ಹೊಸಮನೆಯಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡ ವ್ಯಕ್ತಿ

crime name image

SHIVAMOGGA LIVE NEWS | 28 ಫೆಬ್ರವರಿ 2022 ಪೆಟ್ರೋಲ್ ಸುರಿದುಕೊಂಡು ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳೀಯರು ಅವರನ್ನು ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ತೀವ್ರ ಸುಟ್ಟ ಗಾಯ ಆಗಿರುವುದರಿಂದ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಶಿವಮೊಗ್ಗದ ಹೊಸಮನೆ ಬಡಾವಣೆಯಲ್ಲಿ ಘಟನೆ ಸಂಭವಿಸಿದೆ. ಮಂಜುನಾಥ ಎಂಬುವವರು ಆತ್ಮಹತ್ಯೆಗೆ ಯತ್ನಿಸಿದವರು. ಮನೆಯೊಂದರ ಮುಂದೆ ಮಂಜುನಾಥ ಅವರು ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ. ಧಗಧಗ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೆ ನೆರವಿಗೆ ಧಾವಿಸಿದ್ದಾರೆ. ಆಂಬುಲೆನ್ಸ್ ಕರೆಯಿಸಿ ಮಂಜುನಾಥ ಅವರನ್ನು … Read more

‘ಸಚಿವ ಈಶ್ವರಪ್ಪ ಆಸ್ತಿ ಮುಟ್ಟುಗೋಲು ಹಾಕಿಕೊಂಡು ನಷ್ಟ ಭರಿಸಬೇಕು’

Eshwarappa-and-Congress-President-Sundaresh

SHIVAMOGGA LIVE NEWS | 28 ಫೆಬ್ರವರಿ 2022 ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಮೆರವಣಿಗೆಯ ನೇತೃತ್ವ ವಹಿಸಿದ್ದ ಸಚಿವ ಕೆ.ಎಸ್ ಈಶ್ವರಪ್ಪ, ಬಿ.ವೈ. ರಾಘವೇಂದ್ರ, ಚನ್ನಬಸಪ್ಪ ಸೇರಿದಂತೆ ಹಲವರ ವಿರುದ್ದ ಪ್ರಕರಣ ದಾಖಲಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್  ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್ ಅವರು, ಸಚಿವ ಈಶ್ವರಪ್ಪ ಅವರನ್ನು ಎ1 ಆರೋಪಿ ಮಾಡಬೇಕು. ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡು, ಗಲಭೆಯಿಂದ ನಷ್ಟ ಅನುಭವಿಸಿದವರಿಗೆ ಪರಿಹಾರ ನೀಡಬೇಕು. ಒಂದು ವೇಳೆ ಸಚಿವ ಈಶ್ವರಪ್ಪ … Read more

ಶಿವಮೊಗ್ಗ ನ್ಯಾಯಾಲಯದಲ್ಲಿ 27 ಹುದ್ದೆಗಳಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?

jobs news shivamogga live

SHIVAMOGGA LIVE NEWS | 28 ಫೆಬ್ರವರಿ 2022 ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಮತ್ತು ಹಿಂಬಾಕಿ ಇರುವ ಹುದ್ದೆಗಲಿಗೆ ಅರ್ಜಿ ಆಹ್ವಾನಿಸಲಾಗಿದೆ. 27 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಶಿವಮೊಗ್ಗ ಜಿಲ್ಲಾ ನ್ಯಾಯಾಲಯದ ವೆಬ್‍ಸೈಟ್ https://districts.ecourts.gov.in/shivamogga/online-recruitment ಅಥವಾ http://karnatakajudiciary.kar.nic.in/districtrecruitment.asp ನಲ್ಲಿ ನೀಡಲಾದ ಲಿಂಕ್ ಮೂಲಕ ಫೆ.25 ರಿಂದ ಮಾರ್ಚ್ 24 ರವರೆಗೆ ಸಲ್ಲಿಸಬಹುದು. ಅರ್ಹತೆ ಏನು? ಕನಿಷ್ಠ 18 ವರ್ಷ ಹಾಗೂ ಸಾಮಾನ್ಯ ವರ್ಗಕ್ಕೆ ಗರಿಷ್ಟ 35, 2ಎ, 2ಬಿ, 3ಎ, … Read more

ಶಿವಮೊಗ್ಗದಲ್ಲಿ ಜಿ+2 ಮನೆಗಳ ಹಂಚಿಕೆಗೆ ಅರ್ಜಿ ಅಹ್ವಾನ, ಯಾರೆಲ್ಲ, ಹೇಗೆ ಅರ್ಜಿ ಸಲ್ಲಿಸಬೇಕು?

Ashraya-Yojane-House-in-Gopishetty-Koppa-in-Shimoga.

SHIVAMOGGA LIVE NEWS | 28 ಫೆಬ್ರವರಿ 2022 ಗೋಪಿಶೆಟ್ಟಿ ಕೊಪ್ಪ ಗ್ರಾಮದಲ್ಲಿ ನಿರ್ಮಿಸಿರುವ ಜಿ+2 ಮಾದರಿಯ ಮನೆಗಳನ್ನು ಹಂಚುವ ಸಂಬಂಧ ಹೊಸದಾಗಿ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಗೋಪಿಶೆಟ್ಟಿಕೊಪ್ಪ ಗ್ರಾಮದ 19.23 ಎಕರೆ ಜಮೀನಿನಲ್ಲಿ ಜಿ+2 ಮಾದರಿ ಮನೆಗಳನ್ನು ನಿರ್ಮಿಸಲಾಗಿದೆ. ನಿವೇಶನ ರಹಿತರಿಗೆ ಈ ಮನೆಗಳ ಹಂಚಿಕೆ ಮಾಡಲು ಶಿವಮೊಗ್ಗ ನಗರ ಆಶ್ರಯ ಸಮಿತಿ ನಿರ್ಧರಿಸಿದೆ. ಅರ್ಜಿ ಸಲ್ಲಿಸುವುದು ಹೇಗೆ? shivamoggacitycorp.org ಜಾಲತಾಣದ Ashraya Yojane … Read more

ಶಿವಮೊಗ್ಗದಲ್ಲಿ ಶಾಲೆ, ಕಾಲೇಜು ಪುನಾರಂಭ, ಮುಂದುವರೆದ ಹಿಜಾಬ್ ವಿವಾದ

Burkha-Wearing-Students-Stand-outside-DVS-college

SHIVAMOGGA LIVE NEWS | 28 ಫೆಬ್ರವರಿ 2022 ಒಂದು ವಾರದ ಬಳಿಕ ಶಿವಮೊಗ್ಗ ನಗರದಲ್ಲಿ ಶಾಲೆ, ಕಾಲೇಜುಗಳು ಪುನಾರಂಭವಾಗಿವೆ. ತಣ್ಣಗಾಗಿದ್ದ ಹಿಜಾಬ್ ವಿವಾದ ಪುನಃ ತಲೆ ಎತ್ತಿದೆ. ಹಿಜಾಬ್ ತೆಗೆಯುವಂತೆ ತಿಳಿಸಿದ್ದರಿಂದ ವಿದ್ಯಾರ್ಥಿನಿಯರು ಕಾಲೇಜು ಪ್ರವೇಶಿಸದೆ ಹೊರಗೆ ನಿಂತಿದ್ದಾರೆ. ಡಿವಿಎಸ್ ಕಾಲೇಜಿನಲ್ಲಿ ಸಮವಸ್ತ್ರದೊಂದಿಗೆ ಕಾಲೇಜಿನ ಒಳಗೆ ಬರುವಂತೆ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಈ ಸಂಬಂಧ ಗೇಟ್ ಮುಂಭಾಗ ನೊಟೀಸ್ ಕೂಡ ಅಂಟಿಸಲಾಗಿದೆ. ಹಿಜಾಬ್ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿನಿಯರು ಕಾಲೇಜು ಆವರಣವನ್ನು ಪ್ರವೇಶಿಸಲು ನಿರಾಕರಿಸಿದ್ದಾರೆ. ಕಾಲೇಜು ಮುಂದೆ … Read more

ಮನೆಗೆ ಮರಳುತ್ತಿದ್ದ ಕೂಲಿ ಕಾರ್ಮಿಕನಿಗೆ ಟ್ರಾಕ್ಟರ್ ಡಿಕ್ಕಿ, ಸಾವು

crime name image

SHIVAMOGGA LIVE NEWS | 28 ಫೆಬ್ರವರಿ 2022 ಟ್ರಾಕ್ಟರ್ ಡಿಕ್ಕಿಯಾಗಿ ಕೂಲಿ ಕಾರ್ಮಿಕನೊಬ್ಬ ಸಾವನ್ನಪ್ಪಿದ್ದಾನೆ. ಘಟನೆ ಬಳಿಕ ಟ್ರಾಕ್ಟರ್’ನೊಂದಿಗೆ ಚಾಲಕ ಪರಾರಿಯಾಗಿದ್ದಾನೆ. ಚಾಲಕನ ಅಜಾಗರೂಕತೆಯಿಂದ ಅಪಘಾತ ಸಂಭವಿಸಿದೆ ಎಂದು ಮೃತನ ಕುಟುಂಬವರು ಆರೋಪಿಸಿದ್ದಾರೆ. ರಾಮಿನಕೊಪ್ಪದ ರಾಜುನಾಯ್ಕ (46) ಮೃತ ದುರ್ದೈವಿ. ಜಮೀನಿನಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಾಗ ಘಟನೆ ಸಂಭವಿಸಿದೆ. ವೇಗವಾಗಿ ಬಂದ ಟ್ರಾಕ್ಟರ್ ರಾಜು ನಾಯ್ಕ ಅವರಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ರಾಜುನಾಯ್ಕ ಮೃತಪಟ್ಟಿದ್ದಾರೆ. ಈ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ … Read more

ರಾತ್ರೋರಾತ್ರಿ ಅಡಕೆ, ಬಾಳೆ ತೋಟದ ಮೇಲೆ ಆನೆಗಳ ದಾಳಿ

Mandagadde Graphics by smg live

SHIVAMOGGA LIVE NEWS | 28 ಫೆಬ್ರವರಿ 2022 ಮಂಡಗದ್ದೆ ಸಮೀಪ ಕಾಡಾನೆಗಳ ಹಾವಳಿ ಶುರುವಾಗಿದೆ. ತೋಟಗಳಿಗೆ ದಾಳಿ ಮಾಡಿ ಅಡಕೆ, ಬಾಳೆ ಬೆಳೆಗೆ ಹಾನಿ ಮಾಡುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಆನೆಗಳ ಗುಂಪು ಮಂಡಗದ್ದೆ ಸಮೀಪದ ಕೀಗಡಿ, ಮೇಲಿನ ಕೀಗಡಿ, ಮೂಡ್ಲುಮನೆ ಭಾಗದಲ್ಲಿ ಓಡಾಡಿಕೊಂಡಿವೆ. ರಾತ್ರಿ ವೇಳೆ ತೋಟಗಳಿಗೆ ದಾಳಿ ಮಾಡುತ್ತಿರುವ ಆನೆಗಳು ಬೆಳೆ ಹಾನಿ ಮಾಡುತ್ತಿವೆ. ಆದ್ದರಿಂದ ರೈತರು ತೋಟಗಳಿಗೆ ಹೋಗಲು ಹೆದರುತ್ತಿದ್ದಾರೆ. ಕೀಗಡಿಯ ಶೇಶಪ್ಪ, ಧರ್ಮಣ್ಣಪ್ಪ, ಹೇಮೇಶ್, ಉಪೇಂದ್ರ ಗೌಡ  ಅವರ ತೋಟಗಳಿಗೆ ಆನೆಗಳು … Read more

ಆನಂದಪುರ ಸಮೀಪ ಅರಣ್ಯ ಸಂಚಾರಿ ದಳ ದಾಳಿ, ಎರಡು ಚೀಲ ಹಿಡಿದಿದ್ದವನು ಅರೆಸ್ಟ್

Forest-Mobile-Police-Raid-Near-Anandapuram

SHIVAMOGGA LIVE NEWS | 28 ಫೆಬ್ರವರಿ 2022 ಕೃಷ್ಣ ಮೃಗದ ಚರ್ಮಗಳನ್ನು ಮಾರಾಟ ಮಾಡಲು ಬಂದಿದ್ದವರ ಮೇಲೆ ಅರಣ್ಯ ಸಂಚಾರಿ ದಳ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದ್ದು, ಕೃಷ್ಣ ಮೃಗಗಳ ಎರಡು ಚರ್ಮಗಳನ್ನು ವಶಕ್ಕೆ ಪಡೆಯಲಾಗಿದೆ. ಶಿಕಾರಿಪುರ ತಾಲೂಕು ಚಿಕ್ಕಮರಡಿ ತಾಂಡಾದ ಡಿಕ್ಯಾನಾಯ್ಕ (35) ಬಂಧಿತ. ಆನಂದಪುರ ಸಮೀಪದ ದಾಸಕೊಪ್ಪ ಬಸ್ ನಿಲ್ದಾಣದ ಬಳಿ ದಾಳಿ ನಡೆಸಲಾಗಿದೆ. ಹೇಗಾಯ್ತು ಘಟನೆ? ಖಚಿತ ಮಾಹಿತಿ ಮೇರೆಗೆ ಅರಣ್ಯ ಸಂಚಾರಿ ದಾಳ ಪೊಲೀಸರು ದಾಸಕೊಪ್ಪ ಬಸ್ … Read more

ಬೈಕ್ ಸೀಟ್ ಕೆಳಗೆ ಬುಸುಗುಡುತ್ತಿತ್ತು ನಾಗರಹಾವು

Snake-Kiran-Catches-cobra-in-bike-at-gondhi-chatnahalli

SHIVAMOGGA LIVE NEWS | 28 ಫೆಬ್ರವರಿ 2022 ಬೈಕ್ ಒಂದರ ಸೀಟಿನ ಅಡಿ ಕುಳಿತು ಬುಸುಗುಡುತ್ತಿದ್ದ ನಾಗರ ಹಾವನ್ನು ಉರಗ ತಜ್ಞ ಸ್ನೇಕ್ ಕಿರಣ್ ರಕ್ಷಣೆ ಮಾಡಿದ್ದಾರೆ. ಶಿವಮೊಗ್ಗದ ಗೋಂದಿ ಚಟ್ನಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದೆ. ಸುರೇಶ್ ಎಂಬುವವರಿಗೆ ಸೇರಿದ ಸ್ಟಾರ್ ಸಿಟಿ ಬೈಕ್’ನ ಸೀಟ್ ಕೆಳಗೆ ನಾಗರ ಹಾವು ಸೇರಿಕೊಂಡಿತ್ತು. ಇದು ಗೊತ್ತಾಗುತ್ತಲೆ ಸುರೇಶ್ ಅವರು ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಅವರು ಬೈಕ್ ಸೀಟಿನ ಕೆಳಗೆ … Read more

ಶಿವಮೊಗ್ಗದಲ್ಲಿ ಮಾರ್ಚ್ 4ರವರೆಗೆ ನಿಷೇಧಾಜ್ಞೆ ವಿಸ್ತರಣೆ, ವ್ಯಾಪಾರಕ್ಕೆ ಹೆಚ್ಚುವರಿ ಟೈಮ್

Police Bandobast at Shimoga

ಶಿವಮೊಗ್ಗದ ಲೈವ್.ಕಾಂ | SHIMOGA NEWS | 27 ಫೆಬ್ರವರಿ 2022 ಶಿವಮೊಗ್ಗ ನಗರದಲ್ಲಿ ಮಾರ್ಚ್ 4ರವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ವ್ಯಾಪಾರ, ವಹಿವಾಟಿಗೆ ಅವಧಿಯನ್ನು ಮತ್ತಷ್ಟು ಹೆಚ್ಚಳ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶದಲ್ಲಿ ತಿಳಿಸಿದ್ದಾರೆ. ಮಾರ್ಚ್ 4ರವರೆಗೆ ಶಿವಮೊಗ್ಗ ನಗರದಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಿಷೇಧಾಜ್ಞೆ ಸಡಿಲಗೊಳಿಸಲಾಗಿದೆ. ಈ ಅವಧಿಯಲ್ಲಿ ವ್ಯಾಪಾರ, ವಹಿವಾಟು ಮಾಡಿಕೊಳ್ಳಬಹುದಾಗಿದೆ. ರಾತ್ರಿ 7 ಗಂಟೆ ಬಳಿ ತುರ್ತು ಸೇವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ. … Read more