕು ಹರುಡಿಕೆ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರಿಗೆ ಬಲಗೈ ಮೂಳೆ ಮುರಿದಿದೆ. ವೈದ್ಯರೊಂದಿಗೆ ಬೈಕಿನಲ್ಲಿ ತೆರಳುತ್ತಿದ್ದ ಗಣೇಶ್ ಎಂಬುವವರ ಹೊಟ್ಟೆ, ಸೊಂಟಕ್ಕೆ ಗಾಯವಾಗಿದೆ. ಹೇಗಾಯ್ತು ಘಟನೆ? ರೋಗಿಯೊಬ್ಬರಿಗೆ ಚಿಕಿತ್ಸೆ ನೀಡಲು ಆಯುರ್ವೇದ ವೈದ್ಯ ಬಿವಾಶ್ ಕುಮಾರ್ ಡಾಲಿ ಅವರು … Read more

ಕಣದಲ್ಲಿ ಒಣಗಿಸಲು ಹಾಕಿದ್ದ ಸಿಪ್ಪೆಗೋಟು ಅಡಕೆ ರಾತ್ರೋರಾತ್ರಿ ನಾಪತ್ತೆ

Areca-Nuts-General-Image

SHIVAMOGGA LIVE NEWS | 1 ಮಾರ್ಚ್ 2022 ಮನೆಯ ಕಣದಲ್ಲಿ ಒಣಗಿಸಲು ಹಾಕಿದ್ದ ಅಡಕೆ ರಾತ್ರೋರಾತ್ರಿ ನಾಪತ್ತೆ ಆಗಿದೆ. 1.50 ಲಕ್ಷ ಮೌಲ್ಯದ ಅಡಕೆ ಕಳ್ಳತನವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಾಗರ ತಾಲೂಕು ಯಲಗಳಲೆ ಗ್ರಾಮದ ನಾಗರಾಜ ಎಂಬುವವರಿಗೆ ಸೇರಿದ ಅಡಕೆ ಕಳ್ಳತನವಾಗಿದೆ. ತಮ್ಮ ತೋಟದಲ್ಲಿ ಬೆಳೆದ ಸಿಪ್ಪೆಗೋಟು ಅಡಕೆಯನ್ನು ಅವರು ಮನೆ ಹಿಂಭಾಗದ ಕಣದಲ್ಲಿ ಒಣಗಿಸಿದ್ದರು. ಕಳೆದ ಶುಕ್ರವಾರ ಸಂಜೆ ಒಣಗಿಸಿದ್ದ ಅಡಕೆಯನ್ನ ನಾಗರಾಜ ಅವರು ನೋಡಿಕೊಂಡು ಬಂದಿದ್ದರು. ಅದನ್ನು ಸರಿ ಮಾಡಿಟ್ಟು ಬಂದಿದ್ದರು. … Read more

ರಾತ್ರೋರಾತ್ರಿ ಅಡಕೆ, ಬಾಳೆ ತೋಟದ ಮೇಲೆ ಆನೆಗಳ ದಾಳಿ

Mandagadde Graphics by smg live

SHIVAMOGGA LIVE NEWS | 28 ಫೆಬ್ರವರಿ 2022 ಮಂಡಗದ್ದೆ ಸಮೀಪ ಕಾಡಾನೆಗಳ ಹಾವಳಿ ಶುರುವಾಗಿದೆ. ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ ಬೆಳೆಗೆ ಹಾನಿ ಮಾಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಆನೆಗಳ ಗುಂಪು ಮಂಡಗದ್ದೆ ಸಮೀಪದ ಕೀಗಡಿ, ಮೇಲಿನ ಕೀಗಡಿ, ಮೂಡ್ಲುಮನೆ ಭಾಗದಲ್ಲಿ ಓಡಾಡಿಕೊಂಡಿವೆ. ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡುತ್ತಿರುವ ಆನೆಗಳು ಬೆಳೆ ಹಾನಿ ಮಾಡುತ್ತಿವೆ. ಆದ್ದರಿಂದ ರೈತರು ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಕೀಗಡಿಯ ಶೇಶಪ್ಪ, ಧರ್ಮಣ್ಣಪ್ಪ, ಹೇಮೇಶ್, ಉಪೇಂದ್ರ ಗೌಡ  ಅವರ ತೋಟಗಳಿಗೆ ಆನೆಗಳು … Read more